Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೂವಿನಂತಹ ತ್ವಚೆಗೆ ಬೇಕು ಸಂರಕ್ಷಣೆ

ಇಲ್ಲಿದೆ ಕೆಲವು ಸಲಹೆಗಳು, ಅವುಗಳು ಮಕ್ಕಳ ತ್ವಚೆಯನ್ನು ಸಂರಕ್ಷಿಸಲು ಸಹಾಯಮಾಡುವುದು.
1. ಮಗು ಅಂಬೆಗಾಲಿಡಲು ಪ್ರಾರಂಭಿಸಿದ ಮೇಲೆ ಹೆಚ್ಚಿನ ಗಮನ ಹರಿಸ ಬೇಕಾಗುವುದು, ಏಕೆಂದರೆ ಬೇಗನೆ ಮೈಯೆಲ್ಲಾ ಕೊಳೆಯಾಗುವುದು, ಅಲ್ಲದೆ ಎದ್ದು, ಬಿದ್ದು ನಡೆಯುವುದರಿಂದ ಕೈ ಕಾಲುಗಳ ಮೇಲೆ ಗಾಯಗಳಾಗಬಹುದು.
2. ಮಕ್ಕಳನ್ನು ಸ್ನಾನ ಮಾಡಿಸುವ ಮೊದಲು ಮೈಗೆಲ್ಲಾ ಎಣ್ಣೆ ಮಸಾಜ್ ಮಾಡಬೇಕು, ಇಲ್ಲದಿದ್ದರೆ ತ್ವಚೆ ಒಣಗಿ ಮೈಯಲ್ಲಿ ಗುಳ್ಳೆಗಳು ಬರಬಹುದು.
3.ಮಕ್ಕಳಿಗೆ ಸ್ನಾನ ಮಾಡಿಸುವ ಮೊದಲೆ ಸೋಪು, ಟವಲ್, ಪೌಡರ್ ಅನ್ನು ತೆಗೆದು ಇಟ್ಟು ನಂತರ ಸ್ನಾನ ಮಾಡಿಸಬೇಕು.
4. ಮಕ್ಕಳಿಗೆ ಉಪಯೋಗಿಸುವ ಸೋಪಿನಲ್ಲಿ ನೈಸರ್ಗಿಕ ಎಣ್ಣೆಯ ಅಂಶವಿರಲಿ , ಮಕ್ಕಳಿಗೆ ಸೋಪು ಹಚ್ಚುವಾಗ ಕಣ್ಣು ಮತ್ತು ಬಾಯಿಗೆ ಸೋಪು ನೊರೆ ಹೋಗದಂತೆ ಎಚ್ಚರವಹಿಸಿ.
5. ಸ್ನಾನ ಮಾಡಿದ ನಂತರ ಮಕ್ಕಳ ಎಣ್ಣೆಯನ್ನು ಹಚ್ಚಿ, ಅಲ್ಲದಿದ್ದರೆ ಬಾದಾಮಿ ಎಣ್ಣೆ, ಆಲೀವ್ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಮೈಗೆ ಹಚ್ಚಬೇಕು. ಇದರಿಂದ ತ್ವಚೆ ಮೃದುವಾಗಿ ಇರುವುದು.
6. ನಂತರ ಮೈಯನ್ನು ಶುದ್ಧ ಟವಲ್ ನಿಂದ ಒರೆಸಿ ಪೌಡರ್ ಹಚ್ಚಬೇಕು.
7. ಮಕ್ಕಳಿಗೆ ಡಯಾಪರ್ ನಿಂದ ಗೆರೆ ಉಂಟಾಗುತ್ತವೆ, ಅಲ್ಲಿಗೆ ಪೌಡರ್ ಚೆನ್ನಾಗಿ ಹಾಕಬೇಕು.
8. ಮಕ್ಕಳಿಗೆ ಒಂದು ವೇಳೆ ಚಿಕ್ಕ ಗುಳ್ಳೆಗಳಾಗಿದ್ದರೆ ಒಂದು ಬಟ್ಟೆಯನ್ನು ತೆಗೆದು ಅದನ್ನು ಬಿಸಿ ನೀರಿನಲ್ಲಿ ಮುಳುಗಿಸಿ ಹಿಂಡಿ ಆ ಭಾಗವನ್ನು ಒರೆಸಿ, ನಂತರ ಮುಲಾಮ್ ಹಚ್ಚಬೇಕು.
9. ಮಕ್ಕಳಿಗೆ ಕಾಟನ್ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.
10. ಸಡಿಲವಾದ ಬಟ್ಟೆಗಳನ್ನು ಧರಿಸುವುದರಿಂದ ಮಕ್ಕಳಿಗೂ ಆರಾಮವೆನಿಸುವುದು.
11. ಮಕ್ಕಳನ್ನು ಮುಂಜಾನೆ ಸ್ವಲ್ಪ ಹೊತ್ತು ಸೂರ್ಯನ ಬಿಸಿಲಿಗೆ ಒಡ್ಡಬೇಕು, ಇದರಿಂದ ವಿಟಮಿನ್ D ಸಿಗುತ್ತದೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗಂತ ತುಂಬಾ ಹೊತ್ತು ಬಿಸಿಲಿನಲ್ಲಿ ನಿಲ್ಲಿಸಿದರೆ ತ್ವಚೆ ಕಪ್ಪಾಗುವುದು.



Click it and Unblock the Notifications
