Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ನ್ಯಾಚುರಲ್ ಐವಿಎಫ್ Vs ಸಾಂಪ್ರದಾಯಿಕ ಐವಿಎಫ್: ಯಾರಿಗೆ ಯಾವುದು ಒಳ್ಳೆಯದು?
ಒಂದು ಮಗುವಾಗಿ ಪ್ರಯತ್ನಿಸಿ, ಹಲವಾರು ಚಿಕಿತ್ಸೆ ಪಡೆದರೂ ಏನೂ ಪ್ರಯೋಜನ ಸಿಗದವರಿಗೆ ಐವಿಎಫ್ ( IVF) ಟೆಕ್ನಾಲಾಜಿ ಒಂದು ವರದಾನವಾಗಿದೆ. ಐವಿಎಫ್ ತಂತ್ರಜ್ಞಾನದಿಂದಾಗಿ ಎಷ್ಟೋ ಜನರಿಗೆ ಪೋಷಕರಾಗುವ ಭಾಗ್ಯ ಸಿಕ್ಕಿದೆ. ಗಂಡನ ವೀರ್ಯಾಣುಗಳು ಹೆಂಡತಿಯ ಅಂಡಾಣುಗಳನ್ನು ಟ್ಯೂಬ್‌ನಲ್ಲಿ ಹಾಕಿ ಅದನ್ನು ಲ್ಯಾಬ್‌ನಲ್ಲಿ ಫಲವತ್ತತೆ ಮಾಡಿ ನಂತರ ಗರ್ಭಕೋಶದೊಳಗೆ ಸೇರಿಸಲಾಗುವುದು.
ಐವಿಎಫ್ ಚಿಕಿತ್ಸೆಗೆ ಮುನ್ನ ಐಯುಐ ಅಥವಾ IUI (intrauterine insemination) ವಿಧಾನ ಪ್ರಯತ್ನಿಸಲಾಗುವುದು. ಇದರಲ್ಲಿ ಅಂಡೋತ್ಪತ್ತಿ ಸಮಯದಲ್ಲಿ ಪುರುಷನ ವೀರ್ಯಾಣುವನ್ನು ಗರ್ಭಕೋಶದ ಒಳಗಡೆ ನೇರವಾಗಿ ಹಾಕಲಾಗುವುದು. ಆಗ ಅಂಡಾಣುಗಳು ಬಿಡುಗಡೆಯಾದಾಗ ವೀರ್ಯಾಣುಗಳ ಜೊತೆ ಸೇರಿ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚು.
ಈ ವಿಧಾನದಲ್ಲಿ ಸಾಧ್ಯವಾಗದೇ ಇದ್ದಾಗ ಐವಿಎಫ್ ಚಿಕಿತ್ಸೆ ಮಾಡಲಾಗುವುದು. ತುಂಬಾ ಆರೋಗ್ಯ ಸಮಸ್ಯೆ ಇರುವವರಿಗೆ, 40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಐವಿಎಫ್ ಚಿಕಿತ್ಸೆ ಮಾಡಲಾಗುವುದು.

ಯಾರಿಗೆ ಐವಿಎಫ್ ವಿಧಾನಕ್ಕೆ ಸಲಹೆ ನೀಡಲಾಗುವುದು?
* ಫಾಲೋಪಿಯನ್ ಟ್ಯೂಬ್ಸ್ ಬ್ಲಾಕ್ ಆಗಿದ್ದರೆ
* ಪುರುಷರಲ್ಲಿ ಏನಾದರೂ ಸಮಸ್ಯೆಯಿದ್ದರೆ
* ವೀರ್ಯಾಣುಗಳು ಅಂಡಾಣುಗಳನ್ನು ಸಂಪರ್ಕಿಸಲು ತೊಂದರೆಯಿದ್ದಾಗ ಅಥವಾ ಅಂಡಾಶಯದಲ್ಲಿ ಏನಾದರೂ ತೊಂದರೆ ಇದ್ದಾಗ ಐವಿಎಫ್ ಮಾಡಲು ಸೂಚಿಸಲಾಗುವುದು.
* ಅಂಡಾಣುಗಳ ಉತ್ಪತ್ತಿಯಲ್ಲಿ ತೊಂದರೆಯಿದ್ದರೆ
* ಫಾಲೋಪಿಯನ್ ಟ್ಯೂಬ್ ತೆಗೆದಿದ್ದರೆ
* ವಂಶವಾಹಿ ಸಮಸ್ಯೆಗಳಿದ್ದರೆ
* ಎಷ್ಟೇ ಪ್ರಯತ್ನಿಸಿದರೂ ಮಕ್ಕಳಾಗದೇ ಇದ್ದಾಗ

ಐವಿಎಫ್ ವಿಧಾನ ಹೇಗೆ?
ಐವಿಎಫ್ ವಿಧಾನದಲ್ಲಿ ಮೊದಲಿಗೆ ಅಧಿಕ ಅಂಡಾಣುಗಳು ಬಿಡುಗಡೆಯಾಗಲು ಇಂಜೆಕ್ಷನ್ ನೀಡಲಾಗುವುದು. ಮುಟ್ಟಿನ ದಿನಗಳಲ್ಲಿ ಹಾಗೂ ರಕ್ತಸ್ರಾವ ಕಡಿಮೆಯಾಗುತ್ತಿರುವ ದಿನಗಳಲ್ಲಿ (ಅಂದ್ರೆ ಮುಟ್ಟಾದ 5 ರಿಂದ 6 ದಿನಗಳಲ್ಲಿ) gonadotropin ಔಷಧದ ಇಂಜೆಕ್ಷನ್ ನೀಡಲಾಗುವುದು. ಈ ಸಮಯದಲ್ಲಿ ಸ್ಕ್ಯಾನಿಂಗ್ ಮಾಡಲಾಗುವುದು, ಯಾವಾಗ ಅಂಡಾಣುಗಳು ಸರಿಯಾದ ಗಾತ್ರದಲ್ಲಿ ಬಿಡುಗಡೆಯಾಗುತ್ತದೆಯೋ ಆವಾಗ ಲ್ಯಾಬ್‌ನಲ್ಲಿ ಅಂಡಾಣುಗಳನ್ನು ಬೇರ್ಪಡಿಸಿ ಟ್ಯೂಬ್‌ನಲ್ಲಿ ಹಾಕಿ, ಗಂಡನ ವೀರ್ಯಾಣು ಹಾಕಿ ಸೆಟ್ ಮಾಡಲಾಗುವುದು. ಈ ವಿಧಾನದಲ್ಲಿಉಂಟಾದ ಭ್ರೂಣವನ್ನು ಗರ್ಭಕೋಶದ ಒಳಗಡೆ ಸೇರಿಸಲಾಗುವುದು.

ನ್ಯಾಚುರಲ್ ಐವಿಎಫ್ Vs ಸಾಂಪ್ರದಾಯಕ ಐವಿಎಫ್
ನ್ಯಾಚುರಲ್ ಐವಿಎಫ್ ಅನ್ನು ಮಹಿಳೆಯರ ಋತು ಚಕ್ರದ ಅವಧಿ ನೋಡಿ ನೀಡಲಾಗುವುದು. ಇದನ್ನು ಋತುಚಕ್ರ ಪ್ರಾರಂಭವಾಗುವ ಮುನ್ನ ಚಿಕಿತ್ಸೆ ನೀಡಲಾಗುವುದು. ಸಾಂಪ್ರದಾಯಿಕ ಐವಿಎಫ್‌ನಲ್ಲಿ ಋತು ಚಕ್ರ ನಿಲ್ಲಲು ಔಷಧಿ ನೀಡಿ ನಂತರ ಭ್ರೂಣವನ್ನು ಗರ್ಭಕೋಶದೊಳಗಡೆ ಸೇರಿಸಲಾಗುವುದು.
ಯಾರು ನ್ಯಾಚುರಲ್ ಐವಿಎಫ್ ಚಿಕಿತ್ಸೆ ಪಡೆಯಬಹುದು?
* ಪಿಸಿಒಎಸ್ ಇದ್ದು ಮಕ್ಕಳಾಗದಿದ್ದರೆ ನ್ಯಾಚುರಲ್ ಐವಿಎಫ್ ಮಾಡಿಸಬಹುದು.
* ಕೆಲವೊಂದು ಆರೋಗ್ಯ ಸಮಸ್ಯೆಯಿಂದಾಗ ಮಕ್ಕಳಾಗದಿದ್ದರೆ ಉದಾಹರಣೆಗೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದರೆ ಅವರಿಗೆ ಐವಿಎಫ್ ಒಳ್ಳೆಯದು.
* ಯಾರಿಗೆ ಅಂಡಾಣುಗಳ ಉತ್ಪತ್ತಿ ಕಡಿಮೆ ಇದೆಯೋ ಅವರು ಐವಿಎಫ್ ಬಗ್ಗೆ ಆಲೋಚಿಸಬಹುದು.

ನ್ಯಾಚುರಲ್ ಐವಿಎಫ್‌ನ ಪ್ರಯೋಜನಗಳು
* ಇದರಲ್ಲಿ ಹೆಚ್ಚಿನ ಔಷಧಿಗಳನ್ನು ತೆಗೆದುಕೊಳ್ಳುವುದು ಬೇಕಾಗಿಲ್ಲ.
* ಈ ಚಿಕಿತ್ಸೆಗೆ ಸ್ವಲ್ಪ ಕಾಲಾವಧಿ ಸಾಕು.

ನ್ಯಾಚುರಲ್ ಐವಿಎಫ್‌ನ ಅಡ್ಡಪರಿಣಾಮಗಳು
* ಭ್ರೂಣ ಆರೋಗ್ಯಕರವಾಗಿ ಬೆಳೆಯದೇ ಹೋಗಬಹುದು
* ಈ ವಿಧಾನದಲ್ಲಿ ಗರ್ಭಧಾರಣೆಯಾಗುವ ಸಾಧ್ಯತೆ ಕಡಿಮೆ
* ಈ ವಿಧಾನದಲ್ಲಿ ಹುಟ್ಟಿದ ಮಕ್ಕಳು ಬದುಕುವುದು ಕಡಿಮೆ
ಸಾಂಪ್ರದಾಯಿಕ ಐವಿಎಫ್‌ನಲ್ಲಿ ಆರೋಗ್ಯವಂತ ಮಗುವನ್ನು ಪಡೆಯುವ ಸಾಧ್ಯತೆ ಹೆಚ್ಚು.



Click it and Unblock the Notifications
