Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಉದ್ಯೋಗಸ್ಥ ತಾಯಿ ಮಗುವಿಗೆ ಎದೆ ಹಾಲಿನ ಕೊರತೆ ಉಂಟಾಗದಿರಲು ಏನು ಮಾಡಬಹುದು? ವೈದ್ಯರ ಸಲಹೆಗಳು
ತಾಯಿ ಎದೆಹಾಲು ಅಮೃತಕ್ಕೆ ಸಮ ಎನ್ನುತ್ತಾರೆ, ಮಗುವಿನ ಬೆಳವಣಿಗೆಗೆ, ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಎದೆಹಾಲು ತುಂಬಾನೇ ಮುಖ್ಯ. ತಾಯಿ ಮಗುವಿಗೆ ಎದೆಹಾಲುಣಿಸಿದಾಗ ತಾಯಿ ಮಗುವಿನ ನಡುವೆ ಒಂದು ಗಟ್ಟಿ ಬಾಂಧವ್ಯ ಕೂಡ ಉಂಟಾಗುವುದು. ಮಕ್ಕಳ ತಜ್ಞರು ಮಗುವಿಗೆ 6 ತಿಂಗಳಾಗುವವರೆಗೆ ಎದೆಹಾಲು ಬಿಟ್ಟರೆ ಬೇರೇನೂ ಕೊಡಬೇಡಿ ಎಂದು ಹೇಳುತ್ತಾರೆ.

ತಾಯಿ ಎದೆಹಾಲಿನಂಥ ಪೋಷಕಾಂಶದ ಆಹಾರ ಮತ್ತೊಂದಿಲ್ಲ, ಕೆಲವರು ವರ್ಷದವರೆಗೆ ಎದೆ ಹಾಲುಣಿಸಿದರೆ ಇನ್ನು ಕೆಲವರು ಎರಡರಿಂದ ಮೂರು ವರ್ಷದವರೆಗೆ ಎದೆಹಾಲುಣಿಸುತ್ತಾರೆ. ಮಗುವಿಗೆ ಎದೆಹಾಲನ್ನು 6 ತಿಂಗಳ ಬಳಿಕ ಕೂಡ ಒಂದು ವರ್ಷ ಅಥವಾ ಎರಡು ವರ್ಷದವರೆಗೆ ಕೊಡುವುದು ಮಗುವಿನ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು, ಮಗು ಆಗಾಗ ಕಾಯಿಲೆ ಬೀಳುವುದು ತಪ್ಪುತ್ತದೆ, ಮಗುವಿಗೆ ಎದೆಹಾಲುಣಿಸುವಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಸವಾಲುಗಳು ಎದುರಾಗುವುದು.
ಹೆರಿಗೆಯ ರಜೆ 6 ತಿಂಗಳು ಇದೆ, ಆದರೆ ಕೆಲವರು ಗರ್ಭಾವಸ್ಥೆಯಲ್ಲಿ ತಮ್ಮ ಆರೋಗ್ಯ ಸ್ಥಿತಿಯ ಕಾರಣದಿಂದಾಗಿ 7 ತಿಂಗಳಿಗೆ ಅಥವಾ 8 ತಿಂಗಳಿಗೆ ರಜೆ ಮೇಲೆ ತೆರಳಿರುತ್ತಾರೆ, ಅವಾಗ ಮಗು ಜನಿಸಿದ 3-4 ತಿಂಗಳಿನಲ್ಲಿ ಕೆಲಸಕ್ಕೆ ಮರಳುವ ಪರಿಸ್ಥಿತಿ ಉಂಟಾಗುವುದು. ವೃತ್ತಿ ಜೀವನದಲ್ಲಿ ಬೆಳೆಯಬೇಕು ಅದೇ ಸಮಯದಲ್ಲಿ ತನ್ನ ಮಗುವಿಗೆ ಎದೆಹಾಲಿನ ಕೊರತೆ ಉಂಟಾಗಬಾರದು ಎಂದು ಆ ತಾಯಿ ಯೋಚಿಸುತ್ತಾಳೆ.
ಕೆಲವರು ಆಫೀಸ್ ಪಕ್ಕ ಮನೆ ಮಾಡಿ ಬಿಡುವು ಮಾಡಿಕೊಂಡು ಬಂದು ಮಗುವಿಗೆ ಎದೆಹಾಲುಣಿಸಿ ಹೋಗುತ್ತಾರೆ, ಆದರೆ ಎಲ್ಲರಿಗೆ ಅದು ಸಾಧ್ಯವಾಗಲ್ಲ, ಅಂಥವರು ಮಗುವಿಗೆ ಎದೆ ಹಾಲನ್ನು ಪಂಪ್ ಮಾಡಿಟ್ಟು ಹೋಗಬಹುದು. ಆದರೆ ಇದರ ಬಗ್ಗೆ ಕೂಡ ಹಲವು ಪ್ರಶ್ನೆಗಳು ತಾಯಂದಿರ ಮನಸ್ಸಿನಲ್ಲಿ ಮೂಡುತ್ತದೆ.
ನಾವು ಉದ್ಯೋಗಸ್ಥ ತಾಯಂದಿರು ತಮ್ಮ ಮಗುವಿಗೆ ಎದೆಹಾಲಿನ ಕೊರತೆ ಉಂಟಾಗದಿರಲು ಎದೆ ಹಾಲನ್ನು ಪಂಪ್ ಮಾಡುವುದರ ಬಗ್ಗೆ, ಅದನ್ನು ಬಳಸುವುದರ ಬಗ್ಗೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಡಾ. ನಿಶಾ ಬುಚಾಡೆ ಅವರನ್ನು ಸಂಪರ್ಕಿಸಿದೆವು, ಅವರು ತಾಯಂದಿರಿಗೆ ಅತ್ಯುತ್ತಮವಾದ ಸಲಹೆ ನೀಡಿದ್ದಾರೆ.
ಸ್ತನ ಪಾನ ಜಾಗೃತಿ ಮೂಡಿಸುವ ವಾರವಿದು. ನಾವಿಲ್ಲಿ ಉದ್ಯೋಗಸ್ಥ ತಾಯಂದಿರಿಗೆ ಮಗುವಿಗೆ ಎದೆಹಾಲಿನ ಕೊರತೆ ಉಂಟಾಗದಿರಲು ಏನು ಮಾಡಬೇಕು, ಪಂಪ್ ಮಾಡಿದ ಹಾಲು ಬಳಸುವುದು ಹೇಗೆ ಈ ರೀತಿ ಈ ಕೆಳಗಿನ ಪ್ರಶ್ನೆಗಳನ್ನು ವೈದ್ಯರ ಬಳಿ ಕೇಳಿದೆವು... ನಿಮ್ಮಲ್ಲಿಯೂ ಈ ಪ್ರಶ್ನೆ ಮೂಡಿರುತ್ತದೆ, ನಿಮ್ಮ ಈ ಪ್ರಶ್ನೆಗಳಿಗೆ ವೈದ್ಯರು ತುಂಬಾ ಉತ್ತಮ ಸಲಹೆ ನೀಡಿದ್ದಾರೆ ನೋಡಿ:
ತಾಯಂದಿರಲ್ಲಿ ಕಾಡುವ ಆತಂಕಗಳಿವು
- 6 ತಿಂಗಳು ಈ ಮೆಟರ್ನಿಟಿ ರಜೆ ಇದೆ, ಆ ಸಮಯದಲ್ಲಿ ಚಿಂತೆ ಇರಲ್ಲ, ಆದರೆ ರಜೆ ಮುಗಿದು ಕೆಲಸಕ್ಕೆ ಮರಳುವಾಗ ಆ ತಾಯಿ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತಾಳೆ, ಒಂದು ಕಡೆ ನನ್ನ ಮಗುವಿಗೆ ನನ್ನ ಅನುಪಸ್ಥಿತಿಯಲ್ಲಿ ಎದೆ ಹಾಲು ಸಿಗುವಂತಾಗಬೇಕು ಹೇಗೆ?
- ಆಪೀಸ್‌ಗೆ ಹೋದಾಗ ಎದೆ ಹಾಲು ತುಂಬಿದಾಗ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಇಂಥ ಸಂದರ್ಭ ನಿಭಾಯಿಸುವುದು ಹೇಗೆ? ಆಫೀಸ್‌ನಲ್ಲಿ ವ್ಯವಸ್ಥೆ ಇದ್ದರೆ ಹಾಲನ್ನು ಪಂಪ್ ಮಾಡಿ ಅದನ್ನು ತಂದು ಮಗುವಿಗೆ ನೀಡಬಹುದಾ?
- ಆಫೀಸ್‌ಗೆ ಹೋಗುವ ಮುನ್ನ ಈ ಪಂಪ್ ಮಾಡಿದ ಹಾಲನ್ನು ಯಾವ ರೀತಿಯಲ್ಲಿ ಸಂರಕ್ಷಣೆ ಮಾಡಬೇಕು, ಅಲ್ಲದೆ ಈ ಹಾಲನ್ನು ಮಗುವಿಗೆ ನೀಡುವಾಗ ಕಾಯಿಸಬೇಕೆ?
- ಪಂಪ್ ಮಾಡಿಟ್ಟ ಹಾಲನ್ನು ಎಷ್ಟು ಫ್ರಿಡ್ಜ್‌ನಲ್ಲಾದರೆ ಸಮಯದವರೆಗೆ ಇಡಬಹುದು?
- ರೂಂನ ಉಷ್ಣತೆಗೆ ಎಷ್ಟು ಸಮಯ ಇಡಬಹುದು?
- ಇನ್ನು ಇದೆ ಹಾಲು ಕಡಿಮೆ ಇದ್ದಾಗ ಆ ತಾಯಿ ತನ್ನ ಮಗುವಿನ ಬೆಳವಣಿಗೆಯ ಚಿಂತೆ ಕಾಡುವುದು ಇಂಥ ಸಂದರ್ಭದಲ್ಲಿ ಆಕೆ ಏನು ಮಾಡಬಹುದು
- ಎದೆಹಾಲು ಉತ್ಪತ್ತಿ ಹೆಚ್ಚಿಸಲು ಏನು ಮಾಡಬೇಕು?
- ಮಗುವಿಗೆ ಎದೆಹಾಲು ಸಾಕಾಗುತ್ತಿಲ್ಲ ಎಂದು ತಿಳಿಯುವುದು ಹೇಗೆ?
- ಮಗುವಿನ ಆರೋಗ್ಯಕರ ಬೆಳವಣಿಗೆಗೆ ಏನು ಮಾಡಬೇಕು?



Click it and Unblock the Notifications
