Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಹದಿಹರೆಯದ ಮಕ್ಕಳು ತಪ್ಪದಿರಲಿ ಹಾದಿ

ಈ ಸಂದರ್ಭದಲ್ಲಿ ಪೋಷಕರ ಮಾರ್ಗದರ್ಶನ ಅವಶ್ಯಕವಾಗಿರುತ್ತದೆ. ಮಕ್ಕಳಿಗೆ ಒಳಿತು ಕೆಡುಕುಗಳ ಬಗ್ಗೆ ಮನವರಿಕೆ ಮಾಡಬೇಕಾಗುತ್ತದೆ. ಅದಕ್ಕಾಗಿ ಪೋಷಕರು ಹದಿಹರೆಯದ ಮಕ್ಕಳೊಡನೆ ಮೃದುವಾಗಿ ಮತ್ತು ಸ್ನೇಹದಿಂದ ವರ್ತಿಸಿಬೇಕು. ಹದಿಹರೆಯದ ಮಕ್ಕಳಿಗೆ ವಯಸ್ಕರ ವಿಷಯಗಳ ಬಗ್ಗೆ ಹೆಚ್ಚಿನ ಕುತೂಹಲವಿರುತ್ತದೆ,
ಆದರೆ ಪೋಷಕರ ಮಾರ್ಗದರ್ಶನ ಮಕ್ಕಳನ್ನು ಹಾದಿ ತಪ್ಪದಂತೆ ಮಾಡುತ್ತದೆ. ಕೆಲವು ಸೂಕ್ಷ್ಮ ವಿಷಯಗಳನ್ನು ಹದಿಹರೆಯದ ಮಕ್ಕಳಿಗೆ ತಿಳಿಸಲು ಪೋಷಕರು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.
1. ಹದಿಹರೆಯದ ಮಕ್ಕಳಿಗೆ ಲೈಗಿಂಕ ವಿಷಯಗಳತ್ತ ಹೆಚ್ಚಿನ ಕುತೂಹಲ ಇರುತ್ತದೆ, ಮಕ್ಕಳಿಗೆ ಲೈಗಿಂಕ ವಿಷಯಗಳ ಬಗ್ಗೆ ಶಿಕ್ಷಣ ನೀಡುವುದರಿಂದ ಮಕ್ಕಳು ಹಾದಿ ತಪ್ಪುವುದನ್ನು ತಡೆಯಬಹುದು. ಏಡ್ಸ್ ನಂತಹ ಕಾಯಿಲೆಯನ್ನು ತಡೆಗಟ್ಟಲು ಶಾಲೆಗಳಲ್ಲಿ ಕೂಡ ಮಕ್ಕಳಿಗೆ ಲೈಂಗಿಕ ವಿಷಯಗಳ ಬಗ್ಗೆ ಶಿಕ್ಷಣವನ್ನು ನೀಡಲಾಗುವುದು.
2. ಹೆಣ್ಣು ಮಕ್ಕಳ ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಗೆ, ಸಮಸ್ಯೆಗಳಿಗೆ ಸಂಬಂಧಿಸಿದ ಒಳ್ಳೆಯ ನಿಯತಕಾಲಿಕಗಳನ್ನು ಕೊಂಡು ಅದನ್ನು ಗಂಡು ಮಕ್ಕಳು ಕಣ್ಣಾಡಿಸುಂತೆ ಮಾಡಬೇಕು, ಇದಕ್ಕಾಗಿ ಮುಜಗರ ಪಟ್ಟುಕೊಳ್ಳಬೇಕಾದ ಅವಶ್ಯಕತೆಯಿಲ್ಲ. ಹೀಗೆ ಮಾಡಿದರೆ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಕುತೂಹಲವನ್ನು ಹೋಗಲಾಡಿಸಬಹುದು, ಅಲ್ಲದೆ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಸಮಸ್ಯೆಗಳ ಕುರಿತು ಮನವರೆಕೆ ಮಾಡಲು ಈ ವಿಧಾನವನ್ನು ಬಳಸಬಹುದು.
3. ಮಕ್ಕಳನ್ನು ಲೈಬ್ರರಿಯಲ್ಲಿ ಸದಸ್ಯರಾಗಿ ಸೇರಿಸಿದರೆ ಅವರ ಜ್ಞಾನ ಭಂಡಾರ ಹೆಚ್ಚಾಗುತ್ತದೆ, ಅಲ್ಲದೆ ಮಕ್ಕಳು ಒಳ್ಳೆಯ ಹೊಸ ವಿಷಯಗಳನ್ನು ಕಲಿಯುವಂತೆ ಪ್ರೋತ್ಸಾಹಿಸಬೇಕು.
4. ಹೆಣ್ಣು ಮಕ್ಕಳಲ್ಲಿ ಶಾರೀರಿಕವಾಗಿ ಅನೇಕ ಬದಲಾವಣೆಗಳಾಗುವುದರಿಂದ ಅದು ಅವರಲ್ಲಿ ಮಾನಸಿಕವಾಗಿ ಸಹ ಅನೇಕ ಬದಲಾವಣೆಗಳನ್ನು ತರುತ್ತದೆ. ಆದ್ದರಿಂದ ಸ್ಯಾನಿಟರಿ ಪ್ಯಾಡ್ ಬಳಸುವುದರ ಬಗ್ಗೆ, ಮುಟ್ಟುವಿನ ಸಮಯದಲ್ಲಿ ಶುದ್ಧತೆ ಬಗ್ಗೆ, ಹಾಗೂ ಈ ವಯಸ್ಸಿನಲ್ಲಿ ಕಾಲು ಜಾರದಂತೆ ಎಚ್ಚರದಿಂದ ಹೇಗೆ ಇರಬೇಕು ಎಂಬುದರ ಬಗ್ಗೆ ತಿಳಿ ಹೇಳಬೇಕು.
5. ಹೆಣ್ಣು ಮಕ್ಕಳಿಗೆ ನೇರವಾಗಿ ತಿಳಿ ಹೇಳಬಹುದು. ಆದರೆ ಗಂಡು ಮಕ್ಕಳಿಗೆ ಮೇಲೆ ಹೇಳಿದ ವಿಧಾನವನ್ನು ಬಳಸಿ ಕೆಲವು ಕೂಲಂಕಷ ವಿಷಯಗಳ ಕುರಿತು ಮನವರೆಕೆ ಮಾಡಬೇಕಾಗುತ್ತದೆ.
ಮಕ್ಕಳೊಂದಿಗೆ ವಯಸ್ಕರಿಗೆ ಸಂಬಂಧಿಸಿದಂತಹ ಕೂಲಂಕಷವಾದ ವಿಷಯಗಳ ಬಗ್ಗೆ ಮಾತನಾಡುವಾಗ ಮುಜುಗರ ಬೇಡ, ಸರಿಯಾದ ಮಾರ್ಗ ದರ್ಶನ ಅವರನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡುತ್ತದೆ.



Click it and Unblock the Notifications