Latest Updates
-
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್!
ಮಕ್ಕಳಿಗೆ ಕಲಿಸಬೇಕು ಟೇಬಲ್ ಮ್ಯಾನರ್ಸ್

ಈ ಟೇಬಲ್ ಮ್ಯಾನರ್ಸ್ ಕಲಿಸಿದರೆ ರೆಸ್ಟೋರೆಂಟ್ ಗೆ ಅಥವ ಪಾರ್ಟಿಗೆ ಹೋದಾಗ ಯಾವುದೇ ಮುಜುಗರ ಪಡಬೇಕಾಗಿ ಬರುವುದಿಲ್ಲ, ಅಲ್ಲದೆ ಮಕ್ಕಳಿಗೂ ಜೀವನಶೈಲಿ ಜೊತೆ ಹೊಂದಿಕೊಳ್ಳಲು ಸಹಾಯಕವಾಗುವುದು.
ಮಕ್ಕಳಿಗೆ ಟೇಬಲ್ ಮ್ಯಾನರ್ಸ್ ಕಲಿಸಲು ಈ ರೀತಿ ಮಾಡಿ:
1. ಮಕ್ಕಳಿಗೆ ಊಟ ಕೊಟ್ಟು ಸ್ಪೂನ್, ಫೋರ್ಕ್ ಬಳಸಿ ತಿನ್ನಲು ಹೇಳಿಕೊಡಿ. ನಂತರ ಅವರಿಗೆ ತಿನ್ನಿಸದೆ ಅವರಿಗೆ ತಿನ್ನಲು ಹೇಳಿ. ಮೊದಮೊದಲು ಟೇಬಲ್ ಮೇಲೆ ಚೆಲ್ಲಬಹುದು, ತುಂಬಾ ನಿಧಾನಕ್ಕೆ ತಿನ್ನಬಹುದು, ಆದರೆ ನಿಧಾನಕ್ಕೆ ಹೇಗೆ ತಿನ್ನಬೇಕೆಂದು ಕಲಿತುಕೊಳ್ಳುತ್ತವೆ.
2. ತುಂಬಾ ಮಕ್ಕಳಲ್ಲಿ ಒಂದು ಕೆಟ್ಟ ಅಭ್ಯಾಸ ಕಂಡುಬರುತ್ತದೆ. ಅದೇನಪ್ಪಾ ಅಂದರೆ ತಿನ್ನಲು ಕೊಟ್ಟರೆ ಅದರಲ್ಲಿ ಆಡುತ್ತಾ ಕೂರುವುದು. ಈ ರೀತಿ ಆಡುವ ಅಭ್ಯಾಸ ಒಳ್ಳೆಯದಲ್ಲ. ಹಾಗೆ ಮಾಡಬೇಡಿ ಎಂದು ತಿಳಿ ಹೇಳಿ. ಅನ್ನವನ್ನು ಹೊರಗಡೆ ಚೆಲ್ಲದಂತೆ ತಿನ್ನಲು ಹೇಳಿ. ಅನ್ನವನ್ನು ಪೂಜಿಸಲು ಹೇಳಿ. ಈ ಭಾವನೆ ಚಿಕ್ಕದಿರುವಾಗಲೆ ತುಂಬಿದರೆ ಮಕ್ಕಳು ಅನ್ನವನ್ನು ಸುಮ್ಮನೆ ಚೆಲ್ಲುವುದಿಲ್ಲ.
3. ಕೆಲ ಅಪ್ಪ-ಅಮ್ಮನಿಗೂ ಒಂದು ಕೆಟ್ಟ ಅಭ್ಯಾಸವಿರುತ್ತದೆ. ಅದೇನಪ್ಪಾ ಅಂದರೆ ಮಕ್ಕಳು ತಿನ್ನದಿದ್ದರೆ ಹೊಡೆಯುತ್ತೇನೆ ಅಂತ ಗದರುವುದು. ಈ ರೀತಿ ಮಾಡಬೇಡಿ, ಅಲ್ಲದೆ ಮಕ್ಕಳಿಗೆ ಹೊಟ್ಟೆ ತುಂಬಲು ಎಷ್ಟು ಬೇಕೊ ಅಷ್ಟು ಮಾತ್ರ ಹಾಕಿ. ಇದರಿಂದ ಮಕ್ಕಳು ಅನ್ನವನ್ನು ವೇಸ್ಟ್ (ವ್ಯರ್ಥ) ಮಾಡುವುದಿಲ್ಲ.
4. ಮಕ್ಕಳಿಗೆ ನೀವು ಹೇಗೆ ತಿನ್ನುತ್ತೀರಿ ಅಂತ ತೋರಿಸಿಕೊಡಿ, ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿ ಅಲ್ಲಿ ಹೇಗೆ ವರ್ತಿಸಬೇಕು ಎಂದು ಹೇಳಿಕೊಡಿ. ಈ ರೀತಿ ಮಾಡಿದರೆ ನಿಮ್ಮ ಮಕ್ಕಳು ಟೇಬಲ್ ಮ್ಯಾನರ್ಸ್ ಕಲೆತುಕೊಳ್ಳುತ್ತಾರೆ.
ಮಕ್ಕಳಲ್ಲಿ ಆದರ್ಶ ವ್ಯಕ್ತಿತ್ವ ಬೆಳೆಸಲು ಮನೆಯೇ ಮೊದಲ ಪಾಠಶಾಲೆ.



Click it and Unblock the Notifications
