Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪತ್ನಿಯು ಗರ್ಭಿಣಿಯಾಗಿದ್ದಾಗ ಪತಿಯು ನಿಭಾಯಿಸಬೇಕಾದ ಕರ್ತವ್ಯಗಳೇನು?
ಒರ್ವ ಮಹಿಳೆಗೆ ಗರ್ಭಿಣಿಯಾಗುವ ಸಂದರ್ಭದಲ್ಲಿ ಎಷ್ಟು ಖುಷಿ ಇರುತ್ತೋ ಅಷ್ಟೇ ಭಯ ಹಾಗೂ ಆತಂಕ ಕೂಡ ಇರುತ್ತದೆ. ಈ ಒಂಬತ್ತು ತಿಂಗಳುಗಳ ಕಾಲ ಆಕೆಯ ಹಾಗೂ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಈ ಸಂದರ್ಭದಲ್ಲಿ ಗಂಡನಾದವನು ಕೂಡ ಆಕೆಗೆ ಹೆಗಲಾಗಿ ನಿಲ್ಲಬೇಕಾಗುತ್ತದೆ. ಅಷ್ಟಕ್ಕು ಪತ್ನಿ ಗರ್ಭಿಣಿಯಾದ ಸಂದರ್ಭದಲ್ಲಿ ಪತಿಯ ಜವಾಬ್ದಾರಿ ಹಾಗೂ ಕರ್ತವ್ಯಗಳೇನು ಅನ್ನೋದನ್ನು ತಿಳಿದುಕೊಳ್ಳೋಣ.

ಈ ಸಂದರ್ಭದಲ್ಲಿ ಪತ್ನಿ ನಿಮ್ಮಿಂದ ಬಯಸೋದೇನು?
ನಾನು ತಂದೆಯಾಗುತ್ತಿದ್ದೀನಿ ಅನ್ನೋ ಖುಷಿ ಪುರುಷರಿಗೆ ಖಂಡಿತವಾಗಿ ಇದ್ದೇ ಇರುತ್ತದೆ. ಆದರೆ ಇಂತಹ ಸಂದರ್ಭದಲ್ಲಿ ಪುರುಷರಿಗೆ ಏನು ಮಾಡಬೇಕು ಅನ್ನೋದು ತೋಚೋದೇ ಇಲ್ಲ. ಒರ್ವ ತಾಯಿಯಾಗಿ ಮಹಿಳೆಗೆ ಎಷ್ಟು ಜವಾಬ್ದಾರಿಗಳು ಇರುತ್ತದೆಯೋ ತಂದೆಯಾದವನಿಗೂ ಕೂಡ ಅಷ್ಟೇ ಜವಾಬ್ದಾರಿಗಳು ಇರುತ್ತದೆ ಅನ್ನೋದನ್ನು ಮರೆಯುವಂತಿಲ್ಲ. ಪತ್ನಿಯ ಸುಖ ಮಾತ್ರವಲ್ಲ ದುಃಖದಲ್ಲೂ ಆಕೆಯ ಜೊತೆಗಿರೋದು ಪತಿಯ ಕರ್ತವ್ಯವಾಗಿರುತ್ತದೆ.
ಪುರುಷರಿಗೆ ಆತಂಕ ಹೆಚ್ಚಾಗುತ್ತಾ?
ಹೆಂಡತಿ ಗರ್ಭಿಣಿಯಾದ ಸಂದರ್ಭದಲ್ಲಿ ಪುರುಷರು ಮುಖ್ಯವಾಗಿ ಆಕೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಶಕ್ತಿಯಾಗಿ ನಿಲ್ಲಬೇಕು. ಆಕೆಯನ್ನು ಮೆಡಿಕಲ್ ಚೆಕ್‌ಅಪ್‌ಗೆ ಕಡೆದುಕೊಂಡು ಹೋಗುವುದರಿಂದ ಹಿಡಿದು ಆಕೆ ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವಂತೆ ನೋಡಿಕೊಳ್ಳೋದು ಪತಿಯ ಕರ್ತವ್ಯ. ಕೆಲವೊಂದು ಸಲ ಇಂತಹ ಸಂದರ್ಭದಲ್ಲಿ ಪುರುಷರು ಕೂಡ ಆತಂಕಕ್ಕೆ ಒಳಗಾಗುತ್ತಾರೆ. ಮೊದಲ ಅನುಭವ ಆಗಿರೋದ್ರಿಂದ ಏನು ಮಾಡಬೇಕೆಂದು ತೋಚದೆ ಸಂಕಷ್ಟಕ್ಕೆ ಒಳಗಾಗಿದ್ದು ಇದೆ ಅಲ್ವಾ?. ಈ ಒತ್ತಡದಿಂದ ಹೊರ ಬರಬೇಕಾದರೆ ಇಂತಹ ಸಂದರ್ಭದಲ್ಲಿ ಗರ್ಭಾವಸ್ಥೆಗೆ ಸಂಬಂಧಿಸಿದಂತಹ ಪುಸ್ತಕವನ್ನು ಓದುವುದು ತುಂಬಾನೇ ಮುಖ್ಯ.
ಗರ್ಭಾವಸ್ಥೆಯ ಸಮಯದಲ್ಲಿ ಪತಿಯು ನಿಭಾಯಿಸ ಬೇಕಾದ ಜವಾಬ್ದಾರಿಗಳು
* ಗರ್ಭಿಣಿಯಾಗಿದ್ದಾಗ ಪ್ರತಿ ತಿಂಗಳು ವೈದ್ಯರ ಬಳಿ ಚೆಕ್‌ಅಪ್‌ಗಾಗಿ ತೆರಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆಕೆ ಒಬ್ಬಳನ್ನೇ ಬಿಟ್ಟು ಹೋಗಬೇಡಿ. ಬದಲಿಗೆ ಆಕೆಯ ಜೊತೆಗೆ ನೀವು ಹೋಗಿ ಇದರಿಂದ ಆಕೆಗೆ ನೀವು ದೈಹಿಕ ಹಾಗೂ ಮಾನಸಿಕವಾಗಿ ಸ್ಥೈರ್ಯ ತುಂಬಿದಂತಾಗುತ್ತದೆ.
* ಬೆಳಗ್ಗೆ ಅಥವಾ ಸಂಜೆ ನಿಮಗೆ ಸಮಯ ಸಿಕ್ಕಾಗ ಗರ್ಭಿಭಿ ಪತ್ನಿಯನ್ನು ವಾಕಿಂಗ್‌ಗಾಗಿ ಹೊರಗಡೆ ಕರೆದುಕೊಂಡು ಹೋಗಿ. ಇದರಿಂದ ಆಕೆಯ ಮನಸ್ಸಿಗೂ ಒಂದು ರೀತಿ ಖುಷಿ ಸಿಗುತ್ತದೆ.
* ಗರ್ಭಿಣಿಯಾಗಿರು ಸಂದರ್ಭದಲ್ಲಿ ಎಲ್ಲಾ ಕೆಲಸಗಳನ್ನು ನಿಮ್ಮ ಪತ್ನಿಯೇ ಮಾಡಬೇಕು ಎಂದು ಬಯಸಬೇಡಿ. ಈ ಸಮಯದಲ್ಲಿ ಸಾಧ್ಯವಾದಷ್ಟು ಎಲ್ಲಾ ಕೆಲಸಗಳನ್ನು ನೀವೇ ಮಾಡಿ.
* ಆಕೆಗೆ ಸರಿಯಾದ ಸಮಯದಲ್ಲಿ ಊಟ, ತಿಂಡಿ ಹಾಗೂ ಔಷಧಿಯನ್ನು ಕೊಡೋದನ್ನು ಮರೀಬೇಡಿ.
* ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯರ ಭಾವನೆಗಳು ಬದಲಾಗುತ್ತದೆ. ಆತಂಕ, ಒತ್ತಡ, ಖಿನ್ನತೆ, ದುಃಖ ಅನುಭವಿಸುತ್ತಾರೆ. ಇದನ್ನೆಲ್ಲಾ ಅರ್ಥ ಮಾಡಿಕೊಂಡು ನೀವು ಆಕೆಗೆ ಶಕ್ತಿ ತುಂಬಬೇಕು.
* ಪತ್ನಿಯ ಸ್ಕ್ಯಾನಿಂಗ್ ಅಥವಾ ಅಲ್ಟ್ರಾ ಸೌಂಡ್ ಚಿಕಿತ್ಸೆಯ ಸಂದರ್ಭದಲ್ಲಿ ನೀವು ಆಕೆಯ ಜೊತೆಗಿರಬೇಕು. ಇದರಿಂದ ನಿಮಗೆ ಮಗುವಿನ ಬೆಳವಣಿಗೆಯ ಬಗ್ಗೆ ಗಮನಿಸಲು ಸಾಧ್ಯಾವಾಗುತ್ತದೆ.
* ಪತ್ನಿಯು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಸಾಧ್ಯವಾದಷ್ಟು ಅದಕ್ಕೆ ಸಂಬಂಧ ಪಟ್ಟ ಪುಸ್ತಕಗಳನ್ನು ಓದಿ. ಏಕೆಂದರೆ ಇದರಿಂದ ನಿಮಗೆ ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ವಿಚಾರ ಗೊತ್ತಾಗುತ್ತದೆ
* ಮಗುವಾದ ಮೇಲೆ ಸಾಮಾನ್ಯವಾಗಿ ಮನೆಗೆ ತುಂಬಾ ವಸ್ತುಗಳ ಅವಶ್ಯಕತೆ ಇರುತ್ತದೆ. ಹೀಗಾಗಿ ನಿಮ್ಮ ಹೆಂಡತಿಯ ಹೆರಿಗೆಗೆ ಇನ್ನು ಕೆಲವೇ ತಿಂಗಳಿರಬೇಕಾದರೆ ಮಗುವಿಗೆ ಸಂಬಂಧ ಪಟ್ಟ ವಸ್ತುಗಳನ್ನು ಮೊದಲೇ ಶಾಪಿಂಗ್ ಮಾಡಿಕೊಳ್ಳಿ.
* ಮಗುವಿಗೆ ಯಾವ ಹೆಸರಿಡಬೇಕು ಅನ್ನೋದನ್ನ ಮಗುವಾಗುವ ಮೊದಲೇ ನಿರ್ಧರಿಸಿ. ಇಲ್ಲವಾದರೆ ಮಗು ಹುಟ್ಟುವ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರ ಮಾಡಿಸ ಬೇಕಾಗಿರೋದ್ರಿಂದ ಆ ಸಮಯದಲ್ಲಿ ಸಮಸ್ಯೆಯಾಗುತ್ತದೆ.
* ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸುವಂತೆ ಆಕೆಯ ಮೇಲೆ ಒತ್ತಡ ಹೇರಬೇಡಿ
ಪತ್ನಿಯು ಗರ್ಭಿಣಿಯಾಗಿದ್ದ ಸಮಯದಲ್ಲಿ ಈ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸೋದು ಪತಿಯಾದವನ ಕರ್ತವ್ಯ. ಒಂದು ಮಗು ಮನೆಗೆ ಬರುವ ಮೊದಲು ತಾಯಿ ಎಷ್ಟೆಲ್ಲಾ ಸಿದ್ಧತೆಗಳನ್ನು ನಡೆಸಿರುತ್ತಾಳೋ ತಂದೆಯಾದವನು ಕೂಡ ದೈಹಿಕವಾಗಿ ಹಾಗೂ ಮಾನಸಿಕವಾಗಿ ಅಷ್ಟೇ ಸಿದ್ಧತೆಯನ್ನು ನಡೆಸಿರಬೇಕಾಗುತ್ತದೆ.



Click it and Unblock the Notifications


