Latest Updates
-
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ
ನಿಮ್ಮ ಮಗುವಿನ ಡೇ ಕೇರ್ ನಲ್ಲಿ ಈ ಸೌಲಭ್ಯವಿದೆಯೇ?
ಹೊರಗಡೆ ದುಡಿಯುವ ಮಹಿಳೆಯರಿಗೆ ಚಿಕ್ಕ ಮಗುವಿದ್ದರೆ ಮಗುವನ್ನು ಎಲ್ಲಿ ಬಿಟ್ಟು ಹೋಗುವುದು ಅನ್ನುವುದು ದೊಡ್ಡ ಸಮಸ್ಯೆಯಾಗಿರುತ್ತದೆ. ಮಗುವನ್ನು ನೋಡಿಕೊಳ್ಳಲು ಕೆಲಸದವರನ್ನು ಇಟ್ಟುಕೊಳ್ಳೋಣ ಅಂದರೆ ತುಂಬಾ ನಂಬಿಕೆ ಇರುವ ವ್ಯಕ್ತಿ ಸಿಗಬೇಕು. ಇನ್ನು ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಕೂರೋಣ ಅಂದರೆ ವರಮಾನದ ಮೇಲೆ ಪೆಟ್ಟು ಬೀಳುವುದು. ಗಗನಕ್ಕೆ ಏರುತ್ತಿರುವ ವಸ್ತುಗಳ ಬೆಲೆಯಲ್ಲಿ ಗಂಡ-ಹೆಂಡತಿ ಇಬ್ಬರು ದುಡಿದರೆ ಮಾತ್ರ ಮಗುವನ್ನು ಒಳ್ಳೆಯ ಸ್ಕೂಲ್ ಸೇರಿಸಲು ಸಾಧ್ಯ. ಎಲ್ ಕೆಜಿ ಶುಲ್ಕವೇ ಒಂದು ಲಕ್ಷದಷ್ಟು ಇರುತ್ತದೆ, ಆದ್ದರಿಂದ ಮಗುವಿನ ಭವಿಷ್ಯಕ್ಕಾಗಿ ದುಡಿಯುವುದು ಅನಿವಾರ್ಯ.
ಹಾಗಂತ ಚಿಕ್ಕ ಮಕ್ಕಳಿರುವ ತಾಯಿಂದಿರುವ ತುಂಬಾ ಟೆನ್ಷನ್ ಪಟ್ಟುಕೊಳ್ಳಬೇಕಾಗಿಲ್ಲಾ. ಅಲ್ಲಿ ಮಕ್ಕಳನ್ನು ಬಿಟ್ಟರೆ ಸಾಕು ಮಗುವನ್ನು ನೋಡಿಕೊಳ್ಳುತ್ತಾರೆ. ನಗರ ಪ್ರದೇಶಗಳಲ್ಲಿ ಗಲ್ಲಿ-ಗಲ್ಲಿಗೂ ಡೇ ಕೇರ್ ಗಳಿರುತ್ತವೆ. ಆದರೆ ಡೇ ಕೇರ್ ಗೆ ಸೇರಿಸುವ ಮುನ್ನ ಈ ಕೆಳಗಿನ ಅಂಶಗಳನ್ನು ಗಮನಿಸುವುದು ಒಳ್ಳೆಯದು.

ದೂರ: ನಿಮ್ಮ ಮಗುವಿನ ಸೇರಿಸುವ ಡೇ ಕೇರ್ ಮನೆಗೆ ಅಥವಾ ಕೆಲಸದ ಜಾಗಕ್ಕೆ ಸಮೀಪವಾಗಿರಬೇಕು. ಒಂದು ವೇಳೆ ಮಗುವಿಗೆ ಹುಷಾರು ತಪ್ಪಿದರೆ ಅಥವಾ ಏನಾದರೂ ತುರ್ತು ಪರಿಸ್ಥಿತಿಯಲ್ಲಿ ಅ ತಕ್ಷಣ ತಲುಪುವಂತೆ ಇರಬೇಕು.
ಸಿಸಿ ಟಿವಿ: ಡೇ ಕೇರ್ ನಲ್ಲಿ ಸಿಸಿ ಟಿವಿ ಇರಬೇಕು. ಇದರಿಂದ ಡೇ ಕೇರ್ ನವರು ಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂದು ತಿಳಿಯುತ್ತದೆ.
ಮಾನ್ಯತೆ : ನಿಮ್ಮ ಮಗುವನ್ನು ಬಿಡುವ ಡೇ ಕೇರ್ ಸೆಂಟರ್ ಸರ್ಕಾರದಿಂದ ಮಾನ್ಯತೆಯನ್ನು ಪಡೆದಿದೆಯೇ ಎಂದು ವಿಚಾರಿಸಿ. ಈ ರೀತಿ ವಿಚಾರಿಸುವುದರಲ್ಲಿ ತಪ್ಪೇನಿಲ್ಲ, ಏಕೆಂದರೆ ನೀವು ಕೆಲಸಕ್ಕೆ ಹೋದಾಗ ನಿಮ್ಮ ಮಗು ಇಡೀ ದಿನ ಆ ಡೇ ಕೇರ್ ನಲ್ಲಿ ಇರಬೇಕು. ಆದ್ದರಿಂದ ಎಲ್ಲವೂ ಸುರಕ್ಷಿತವಾಗಿದೆಯೇ ಎಂದು ನೋಡಿ, ನಂತರ ಮಗುವನ್ನು ಬಿಡಿ.
ಪ್ರಾಥಮಿಕ ಚಿಕಿತ್ಸೆ: ಆ ಡೇ ಕೇರ್ ನಲ್ಲಿ ಪ್ರಾಥಮಿಕ ಚಿಕಿತ್ಸೆಯ ಸೌಲಭ್ಯವಿದೆಯೇ ಎಂದು ನೋಡಿಕೊಳ್ಳಿ. ಏಕೆಂದರೆ ಮಗುವಿಗೆ ಇದ್ದಕ್ಕಿದ್ದ ಹಾಗೇ ವಾಂತಿ ಅಥವಾ ಭೇದಿ ಕಾಣಿಸಿಕೊಂಡರೆ ಪ್ರಥಮ ಚಿಕಿತ್ಸೆ ಕೊಡುವಂತಿರಬೇಕು.
ಆಹಾರ: ಹೆಚ್ಚಿನ ಡೇ ಕೇರ್ ಗಳಲ್ಲಿ ಆಹಾರವನ್ನು ಅವರೇ ಕೊಡುತ್ತಾರೆ. ಕೆಲವೊದು ನಿಮ್ಮ ಹತ್ತಿರ ತರಲು ಹೇಳುತ್ತಾರೆ. ನಿಮ್ಮ ಮನೆಯ ಆಹಾರವನ್ನೇ ಅವರು ಮಗುವಿಗೆ ಕೊಡುವುದಾದರೆ ಮಗುವಿಗೆ ಪೌಷ್ಠಿಕಾಂಶದ ಕೊರತೆ ಉಂಟಾಗುವುದಿಲ್ಲ. ಅವರೇ ಕೊಡುವುದಾದರೆ ಮಾತ್ರ ಯಾವ ರೀತಿಯ ಆಹಾರ ಕೊಡುತ್ತಾರೆ ಅನ್ನುವುದನ್ನು ವಿಚಾರಿಸಿ, ಏಕೆಂದರೆ ನಿಮ್ಮ ಮಗುವಿಗೆ ಬೆಳೆಯುವ ಸಮಯದಲ್ಲಿ ಪೌಷ್ಠಿಕಾಂಶದ ಕೊರತೆ ಉಂಟಾಗಬಾರದು.



Click it and Unblock the Notifications
