Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಗರ್ಭಾವಸ್ಥೆಯಲ್ಲಿ ವೇರಿಕೋಸ್ ನರದ ಸಮಸ್ಯೆ ತಡೆಗಟ್ಟುವುದು ಹೇಗೆ?
ಗರ್ಭಿಣಿಯಾದಾಗ ಬರೀ ಖುಷಿ ಮಾತ್ರವಲ್ಲ ಅದರ ಜೊತೆಗೆ ಹಲವಾರು ಸಮಸ್ಯೆಗಳೂ ಇರುತ್ತದೆ, ತಾಯಿಯಾದವಳು ಹೊಟ್ಟೆಯಲ್ಲಿರುವ ಮಗುವನ್ನು ನೆನೆಸಿಕೊಂಡು ಅವೆಲ್ಲವನ್ನೂ ಸಹಿಸುತ್ತಾಳೆ. ಕೆಲವರಿಗೆ ಒಂದು ತುತ್ತು ಆಹಾರ ತಿನ್ನಲು ಸಾಧ್ಯವಾಗಲ್ಲ, ಏನೂ ತಿಂದರೂ ವಾಂತಿ ಮಾಡಲು ಓಡಬೇಕು, ಇನ್ನು ಕೆಲವರಿಗೆ ಹಲ್ಲುನೋವು, ಮತ್ತೆ ಕೆಲವರಲ್ಲಿ ಸುಸ್ತು, ಮಸಲ್ ಕ್ಯಾಚ್ ಹೀಗೆ ಅನೇಕ ಸಮಸ್ಯೆಗಳ ನಡುವೆ ಪ್ರಗ್ನೆನ್ಸಿ ಜರ್ನಿ ಇರುತ್ತದೆ. ಅದರಲ್ಲೂ ವೇರಿಕೋಸ್ ನರವಿದ್ದರೆ 9 ತಿಂಗಳು ನೋವಿನಿಂದ ಒದ್ದಾಡಬೇಕಾಗುವುದು.

ವೇರಿಕೋಸ್ ಸಮಸ್ಯೆ ಗರ್ಭಿಣಿಯರಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. ಶೇ. 40ರಷ್ಟು ಗರ್ಭಿಣಿಯರಲ್ಲಿ ಈ ಸಮಸ್ಯೆ ಇದ್ದೇ ಇರುತ್ತದೆ.
ಯಾರಲ್ಲಿ ವೇರಿಕೋಸ್ ನರದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ?
* ವಂಶವಾಹಿಯಾಗಿ ಬರುವುದು: ಗರ್ಭಾವಸ್ಥೆಯಲ್ಲಿ ತಾಯಿಗೆ ಇದ್ದರೆ ಮಗಳಿಗೂ ಬರುವುದು.
* ಗರ್ಭಾವಸ್ಥೆಯಲ್ಲಿ ಬ್ಲಡ್ ವಾಲ್ಯೂಮ್ ಶೇ. 20ರಷ್ಟು ಹೆಚ್ಚುವುದು. ವಾಸ್ಕ್ಯೂಲರ್ ಸಿಸ್ಟಮ್‌ಗೆ ತುಂಬಾ ಒತ್ತಡ ಬೀರುವುದರಿಂದ ವೇರಿಕೋಸ್ ಸಮಸ್ಯೆ ಉಂಟಾಗುವುದು.
* ಹಾರ್ಮೋನ್‌ಗಳ ವ್ಯತ್ಯಾಸವಾದಾಗ: ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ಗಳ ವ್ಯತ್ಯಾಸ ಉಂಟಾಗುವುದು, ಈ ಸಮಯದಲ್ಲಿ ನರಗಳು ಸ್ವಲ್ಪ ದುರ್ಬಲವಾಗುವುದು, ಆಗ ರಕ್ತವು ನರಗಳಲ್ಲಿ ರಕ್ತ ಸಂಗ್ರಹವಾಗಿ ನರಗಳು ಉಬ್ಬುವುದು,
* ಗರ್ಭಕೋಶದ ಮೇಲೆ ಒತ್ತಡ ಬಿದ್ದಾಗ: ಗರ್ಭಾವಸ್ಥೆಯಲ್ಲಿ ಗರ್ಭಕೋಶದ ಮೇಲೆ ಒತ್ತಡ ಬೀಳುವುದು. ಆಗ ಕಾಲುಗಳಿಗೆ ಸರಿಯಾಗಿ ರಕ್ತ ಸಂಚಾರವಾಗದೆ ವೇರಿಕೋಸ್ ನರದ ಸಮಸ್ಯೆ ಉಂಟಾಗುವುದು.
ವೇರಿಕೋಸ್ ನರದ ಲಕ್ಷಣಗಳೇನು?
* ನರಗಳು ಉಬ್ಬುವುದು, ಆ ನರಗಳು ಕೆಂಪು ಅಥವಾ ನೀಲಿ ಬಣ್ಣದಲ್ಲಿರುತ್ತದೆ.
* ಕಾಲುಗಳಲ್ಲಿ ಊತ ಕಂಡು ಬರುವುದು
* ಕಾಲು ನೋವು
* ನರಗಳ ಸೆಲೆತ
* ಕಾಲುಗಳು ಭಾರವಾದಂತೆ ಅನಿಸುವುದು, ಕೂತರೆ ಎದ್ದು ನಿಲ್ಲಲು ಕಷ್ಟವಾಗುವುದು
* ತುರಿಕೆ
* ಸ್ನಾಯು ಸೆಳೆತ
* ಉರಿಯೂತ
ತಡೆಗಟ್ಟುವುದು ಹೇಗೆ?
* ತುಂಬಾ ಹೊತ್ತು ನಿಲ್ಲುವುದನ್ನು ತಡೆಗಟ್ಟಿ.
* ಸಡಿಲವಾದ ಬಟ್ಟೆಗಳನ್ನು ಧರಿಸಿ, ಬಿಗಿಯಾದ ಉಡುಪುಗಳು ರಕ್ತ ಸಂಚಾರಕ್ಕೆ ತೊಂದರೆ ಉಂಟು ಮಾಡಿ ನೋವು ಹೆಚ್ಚುವುದು.
* ತುಂಬಾ ಒಂದು ಒಂದೇ ಭಂಗಿಯಲ್ಲಿ ಕೂರುವುದು, ನಿಲ್ಲುವುದು ಮಾಡಬೇಡಿ
* ಕೂರುವಗ ಕಾಲು ಮೇಲೆ ಕಾಲು ಹಾಕಿ ಕೂರಬೇಡಿ
* ಮಲಗುವಾಗ ನಿಮ್ಮ ಎಡ ಭಾಗದಲ್ಲಿ ಮಲಗಿ.
ಪಿಸಿಯೋಥೆರ ವಿಧಾನ
* ಒಂದು ಕಡೆ ತುಂಬಾ ಹೊತ್ತು ನಿಲ್ಲಬೇಡಿ. ಮೆಲ್ಲನೆ ಅತ್ತಿತ್ತ ನಡೆಯಿರಿ.
*ಮೆಲ್ಲನೆ ಗುದ್ದಿ: ಮೆಲ್ಲನೆ ಕೈಗಳಿಂದ ಕಾಲಿಗೆ ಗುದ್ದಿ, ಈ ರೀತಿ ಎರಡೂ ಕಾಲಿಗೆ ಮಾಡಿ.
* ಹಿಂಭಾಗ ಮೇಲೆತ್ತಿ: ನಿಂತು ಹಿಂಬದಿ ಪಾದಗಳನ್ನು ಮೇಲಕ್ಕೆ ಎತ್ತಿ. ಈ ರೀತಿ ದಿನದಲ್ಲಿ 4-5 ಬಾರಿ ಮಾಡಿ.
* ತುಂಬಾ ದೂರ ನಡೆಯಬೇಡಿ: ಹೊಟ್ಟೆಯ ಭಾರ ಕಾಲಿನ ಮೇಲೆ ಬೀಳುವುದರಿಂದ ಮಸಲ್ ಕ್ಯಾಚ್ ಹೆಚ್ಚುವುದು.
ವೇರಿಕೋಸ್ ನರ ತಡೆಗಟ್ಟುವ ಯೋಗಾಸನಗಳು
* ತಾಡಾಸನ:
* ಉತ್ತಾನಾಸನ
* ನಾವಾಸನ
* ಮತ್ಸ್ಯಾಸನ
* ಬಾಲಾಸನ
* ಮಾಲಾಸನ



Click it and Unblock the Notifications

