ಮಗುವನ್ನು ಬೆಳೆಸುವಲ್ಲಿ ತಂದೆಗಿಂತ ತಾಯಿ ಹೇಗೆ ಭಿನ್ನ?

By ಲೇಖಕ

How to Be a Good Mother
ಮಕ್ಕಳಿಗೆ ಒಳ್ಳೆಯ ಪಾಲಕರಾಗಿ ಇರಬೇಕಾದದ್ದು ಹೇಗೆ ಎನ್ನುವುದನ್ನು ಈ ಮೊದಲೇ ನೀವು ಕಲಿತಿರುತ್ತೀರಿ. ಆದರೆ ಒಬ್ಬ ಮಗುವಿನ ತಾಯಿಯಾಗಿ ತಂದೆಯಾಗಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿತ್ತದೆ. ಆದರೆ ತಾಯಿಗಿರುವ ಸವಾಲು ಸ್ವಲ್ಪ ಭಿನ್ನವಾಗಿರುತ್ತದೆ. ನಿಮ್ಮ ಮಕ್ಕಳನ್ನು ಹೇಗೆ ನಿಭಾಯಿಸಬೇಕು ಹಾಗೂ ಅವರು ಚೆನ್ನಾಗಿರುವಂತೆ ನೀವೇನು ಮಾಡಬಹುದು ಎನ್ನುವುದರ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.

ಹಂತಗಳು :

1.ಆದಷ್ಟೂ ತಾಳ್ಮೆಯಿಂದಿರಿ. ತಾಯಿಯಾದವಳಿಗೆ ಸಾಕಷ್ಟು ಸವಾಲುಗಳೂ ಎದುರಾಗುತ್ತವೆ. ಅದೆಲ್ಲವನ್ನೂ ಎದುರಿಸಬೇಕಾದದ್ದು ತಾಯಿಯಾದವಳ ಜವಾಬ್ದಾರಿ. ಆದರೆ ಈ ಒತ್ತಡಗಳ ನಡುವೆ ನೀವು ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟೂ ಶಾಂತವಾಗಿರಿ. ಈ ಮಾರ್ಗವನ್ನು ನಿಮ್ಮ ಇತರ ಸಮಸ್ಯೆಗಳನ್ನು ಬಗೆಹರಿಸುವುದಕ್ಕೂ ಪ್ರಯೋಗಿಸಿ ನೋಡಿ. ಇದರಿಂದ ಉತ್ತಮ ಉತ್ತರ ಸಿಗುವುದರಲ್ಲಿ ಸಂಶಯವಿಲ್ಲ. ಶಾಂತವಾಗಿರಿ. ಯಾವುದಾದರೂ ಕೆಲಸವನ್ನು ನೀವು ಮಾಡುತ್ತಿಲ್ಲ ಎಂದಾದರೆ ಅದಕ್ಕೆ ಪ್ರಾಯೋಗಿಕ (practical) ಕಾರಣಗಳನ್ನು ನೀಡಿ ಅದನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ. ಹಾಗೆಯೆ ಇನ್ಯಾವುದೊ ಕೆಲಸವನ್ನು ಅವರು ಮಾಡುವುದು ನಿಮಗೆ ಯಾಕೆ ಇಷ್ಟವಿಲ್ಲ ಎಂಬುದನ್ನೂ ಮನವರಿಕೆ ಮಾಡಿ. ಇದರಿಂದ ಅವರಿಗೂ ಸತ್ಯಾಸತ್ಯತೆಗಳ ಅರಿವಾಗುತ್ತದೆ.

2. ನಿಮ್ಮ ಮಗುವಿಗೆ ಯಾವುದರಲ್ಲಿ ಆಸಕ್ತಿಯಿದೆಯೋ ನೀವು ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಿ. ಒಂದು ವೇಳೆ ನಿಮ್ಮ ಮಗುವಿಗೆ ಸಂಗೀತದ ಮೇಲೆ ಆಸಕ್ತಿಯಿದ್ದರೆ ಅವನಿಗೆ/ಳಿಗೆ ಗಿಟಾರ್ ನಂತಹ ಸಂಗೀತ ಉಪಕರಣಗಳನ್ನು ಕೊಡಿಸಿ. ಹಾಗೂ ಅವರು ಹೇಗೆ ನುಡಿಸುತ್ತಾರೆ ಎಂಬುದನ್ನು ವೀಕ್ಷಿಸಿ. ಆಗಾಗ ನಿಮ್ಮ ಮಗುವಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿರಿ. ಉದಾಹರಣೆಗೆ ನಿನಗೆ ಇಷ್ಟವಾದ ಸಂಗೀತ ಯಾವುದು? ನಿನಗೆ ಪ್ರಿಯವಾದ ಹಾಡು ಯಾವುದು ? ಇಗ ಇನ್ನೂ ಮುಂತಾದ ಪ್ರಶ್ನೆಗಳನ್ನು ಕೇಳುತ್ತಿರಿ. ಇದರಿಂದ ಅವರಲ್ಲೂ ಉತ್ಸಾಹ ಹೆಚ್ಚುತ್ತದೆ. ಒಂದು ವೇಳೆ ನಿಮ್ಮ ಮಗಳಿಗೆ ಪ್ಯಾಷನ್ ನಲ್ಲಿ ಆಸಕ್ತಿಯಿದ್ದರೆ ಅವಳನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗಿ. ನಿನಗೆ ಯಾವ ವಸ್ತು ಇಷ್ಟ ಎಂಬುದನ್ನು ಖುದ್ದಾಗಿ ಅವಳನ್ನೇ ಕೇಳಿ.

ನಿಮ್ಮ ಯಾವುದೇ ಮಾತಿಗೆ ಅಥವಾ ಇನ್ನಿತರ ಯಾವುದೇ ಕಾರಣಗಳಿಗೆ ನಿಮ್ಮ ಮಕ್ಕಳು ಚೀರಾಡಿದರೆ ಅವರನ್ನು ಸಂಬಾಳಿಸಿ ಎನೂ ಇಲ್ಲವೆಂಬಂತೆ ಸಮಾಧಾನ ಮಾಡಿ. ಆದರೆ ಅವರು ಹಾಗೆ ಚೀರಾಡಿದರೆ. ಕೂಗಾಡಿದರೆ ಅವರಿಗೆ ಏನೂ ಸಮಸ್ಯೆಯಿದೆ ಎಂಬುದನ್ನು ಅರಿತುಕೊಳ್ಳಿ. ಅವರಿಗಿರುವ ಸಮಸ್ಯೆ ಗಳನ್ನು ಬಹಳ ಹತ್ತಿರದಿಂದ, ಪ್ರೀತಿಯಿಂದ ಕೇಳಿ. ಅವರು ತಮ್ಮ ಅಳಲನ್ನು ತಾಯಿಯಲ್ಲಿ ಹೇಳಿಕೊಳ್ಳದೆ ಮತ್ಯಾರಲ್ಲಿ ಹೇಳಲು ಸಾಧ್ಯ? ಆದ್ರೆ ಕೆಲವು ಸಂದರ್ಭಗಳಲ್ಲಿ ಅವರಾಗಿಯೇ ನಿಮ್ಮ ಬಳಿ ಹೇಳುವವರೆಗೂ ಕಾಯಿರಿ.

3. ಹಣದ ವಿಷಯದಲ್ಲಿ ಬಹಳ ಕ್ಲಿಷ್ಟವಾಗಿರದೇ ಇರುವುದು ಉತ್ತಮ. ಮಕ್ಕಳು ದಿನದಿಂದ ದಿನಕ್ಕೆ ವೃಥಾ ಖರ್ಚು ಮಾಡಲು ಹಣಕೊಡಬಾರದು. ಆದರೆ ನಿಮ್ಮ ಮಗುವಿಗೆ ದಿನವೂ ಹಣ ಕೊಡುವುದಿಲ್ಲ ಎಂದು ಜೊತೆಗೆ ದಿನವೂ ಉಪದೇಶವನ್ನು ಮಾಡಿದರೆ ನೀವು ಮಕ್ಕಳ ದೃಷ್ಟಿಯಲ್ಲಿ ಯಾವಾಗಲೂ ಏನನ್ನೂ ಕೊಡಿಸದ ಅಪ್ಪ ಅಮ್ಮಂದಿರಂತೆ ಅತ್ಯಂತ ಸಂಕೀರ್ಣ ಅಥವಾ ಕ್ಲಿಷ್ಟಕರವಾದ ಪಾಲಕರು ಎನಿಸಿಬಿಡುತ್ತೀರಿ. ಸಣ್ಣ ಪುಟ್ಟ ವಸ್ತುಗಳನ್ನು ನಿಮ್ಮ ಮಗುವಿಗೋಸ್ಕರ ಆಗಾಗ ಕೊಡಿಸುತ್ತಿರಿ. ಇದು ಅಂಗಡಿಯಲ್ಲಿ ಕೊಡಿಸುವ ಕ್ಯಾಂಡಿ ಹಾಗೂ ಚಿಪ್ಸ್ ಗಳೂ ಕೂಡಾ ಅವರಿಗೆ ಇಷ್ಟವಾಗಬಹುದು. ಈಗ ಅಥವಾ ತದನಂತರ ನಿಮ್ಮ ಮಗು ಳಿದ ಯಾವುದಾದರೂ ದೊಡ್ದ ವಸ್ತು ಕೇಳಿದಾಗ ನಿಜವಾಗಿಯೂ ನಿಮ್ಮ ಮಗುವಿಗೆ ಅಗತ್ಯವಿದೆ ಎನಿಸಿದರೆ ಅದನ್ನು ಅಗತ್ಯವಾಗಿ ಕೊಡಿಸಿ. ಆದರೆ ಕೇಳಿದ್ದೆಲ್ಲವನ್ನೂ ಕೊಡಿಸುವುದು ಮಗುವಿನ ಉತ್ತಮಾ ಬೆಳವಣಿಗೆಗೆ ಒಳ್ಳೆಯದಲ್ಲ.

4. ನಿಮ್ಮ ಮಕ್ಕಳ ದೃಷ್ಟಿ ಕೋನದಲ್ಲಿ ಅವರು ನಿಮ್ಮೊಂದಿಗೆ ಮಾತನಾಡಲು ನೀವು ಸರಿಯಾದ ವ್ಯಕ್ತಿ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಏಕೆಂದರೆ ನಿಮ್ಮಲ್ಲಿ ನಿಮ್ಮ ಮಗು ಅದರ ಸಮಸ್ಯೆಗಳನ್ನು ಹೇಳದೇ ಇರಬಹುದು. ನೀವು ಒಬ್ಬ ಒಳ್ಳೆಯ ಕೇಳುಗ ಎನಿಸಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಮಕ್ಕಳು ಸ್ನೇಹ ಸಲಹೆಯನ್ನು ಕೇಳಲು, ಪೌಢಾವಸ್ಥೆಯ ಮಾಹಿತಿಗಳನ್ನು ಕೇಳಲು, ಮನೆಗೆಲಸಕ್ಕೆ ಸಹಾಯವನ್ನು ಕೇಳಲು ಅಥವಾ ಒಂದು ಪ್ರೀತಿ ಅಪ್ಪುಗೆಗಾಗಿ ಅಮ್ಮನ ಬಳಿಗೆ ಹೋಗುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. ಒಂದೊಮ್ಮೆ ನೀವು ಅವರಿಗೆ ಸ್ಪಂದಿಸದಿದ್ದರೆ ಅವರು ಚಿಪ್ಪಿನೊಳಗಿನ ಮುತ್ತಿನಂತಾಗಬಹುದು. ಆದ್ದರಿಂದ ಅವರ ಭಾವನೆಗಳನ್ನು ಆಗಾಗ ಕೇಳಿ ತಿಳಿದುಕೊಳ್ಳುತ್ತಿರಿ.

5. ಮಕ್ಕಳಿಗೆ ನಿಮ್ಮ ಸಂಪೂರ್ಣ ಬೆಂಬಲವನ್ನು ನೀಡಿ. ನಿಮ್ಮ ಮಕ್ಕಳ ಹವ್ಯಾಸ, ಆಸಕ್ತಿ ಹಾಗೂ ಸ್ನೇಹಿತರ ಬಗ್ಗೆ ಹೇಳಿ ಅವರ ಮುಂದೆ ನಗಾಡಬೇಡಿ. ನಿಮ್ಮ ಮಗಳು / ಮಗ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಡಾಕ್ಟರ್ ಆಗಲು ಇಷ್ಟಪಡುತ್ತಿಲ್ಲವೇ? ಹಾಗಿದ್ದರೆ ನಿಮ್ಮ ಆಸೆಗೆ ಭಂಗ ಬಂತು ಎಂದು ಕೋಪಗೊಳ್ಳಬೇಡಿ. ಏಕೆಂದರೆ ಇದು ನಿಮ್ಮ ಮಕ್ಕಳ ಜೀವನ. ಅವರ ಜೀವನದ ನಿರ್ಧಾರಗಳನ್ನು ಅವರೆ ತೆಗೆದುಕೊಳ್ಳಬಲ್ಲರು. ನಿಮಗಿಂತ ನಿಮ್ಮ ಮಕ್ಕಳ ಯೋಚನೆ ನಿಮಗಿಂತ ಭಿನ್ನವಾಗಿದ್ದರೆ ಅದರ ಬಗ್ಗೆ ನಿಮಗೆ ಬೇಸರ ಬೇಡ. ನಿಮ್ಮ ಮಗ ಡಾಕ್ಟರ್ ಆಗಬೇಗು ಎನ್ನುವ ನಿಮ್ಮ ಬಯಕೆಯನ್ನು ತಿರಸ್ಕರಿಸಿ ಆತನಿಗೆ ಇಂಜಿನಿಯರ್ ಆಗ ಬೇಕು ಎಂದು ಅನಿಸಿರಬಹುದು. ನಿಮ್ಮ ಮಗಳು ಹಿಪ್ಪೋಪ್ ಸಂಗೀತವನ್ನು ಇಷ್ಟ ಪಡಬಹುದು. ಅತಿಯಾಗಿ ತಮಾಷೆ ಮಾಡುವ ಹಾಗೂ ನಿಮ್ಮ ಬಣ್ಣಕ್ಕಿಂತ ವಿಭಿನ್ನವಾದ ಬಣ್ಣವನ್ನು ಹೊಂದಿರುವ ಸ್ನೇಹಿತನನ್ನು ಆಯ್ದುಕೊಂಡಿರಬಹುದು. ಆದರೆ ಇವೆಲ್ಲ ನಿಮಗೆ ಇಷ್ಟವಿಲ್ಲದೇ ಹೋಗಬಹುದು. ಆದರೆ ಇದು ಅವರ ನಿರ್ಧಾರ. ನೀವು ಈಗಾಗಲೇ ನಿಮ್ಮ ಮಗುವಿನ ಜೀವನದ ಬಗ್ಗೆ ಸಾಕಷ್ಟು ನಿರ್ಧಾರವನ್ನು ತೆಗೆದುಕೊಂಡಿರುತ್ತೀರಿ. ನಿಮ್ಮ ಮಗು ಯಾವ ಶಾಲೆಗೆ ಹೋಗಬೇಕು. ಯಾವಾಗ ಊಟ ಮಾಡಬೇಕು. ವಾರದಲ್ಲಿ ಎಷ್ಟು ಸಮಯ ಬಿಡುವು ಇವೆಲ್ಲವೂ ನಿಮ್ಮ ಇಷ್ಟದಂತೆಯೇ ಸಾಗುತ್ತಿದೆಯಲ್ಲವೇ? ಈ ಮಿತಿಯನ್ನು ಮೀರದಿರುವುದು ಒಳ್ಳೆಯದು.

6. ತಪ್ಪುಗಳು ಮಕ್ಕಳಿಂದ ಮಾತ್ರವಲ್ಲ ದೂಡ್ಡವರಿಂದಲೂ ಆಗುತ್ತವೆ. ಆದ್ದರಿಂದ ನೀವು ಯಾವುದೇ ವಿಷಯದಲ್ಲಿ ತಪ್ಪು ಮಾಡಿದ್ದರೆ ಅವರ ಮುಂದೆ ಕ್ಷಮೆಯನ್ನು ಕೇಳಿ ದೊಡ್ಡವರೆನಿಸಿಕೊಳ್ಳಿ ! ನಿಮ್ಮ ಮಕ್ಕಳ ಮುಂದೆ ಕ್ಷಮೆ ಕೇಳುವುದಕ್ಕೆ ಸಂಕೋಚವೆನಿಸಬಹುದು ಆದರೆ ನಮ್ಮ ತಪ್ಪುಗಳನ್ನು ಯಾರ ಮುಂದೆಯಾದರೂ ಒಪ್ಪಿಕೊಳ್ಳುವುದೇ ದೊಡ್ಡತನ. ಮಕ್ಕಳು ತಪ್ಪು ಮಾಡಿದಾಗ ದಂಡಿಸದೇ ಸರಿಯಾಗಿ ಅವರ ತಪ್ಪು ಅವರಿಗೆ ಅರಿವಾಗುವಂತೆ ಮಾಡುವುದು ತಾಯಿಯಾದ ನಿಮ್ಮ ಮೊದಲ ಕರ್ತವ್ಯ. ನೀವು ತಪ್ಪು ಮಾಡಿದಾಗ ಯಾಕೆ ಹಾಗೆ ವರ್ತಿಸಿದಿರಿ, ಅದರಿಂದ ಏನು ಸಮಸ್ಯೆ ಉಂಟಾಯಿತು, ಆಸಮಯದಲ್ಲಿ ನಿಮ್ಮ ಪರಿಸ್ಥಿತಿ ಹೇಗಿತ್ತು ಎಂಬುದನ್ನು ವಿವರಿಸಿ ನಂತರ ಮತ್ತೆಂದೂ ಈ ತಪ್ಪನ್ನು ಮಾಡುವುದಿಲ್ಲ ಎಂದು ಕ್ಷಮೆಯನ್ನು ಕೇಳಿ. ಅಲ್ಲಿಗೆ ಎಲ್ಲಾ ಸಮಸ್ಯೆಗಳೂ ಕಡಿಮೆಯಾಗುತ್ತದೆ.

7. ನಿಮ್ಮ ಮಕ್ಕಳು ಇತರರನ್ನು ಪ್ರೀತಿಸುವುದನ್ನು ಗೌರವಿಸಿ. ಬೇರೆ ಮಕ್ಕಳ ತಂದೆ ತಾಯಿಯನ್ನು ಪ್ರೀತಿಸಿದರೆ ಮಕ್ಕಳನ್ನು ದಂಡಿಸಬೇಡಿ.

ಕೊನೆಯದಾಗಿ ನಿಮ್ಮ ಮಗುವನ್ನು ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಸಿ. ಮಕ್ಕಳನ್ನು ಪ್ರೀತಿಸುವುದನ್ನು ಬಿಟ್ಟು ಬೇರೆನೇ ಮಾಡಿದರೂ ಅದು ನೀರಿನಲ್ಲಿ ಮಾಡಿದ ಹೋಮಕ್ಕೆ ಸಮಾನ. ನೀವು ಮಕ್ಕಳಿಗೆ ಪ್ರೀತಿಸಿದಷ್ಟು ಅವರಿಗೆ ನೀವು ಹತ್ತಿರವಾಗುತ್ತೀರಿ.

English summary

How to Be a Good Mother | ಅಮ್ಮನಿಗೂ ಇರುತ್ತೇ ನೂರೆಂಟು ಸವಾಲು

There's already a lot to cover when learning how to be the best parent you can be. But there are certain challenges a mother faces as a parent that are distinct from those of being a father. Here's how to overcome them and raise your child/children well.
Story first published: Monday, January 21, 2013, 16:34 [IST]
X
Desktop Bottom Promotion