Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಗರ್ಭಿಣಿ ಹೊಟ್ಟೆ ಮೇಲೆ ಕೈಯಾಡಿಸಿದರೆ ಆ ಸ್ಪರ್ಶದ ಅನುಭವ ಮಗುವಿಗೆ ಗೊತ್ತಾಗುವುದೇ?
ಅಭಿಮಮನ್ಯ ಚಕ್ರವ್ಯೂಹ ಬೇಧಿಸುವ ವಿದ್ಯೆಯನ್ನು ತಾಯಿ ಸುಭದ್ರೆಯ ಹೊಟ್ಟೆಯಲ್ಲಿರುವಾಗಲೇ ಕಲಿತನು ಎಂದು ಮಹಾಭಾರತದಲ್ಲಿ ಹೇಳಲಾಗಿದೆ. ಗರ್ಭಾವಸ್ಥೆಯಲ್ಲಿ ತಾಯಿಯ ಆಲೋಚನೆ, ಮಾನಸಿಕ ಸ್ಥಿತಿ ಎಲ್ಲವೂ ಮಗುವಿನ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುವುದು.

ಆದ್ದರಿಂದ ಗರ್ಭದಲ್ಲಿರುವ ಮಗುವಿನ ಜೊತೆ ತಾಯಿ ಮಾತನಾಡಬೇಕು ಎಂಬುವುದನ್ನು ವಿಜ್ಞಾನ ಕೂಡ ಒಪ್ಪುತ್ತದೆ. ಉಬ್ಬಿದ ಹೊಟ್ಟೆ ಮೇಲೆ ಕೈಯಾಡಿಸಿದಾಗ ಆ ಫೀಲ್ ಮಗುವಿಗೂ ತಟ್ಟುವುದೇ ಎಂದು ನೀವು ಕೇಳುವುದಾದರೆ, ಹೌದು ನಿಮ್ಮ ಸ್ಪರ್ಶದ ಹಿತ ಅನುಭವ ಮಗುವಿಗೆ ತಟ್ಟುತ್ತದೆ, ಈ ಬಗ್ಗೆ ಮತ್ತಷ್ಟು ಆಸಕ್ತಿಕರ ಸಂಗತಿಗಳನ್ನು ಈ ಲೇಖನದ ಮೂಲಕ ತಿಳಿಯೋಣ...
ನಮ್ಮ ಸ್ಪರ್ಶಕ್ಕೆ ಮಗು ಹೊಟ್ಟೆಯಲ್ಲಿರುವ ಮಗು ಯಾವಾಗ ಪ್ರತಿಕ್ರಿಯಿಸಲಾರಂಭಿಸುವುದು?
ಸಾಮಾನ್ಯವಾಗಿ ನೀವು ಗರ್ಭ ಧರಿಸಿ 18ರಿಂದ 22 ವಾರಗಳಾಗುವಾಗ ಬೇಬಿ ಕಿಕ್ ಅಂದ್ರೆ ಮಗು ಒದೆಯುವ ಅನುಭವ ಉಂಟಾಗುವುದು, ನೀವು ತುಂಬಾ ಖುಷಿಯಲ್ಲಿದ್ದಾಗ ಹೊಟ್ಟೆಯಲ್ಲಿ ಏನೋ ಕಚಗುಳಿಯಿಟ್ಟಂತೆ ಅನಿಸುವುದು, ಅದೇ ಗಾಬರಿಯಾದಾಗ ಹೊಟ್ಟೆಯಲ್ಲಿಯೋ ಏನೋ ಅನುಭವವಾಗುವುದು. ಆದ್ದರಿಂದ ತಾಯಿ ಭಾವನೆ ಹಾಗೂ ಮನಸ್ಥಿತಿ ಹೊಟ್ಟೆಯೊಳಗಿನ ಮಗುವಿನ ಮೇಲೆ ಪ್ರಭಾವ ಬೀರುವುದು.
ಹೊಟ್ಟೆಯ ಮೇಲೆ ಕೈಯಾಡಿಸಿದಾಗ ಮಗು ಹೇಗೆ ಪ್ರತಿಕ್ರಿಯಿಸುತ್ತದೆ?
ನೀವು ಒಂದು ಕಡೆ ರಿಲ್ಯಾಕ್ಸ್ ಆಗಿ ಕೂತು ಹೊಟ್ಟೆ ಮೇಲೆ ಕೈಯಿಟ್ಟು ಅದರ ಜೊತೆ ಮಾತನಾಡಿ, ಆಗ ಹೊಟ್ಟೆಯೊಳಗಿನ ಮಗುವಿನಲ್ಲಿ ಚಲನೆ ಕಂಡು ಬರುವುದು. ಇದೊಂದು ಸುಂದರವಾದ ಅನುಭವವಾಗಿದೆ. ನೀವು ಗರ್ಭಿಣಿಯಾಗಿರುವಾಗ ನಿಮ್ಮದು ಏನೇ ಚಿಂತೆಗಳಿರಲಿ, ಕೆಲಸಗಳಿರಲಿ ದಿನದಲ್ಲಿ ಸ್ವಲ್ಪ ಹೊತ್ತು ನೀವು ಹಾಗೂ ನಿಮ್ಮ ಮಗು ಇಬ್ಬರೇ ಸ್ವಲ್ಪ ಹೊತ್ತು ಮಾತನಾಡಿ, ನಿಮ್ಮ ಹಾಗೂ ಮಗುವಿನ ಬಂಧ ಮತ್ತಷ್ಟು ಸ್ಟ್ರಾಂಗ್ ಆಗುವುದು.
ನಿಮ್ಮ ಮಗುವಿನ ಜೊತೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸಲು ಏನು ಮಾಡಬೇಕು?
ಅಮ್ಮ-ಮಗುವಿನ ಬಾಂಧವ್ಯ ತುಂಬಾನೇ ಗಟ್ಟಿ, ಆದರೆ ನಿಮ್ಮ ಆಲೋಚನೆ, ನಿಮ್ಮ ಭಾವನೆಗಳು, ಒಳ್ಳೆಯ ಗುಣಗಳು ಇದನ್ನು ನೀವು ನಿಮ್ಮ ಮಗುವಿನಲ್ಲಿ ಬಯಸುವುದಾದರೆ ಗರ್ಭಿಣಿಯಾಗಿದ್ದಾಗ ಹೀಗೆ ಮಾಡಿ:
ಮಗುವಿನ ಜೊತೆ ಸಂಗೀತ ಆಲಿಸಿ:ನೀವು ಒಂದೊಳ್ಳೆಯ ಮ್ಯೂಸಿಕ್ ಕೇಳಿ, ಇನ್ಸ್ಟ್ರೂಮೆಂಟ್ ಸೌಂಡ್‌ಗಳನ್ನು ಕೇಳಿ, ಇದರಿಂದ ನಿಮ್ಮ ಮೂಡ್ ಚೆನ್ನಾಗಿರುತ್ತದೆ, ಹೊಟ್ಟೆಯೊಳಗಿನ ಮಗು ಕೂಡ ಖುಷಿಯಾಗುವುದು. ನೀವು ಒಳ್ಳೆಯ ಸಂಗೀತ ಕೇಳುವಾಗ ನಿಮ್ಮ ಹೊಟ್ಟೆಯನ್ನೇ ಗಮನಿಸಿ ತುಂಬಾನೇ ಮೂವ್‌ಮೆಂಟ್ ಕಾಣುವುದು.
ಮಗುವಿನ ಜೊತೆ ಮಾತನಾಡಿ: ಹೊಟ್ಟೆಯೊಳಗಿನ ಮಗುವಿಗೆ ಏನು ಅರ್ಥವಾಗುತ್ತೆ ಎಂದು ಭಾವಿಸಬೇಡಿ, ಅದಕ್ಕೆ ಎಲ್ಲವೂ ಅರ್ಥವಾಗುತ್ತೆ, ಅದರ ಜೊತೆ ಮಾತನಾಡಿ. ಕಿಕ್ ಅಥವಾ ಮೂವ್‌ಮೆಂಟ್ ಮೂಲಕ ಅದು ಪ್ರತಿಕ್ರಿಯಿಸುತ್ತೆ, ಇನ್ನೂ ನೀವು ಟ್ರೈ ಮಾಡಿಲ್ಲ ಅಂದರೆ ಇಂದೇ ಮಾಡಿ, ಆ ಫೀಲ್ ತುಂಬಾ ಹಿತ ಅನಿಸುವುದು.
ಕತೆಗಳನ್ನು ಓದಿ: ಮಗುವಿಗೆ ಕೆಲವೊಂದು ಕತೆಗಳನ್ನು ಓದಿ ಕೇಳಿಸಿ, ಪೌರಾಣಿಕ ಕತೆಗಳಾದರೆ ಇನ್ನೂ ಒಳ್ಳೆಯದು.
ಓದುವುದು, ಬರೆಯುವುದು ಮಾಡಿ
ಗರ್ಭಿಣಿಯರು ಒಳ್ಳೆಯ ಪುಸ್ತಕಗಳನ್ನು ಓದುವುದು, ಒಳ್ಳೆಯ ಚಿಂತನೆಗಳನ್ನು ಮಾಡುವುದು, ಕ್ರಿಯೇಟಿವ್ ಆಗಿರುವುದು, ಬರೆಯುವುದು ಮಾಡಿದರೆ ನಿಮ್ಮ ಮಗು ಕೂಡ ತುಂಬಾ ಚಟುವಟಿಕೆಯಿಂದ ಇರುತ್ತದೆ.
ನಿಮ್ಮ ಮಗುವಿನಲ್ಲಿ ಸಂಸ್ಕಾರ ಇರಬೇಕೆಂದು ನೀವು ಬಯಸುವುದಾದರೆ ನಿಮ್ಮ ಬೋಧನೆ ಮಗು ಹೊಟ್ಟೆಯಲ್ಲಿರುವಾಗಲೇ ಶುರುವಾಗಲಿ....



Click it and Unblock the Notifications


