Latest Updates
-
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ
ಹದಿಹರೆಯದ ಪ್ರಾಯದ ಮಕ್ಕಳ ಬಗ್ಗೆ ಎಚ್ಚರ!

ಮಕ್ಕಳು ಏನಾದರೂ ತಪ್ಪು ಮಾಡಿದರೆ ಹೊಡೆದು, ಬಡೆದು ಪಾಠ ಕಲಿಸುತ್ತೇನೆ ಅನ್ನುವುದು ತಪ್ಪು ಕಲ್ಪನೆ. ತುಂಬಾ ಬೈಯ್ಯುವುದು, ಹೊಡೆಯುವುದು ಮಾಡಿದರೆ ಮಕ್ಕಳು ಹಠಮರಿಗಳಾಗುತ್ತಾರೆ ಅಲ್ಲದೆ ಪೋಷಕರ ಬಗ್ಗೆ ಭಯ ಮತ್ತು ದ್ವೇಷ ಬೆಳೆಯುತ್ತಾ ಹೋಗುತ್ತದೆ. ಮಕ್ಕಳ ಮನಸ್ಸಿನಲ್ಲಿ ಈ ರೀತಿಯ ಭಾವನೆಗಳನ್ನು ಬಿತ್ತುವುದು ತಂಬಾ ಅಪಾಯಕಾರಿ. ಮಗ ಅಥವಾ ಮಗಳು ಹೇಳಿದ ಮಾತನ್ನು ಕೇಳಿದಿದ್ದಾಗ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ನೋಡಿ, ನಿಮ್ಮ ಮಕ್ಕಳು ತಪ್ಪನ್ನು ತಿದ್ದಿಕೊಂಡು ನಿಮ್ಮ ಜೊತೆ ಪ್ರೀತಿಯಿಂದ ವರ್ತಿಸುತ್ತಾರೆ.
ಮಕ್ಕಳ ತಪ್ಪುಗಳನ್ನು ಚಿಕ್ಕ ಪ್ರಾಯದಲ್ಲಿಯೇ ತಿದ್ದಬೇಕು: ಗಿಡವಾಗಿ ಬಗ್ಗದ್ದು , ಮರವಾಗಿ ಬಗ್ಗೀತೆ ಎಂಬ ಗಾದೆಯಂತೆ ಮಕ್ಕಳು ಚಿಕ್ಕದಿರುವಾಗಲೇ ಬುದ್ಧಿ ಹೇಳಬೇಕು. ನಿಮಗೆ 5-6 ವರ್ಷದ ಮಗುವಿದ್ದರೆ ನೀವು ಹೊಸ ಬಟ್ಟೆ ಅಥವಾ ಚಪ್ಪಲಿ ಏನಾದರೂ ತಂದಾಗ ಅದಕ್ಕೆ ಇಷ್ಟವಾಗದೆ ನೀವು ತಂದ ವಸ್ತುಗಳನ್ನು ತಿರಸ್ಕರಿಸಿದರೆ ಆ ಬುದ್ಧಿಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಬೆಳೆದ ಮೇಲೂ ಅದೇ ಬುದ್ಧಿಯನ್ನು ಬೆಳೆಸಿಕೊಂಡು ಹೋಗುತ್ತದೆ. ಅದಕ್ಕಾಗಿ ಹೊಡೆಯಬೇಡಿ, ನಯವಾಗಿ ಹೇಳಿ, ಆ ಬಟ್ಟೆ ಹಾಕದಿದ್ದರೆ ಇನ್ನು ಬೇರೆ ಬಟ್ಟೆ ಕೊಡಿಸುವುದಿಲ್ಲ ಅಂತ ಹೇಳಿ, ಆಗ ಅವರು ಹಾಕಿಯೇ ಹಾಕುತ್ತಾರೆ. ನಂತರ ಕರೆದುಕೊಂಡು ಹೋಗಿ ಅವರಿಗೆ ಇಷ್ಟವಾದ ಬಟ್ಟೆ ಕೊಡಿಸಿ.
ಕಾರಣವನ್ನು ತಿಳಿದುಕೊಳ್ಳಿ: ಹದಿಹರೆಯಲ್ಲಿ ಸ್ನೇಹಿತರಿಂದ ತುಂಬಾ ಪ್ರಭಾವಿತರಾಗಿರುತ್ತರೆ. ಒಳ್ಳೆಯ ಸ್ನೇಹಿತರು ಸಿಕ್ಕರೆ ಒಳ್ಳೆಯ ಬುದ್ದಿ ಕಲಿಯುತ್ತಾರೆ, ಇಲ್ಲದಿದ್ದರೆ ಕೆಟ್ಟ ವಿಷಯಗಳತ್ತ ಆಸಕ್ತಿ ಬೆಳೆಸಿಕೊಳ್ಳುತ್ತಾರೆ. ಆದ್ದರಿಂದ ನಿಮ್ಮ ಮಕ್ಕಳ ಫ್ರೆಂಡ್ಸ್ ಯಾರು ಅನ್ನುವುದು ತಿಳಿದುಕೊಳ್ಳುವುದು ಒಳ್ಳೆಯದು.
ಟ್ರೆಂಡ್ ಬಗ್ಗೆ ಅರಿವಿರಲಿ: ಹದಿಹರೆಯವರು ಟ್ರೆಂಡ್ ಗೆ ತಕ್ಕ ಹಾಗೆ ಕೂದಲು ಕತ್ತರಿಸಲು, ಡ್ರೆಸ್ಸಿಂಗ್ ಮಾಡಲು ಇಷ್ಟಪಡುತ್ತಾರೆ. ಆದ್ದರಿಂದ ಟ್ರೆಂಟ್ ಬಗ್ಗೆ ತಿಳಿದುಕೊಂಡರೆ ಅವರ ಅವತಾರಗಳನ್ನು ನೋಡಿ ನೀವು ಬೈಯುವುದು ತಪ್ಪುತ್ತೆ, ಇದರಿಂದ ಮಕ್ಕಳಿಗೂ ಕಿರಿಕಿರಿ ಅನಿಸುವುದಿಲ್ಲ.
ಮಕ್ಕಳ ಶತ್ರು ಬಗ್ಗೆಯೂ ತಿಳಿದಿರಲಿ: ಸಾಕಷ್ಟು ವಿಷಯಗಳು ಅವರ ಸ್ನೇಹಿತರು ಬಾಯಿ ಬಿಡುವುದಿಲ್ಲ. ಆದರೆ ಅವನಿಗೆ/ ಅವಳಿಗೆ ಆಗದವರನ್ನು ಮಾತನಾಡಿಸಿದರೆ ತುಂಬಾ ವಿಷಯ ತಿಳಿಯುತ್ತದೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಅನ್ನುವುದನ್ನು ತಿಳಿದುಕೊಳ್ಳಬೇಕು. ನಿಮ್ಮ ಮಕ್ಕಳು ಎಲ್ಲಾ ವಿಷಯವನ್ನು ಧೈರ್ಯವಾಗಿ ನಿಮ್ಮ ಹತ್ತಿರ ಹೇಳುವಂತೆ ಪ್ರೋತ್ಸಾಹಿಸಿ, ಹದಿಹರೆಯದ ಮಕ್ಕಳ ಜೊತೆ ಸ್ನೇಹಿತರಂತೆ ವರ್ತಿಸಿ. ಈ ರೀತಿ ಮಾಡಿದರೆ ನಿಮ್ಮ ಮಕ್ಕಳ ಬಗ್ಗೆ ತಿಳಿದುಕೊಳ್ಳುವುದು ಸುಲಭ ಮತ್ತು ಅವರು ನಿಮ್ಮ ಮಾತನ್ನು ಸುಲಭವಾಗಿ ಕೇಳುವಂತಾಗುವುದು.



Click it and Unblock the Notifications
