Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಎಚ್ಚರ, ಮಕ್ಕಳು ನೆಟ್ ನಲ್ಲಿ ಬ್ಲೂಫಿಲ್ಮ್ ನೋಡುತ್ತಿರಬಹುದು!

ಅದು ಕುತೂಹಲದ ಪ್ರಾಯ, ಗೊತ್ತಿಲ್ಲದ ವಿಚಾರಗಳನ್ನು ತಿಳಿಯಬೇಕೆಂಬ ತುಡಿತ. ಆದರೆ ಅದು ಒಳ್ಳೆಯ ವಿಷಯಕ್ಕಾದರೆ ಸರಿ, ಅದರ ಬದಲಾಗಿ ಬೇಡದ ವಿಷಯಗಳನ್ನು ತಿಳಿಯಬೇಕೆಂಬ ಮಕ್ಕಳ ಕುತೂಹಲವೆ ಹೆತ್ತವರ ನಿದ್ರೆ ಕೆಡಿಸುತ್ತದೆ.
ಅದರಲ್ಲೂ ಈಗ ಪರ್ಸನಲ್ ಕಂಪ್ಯೂಟರ್, ಲ್ಯಾಪ್ ಟಾಪ್ ಜೊತೆ ಇಂಟರ್ ನೆಟ್ ಸೌಲಭ್ಯವನ್ನೂ ಮಕ್ಕಳಿಗೆ ಕೊಡಿಸುವುದರಿಂದ ಅವರು ತಮ್ಮ ವಯಸ್ಸಿಗೆ ಹೊಂದದ ಫಿಲಂಗಳನ್ನು ಸುಲಭವಾಗಿ ಡೌನ್ ಲೋಡ್ ಮಾಡಿ ನೋಡುತ್ತಾರೆ. ಇವುಗಳು ಮಕ್ಕಳನ್ನು ಕೆಟ್ಟ ಹಾದಿಯಲ್ಲಿ ನಡೆಯುವಂತೆ ಪ್ರಚೋದಿಸುತ್ತವೆ. ಇಂತಹ ನಡವಳಿಕೆಗೆ ಕಡಿವಾಣ ಹಾಕುವುದು ಹೇಗೆ ಎಂಬುದೇ ಸಾಕಷ್ಟು ಪೋಷಕರ ತಲೆನೋವು.
ಆದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಿ ಮಕ್ಕಳನ್ನು ಸರಿಯಾದ ಹಾದಿಯಲ್ಲಿ ನಡೆಯುವಂತೆ ಮಾಡಬಹುದು.
* ಇಂಟರ್ ನೆಟ್ ಉಪಯೋಗಿಸುವುದನ್ನು ನಿರಾಕರಿಸಲು ಸಾಧ್ಯವಿಲ್ಲ ಏಕೆಂದರೆ ಮಕ್ಕಳ ಕಲಿಕೆಗೆ ಸಂಬಂಧಪಟ್ಟ ವಿಷಯಗಳಿಗೆ ಇಂಟರ್ ನೆಟ್ ಬಳಸಲೇ ಬೇಕಾಗುತ್ತದೆ. ಒಂದು ವೇಳೆ ಇಂಟರ್ ನೆಟ್ ನೋಡಬೇಡಿ ಎಂದು ಒತ್ತಾಯ ಹಾಕಿದರೆ ಸೈಬರ್ ಗಳಿಗೆ ಹೋಗುತ್ತಾರೆ. ಆದ್ದರಿಂದ ಇಂಟರ್ ನೆಟ್ ಸೌಲಭ್ಯವನ್ನು ಮಕ್ಕಳು ಪ್ರಯೋಜನಕಾರಿಯಾಗಿ ಹೇಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಹೆತ್ತವರು ತೀರ್ಮಾನಿಸಬೇಕು.
* ನೀವು ಮನೆಯಲ್ಲಿ ಇಲ್ಲದಿದ್ದಾಗ ಮಕ್ಕಳು ಇಂಟರ್ ನೆಟ್ ಉಪಯೋಗಿಸದ ಹಾಗೆ ನೋಡಿಕೊಳ್ಳಿ. ಆದರೆ ಗಂಡ-ಹೆಂಡತಿ ಇಬ್ಬರೂ ದುಡಿಯುವರಾದರೆ ಮಕ್ಕಳಿಗೆ ಇಂಟರ್ ನೆಟ್ ನೋಡಲು ಇಂತಿಷ್ಟು ಸಮಯ ಅಂತ ನಿಗದಿ ಪಡಿಸಬೇಕು. ನಂತರ ಅವರು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ನಿಗಾ ಇಡಬೇಕು
* ಮಕ್ಕಳಿಗೆ ಪಠ್ಯ ವಿಷಯ ಮಾತ್ರ ನೋಡಿ ಎಂದು ಒತ್ತಡ ಹಾಕದೆ ಗೇಮ್, ಸಂಗೀತ ಹೀಗೆ ಮನರಂಜನೆಗೆ ಬಳಸಲು ಸಹ ಅವಕಾಶ ನೀಡಬೇಕು. ಅಲ್ಲದೆ ಡೌನ್ ಲೋಡ್ ಲಿಮಿಟ್ ನಲ್ಲಿ ಇಂಟರ್ ನೆಟ್ ಉಪಯೋಗಿಸುವಂತೆ ಮಾಡುವುದರಿಂದ ಮಕ್ಕಳು ವಯಸ್ಕರ ಫಿಲಂ ನೋಡದಂತೆ ಕಡಿವಾಣ ಹಾಕಬಹುದು.
* ವಯಸ್ಕರ ಸಿನಿಮಾಗಳು ಇಂಟರ್ ನೆಟ್ ನ್ಲಲಿ ಮಾತ್ರವಲ್ಲ, ಸಿ.ಡಿ ಅಂಗಡಿಗಳಲ್ಲಿಯೂ ದೊರೆಯುವುದರಿಂದ ಮಕ್ಕಳು ಆಗಾಗ ಯಾವುದಾದರೂ ಹತ್ತಿರದಲ್ಲಿರುವ ಸಿ.ಡಿ ಅಂಗಡಿಗಳಿಗೆ ಹೋಗುತ್ತಿದ್ದಾರೆಯೆ ಎಂದು ಗಮನಿಸಬೇಕು. ನಂತರ ಮಕ್ಕಳ ಡ್ರಾಯರ್ ಮತ್ತು ಬುಕ್ ಕಬೋರ್ಡ್ ಗಳನ್ನು ಆಗಾಗ್ಗೆ ಪರೀಕ್ಷಿಸಿ.
* ಪೋಷಕರು ಮಕ್ಕಳ ಹದಿಹರೆಯದ ಸಮಸ್ಯೆಯನ್ನು ತುಂಬಾ ಚಾಲಾಕಿತನದಿಂದ ನಿಭಾಯಿಸಬೇಕು. ಮಕ್ಕಳ ಮೇಲೆ ಒತ್ತಡ ಹಾಕದೆ ಅವರೊಂದಿಗೆ ಗೆಳಯರಂತೆ ವರ್ತಿಸಬೇಕು, ಇಂತಹ ವಿಷಯಗಳ ಒಳಿತು-ಕೆಡುಕುಗಳ ಬಗ್ಗೆ ಬಿಚ್ಚು ಮನಸ್ಸಿನಿಂದ ಚರ್ಚಿಸಿ ತಿಳಿ ಹೇಳಬೇಕು. ಈ ರೀತಿ ಮಾಡಿದರೆ ಮಕ್ಕಳನ್ನು ವಯಸ್ಕರ ಸಿನಿಮಾ ನೋಡದಂತೆ ತಡೆಯಬಹುದು.



Click it and Unblock the Notifications