Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 6 ರಾಷ್ಟ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂದು ಹಣ ನೀಡಲಾಗುತ್ತೆ
ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ನಾವಿಬ್ಬರು ನಮಗಿಬ್ಬರು ಅಥವಾ ಆರತಿಗೊಂದು ಕೀರ್ತಿಗೊಂದು ಎಂದು ಹೇಳಿ ಎರಡು ಮಕ್ಕಳಿಗೆ ಸಾಕು ಮಾಡುತ್ತಿದ್ದಾರೆ. ಈಗ ಮಕ್ಕಳ ಶಾಲಾ ಖರ್ಚು, ಪೋಷಕರಿಗೆ ಇರುವ ಕೆಲಸದ ಒತ್ತಡ, ಮಕ್ಕಳನ್ನು ನೋಡಿಕೊಳ್ಳಲು ಯಾರು ಇಲ್ಲದಿರುವುದು ಅ ಹೀಗೆ ಅನೇಕ ಕಾರಣಗಳಿಂದ ಎರಡು ಮಕ್ಕಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (Vasectomy) ಮಾಡಿಸಿಕೊಳ್ಳುತ್ತಿದ್ದಾರೆ.
ಇನ್ನು ನಮ್ಮಲ್ಲಿರುವ ಸರ್ಕಾರದ ಸೌಲಭ್ಯಗಳು ಕೂಡ ಎರಡು ಮಕ್ಕಳಿಗಷ್ಟೇ ದೊರೆಯುತ್ತಿದೆ, ಆದರೆ ಕೆಲ ದೇಶಗಳಲ್ಲಿ ಮಕ್ಕಳನ್ನು ಮಾಡಿಕೊಳ್ಳಿ ನಿಮ್ಮೆಲ್ಲಾ ಖರ್ಚುಗಳನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ, ಇಂಟೆರೆಸ್ಟಿಂಗ್ ಅನಿಸುತ್ತೆ ಅಲ್ವಾ, ಹೌದು ಆ ರಾಷ್ಟ್ರಗಳು ಯಾವುವು? ಏಕೆ ಆ ದೇಶದ ಪ್ರಜೆಗಳು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಹೇಳುತ್ತಿದೆ ಎಂದು ನೋಡೋಣ:

ಚೀನಾ
ಚೀನಾ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದ್ದರಿಂದ ದಂಪತಿ ಒಂದು ಮಗುವಿಗಿಂತ ಹೆಚ್ಚಿನ ಮಕ್ಕಳನ್ನು ಮಾಡಿಕೊಳ್ಳಬಾರದು ಎಂಬ ಕಾನೂನು ಹೊರಡಿಸಿತು. ಸುಮಾರು 37 ವರ್ಷ ಈ ಕಾನೂನು, ಇದೀಗ ಎರಡು ಮಕ್ಕಳನ್ನು ಮಾಡಿಕೊಳ್ಳಿ ಎಂದಿದೆ, ಇಲ್ಲದಿದ್ದರೆ ಇನ್ನು ಕೆಲವು ವರ್ಷಗಳಲ್ಲಿ ಚೀನಾದಲ್ಲಿ ಯುವಕ-ಯುವತಿಯರ ಸಂಖ್ಯೆ ತುಂಬಾನೇ ಕಡಿಮೆಯಾಗಲಿದೆ, ವಯಸ್ಸಾದವರ ಸಂಖ್ಯೆ ಹೆಚ್ಚಾಗಲಿದೆ. ಒಂದು ರಾಷ್ಟ್ರದ ಅಭಿವೃದ್ಧಿಗೆ ಅಲ್ಲಿಯ ಜನಸಂಖ್ಯೆ ಕೂಡ ಮುಖ್ಯವಾಗುತ್ತೆ.
ಫಿನ್‌ಲ್ಯಾಂಡ್
ಇಲ್ಲಿ ಗರ್ಭಿಣಿಯರಿಗೆ 5 ತಿಂಗಳು ಹೆರಿಗೆ ರಜೆ ಇದ್ದು ಸರ್ಕಾರ ದುಡ್ಡು ಕೊಡುತ್ತಿದೆ, ಅಲ್ಲದೆ ತಾಯಿ ಹಾಗೂ ಮಗುವಿಗೆ ಅವಶ್ಯಕವಿರುವ ವಸ್ತುಗಳನ್ನು ಸರ್ಕಾರವೇ ನೀಡುತ್ತಿದೆ. ಇಲ್ಲಿ 170 ಯುರೋ ಟ್ಯಾಕ್ಸ್ ಫ್ರೀಯಾಗಿ ನೀಡುತ್ತಿದೆ.
ಈಸ್ಟೋನಿಯಾ
ಇಲ್ಲಿ ಹೆಚ್ಚು ಮಕ್ಕಳಾದರೆ ಆ ಕುಟುಂಬಕ್ಕೆ ಹೆಚ್ಚಿನ ಸೌಲಭ್ಯ ನೀಡಲಾಗುತ್ತಿದೆ. ಮೊದಲ ಮಗು ಜನಿಸಿದರೆ 320 ಯುರೋ ನೀಡುತ್ತದೆ ಅದೇ ಮೂರು ಮಕ್ಕಳಾದರೆ 1000 ಯುರೋ ನೀಡುತ್ತಿದೆ. ಅಲ್ಲದೆ ಜನನ ಸಂಖ್ಯೆ ಹೆಚ್ಚಿಸಲು ವರ್ಷಗಟ್ಟಲೆ ರಜೆ ಕೂಡ ನೀಡಲಾಗುತ್ತಿದೆ.
ಜಪಾನ್
ಜಪಾನ್‌ನಲ್ಲಿ ಮುಂದಿನ ಪೀಳಿಗೆಯ ಅಭಾವ ಕಂಡು ಬಂದಿರುವುದರಿಂದ ದಂಪತಿ ಎಷ್ಟು ಮಕ್ಕಳನ್ನು ಮಾಡಿಕೊಳ್ಳುತ್ತಾರೋ ಅಷ್ಟೊಂದು ಸೌಲಭ್ಯ ನೀಡುತ್ತಿದೆ. ಮಕ್ಕಳ ಸಂಪೂರ್ಣ ಖರ್ಚಿಗೆ ಹಣ ಸರ್ಕಾರ ನೀಡುತ್ತಿದೆ. ಮೊದಲ ಮಗುವಿಗೆ 100,000 yen ನೀಡುತ್ತಿದ್ದಾರೆ.
ಆಸ್ಟ್ರೇಲಿಯಾ
ಆಸ್ಟ್ರೇಲಿಯಾದಲ್ಲಿ ದಂಪತಿ ಮಗು ಮಾಡಿಕೊಂಡರೆ ಆ ಮಗುವಿನ ಖರ್ಚು ಮಾತ್ರವಲ್ಲ ದಂಪತಿಗಳಿಗೂ ಖರ್ಚಿಗೆ ಹಣವನ್ನು ನೀಡುತ್ತಿದೆ ಸರ್ಕಾರ. ಒಂದು ಮಗು ಜನಿಸಿದಾಗ ಸತ್ತು ಹೋಗಿದ್ದರೆ ವೈದ್ಯಕೀಯ ಭಾಷೆಯಲ್ಲಿ ಸ್ಟಿಲ್ ಬರ್ತ್ ಎಂದು ಕರೆಯುತ್ತಾರೆ, ಈ ರೀತಿಯಾದಾಗಲೂ ಹಣವನ್ನು ನೀಡುತ್ತಿದೆ. ಮಗುವಿಗೆ ಉಚಿತ ಸಿಕ್ಷಣ ಜೊತೆಗೆ ಇತರ ಖರ್ಚಿಗೆ ಇರುವ ಹಣವನ್ನು ನೀಡುತ್ತಿದೆ.
ಹಲವು ರಾಷ್ಟ್ರಗಳಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗುತ್ತಿದೆ
ಹಲವು ರಾಷ್ಟ್ರಗಳಲ್ಲಿ ದಂಪತಿಗಳಿಗೆ ಮಕ್ಕಳಾಗುತ್ತಿಲ್ಲ, ಹಾಗಾಗಿ ಮಗುವನ್ನು ಹೆರುವ ಸಾಮರ್ಥ್ಯ ಇರುವ ದಂಪತಿಗಳಿಗೆ ಸರ್ಕಾರವೇ ಅವರ ಖರ್ಚು ಭರಿಸಿ ಮಕ್ಕಳನ್ನು ಮಾಡಿಕೊಳ್ಳಿ ಎಂದು ಹೇಳುತ್ತಿದೆ, ಅವರು ಹೆಚ್ಚು ಮಕ್ಕಳನ್ನು ಮಾಡಿಕೊಂಡರೆ ಅವರಿಗೆ ಸಿಗುವ ಸೌವಲತ್ತುಗಳು ಕೂಡ ಹೆಚ್ಚಾಗುತ್ತಿದೆ.
ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳುವುದು ಅವಶ್ಯಕವಾಗಿದೆ ಆ ರಾಷ್ಟ್ರಗಳಿಗೆ ಏಕೆ?
ಈಗೀನ ಮಕ್ಕಳು ಮುಂದಿನ ಪ್ರಜೆಗಳು, ಒಂದು ದೇಶ ಬಲಿಷ್ಠವಾಗಿರಬೇಕು, ಸಮೃದ್ಧವಾಗಿರಬೇಕು, ಬೆಳೆಯಬೇಕು ಎಂದರೆ ಯುವ ಪೀಳಿಗೆ ಅಷ್ಟೇ ಮುಖ್ಯ, ಈಗ ಮಕ್ಕಳನ್ನು ಮಾಡಿಕೊಳ್ಳದೆ ಇದ್ದರೆ ಮುಂದೆ ಆ ರಾಷ್ಟ್ರದ ಭವಿಷ್ಯವೇ ಅತಂತ್ರವಾಗಬಹುದು.
ಜನಸಂಖ್ಯೆ ಮಿತಿ ಮೀರಿದರೂ ರಾಷ್ಟ್ರಕ್ಕೆ ಒಳ್ಳೆಯದಲ್ಲ, ಅದರಂತೆ ಅತಿ ಕಡಿಮೆ ಮಕ್ಕಳಿರುವುದು ಕೂಡ ರಾಷ್ಟ್ರಕ್ಕೆ ಒಳ್ಳೆಯದಲ್ಲ.



Click it and Unblock the Notifications