Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಓವ್ಯೂಲೇಷನ್ ಸ್ಟ್ರಿಪ್ ಬಳಸಿ ಗರ್ಭಧಾರಣೆಗೆ ಸೂಕ್ತ ಸಮಯವೇ ಎಂದು ತಿಳಿಯುವುದು ಹೇಗೆ?
ಮಗುವನ್ನು ಹೊಂದಲು ಬಯಸುವವರು ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಗರ್ಭಧರಿಸಲು ಆಗುತ್ತಿಲ್ಲ ಎನ್ನುವ ಆತಂಕ ತೋಡಿಕೊಳ್ಳುತ್ತಾರೆ. ಕೆಲವೊಮ್ಮೆ ಲೈಂಗಿಕ ಸಂಪರ್ಕ ಹೊಂದುವ ದಿನಗಳು ಹಾಗೂ ಅಂಡಾಣು ಉತ್ಪತ್ತಿಯ ದಿನಗಳಲ್ಲಿ ವ್ಯತ್ಯಾಸವಾಗುವುದರಿಂದ ಗರ್ಭಧರಿಸದೇ ಇರಬಹುದು. ಅಂಡಾಣು ಉತ್ಪತ್ತಿಯಾಗುವಾಗ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭಧರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಹಾಗಾದರೆ ಅಂಡೋತ್ಪತ್ತಿಯ ದಿನವನ್ನು ಗಮನಿಸುವುದು ಹೇಗೆ, ಅದನ್ನು ಪರೀಕ್ಷೆ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ನಿಮ್ಮದಾದರೆ ಹೌದು, ಅಂಡಾಣು ಉತ್ಪತ್ತಿಯ ದಿನವನ್ನು ನಾವು ಲೆಕ್ಕ ಹಾಕಬಹುದು, ಇದರ ಜೊತೆಗೆ ಅಂಡೋತ್ಪತ್ತಿ ಪರೀಕ್ಷಾ ಕಿಟ್ ಮೂಲಕವೂ ಪರೀಕ್ಷೆ ಮಾಡಬಹುದು.
ಈ ಕಿಟ್ ಬಳಸುವುದು ಹೇಗೆ, ಇದರ ಅನಾನುಕೂಲತೆಗಳೇನು ಈ ಕುರಿತಾದ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ:

ಮುಟ್ಟಿನ ದಿನಗಳಿಂದ ಲೆಕ್ಕ ಹಾಕಿ
ಪ್ರತಿ ತಿಂಗಳ ಮುಟ್ಟಿನ ದಿನಗಳು ಹೆಚ್ಚಿನವರಿಗೆ ಬದಲಾಗುತ್ತಲೇ ಇರುತ್ತದೆ. ಅಂಡೋತ್ಪತ್ತಿಯಾಗುವುದು ಋತುಚಕ್ರದ ಮಧ್ಯದಲ್ಲಿ. ಆದರೆ ಪ್ರತಿಯೊಬ್ಬರ ಋತುಚಕ್ರವು ಭಿನ್ನವಾಗಿರುವುದರಿಂದ, ಮುಟ್ಟಿನ ದಿನಗಳು ಬದಲಾಗುವುದರಿಂದ, ನಿಮ್ಮ ಅಂಡೋತ್ಪತ್ತಿ ತಿಂಗಳಿಂದ ತಿಂಗಳವರೆಗೆ ಬದಲಾಗಬಹುದು. ನೀವು ಯಾವಾಗ ಅಂಡೋತ್ಪತ್ತಿ ಮಾಡುತ್ತಿದ್ದೀರಿ ಎಂಬುದನ್ನು ಕಂಡುಹಿಡಿಯಲು ಅಂಡೋತ್ಪತ್ತಿ ಪರೀಕ್ಷಾ ಪಟ್ಟಿಗಳು ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ.

ಅಂಡೋತ್ಪತ್ತಿ ಪರೀಕ್ಷಾ ಪಟ್ಟಿ
ಅಂಡೋತ್ಪತ್ತಿ ಸಮಯವನ್ನು ಪರೀಕ್ಷಿಸಲು ಅಂಡೋತ್ಪತ್ತಿ ಪರೀಕ್ಷಾ ಪಟ್ಟಿಗಳನ್ನು ನೀವು ಮನೆಯಲ್ಲೇ ಪರೀಕ್ಷೆ ಮಾಡಬಹುದು. ಅಂಡೋತ್ಪತ್ತಿಯ ಸಮಯದಲ್ಲಿ ನೀವು ಹೆಚ್ಚು , ಫಲವತ್ತಾಗಿರುವ ಕಾರಣ, ಈ ಸಮಯದಲ್ಲಿ ಲೈಂಗಿಕ ಸಂಪರ್ಕವನ್ನು ಹೊಂದಿದರೆ ಗರ್ಭ ಧರಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ. ಮೂತ್ರದಲ್ಲಿರುವ ಲ್ಯುಟೆನೈಜಿಂಗ್ ಹಾರ್ಮೋನ್ ಮಟ್ಟವನ್ನು ಅಳೆಯುವ ಮೂಲಕ ಅಂಡೋತ್ಪತ್ತಿ ಪರೀಕ್ಷಾ ಪಟ್ಟಿಯ ಮೂಲಕ ಪರೀಕ್ಷೆ ಮಾಡಬಹುದು. ಈ ಹಾರ್ಮೋನ್‌ನಲ್ಲಿನ ಹೆಚ್ಚಳವು ಅಂಡಾಶಯವು ಮೊಟ್ಟೆಯನ್ನು ಬಿಡುಗಡೆ ಮಾಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಅಂಡೋತ್ಪತ್ತಿಯ ಕಿಟ್‌ನಲ್ಲಿ ಸೂಚಕವು ಒಂದು ನಿರ್ದಿಷ್ಟ ಮಿತಿಯನ್ನು ತಲುಪಿದಾಗ ಮುಂದಿನ 12ರಿಂದ 36 ಗಂಟೆಗಳ ಒಳಗೆ ಅಂಡೋತ್ಪತ್ತಿ ಸಂಭವಿಸುತ್ತದೆ ಎನ್ನುವುದನ್ನು ಈ ಮೂಲಕ ತಿಳಿದುಕೊಳ್ಳಬಹುದು.

ಅಂಡೋತ್ಪತ್ತಿ ಪಟ್ಟಿಯನ್ನು ಬಳಸುವ ವಿಧಾನ
ಅಂಡೋತ್ಪತ್ತಿ ಪರೀಕ್ಷಾ ವಿಧಾನವು ಅತ್ಯಂತ ಸರಳ ಪರೀಕ್ಷಾ ವಿಧಾನ. ಸ್ಟಿಕ್ ಅಥವಾ ಸ್ಟ್ರಿಪ್‌ನಲ್ಲಿ ಮೂತ್ರ ವಿಸರ್ಜಿಸುವುದು. ಅಥವಾ ಒಂದು ಕಪ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿ ಆ ಕಪ್‌ನಲ್ಲಿ ಪರೀಕ್ಷಾ ಸ್ಟಿಕ್ ಅದ್ದಿ. ಅದರಲ್ಲಿ ಸೂಚನೆಯು ಕಾಣಿಸಿಕೊಳ್ಳಲು ಸ್ವಲ್ಪ ಸಮಯ ಕಾಯಿರಿ. ಪರೀಕ್ಷಾ ರೇಖೆಯು ನಿಯಂತ್ರಣ ರೇಖೆಗಿಂತ ಗಾಢವಾಗಿದ್ದರೆ, ನೀವು ಅಂಡೋತ್ಪತ್ತಿ ಮಾಡಲಿರುವಿರಿ ಎಂದರ್ಥ. ನಮ್ಮ ದೇಹದಲ್ಲಿ ಯಾವಾಗಲೂ ಎಲ್ ಹೆಚ್ ಹಾರ್ಮೋನ್ ಮಟ್ಟ ಕಡಿಮೆ ಇರುತ್ತದೆ. ಪರೀಕ್ಷಾ ಸ್ಟ್ರಿಪ್‌ನಲ್ಲಿ ರೇಖೆಯು ಗೋಚರಿಸಿದರೂ, ಅದು ತೆಳುವಾಗಿ ಅಥವಾ ಮಸುಕಾಗಿದ್ದರೆ ಅಂಡೋತ್ಪತ್ತಿಯು ಆರಂಭವಾಗಿಲ್ಲ ಎನ್ನುವುದನ್ನು ತಿಳಿದುಕೊಳ್ಳಿ. ಡಿಜಿಟಲ್ ಮಾಪನವಿದ್ದಲ್ಲಿ ಈ ರೀತಿಯ ಸಮಸ್ಯೆ ಇರದು.

ಯಾವಾಗ ಅಂಡೋತ್ಪತ್ತಿ ಪರೀಕ್ಷೆ ಮಾಡಬೇಕು..?
ಮೊದಲೇ ಹೇಳಿದಂತೆ ಕೆಲವೊಮ್ಮೆ ಮುಟ್ಟಿನ ಚಕ್ರದಲ್ಲಿ ಬದಲಾವಣೆಗಳಾಗಬಹುದು, ಕೆಲವೊಮ್ಮೆ ಬೇಗ ಮುಟ್ಟಾದರೆ, ಕೆಲವೊಮ್ಮೆ ತಡವಾಗಿ ಮುಟ್ಟಾಗಬಹುದು. ಇದರಂತೆಯೇ ಅಂಡಾಣು ಉತ್ಪತ್ತಿಯೂ ಬದಲಾಗುತ್ತದೆ.
ಅಂದರೆ ನಿಮ್ಮ ಮುಟ್ಟಾದ ದಿನಗಳಲ್ಲಿ ಅರ್ಧಅವಧಿ ಕಳೆದ ನಂತರ ಅಂಡೋತ್ಪತ್ತಿಯಾಗುತ್ತದೆ. ಹೀಗಾಗಿ ನಿಮ್ಮ ಋತುಚಕ್ರ ಅರ್ಧ ಅವಧಿಗಿಂತ ಮುಂಚೆ ಅಂಡೋತ್ಪತ್ತಿ ಮುನ್ಸೂಚಕ ಪರೀಕ್ಷೆ ಮಾಡುವುದು ಉತ್ತಮ.
ಉದಾಹರಣೆಗೆ ನಿಮ್ಮ ಮುಟ್ಟಿನ ಚಕ್ರವು 28ದಿನಗಳದ್ದಾಗಿದ್ದರೆ ಮುಟ್ಟಾದ ಹತ್ತನೇ ದಿನ ಅಥವಾ ಹನ್ನೊಂದನೇ ದಿನ ನಿಮ್ಮ ಮೊದಲ ಪರೀಕ್ಷೆಯನ್ನು ಮಾಡಿ. ನಿಮ್ಮ ಮುಟ್ಟಿನ ದಿನಗಳು ಅನಿಯಮಿತವಾಗಿದ್ದರೆ, ಕಳೆದ ಆರು ತಿಂಗಳಿಂದ ಮುಟ್ಟಾದ ದಿನವನ್ನು ನೋಡಿ, ನಿಮ್ಮ ಸಣ್ಣ ಮುಟ್ಟಿನ ಚಕ್ರದ ಅವಧಿಯನ್ನು ನೋಡಿ ಮುಟ್ಟಾದ ಮೂರು ಅಥವಾ ನಾಲ್ಕನೇ ದಿನ ಈ ಪರೀಕ್ಷೆ ಮಾಡಿ.
ಎಲ್‌ಹೆಚ್‌ನಲ್ಲಿನ ಏರಿಕೆಯನ್ನು ಗಮನಿಸಲು ನೀವು ಕೆಲವು ದಿನಗಳವರೆಗೆ ಪರೀಕ್ಷೆ ಮಾಡಬೇಕಾಗುತ್ತದೆ. ಹೆಚ್ಚಿನ ಪರೀಕ್ಷಾ ಕಿಟ್‌ಗಳಲ್ಲಿ ಐದರಿಂದ ಹತ್ತು ಸ್ಟ್ರಿಪ್‌ಗಳಿರುತ್ತವೆ. ಟಿಜಿಟಲ್ ಪರೀಕ್ಷಾ ಕಿಟ್ ಬಳಸಿದರೆ ಅದು ನಿಮ್ಮ ಪ್ರಸ್ತುತ ಹಾರ್ಮೊನ್ ಮಟ್ಟವನ್ನು ಹಿಂದಿನ ದಿನಗಳಲ್ಲಿ ಹೊಂದಿದ್ದ ಹಾರ್ಮೋನ್ ಮಟ್ಟಗಳೊಂದಿಗೆ ಹೋಲಿಕೆ ಮಾಡಬಹುದು. ನಿಮ್ಮ ಲ್ಯುಟನೈಜಿಂಗ್ ಹಾರ್ಮೋನ್ ಮಟ್ಟ ಹೆಚ್ಚಾಗಿದ್ದಲ್ಲಿ ಇದನ್ನು ನಿರ್ಧರಿಸುವುದು ಸುಲಭ.

ನಿಖರವಾಗಿ ಪರೀಕ್ಷಿಸಲು ಹೀಗೆ ಮಾಡಿ
ಅಂಡೋತ್ಪತ್ತಿ ಪರೀಕ್ಷೆಯನ್ನು ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆಯ ಒಳಗೆ ಮಾಡಿ
ಹೆಚ್ಚಿನ ಮಹಿಳೆಯರು ಸಾಮಾನ್ಯವಾಗಿ ಬೆಳಗ್ಗೆ ಎಲ್‌ಹೆಚ್ ಮಟ್ಟದಲ್ಲಿ ಏರಿಕೆಯನ್ನು ಹೊಂದಿರುತ್ತಾರೆ ಹಾಗಾಗಿ ನಾಲ್ಕು ಗಂಟೆಗಳ ಅವಧಿಯವರೆಗೂ ನಿಮ್ಮ ಮೂತ್ರದಲ್ಲಿ ಆ ಮಟ್ಟಗಳು ಉಂಟಾಗಬಹುದು. ನೀವು ದಿನಕ್ಕೆ ಎರಡು ಬಾರಿ ಕೂಡಾ ಪರೀಕ್ಷಿಸಬಹುದು.ಒಮ್ಮೆ 11 ರಿಂದ ಮಧ್ಯಾಹ್ನ 3 ರವರ ಒಳಗೆ ಮತ್ತು ಮತ್ತೆ ಸಂಜೆ 5 ಗಂಟೆ ಮತ್ತು 10ರ ಒಳಗೆ ಪರೀಕ್ಷೆ ಮಾಡಿ. ಆದರೆ ನೀವು ಒಮ್ಮೆ ಅಥವಾ ಎರಡು ಬಾರಿ ಪರೀಕ್ಷಿಸಿದರೂ, ಪ್ರತಿ ದಿನವೂ ಅದೇ ಸಮಯವನ್ನು ಅನುಸರಿಸಬೇಕು.

ನಿಮ್ಮ ಮೂತ್ರವು ಸಾಕಷ್ಟು ಕೇಂದ್ರೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಿ:
ಪರೀಕ್ಷೆಯ ಮೊದಲು ಒಂದು ಗಂಟೆ ಅಥವಾ ಎರಡು ಗಂಟೆಗಳ ಕಾಲ ಮೂತ್ರ ವಿಸರ್ಜಿಸುವುದನ್ನು ತಪ್ಪಿಸಿ ಮತ್ತು ದೊಡ್ಡ ಪ್ರಮಾಣದ ದ್ರವಾಹಾರವನ್ನು ಕುಡಿಯದಿರಲು ಪ್ರಯತ್ನಿಸಿ.
ಪ್ಯಾಕೇಜ್‌ನಲ್ಲಿರುವ ಸೂಚನೆಯನ್ನು ತಪ್ಪದೇ ಓದಿ
ಅಂಡಾಣು ಉತ್ಪತ್ತಿ ಮುನ್ಸೂಚಕ ಕಿಟ್ ಖರೀದಿಸಿದ ನಂತರ ಅದರಲ್ಲಿ ತಯಾರಕರ ಸೂಚನೆಗಳನ್ನು ತಪ್ಪದೇ ಓದಿ. ಇದನ್ನು ಪಾಲಿಸುವುದರಿಂದಲೂ ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಹೆಚ್ಚು.
ಒಮ್ಮೆ ಅಂಡೋತ್ಪತ್ತಿ ಪರೀಕ್ಷೆಯಲ್ಲಿ ನಿಮ್ಮ ಎಲ್‌ಹೆಚ್ ಮಟ್ಟಗಳು ಏರಿಕೆಯಾಗಿದೆ ಎಂದು ಸೂಚಿಸಿದರೆ, ಆ ದಿನ ಲೈಂಗಿಕ ಕ್ರಿಯೆಯನ್ನುಪ್ರಾರಂಭಿಸಿ. LH ಮಟ್ಟಗಳು ಏರಿದ 36 ಗಂಟೆಗಳ ಒಳಗೆ ಅಂಡೋತ್ಪತ್ತಿ ಸಂಭವಿಸುವುದರಿಂದ, ನಂತರ ಎರಡು ಮೂರು ದಿನಗಳ ಕಾಲ ಲೈಂಗಿಕ ಸಂಪರ್ಕವನ್ನು ಹೊಂದಬಹುದು.

ಅಂಡೋತ್ಪತ್ತಿ ಪರೀಕ್ಷಾ ಪಟ್ಟಿಗಳು ನಿಖರವಾಗಿರುತ್ತವೆಯೇ..?
ಅಂಡೋತ್ಪತ್ತಿ ಪರೀಕ್ಷಾ ಪಟ್ಟಿಗಳು ನಿಖರವೇ..? ಎಷ್ಟರಮಟ್ಟಿಗೆ ಇದನ್ನು ನಂಬಬಹುದು ಎನ್ನುವ ಪ್ರಶ್ನೆಗಳಿರಬಹುದು. ಅಂಡೋತ್ಪತ್ತಿ ಪರೀಕ್ಷಾ ಪಟ್ಟಿಗಳು ನೀವು ಹೆಚ್ಚು ಫಲವತ್ತಾದಾಗ ನಿಮಗೆ ತಿಳಿಸುವ ಅತ್ಯುತ್ತಮ ಕೆಲಸವನ್ನು ಮಾಡಬಹುದು.
ಅಧ್ಯಯನದ ಪ್ರಕಾರ ಈ ಪರೀಕ್ಷಾ ಸ್ಟ್ರಿಪ್‌ಗಳು 97 ಪ್ರತಿಶತದಷ್ಟು ಅಂಡೋತ್ಪತ್ತಿಯನ್ನು ಪತ್ತೆಹಚ್ಚುತ್ತವೆ ಎನ್ನುವುದು ತಿಳಿದುಬಂದಿದೆ. ಹಾಗಾಗಿ ಅಂಡೋತ್ಪತ್ತಿ ಪರೀಕ್ಷೆಯು ನಿಖರವಾಗಿರುತ್ತದೆ.
ನಿಮ್ಮ ಹಾರ್ಮೋನುಗಳು ಅಂಡೋತ್ಪತ್ತಿಗೆ ಸರಿಯಾದ ಮಟ್ಟದಲ್ಲಿವೆಯೇ ಎಂಬುದನ್ನು ಅಂಡೋತ್ಪತ್ತಿ ಪಟ್ಟಿಗಳು ತೋರಿಸುತ್ತವೆ. ಜೊತೆಗೆ ಗರ್ಭಧರಿಸುವ ಪ್ರಯತ್ನಕ್ಕೆ ಸೂಕ್ತ ಸಮಯವನ್ನು ನೀಡಬಹುದು.
ಆದರೆ ನೂರಕ್ಕೆ ನೂರು ಪ್ರತಶತ ಗರ್ಭಧರಿಸಬಹುದು ಎಂದು ಹೇಳಲಾಗದು. ಈ ಕಿಟ್‌ಗಳು ನಿಯಮಿತವಾಗಿ ಮುಟ್ಟಾಗುವ ಮಹಿಳೆಯರಿಗೆ ಅಂಡಾಣು ಉತ್ಪತ್ತಿ ಪರೀಕ್ಷೆ ಮಾಡಲು ಉತ್ತಮ. ಆದರೆ ಅನಿಯಮಿತ ಮುಟ್ಟಿನ ಸಮಸ್ಯೆ ಹೊಂದಿರುವ ಮಹಿಳೆಯರಲ್ಲಿ ಅಂಡೋತ್ಪತ್ತಿ ಯಾವಾಗ ಪ್ರಾರಂಭವಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಕಷ್ಟ.
ಅಲ್ಲದೇ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಹೊಂದಿರುವ ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿ ಪರೀಕ್ಷೆ ಮಾಡಿದರೂ ನಿಖರವಾಗಿರದು. ಯಾಕೆಂದರೆ ಪಿಸಿಒಎಸ್ ಸಮಸ್ಯೆ ಹೊಂದಿರುವ ಮಹಿಳೆಯರಲ್ಲಿ ಪ್ರತಿ ತಿಂಗಳು ಎಲ್‌ಹೆಚ್ ಹಾರ್ಮೋನ್‌ನ ಹೆಚ್ಚಳವನ್ನು ಕಾಣಬಹುದು.
ಎಲ್ ಹೆಚ್ ಪ್ರಮಾಣ ಹೆಚ್ಚಾದರೂ ಅಂಡಾಣು ಉತ್ಪತ್ತಿ ಆಗದೇ ಇರಬಹುದು. ಅದು ಪರೀಕ್ಷಾ ಫಲಿತಾಂಶಗಳನ್ನು ವಿಶ್ವಾಸಾರ್ಹವಲ್ಲದಂತೆ ಮಾಡಬಹುದು.ಫಲವತ್ತತೆ ಔಷಧಗಳು, ಹಾರ್ಮೋನುಗಳು ಔಷಧಿಗಳು ಮತ್ತು ಆಂಟಿಬಯೋಟಿಕ್ ಔಷಧಿ ತೆಗೆದುಕೊಳ್ಳುವವರಲ್ಲಿಯೂ ಅಂಡೋತ್ಪತ್ತಿ ಪರೀಕ್ಷಾ ಪಟ್ಟಿಯಲ್ಲಿ ಪರೀಕ್ಷೆಯು ತಪ್ಪಾಗಬಹುದು.
ಅಂಡೋತ್ಪತ್ತಿ ಪರೀಕ್ಷಾ ಸ್ಟ್ರಿಪ್‌ಗಳು ನೀವು ಯಾವಾಗ ಅಂಡೋತ್ಪತ್ತಿ ಮಾಡುತ್ತೀರಿ ಎನ್ನುವುದನ್ನು ಕಂಡುಹಿಡಿಯುವ ಸುರಕ್ಷಿತ ಮಾರ್ಗವಾಗಿದೆ. ಇದು ಪರಿಣಾಮಕಾರಿ ಹಾಗೂ ಬೆಲೆಯಲ್ಲಿ ಅಗ್ಗವೂ ಹೌದು. ಇದು ನಿಮ್ಮ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ, ಆದರೆ ಅದನ್ನು ಸರಿಯಾದ ವಿಧಾನದಲ್ಲಿ ಬಳಸಿದರೆ ನಿಮ್ಮ ಅಂಡೋತ್ಪತ್ತಿಯ ದಿನಗಳನ್ನು ನಿಖರವಾಗಿ ಕಂಡುಹಿಡಿಯಬಹುದು.



Click it and Unblock the Notifications











