Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐವಿಎಫ್ ನಂತರ ಗರ್ಭಪಾತವಾಗುವುದು ತಡೆಗಟ್ಟಲು ಈ ಮುನ್ನೆಚ್ಚರಿಕೆ ಸಹಕಾರಿ
ಮಕ್ಕಳಿಗೆ ತಾಯಿಯಾಗಬೇಕೆಂಬುವುದು ಬಂಜೆತನದ ಸಮಸ್ಯೆಯಿಂದ ಬಳಲುತ್ತಿರುವರ ಬಹುದೊಡ್ಡ ಕನಸಾಗಿರುತ್ತದೆ. ಈಗ ತಂತ್ರಜ್ಞಾನ ಮುಂದುವರೆದಿದ್ದು ತುಂಬಾ ಜನರಿಗೆ ಈ ಫರ್ಟಿಲಿಟಿ ಚಿಕಿತ್ಸೆಯ ಫಲದಿಂದಾಗಿ ಮಗುವಿಗೆ ತಾಯಿಯಾಗುವ ಭಾಗ್ಯ ಬಂದಿದೆ. ಆದರೆ ಈ ಫರ್ಟಿಲಿಟಿ ಚಿಕಿತ್ಸೆ ದುಬಾರಿಯೂ ಹೌದು. ಐವಿಎಫ್ ಮಾಡಿಸಿದಾಗ ಗರ್ಭಧಾರಣೆಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ಸೂಚಿಸುತ್ತಾರೆ.

ಐವಿಎಫ್ ಮಾಡಿಸಿ ಗರ್ಭಧಾರಣೆಯಾಗಿ ನಂತರ ಗರ್ಭಪಾತವಾದರೆ ಮಾನಸಿಕವಾಗಿ, ಆರ್ಥಿಕವಾಗಿ ತುಂಬಾನೇ ದೊಡ್ಡ ಹೊಡೆತ ಉಂಟಾಗುವುದು. ಏಕೆಂದರೆ ಎಲ್ಲರಲ್ಲಿ ಪದೇ ಪದೇ ಐವಿಎಫ್ ಮಾಡಿಸುವ ಶಕ್ತಿ ಇರಲ್ಲ. ಒಂದು ಬಾರಿ ಐವಿಎಫ್ ಚಿಕಿತ್ಸೆಗೆ ಲಕ್ಷಗಟ್ಟಲೆ ಖರ್ಚಾಗುವುದು. ಹೀಗಾಗಿ ಐವಿಎಫ್ ಚಿಕಿತ್ಸೆಗೆ ಮೊದಲು ಕೆಲವೊಂದು ಮುನ್ನಚ್ಚರಿಕೆವಹಿಸಿದರೆ ಗರ್ಭಪಾತವಾಗುವ ಸಾಧ್ಯತೆ ಕಡಿಮೆಯಾಗುವುದು, ಅವುಗಳೇನು ಎಂದು ನೋಡೋಣ ಬನ್ನಿ:
1. ನಿಮ್ಮ TSH ಚೆಕ್ ಮಾಡಿಸಿ
ಐವಿಎಫ್ ಚಿಕಿತ್ಸೆಗೆ ಒಳಗಾಗುವ ಮೊದಲು ಫುಲ್ ಬ್ಲಡ್ ಹಾರ್ಮೋನ್ ಪ್ರೊಫೈಲ್ ಮಾಡಿಸಲಾಗುವುದು, ಆದರೆ ಕೆಲವೊಂದು ಕ್ಲಿನಿಕ್‌ನಲ್ಲಿ TSH ಮಾಡುವುದಿಲ್ಲ ,FSH, LH and AMH ಇವಷ್ಟೇ ಮಾಡುತ್ತಾರೆ. TSH ಅಸಮತೋಲನಕ್ಕೂ ಗರ್ಭಪಾತಕ್ಕೂ ಸಂಬಂಧವಿರುವುದರಿಂದ TSH ಪರೀಕ್ಷೆ ಮಾಡಿಸಿ, ಟಿಎಸ್‌ಹೆಚ್ ಸಮತೋಲನದಲ್ಲಿದ್ದರೆ ಮಾತ್ರ ಐವಿಎಫ್ ಚಿಕಿತ್ಸೆ ಮಾಡಿಸಿ, ಇಲ್ಲದಿದ್ದರೆ ಟಿಎಸ್‌ಹೆಚ್ ಸಮತೋಲನಕ್ಕೆ ಮೊದಲು ಚಿಕಿತ್ಸೆ ಪಡೆಯಿರಿ, ನಂತರ ಐವಿಎಫ್ ಚಿಕಿತ್ಸೆ ತೆಗೆದುಕೊಳ್ಳಿ.
2. ಹಿಸ್ಟ್ರೋಸ್ಕೋಪಿ ಮಾಡಿಸಿ: ಇದನ್ನು ವೈದ್ಯರು ಅಥವಾ ಕ್ಲಿನಿಕ್‌ನಲ್ಲಿ ಹೆಚ್ಚಾಗಿ ಸಜೆಸ್ಟ್ ಮಾಡುವುದಿಲ್ಲ. ನೀವು ನಿಮ್ಮ ಐವಿಎಫ್ ಚಿಕಿತ್ಸೆ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಲು ಈ ಪರೀಕ್ಷೆ ಮಾಡಿಸಿ. ಹಿಸ್ಟ್ರೋಸ್ಕೋಪಿ ಅಲ್ಟ್ರಾಸೌಂಡ್‌ಗಿಂತ ತುಂಬಾ ಒಳ್ಳೆಯದು. ಸರ್ಕಾರಿ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಉಚಿತವಾಗಿ ಕೂಡ ಮಾಡಿಸಬಹುದು.
3. ಸರಿಯಾದ ಪ್ರೊಗೆಸ್ಟಿರೋನೆ ಆಯ್ಕೆಮಾಡಿ
ಈವಿಎಫ್, ಡೋನರ್, FET ಚಿಕಿತ್ಸೆಯಲ್ಲಿ ಪ್ರೊಗೆಸ್ಟ್ರಿರೋನ್ ತೆಗೆದುಕೊಳ್ಳುವುದರಿಂದ ರಕ್ತಸ್ರಾವ ಉಂಟಾಗುವುದು ತಡೆಗಟ್ಟಬಹುದು. ಅದರಲ್ಲೂ ವೆಜೈನಲ್ ಅಟ್ರೋಜೆಸ್ಟಿನ್ ತುಂಬಾನೇ ಪರಿಣಾಮಕಾರಿ. ಇದನ್ನು ತೆಗೆದುಕೊಳ್ಳುವುದರಿಂದ ಗರ್ಭಪಾತದ ಸಾಧ್ಯತೆ ಕಡಿಮೆಯಾಗುವುದು.
4. ಐವಿಎಫ್‌ಗೆ ಮೊದಲು ಸರಿಯಾದ ಮೈ ತೂಕ ಹೊಂದಿ
ನೀವು ಐವಿಎಫ್ ಚಿಕಿತ್ಸೆಗೆ ಮುನ್ನ ಸರಿಯಾದ ಮೈ ತೂಕ ಹೊಂದಿ. ಆರೋಗ್ಯಕರ ಆಹಾರ ತಿನ್ನಿ. ಪರಿಣಿತರಿಂದ ಯಾವೆಲ್ಲಾ ವ್ಯಾಯಾಮ ಮಾಡಬಹುದು ಎಂದು ತಿಳಿದು ಅದನ್ನು ಅಭ್ಯಾಸ ಮಾಡಿ.
5. ನಿಮ್ಮ ರಕ್ತವನ್ನು ಪರೀಕ್ಷಿಸಿ
ತುಂಬಾ ತೆಳುವಾದ ಅಥವಾ ತುಂಬಾ ಮಂದವಾದ ರಕ್ತ ಗರ್ಭಪಾತದ ಸಾಧ್ಯತೆ ಹೆಚ್ಚಿಸುವುದು. ಏನಾದರೂ ಅಟೋಇಮ್ಯೂನೆ ಕಾಯಿಲೆ ಇದೆಯೇ ಎಂಬುವುದು ರಕ್ತ ಪರೀಕ್ಷೆ ಮಾಡಿಸಿ ತಿಳಿದುಕೊಳ್ಳಿ.
6. ನಿಮ್ಮ ಔಷಧವನ್ನು ಸರಿಯಾಗಿ ತೆಗೆದುಕೊಳ್ಳಬೇಕು
ವೈದ್ಯರು ಸೂಚಿಸಿದ ಸಮಯಕ್ಕೆ ಸರಿಯಾಗಿ ಔಷಧವನ್ನು ತೆಗೆದುಕೊಳ್ಳಬೇಕು, ಕೆಲವರು ಕೆಲವೊಂದು ಸಮಯದಲ್ಲಿ ಮರೆತು ಹೋಗುತ್ತಾರೆ, ಇದರಿಂದ ಗರ್ಭಪಾತದ ಸಾಧ್ಯತೆ ಹೆಚ್ಚುವುದು. ಹೀಗಾದಿರಲು ಅಲಾರಾಂ ಸೆಟ್ ಮಾಡಿ ಔಷಧಿಯನ್ನು ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ.
7.ನಿಮ್ಮ ಗರ್ಭಕಂಠ ಹೇಗಿದೆ ಎಂದು ತಿಳಿದುಕೊಳ್ಳಿ
ಗರ್ಭಕಂಠ ತುಂಬಾ ತೆಳುವಾಗಿದ್ದರೆ ಗರ್ಭಪಾತದ ಸಾಧ್ಯತೆ ಹೆಚ್ಚಾಗುವುದು, ಈ ಸಮಯದಲ್ಲಿ ವೈದ್ಯರು ಸ್ಟಿಚ್ ಹಾಕುತ್ತಾರೆ, ಇದನ್ನು ವೈದ್ಯರೇ ಪರೀಕ್ಷಿಸಿ ಹೇಳುತ್ತಾರೆ, ಇಲ್ಲಾಂದ್ರೆ ನೀವೇ ಕೇಳಿ.
8. ಸೋಂಕುಗಳ ಬಗ್ಗೆ ಜಾಗ್ರತೆ
ಐವಿಎಫ್ ಚಿಕಿತ್ಸೆ ಬಳಿಕ ಸೋಂಕು ತಗುಲದಂತೆ ತುಂಬಾನೇ ಎಚ್ಚರವಹಿಸಬೇಕು. ಒಂದು ಚಿಕ್ಕ ಜ್ವರ ಕೂಡ ಅಪಾಯ ತರಬಹುದು, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ.



Click it and Unblock the Notifications
