Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಮಕ್ಕಳಲ್ಲಿ ಹುಳ ಹಲ್ಲಿನ ಸಮಸ್ಯೆ: ಕ್ಯಾವಿಟಿ ತಡೆಗಟ್ಟಲು ಏನು ಮಾಡಬೇಕು?
ಹುಳು ಹಲ್ಲಿನ ಸಮಸ್ಯೆ 5 ವರ್ಷದ ಕೆಳಗಿನ ಬಹುತೇಕ ಮಕ್ಕಳನ್ನು ಕಾಡುತ್ತದೆ. 6 ವರ್ಷದ ನಂತರ ಈ ಹಲ್ಲುಗಳು ಉದುರಿ ಹೊಸ ಹಲ್ಲುಗಳು ಮೂಡಿದಾಗ ಕೆಲ ಮಕ್ಕಳಲ್ಲಿ ಹೊಸ ಹಲ್ಲಿನಲ್ಲಿ ಯಾವುದೇ ಸಮಸ್ಯೆ ಇರಲ್ಲ. ಆದರೆ ಇನ್ನು ಕೆಲ ಮಕ್ಕಳಿಗೆ ಹೊಸ ಹಲ್ಲಿನಲ್ಲೂ ಹುಳ ಹಲ್ಲಿನ ಸಮಸ್ಯೆ ಅಥವಾ ಕ್ಯಾವಿಟಿ ಸಮಸ್ಯೆ. ಹೀಗಾದಾಗ ಪೋಷಕರಿಗೆ ಚಿಂತೆ ಉಂಟಾಗುತ್ತದೆ.
ಮಕ್ಕಳಲ್ಲಿ ಈ ಹಲ್ಲು ಹುಳಾಗುವುದನ್ನು ತಡೆಯುವುದು ಹೇಗೆ ಎಂಬುವುದೇ ಬಹುತೇಕ ಪೋಷಕರ ಚಿಂತೆಯಾಗಿದೆ. ಚಾಕೊಲೆಟ್ ಕೊಡುವುದರಿಂದ ಹಲ್ಲಿನ ಹುಳದ ಸಮಸ್ಯೆಯಾಗುತ್ತೆ ಅಂತಾರೆ, ಚಾಕೊಲೆಟ್ ಕೊಡದಿರುವ ಮಕ್ಕಳಲ್ಲಿಯೂ ಹುಳ ಹಲ್ಲಿನ ಸಮಸ್ಯೆ ಅಥವಾ ಕ್ಯಾವಿಟಿ ಕಂಡು ಬರುವುದು. ಸಾಮಾನ್ಯವಾಗಿ ಮಕ್ಕಳಲ್ಲಿ ಕ್ಯಾಲ್ಸಿಯಂ ಕೊರತೆಯಾದಾಗ ಈ ರೀತಿಯಾಗುವುದು.

ಮಕ್ಕಳಲ್ಲಿ ಹುಳ ಹಲ್ಲಿನ ಸಮಸ್ಯೆ ತಡೆಗಟ್ಟಲು ಏನು ಮಾಡಬೇಕು ಎಂದು ನೋಡುವುದಾದರೆ
* ನಾವು ಸಾಮಾನ್ಯವಾಗಿ ಮಗುವಿಗೆ ಹಲ್ಲು ಬಂದ ಬಳಿಕ ಅದರ ವಸಡಿನ ಸ್ವಚ್ಛತೆ ಕಡೆ ಗಮನ ಕೊಡುತ್ತೇವೆ. ಆದರೆ ಹಲ್ಲು ಬರುವುದಕ್ಕೆ ಮುನ್ನವೇ ಅದರ ವಸಡುಗಳನ್ನು ಸ್ವಚ್ಛ ಬಟ್ಟೆಯಿಂದ ಮೆಲ್ಲನೆ ಒರೆಸಿ. ಇದರಿಂದ ಕೆಟ್ಟ ಬ್ಯಾಕ್ಟಿರಿಯಾ ಉಂಟಾಗುವುದು ತಡೆಗಟ್ಟಬಹುದು.
* ಮಗುವಿಗೆ ಹಲ್ಲು ಬರಲಾರಂಭಿಸಿದ ಮೇಲೆ ಮಗುವಿಗಾಗಿಯೇ ಇರುವ ಮೃದುವಾದ ಬ್ರೆಷ್‌ನಲ್ಲಿ ಹಲ್ಲನ್ನು ಮೆಲ್ಲನೆ ತಿಕ್ಕಿ. ಮಕ್ಕಳಿಗಾಗಿಯೇ ಟೂತ್‌ಪೇಸ್ಟ್ ಸಿಗುತ್ತೆ, ಇದನ್ನು ಬಳಸಿದಾಗ ಖಾರ ಅನಿಸುವುದಿಲ್ಲ, ನೀವು ಕೋಲ್ಗೆಟ್ ಅಥವಾ ಮತ್ತಿತರ ಪೇಸ್ಟ್ ಹಾಕಿದರೆ ಮಗುವಿಗೆ ಬಾಯಿ ಖಾರ-ಖಾರವಾಗುವುದರಿಂದ ಹಲ್ಲುಜ್ಜಲು ಹಿಂದೇಟು ಹಾಕಬಹುದು.
* ಮಗುವಿಗೆ ಪ್ರಾರಂಭದಲ್ಲಿ ಉಪ್ಪಿನಲ್ಲಿ ಹಲ್ಲುಜ್ಜಿಸುವುದು ಸೂಕ್ತ, ಪೇಸ್ಟ್ ಹಾಕಿದರೆ ಬಾಯಿ ಮುಕ್ಕಳಿಸಲು ಗೊತ್ತಾಗದೆ ನುಂಗಬಹುದು.
* ಮೂರು ವರ್ಷದ ಮೇಲ್ಪಟ್ಟ ಮಕ್ಕಳಿಗೆ ಫ್ಲೂರೈಡ್ ಇರುವ ಪೇಸ್ಟ್ ಸ್ವಲ್ಪವೇ ಸ್ವಲ್ಪ ಹಾಕಿ ಹಲ್ಲುಜ್ಜಿಸಿ.
* ಮಕ್ಕಳು 8 ವರ್ಷ ಆಗುವವರೆಗೆ ಅವರ ಜೊತೆಯೇ ನಿಂತು ಹಲ್ಲುಜ್ಜಿಸುವುದು ಒಳ್ಳೆಯದು, ಇಲ್ಲದಿದ್ದರೆ ಪೇಸ್ಟ್ ನುಂಗಬಹುದು.
ಮಕ್ಕಳಿಗೆ ಬಾಟಲಿನಲ್ಲಿ ಹಾಲು ಕೊಡುವುದಿಂದ ಹುಳ ಹಲ್ಲಿನ ಸಮಸ್ಯೆ ಹೆಚ್ಚುವುದು
ಕೆಲವರು ಮಕ್ಕಳಿಗೆ ಬಾಟಲಿ ಹಾಲು ನೀಡಿ ಹಾಗೇ ನಿದ್ದೆ ಮಾಡಿಸುತ್ತಾರೆ. ಇದರಿಂದ ಮಕ್ಕಳ ಹಲ್ಲುಗಳಲ್ಲಿ ಹಾಲಿನ ಸಿಹಿಯಂಶ ಉಳಿದುಕೊಂಡು ಹಲ್ಲುಗಳು ಹುಳಾಗುವ ಸಾಧ್ಯತೆ ಹೆಚ್ಚು.
ಲೋಟದಲ್ಲಿ ಹಾಲು ಕುಡಿಸಿ
ಮಗುವಿಗೆ 6 ತಿಂಗಳಾಗುವವರಿಗೆ ತಾಯಿಯ ಎದೆಹಾಲು ಬಿಟ್ಟು ಮತ್ತೇನು ಕೊಡಬೇಡಿ. ನಂತರ ನಿಧಾನಕ್ಕೆ ಸ್ಪೂನ್‌ನಲ್ಲಿ ಕುಡಿಸಲಾರಂಭಿಸಿ, ನಂತರ ಲೋಟ ಅಭ್ಯಾಸ ಮಾಡಿಸಿ. ಹೀಗೆ ಮಾಡುವುದರಿಂದ ಹಲ್ಲುಗಳ ಆರೋಗ್ಯ ಕಾಪಾಡಬಹುದು.
ಕ್ಯಾವಿಟಿ ತಡೆಗಟ್ಟಲು ಏನು ಮಾಡಬೇಕು?
ಸರಿಯಾಗಿ ಬಾಯಿಯನ್ನು ಸ್ವಚ್ಛಗೊಳಿಸದಿದ್ದರೆ ಕೆಟ್ಟ ಬ್ಯಾಕ್ಟಿರಿಯಾ ಉಂಟಾಗಿ ಹಲ್ಲುಗಳು ದುರ್ಬಲವಾಗುವುದು. ಆದ್ದರಿಂದ ಪ್ರಾರಂಭದಿಂದಲೇ ಹಲ್ಲಿನ ಸ್ವಚ್ಛತೆ ಕಡೆಗೆ ಗಮನಹರಿಸಿ.
ನೀವು ಪ್ಯೂರಿಫೈಯ್ಡ್ ನೀರು ಬಳಸುತ್ತಿದ್ದೀರಾ?
ನೀವು ಪ್ಯೂರಿಫೈಯ್ಡ್ ನೀರು ಬಳಸುವುದಾರೆ ಆ ನೀರಿನಲ್ಲಿ ಫ್ಲೂರೈಡ್ಡ್ ಇರಲ್ಲ ಇದರಿಂದ ಕೂಡ ಹಲ್ಲುಗಳಲ್ಲಿ ಕ್ಯಾವಿಟಿ ಉಂಟಾಗುವುದು. ನೆಲ್ಲಿ ಅಥವಾ ನೈಸರ್ಗಿಕವಾಗಿ ಸಿಗುವ ನೀರಿನಲ್ಲಿ ಫ್ಲೂರೈಡ್ಡ್ ಅಂಶ ಇರುತ್ತದೆ. ನೀವು ಫ್ಲೂರೈಡ್ಡ್ ಇಲ್ಲದ ನೀರು ಬಳಸುತ್ತಿದ್ದರೆ ದಂತ ವೈದ್ಯರನ್ನು ಸಂಪರ್ಕಿಸಿ ಆಗ ಅವರು ನಿಮಗೆ ಕೆಲ ಪೇಸ್ಟ್ ಸಜೆಸ್ಟ್ ಮಾಡಬಹುದು.
ಈ ಬಗೆಯ ತಿನಿಸುಗಳನ್ನು ಕಡಿಮೆ ಮಾಡಿ
ತಂಪು ಪಾನೀಯಗಳು, ಸಕ್ಕರೆ ಹಾಕಿದ ಜ್ಯೂಸ್, ಕ್ಯಾಂಡಿ, ಮಿಠಾಯಿ ಇಂಥ ತಿನಿಸುಗಳನ್ನು ತಿನ್ನುವುದರಿಂದ ಹುಳು ಹಲ್ಲಿನ ಸಮಸ್ಯೆ ಹೆಚ್ಚಾಗುವುದು. ಅಲ್ಲದೆ ಸಿಹಿಯಾದ ಔಷಧಿ ನೀಡಿದ ಬಳಿಕ ಕೂಡ ನೀವು ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಹಲ್ಲುಗಳು ಹಾಳಾಗುವುದು. ಮಕ್ಕಳು ಸಿಹಿ ತಿಂದ ಮೇಲೆ ಬಾಯಿ ತೊಳೆದು ಮಲಗಿಸಿ, ಇಲ್ಲದಿದ್ದರೆ ಹಲ್ಲುಗಳಲ್ಲಿ ಕ್ಯಾವಿಟಿ ಸಮಸ್ಯೆ ಹೆಚ್ಚಾಗುವುದು. ರಾತ್ರಿ ಮಲಗುವ ಮುನ್ನ ಬ್ರೆಷ್ ಮಾಡುವ ಅಭ್ಯಾಸ ರೂಢಿಸಿ.
ಯಾವಾಗ ವೈದ್ಯರಿಗೆ ತೋರಿಸಬೇಕು?
ನಿಮ್ಮ ಮಗು ಹಲ್ಲುನೋವು ಎಂದು ಹೇಳಿದರೆ ನೀವು ದಂತ ವೈದ್ಯರಿಗೆ ತೋರಿಸಬೇಕು. ಪೀಡಿಯಾಟ್ರಿಕ್ ಡೆಂಟಿಸ್ಟ್ ಬಳಿ ಕರೆದುಕೊಂಡು ಹೋಗಿ, ಅವರು ನಿಮ್ಮ ಮಗುವಿಗೆ ಅಗ್ಯತವಿರುವ ಚಿಕಿತ್ಸೆ ನೀಡುತ್ತಾರೆ. ನಿಮ್ಮ ಮಗುವಿನ ಹಲ್ಲು ತುಂಬಾ ಹಾಳಾಗಿದ್ದರೆ ಹಲ್ಲನ್ನು ಸ್ವಚ್ಛಗೊಳಿಸಿ ಸ್ಟೈನ್‌ಲೆಸ್ ಸ್ಟೀಲ್ ಅಥವಾ ಸೆರಾಮಿಕ್ ಕ್ರೌನ್ಸ್ ಹಾಕುತ್ತಾರೆ. ಈ ಸೆರಾಮಿಕ್ ಕ್ರೌನ್ಸ್ ಹಲ್ಲು ಬಿದ್ದು ಹೋಗುವಾಗ ಹೋಗುವುದರಿಂದ ಇದರಿಂದ ಹೊಸ ಹಲ್ಲು ಬರುವಾಗ ಯಾವುದೇ ತೊಂದರೆಯಿಲ್ಲ.
ಮಗುವಿನ ಹಲ್ಲುಗಳ ಬಗ್ಗೆ ಆರಂಭದಲ್ಲಿಯೇ ಗಮನ ನೀಡಿದರೆ ಹಲ್ಲು ಹುಳಾಗುವುದನ್ನು ತಡೆಗಟ್ಟಬಹುದು, ಕೆಲವೊಮ್ಮೆ ಎಷ್ಟೇ ಕಾಳಜಿ ಮಾಡಿದರೂ ಹಲ್ಲುಗಳಲ್ಲಿ ಕ್ಯಾವಿಡಿ ಕಂಡು ಬರುವುದು, ಪ್ರಾರಂಭದಲ್ಲಿ ಮಕ್ಕಳ ದಂತ ವೈದ್ಯರಿಗೆ ತೋರಿಸಿದರೆ ಉಳಿದ ಹಲ್ಲುಗಳಿಗೆ ಕ್ಯಾವಿಟಿ ಹರಡುವುದನ್ನು ತಡೆಗಟ್ಟಬಹುದು.



Click it and Unblock the Notifications

