Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಗರ್ಭಧರಿಸಿದ ಮೇಲೆ ಆತ್ಮವಿಶ್ವಾಸದಿಂದ ಇರುವುದು ಹೇಗೆ?

ಹಂತಗಳು:
1. ಮನೆಯಿಂದ ಹೊರ ಹೋಗುವುದು ಬಹುಮುಖ್ಯ. ನಿವೆಷ್ಟು ತೂಕ ಹೆಚ್ಚಿದ್ದೀರಿ, ಎಷ್ಟು ತೂಕ ಹೊತ್ತಿದ್ದೀರಿ ಮುಖ್ಯವಲ್ಲ. ಮನೆಯಿಂದ ಹೊರಹೋಗಲೇಬೇಕು. ಹೊರಹೂಗಬೇಕೆಂಬುದರ ಅರ್ಥ ಜನರನ್ನು ಭೇಟಿಯಾಗಲೇಬೇಕೆಂದಲ್ಲ. ಬದಲಿಗೆ ಶಾಪಿಂಗ್ ಮಾಲ್ ಗಳಿಗೆ ಬೇಟಿ ನೀಡುವುದು ಅಥವಾ ಉದ್ಯಾನವನಗಳಿಗೆ ಹೋಗುವುದು ಬಹಳಷ್ಟು ಬದಲಾವಣೆಗಳನ್ನು ತರುತ್ತದೆ. ಮಾಲ್ ಗಳಿಗೆ ಹೋದಾಗ ಬೇರೆ ತಾಯಂದಿರ ಜೊತೆ ನಿಮಗೆ ಮಾತನಾಡುವ ಅವಕಾಶ ದೊರೆಯತ್ತದೆ. ಮಗುವಿನ ಶುಶ್ರೂಷೆ ಮತ್ತು ಇತರ ಕಾಳಜಿಗಳ ಬಗ್ಗೆ ಇದೇ ವಿಷಯಗಳನ್ನು ನೀವು ಮಾತನಾಡಬಹುದು. ಮನೆಯಲ್ಲಿಯೇ ಕೂತಿದ್ದರೆ ಮಗುವಿನ ಭಾರದ ಬಗ್ಗೆಯೇ ಚಿಂತೆ ಹೆಚ್ಚಾಗಿ ಖಿನ್ನತೆಗೊಳಗಾಗಬಹುದು. ಇದರ ಜೊತೆಗೆ ಕ್ರಿಯಾಶೀಲವಾದ ತಾಯಿಗೆ ಎಲ್ಲರಿಂದಲೂ ಶಹಬ್ಬಾಸ್ ಗಿರಿ ದೊರೆಯುತ್ತದೆ.
2. ಹಳೆಯ ಒತ್ತೊತ್ತಾದ ಮೈಗಂಟುವ ಬಟ್ಟೆಗಳನ್ನು ಧರಿಸಬೇಡಿ. ನೀವು ಗರ್ಭಿಣಿಯಾದ ಮೇಲೆ ನಿಮ್ಮ ದೇಹದಲ್ಲಿ ಕೆಲವು ಬದಲಾವಣೆಗಳಾಗಿವೆ ಎಂಬುದನ್ನು ಒಪ್ಪಿಕೊಳ್ಳಿ ಮತ್ತು ಇದು ಕೇವಲ ತಾತ್ಕಾಲಿಕ ಎಂಬುದು ಗೊತ್ತಿರಲಿ. ಆದರೆ ಯಾವತ್ತೂ ಬಸುರಿಯಾದ ಮೇಲೆ ಹಳೆಯ ಬಟ್ಟೆಗಳನ್ನೆ ಮೈಗಂಟಿಸಿಕೊಳ್ಳಬೇಡಿ. ಇದರಿಂದ ಮತ್ತಷ್ಟು ದುಃಖ ಹೆಚ್ಚಬಹುದು.ನಿಮ್ಮ ಬದಲಾದ ಮೈಯಿಗೆ ಸರಿಹೊಂದುವ ಕೆಲವು ಹೊಸ ಬಟ್ಟೆಗಳನ್ನು ಕೊಂಡುಕೊಂಡು ನಿಮ್ಮನ್ನೇ ನೀವು ಅಪ್ಪಿಕೊಳ್ಳಿ.
3. ದಟ್ಟವಾದ ಬಣ್ಣವುಳ್ಳ ಬಟ್ಟೆಗಳನ್ನು ಧರಿಸಿ. ದಟ್ಟವಾದ ಬಣ್ಣಗಳು ನಿಮ್ಮ ಗೆಳೆಯರಾಗಲಿ. ದಟ್ಟಟ ಬಣ್ಣದ ಬಟ್ಟೆಗಳು ಮತ್ತು ವಿ-ನೆಕ್ ದಿರಿಸುಗಳು ಕೆಲವು ತೂಕ ಕಡಿಮೆ ಇರುವಂತೆ ತೋರಿಸುತ್ತವೆ. ದಟ್ಟವಾದ ಬಣ್ಣವೆಂರದ ಕೇವಲ ಕಪ್ಪು ಮಾತ್ರ ಎಂದರ್ಥವಲ್ಲ. ಕಪ್ಪು ಬಟ್ಟೆ ಉತ್ತಮವಾದ್ದೇ ಹೌದಾದರೂ ನೀಲಿ, ನೇರಳೆ, ಕಡು ಕಂದು ಬಣ್ಣದ ಬಟ್ಟೆಗಳೂ ಸೂಕ್ತ. ದೊಡ್ಡ ಗಾತ್ರದ ಮತ್ತು ಮೆದು ಬಣ್ಣದ ಬಟ್ಟೆಗಳನ್ನು ದೂರವಿಡಿ.
4. ನಿಮ್ಮ ಪ್ರೀತಿ ಪಾತ್ರರೊಂದಿಗೆ ನಿರಂತರ ಸಂಪರ್ಕದಲ್ಲಿರಿ. ನಿಮ್ಮ ಆತ್ಮೀಯ ಸ್ನೇಹಿತೆ ಅಥವಾ ಸಹೋದರಿ ಅಥವಾ ನೀವು ವಿಷಯ ಹಂಚಿಕೊಳ್ಳುವ ನಿಮ್ಮವರು ಸಹಾಯ ಮಾಡಿದಷ್ಟು ಬೇರೆ ಯಾರೂ ಸಹಾಯ ಮಾಡುವುದು ಸಾಧ್ಯವಿಲ್ಲ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡುವುದು ಮತ್ತು ಭಾವನೆಗಳನ್ನು ಹಂಚಿಕೊಳ್ಳುವುದು ಅಧ್ಬುತವೆನಿಸುತ್ತದೆ. ಇದು ನಿಮ್ಮ ಆತ್ಮವಿಶ್ವಾಸ ಹೆಚ್ಚಲು ಬಹಳವೇ ಸಹಾಯ ಮಾಡುತ್ತದೆ.
5. ನಿಮಗೆ ಸಂತೋಷವೆನಿಸುವ ಕೆಲಸ ಮಾಡಿ. ತೂಕ ಹೆಚ್ಚಾದ ಕಾರಣಕ್ಕೆ, ನೀವು ಸಂತೋಷದಿಂದ ಆಸ್ವಾದಿಸುವ ವಿಷಯಗಳನ್ನು ನಿಲ್ಲಿಸಬೇಕಿಲ್ಲ. ಕೆಲವು ಜವಾಬ್ದಾರಿಗಳನ್ನು ಪತಿಯ ಹೆಗಲಿಗೇರಿಸಿ ಸಂಗೀತ ಕೇಳುವುದು, ಚಾಕ್ಲೇಟ್ ತಿನ್ನುವುದು ಇತ್ಯಾದಿ ಮಾಡಬಹುದು. ನೀವು ಪ್ರೀತಿಸುವ ಕೆಲಸ ಮಾಡಿದರೆ ನಿಮಗೊಂದಿಷ್ಟು ಸಂತೋಷ ದೊರೆಯತ್ತದೆ.
6. ನಿಮ್ಮ ಸಂಗಾತಿಯ ಸಹಾಯ ಪಡೆದುಕೊಳ್ಳಿ. ನಿಮ್ಮ ಗರ್ಭಾವಸ್ಥೆಯ ಏರಿಳಿತಗಳ ಜೊತೆಗೆ ಅವನೊಬ್ಬನೆ ಬೆಂಬಲವಾಗಿ ನಿಲ್ಲುವವನು ಮತ್ತು ನಿಮ್ಮ ಮಗು ಹೊರಬರುವಾಗಲು ನಿಮ್ಮ ಸಂಗಾತಿಯೇ ನಿಮಗೆಲ್ಲ. ಅವರೊಂದಿಗೆ ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಅವರಿಗೂ ಸಂತೈಸಿದಂತಾಗುತ್ತದೆ. ಮತ್ತು ಅದರೊಂದಿಗೆ ನಿಮ್ಮ ಸಂಗಾತಿಗೂ ನಿಮ್ಮ ದೈಹಿಕ ಪರಿಸ್ಥಿತಿಯ ಅರಿವಾಗುತ್ತದೆ.
7. ಕೆಲಸ ಮಾಡಿ. ಕೆಲಸ ಮಾಡುವುದು ಅಧ್ಬೂತವೆನಿಸುತ್ತದೆ. ಮೊದಲಿನ ದಿನಗಳಲ್ಲಿ ಸುಲಭವಾದ ಕೆಲಸಗಳನ್ನು ಮಾಡಿ. ಆರು ವಾರಗಳ ಕಾಲ ಸುಲಭವಾದ ಕೆಲಸ ಮಾಡಿ ನಂತರದ ದಿನಗಳಲ್ಲಿ ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಬಹುದು. ಜಿಮ್ ಗಳಿಗೆ ಹೋಗಲು ಅಸಾಧ್ಯವೆನಿಸಿದರೆ ಮನೆಯಲ್ಲಿಯೇ ವ್ಯಾಯಾಮಗಳನ್ನು ಮಾಡಬಹುದು. ನಿಮ್ಮನ್ನು ನೀವು ಉತ್ತೇಜಿತಗೊಳಿಸಿಕೊಳ್ಳಲು ಮತ್ತು ವ್ಯಾಯಾಮಕ್ಕೆ ಹಲವಾರು ಸಲಹೆಗಳು ಆನ್ ಲೈನ್ ನಲ್ಲಿ ಲಭ್ಯವಿವೆ. ದೈಹಿಕ ಕಸರತ್ತು ಉತ್ತಮವೆನಿಸುತ್ತದೆ ಮತ್ತು ಹೊಸದಾದ ಒಳ್ಳೆಯ ಯೋಚನೆಗಳಿಗೆ ಸಹಕಾರಿ.
ಸಲಹೆಗಳು:
ಯಾವತ್ತೂ ತೂಕ ಹೆಚ್ಚಾದ ಬಗ್ಗೆ ಚಿಂತಿಸುವುದನ್ನು ನಿಲ್ಲಿಸಿ.
ಉಳಿದ ಬೇರೆ ತಾಯಂದಿರ ಕಥೆಗಳನ್ನು ಓದಿ.



Click it and Unblock the Notifications