Latest Updates
-
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ
ಮಕ್ಕಳಲ್ಲಿ ತುಂಬಾ ಸಂಕೋಚ ಸ್ವಭಾವ ಒಳ್ಳೆಯದಲ್ಲ!

ಅದು ಹೇಗೆ ಸಾಧ್ಯ ಎಂದು ಪ್ರಶ್ನೆ ಬಂದಿರಬಹುದಲ್ಲವೇ? ಹೌದು ಮಗು ತುಂಬಾ ಸಂಕೋಚ ಸ್ವಭಾವ ಹೊಂದಿದ್ದರೆ ಬೆಳೆದ ಮೇಲೆ ಕೂಡ ಅದೇ ಗುಣ ಇದ್ದರೆ ಬೇರೆಯವರ ಜೊತೆ ಏನಾದರೂ ಕೇಳಿ ತಿಳಿದುಕೊಳ್ಳುವುದು, ಮಕ್ಕಳ ಜೊತೆ ಬೆರೆಯುವುದು ಕಷ್ಟವಾಗುತ್ತದೆ. ಆಗ ಅಂತಹ ಮಕ್ಕಳ ಜೊತೆ ಇತರ ಮಕ್ಕಳು ಬೆರೆಯುವುದಿಲ್ಲ, ನಿಮ್ಮ ಮಗು ಒಂಟಿಯಾಗುತ್ತದೆ, ಇದರಿಂದ ಖಿನ್ನತೆ ಕೂಡ ಕಾಡುವಂತಾಗುವುದು.
ಆದ್ದರಿಂದ ನಿಮ್ಮ ಮಗು ತುಂಬಾ ಸಂಕೋಚ ಸ್ವಭಾವ ಹೊಂದಿದ್ದರೆ ಈ ಕೆಳಗಿನ ಸಲಹೆ ಬಳಸಿ ಅದನ್ನು ಹೋಗಲಾಡಿಸಿ ಮಗುವಿನಲ್ಲಿ ಆತ್ಮವಿಶ್ವಾಸ ತುಂಬಿರಿ:
ಮಗುವಿನ ಮನಸ್ಸನ್ನು ಬದಲಾಯಿಸಿ: ಮಗುವನ್ನು ಮಕ್ಕಳ ಜೊತೆ ಆಡುವಂತೆ ಪ್ರೋತ್ಸಾಹಿಸಿ, ನೆಂಟರ ಮನೆಗೆ ಕರೆದುಕೊಂಡು ಹೋಗಿ, ಬೇರೆ ಮಕ್ಕಳನ್ನು ಮನೆಗೆ ಕರೆದು ಸ್ವಲ್ಪ ಹೊತ್ತು ನಿಮ್ಮ ಮಗುವಿನ ಜೊತೆ ಆಡಲು ಹೇಳಿ. ಈ ರೀತಿ ಮಾಡಿದರೆ ಆ ಮಗು ಸ್ವಲ್ಪ ನಾಚಿಕೆ ಸ್ವಭಾವದಿಂದ ಹೊರಬರುತ್ತದೆ.
ಮಗುವಿನ ಜೊತೆ ಮಾತನಾಡಿ: ಆ ಮಗುವನ್ನು ಅದರ ಪಾಡಿಗೆ ಇರಲು ಬಿಡದೆ ಕರೆದು-ಕರೆದು ಮಾತನಾಡಿಸಿ. ಮಗುವನ್ನು ಹುರಿದುಂಬಿಸಿ, ಕ್ಲಾಸ್ ನಲ್ಲಿ ಆಟ -ಪಾಠಗಳಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಿ.
ಪಠ್ಯೇತರ ವಿಷಯಗಳತ್ತಲೂ ಗಮನ ಹರಿಸಲು ಹೇಳಿ: ಡಾನ್ಸ್, ಸಂಗೀತ, ಕರಾಟೆ, ಯೋಗ ಹೀಗೆ ಯಾವುದಾದರೂ ಒಂದು ಕ್ಲಾಸ್ ಗೆ ಸೇರಿಸಿ. ಸ್ನೇಹಿತರ ಜೊತೆ ಬೆರೆಯಲು ಹೇಳಿ. ಈ ರೀತಿ ಮಾಡಿದರೆ ಮಗು ತನ್ನ ಸಂಕೋಚ ಸ್ವಭಾವದಿಂದ ಹೊರಬಂದು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತದೆ.
ಯಾವತ್ತಿಗೂ ಒಂಟೆಯಾಗಿರಲು ಬಿಡಬೇಡಿ: ಸಂಕೋಚದ ಸ್ವಭಾವದ ಮಗುವನ್ನು ಒಂಟಿಯಾಗಿರಲು ಬಿಡಬೇಡಿ. ಅದು ಮತ್ತಷ್ಟು ಮೂಡಿಯಾಗುತ್ತದೆ. ಆ ಮಗು ಶಾಲೆಯಿಂದ ಬಂದ ನಂತರ ಶಾಲೆಯ ವಿಶೇಷ ಕೇಳಿ. ಆಗಾಗ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗಬೇಕು. ಈ ಮಾಡುತ್ತಿದ್ದರೆ ಮಗು ಸಂಕೋಚ ಸ್ವಭಾವ ಬಿಟ್ಟು ಇತರರೊಡನೆ ಬೆರೆಯಲು ಪ್ರಾರಂಭಿಸುತ್ತದೆ. ಇಷ್ಟೆಲ್ಲಾ ಮಾಡಿ ಮಗು ಸಂಕೋಚ ಸ್ವಭಾವ ಬಿಡದಿದ್ದರೆ ಕೌನ್ಸಿಂಗ್ ಕೊಡಿಸಬೇಕು.
ಮಗುವಿನಲ್ಲಿ ಚಿಕ್ಕದಿರುವಾಗಲೇ ಆತ್ಮವಿಶ್ವಾಸ ತುಂಬಿದರೆ ಮಾತ್ರ ಮುಂದೆ ಜೀವನದಲ್ಲಿ ಸವಾಲನ್ನು ಕಂಡರೆ ಹೆದರಿ ಓಡದೆ ಧೈರ್ಯವಾಗಿ ಎದುರಿಸುತ್ತದೆ.



Click it and Unblock the Notifications
