Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
ಮಕ್ಕಳಿಗೆ ಟ್ಯೂಷನ್ ಕೊಡಿಸುವುದು ಒಳ್ಳೆಯದಲ್ಲ !

ಹತ್ತನೆಯ ತರಗತಿಯಲ್ಲಿ ಮತ್ತು ಪಿಯುಸಿಯಲ್ಲಿ ಟ್ಯೂಷನ್ ಗೆ ಕಳುಹಿಸಿದರೆ ಒಳ್ಳೆಯದು. ಆದರೆ ಕೆಲವರು ತಮ್ಮ ಮಕ್ಕಳು ಒಂದನೇ ತರಗತಿಯಲ್ಲಿ ಇರುವಾಗಲೇ ಮಕ್ಕಳನ್ನು ಟ್ಯೂಷನ್ ಗೆ ಕಳುಹಿಸುತ್ತಾರೆ. ಶಾಲೆ ಬಿಟ್ಟ ತಕ್ಷಣ ಸ್ವಲ್ಪವೂ ಪುರುಸೊತ್ತು ಇಲ್ಲದೆ ಟ್ಯೂಷನ್ ಗೆ ಓಡಬೇಕು. ಆದರೆ ಈ ರೀತಿಯ ಟ್ಯೂಷನ್ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಉಂಟಾಗಲು ಈ ಕೆಳಗಿನ ಅಂಶಗಳು ಕಾರಣವಾಗಿವೆ.
ಪೋಷಕರಿಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ: ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಲು ಪೋಷಕರು ದಿನದಲ್ಲಿ ಸ್ವಲ್ಪ ಸಮಯವನ್ನು ಅವರಿಗಾಗಿ ಮೀಸಲಿಡಬೇಕು. ಆದರೆ ಬೆಳಗ್ಗೆ ಮತ್ತು ಸಾಯಂಕಾಲ ಟ್ಯೂಷನ್ ಗೆ ಹೋಗಿ ಬಂದಾಗ ಮಕ್ಕಳಿಗೆ ಸುಸ್ತಾಗಿರುತ್ತದೆ, ಅಲ್ಲದೆ ನಾಳೆಗೆ ಇರುವ ಹೋಂವರ್ಕ್ ಮುಗಿಸಬೇಕಾಗಿರುತ್ತದೆ. ಇದರಿಂದಾಗಿ ಮಕ್ಕಳಿಗೆ ಸ್ವಲ್ಪಹೊತ್ತು ಪೋಷಕರ ಜೊತೆ ಕಳೆಯಲು ಸಮಯವಿರುವುದಿಲ್ಲ.
ಸ್ವತಃ ಕೂತು ಓದಲು ಸಾಧ್ಯವಾಗುವುದಿಲ್ಲ: ಮತ್ತೊಬ್ಬರ ಒತ್ತಾಯದ ಮೇರೆಗೆ ಓದುವುದಕ್ಕಿಂತ ಮಕ್ಕಳು ತಾವೇ ಮನಸ್ಸು ಮಾಡಿ ಓದಿದರೆ, ಓದಿದ್ದು ಬೇಗ ಅರ್ಥವಾಗುತ್ತದೆ. ಅಲ್ಲದೆ ಪ್ರತನಿತ್ಯ ಅದು ಓದು, ಈ ವಿಷಯವನ್ನು ಕಲಿಯಲೇಬೇಕು ಎಂಬ ಒತ್ತಾಯವಿದ್ದಾಗ ಮಕ್ಕಳ ಮನಸ್ಸಿನಲ್ಲಿ ಓದುವುದು ಹಿಂಸೆ ಎಂಬ ಭಾವನೆ ಬರುತ್ತದೆ. ಮಕ್ಕಳು ಪಠ್ಯವನ್ನು ಸಂತೋಷದಿಂದ ಓದಬೇಕೆ ಹೊರತು ಬೇಸರಪಟ್ಟುಕೊಂಡು ಓದುವಂತಾಗಬಾರದು.
ಆಟಕ್ಕೆ ಸಮಯವಿರುವುದಿಲ್ಲ: ಮಕ್ಕಳ ದೈಹಿಕ ಬೆಳವಣಿಗೆಗೆ ಆಟ ಆಡಬೇಕು. ಆದರೆ ದಿನಾ ಓದು ಅಂತ ಇದ್ದರೆ ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ. ಆಟ ಆಡುವುದರಿಂದ ಮನಸ್ಸು ಕೂಡ ಉಲ್ಲಾಸಗೊಳ್ಳುತ್ತದೆ. ಆದರೆ ಟ್ಯೂಷನ್ ನಿಂದಾಗಿ ಮಕ್ಕಳಿಗೆ ಆಟ ಆಡಲು ಸಮಯವಿರುವುದಿಲ್ಲ.
ಮಂಕಾಗುತ್ತಾರೆ: ಬರೀಟ್ಯೂಷನ್, ಓದು ಅಂತ ಇದ್ದರೆ ಗೆಳೆಯರ ಜೊತೆ ಬೆರೆಯಲು ಸಮಯವಿರುವುದಿಲ್ಲ. ಆಟ ಆಡಲು ಸಮಯವಿರುವುದಿಲ್ಲ. ಯಾವುದೇ ಮನರಂಜನೆ ಇರುವುದಿಲ್ಲ, ಪ್ರತಿದಿನ ಆಟ ಇಲ್ಲದೆ, ಬರೀ ಓದು ಅಂತ ಅವರ ಮೇಲೆ ಒತ್ತಾಯ ಹಾಕುವುದರಿಂದ ಮಕ್ಕಳು ಮಂಕಾಗುತ್ತಾರೆ.
ಮಕ್ಕಳಿಗೆ ಆಟ, ಪಾಠ ಎಲ್ಲದಕ್ಕೂ ಸಮಯ ಕೊಡಬೇಕು. ಚಿಕ್ಕ ಪ್ರಾಯದಲ್ಲಿಯೇ ಟ್ಯೂಷನ್ ಗೆ ಕಳುಹಿಸಿ ಮಕ್ಕಳ ಸಂತೋಷ ಹಾಳುಮಾಡುವ ಬದಲು ಆದಷ್ಟು ಅವರಷ್ಟಕ್ಕೆ ಓದಲು ಪ್ರೋತ್ಸಾಹಿಸಿ. 10ನೇ ಮತ್ತು 12ನೇ ತರಗತಿ ಪ್ರತಿಯೊಂದು ವಿದ್ಯಾರ್ಥಿಯ ಜೀವನದ ಮುಖ್ಯವಾದ ಘಟ್ಟವಾಗಿರುವುದರಿಂದ ಈ ಸಮಯದಲ್ಲಿ ಟ್ಯೂಷನ್ ಗೆ ಕಳುಹಿಸಬೇಕು, 10ನೇ ತರಗತಿಗಿಂತ ಕೆಳಗಿನ ಕ್ಲಾಸ್ ನಲ್ಲಿ ಟ್ಯೂಷನ್ ಕೊಡಿಸಿದರೆ ಮಕ್ಕಳ ಮೇಲೆ ಹೇಳಿದ ರೀತಿಯ ಅಡ್ಡಪರಿಣಾಮ ಬೀಳಬಹುದು. ಇನ್ನು ನಿಮ್ಮ ಮಕ್ಕಳನ್ನು ಚಿಕ್ಕ ಪ್ರಾಯದಲ್ಲಿಯೇ ಟ್ಯೂಷನ್ ಗೆ ಕಳುಹಿಸಬೇಕೆ, ಬೇಡ್ವೆ ಎಂದು ನೀವೆ ತೀರ್ಮಾನಿಸಿ.



Click it and Unblock the Notifications