Latest Updates
-
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು! -
ಡೆಂಗ್ಯೂ ಭೀತಿ: ಮಳೆಗಾಲದ ಮುನ್ನ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 20 ನಿಮಿಷದ ಈ ಕೆಲಸ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಲೀಟರ್ಗೆ ₹8 ಹೆಚ್ಚಳ, ನಿಮ್ಮ ತಿಂಗಳ ಬಜೆಟ್ ಮೇಲೆ ಎಂತಹ ಪರಿಣಾಮ? -
'ದೃಶ್ಯಂ' ಆಡಿಯೋ ಟ್ರೆಂಡ್: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸಿಂಪಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ!
ನೀ ಕೂಡಿ ಬಾಳುವುದನ್ನು ಕಲಿ ಕಂದಾ

ಹಾಗಾಗಕೂಡದು ಅಂದರೆ ಮಗುವಾಗಿದ್ದಾಗಲೇ ಹಂಚಿಕೊಳ್ಳುವ ಬುದ್ಧಿಯನ್ನು ಕಲಿಸಿ, ಬೆಳೆಯುತ್ತಿದ್ದ ಹಾಗೆ ಕಲಿಯುತ್ತದೆ ಎಂದು ನೀವು ಭಾವಿಸಿದರೆ ನಿಮ್ಮ ಎಣಿಕೆ ತಪ್ಪಾದಿತು. ಅದಕ್ಕಾಗಿ ನೀವು ಮಾಡಬೇಕಾದದು ಇಷ್ಟು:
1. ನಿಮಗೆ ಒಂದೇ ಮಗುವಿದ್ದಾಗ ತರುವುದೆಲ್ಲಾ ಆ ಮಗುವಿಗೆ ಆಗಿರುವುದರಿಂದ ಈ ಹಂಚುವಿಕೆ ಗುಣ ಬೆಳೆಯುವುದಿಲ್ಲ. ಆದ್ದರಿಂದ ನೀವು ನಿಮ್ಮ ನೆರೆ ಮನೆಯ ಆಥವಾ ಸ್ನೇಹಿತರ ಮಕ್ಕಳು ಮನೆಗೆ ಬಂದಾಗ ನಿಮ್ಮ ಮಗುವಿಗೆ ಆಟ ಸಾಮಾನುಗಳನ್ನು ಆ ಮಕ್ಕಳಿಗೆ ಕೊಟ್ಟು ಅವರೊಂದಿಗೆ ಆಡಲು ಬಿಡಿ.
2. ಮಗುವಿಗೆ ಸಿಹಿ ತಿಂಡಿಗಳನ್ನು ತಂದಾಗ ಅದರ ಕೈಯಲ್ಲಿ ಕೊಟ್ಟು ನಿಮಗೆ ಸ್ವಲ್ಪ ಕೊಡಲು ಹೇಳಿ ಹಾಗೂ ಮನೆಯಲ್ಲಿರುವ ಇತರರಿಗೂ ನೀಡುವಂತೆ ಹೇಳಿ.
3. ಹಾಗೆ ಮಗುವಿಗೆ ಹೇಳಿದಾಗ ಅದು ಮುದ್ದಾಗಿ ಇಲ್ಲ ಕೊಡಲ್ಲ ಎನ್ನುವಾಗ ಎಲ್ಲರು ನಕ್ಕು ಸುಮ್ಮನೆ ಆಗುತ್ತಾರೆ. ಆದರೆ ನೀವು ನಿಮ್ಮ ಮಗುವಿಗೆ ಹೊಂದಾಣಿಕೆಯನ್ನು ಕಲಿಸ ಬೇಕು ಎಂದು ಭಾವಿಸುವರಾದರೆ ನಗಬೇಡಿ.
4. ಮಗು ಅದರ ವಸ್ತುಗಳ ಮೇಲೆ ಪೊಸೆಸಿವ್ ಆಗಿದ್ದರೆ ಅದಕ್ಕೆ ನಿಧಾನಕ್ಕೆ ಇತರ ಮಕ್ಕಳೊಂದಿಗೆ ಆಟ ಆಡುವಂತೆ ಪ್ರೋತ್ಸಾಹಿಸಿ.
5.ಮಗುವಿಗೆ ನೀನು ಬೆರೆತು ಆಟ ಆಡಿದರೆ ಒಳ್ಳೆ ಹುಡುಗಿ/ಹುಡುಗ, ಅಲ್ಲದಿದ್ದರೆ ದೇವರು ಕೋಪ ಮಾಡಿಕೊಳ್ಳುತ್ತಾನೆ ಈ ರೀತಿಯೆಲ್ಲಾ ಹೇಳುವುದು ಮಗುವಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ.
6. ನೀತಿ ಕತೆಗಳನ್ನು ಹೇಳುವುದು ಅದರಲ್ಲಿ ಬರುವ ಒಳ್ಳೆಯ ಪಾತ್ರಗಳಂತೆ ಆಗಬೇಕು ಎಂದು ಹೇಳುವುದರಿಂದ ಮಗು ತನ್ನಲ್ಲಿ ಕೂಡ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳ ತೊಡಗುತ್ತದೆ.



Click it and Unblock the Notifications
