Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
30 ನಂತರ ಗರ್ಭದಾರಣೆಗೆ ಪ್ರಯತ್ನಿಸುತ್ತಿದ್ದೀರಾ? ತಯಾರಿ ಹೀಗಿರಲಿ
ಈಗೆಲ್ಲಾ ದಂಪತಿ ಮಗುವಿನ ಪ್ಲ್ಯಾನ್ ಮಾಡುವಾಗ ವಯಸ್ಸು 30 ಆಸುಪಾಸಿನಲ್ಲಿರುತ್ತದೆ. ವಿದ್ಯಾಭ್ಯಾಸ, ಉದ್ಯೋಗ ಅಂತೆಲ್ಲಾ ಆಗಿ ಮದುವೆ ಬಗ್ಗೆ ಆಲೋಚನೆ ಮಾಡುವಾಗ ವಯಸ್ಸು 25 -27 ಆಗಿರುತ್ತದೆ. ಇನ್ನು ಕೆಲವರು ಮದುವೆ ಬಗ್ಗೆ ಆಲೋಚನೆ ಮಾಡುವಾಗಲೇ 30 ವರ್ಷ ಕಳೆದಿರುತ್ತದೆ.

ಹೀಗಾಗಿ ಮದುವೆಯಾಗಿ ಮಗು ಬಗ್ಗೆ ಪ್ಲ್ಯಾನ್ ಮಾಡುವಾಗ ಒಂದೋ 30 ವರ್ಷ ಅಥವಾ ಅದಕ್ಕಿಂತ ಹೆಚ್ಚಾಗಿರುತ್ತದೆ. 30 ವರ್ಷದೊಳಗೆ ಮಗು ಮಾಡಿಕೊಳ್ಳುವುದಾದರೆ ತೊಂದರೆಯಿಲ್ಲ, ಆದರೆ 30 ವರ್ಷದ ಬಳಿಕ ಮಗು ಮಾಡಿಕೊಳ್ಳುವುದಾದರೆ ಕೆಲವೊಬ್ಬರಿಗೆ ಕೆಲ ಸವಾಲುಗಳು ಎದುರಾಗಬಹುದು. ಆದ್ದರಿಂದ 30 ವರ್ಷದ ನಂತರ ನೀವು ಮಗುವಿಗಾಗಿ ಫ್ಲ್ಯಾನ್ ಮಾಡಿದರೆ ಕೆಲವೊಂದು ತಯಾರಿ ಮಾಡಿದರೆ ಗರ್ಭಧಾರಣೆಯಾಗಿ ಆರೋಗ್ಯಕರ ಮಗುವನ್ನು ಪಡೆಯಬಹುದು:
30 ನಂತರ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದೀರಾ?
ಪ್ಲ್ಯಾನ್ ಮಾಡಿ: ಹೌದು ನೀವು ಮಗು ಮಾಡಿಸುವ ಮುನ್ನ ಹೆಲ್ತ್ ಇನ್ಸೂರೆನ್ಸ್ ತೆಗೆದುಕೊಳ್ಳಿ, ಇದರಿಂದ ಹೆರಿಗೆಯಾದಾಗ ಆರ್ಥಿಕವಾಗಿ ಹೊರೆಯಾಗಲ್ಲ. ಅಲ್ಲದೆ ಹೆರಿಗೆಗೆ ಅಂತಲೇ ಒಂದು ಅಮೌಂಟ್ ರೆಡಿ ಮಾಡುವುದು ಒಳ್ಳೆಯದು. ಈಗೆಲ್ಲಾ ಆಸ್ಪತ್ರೆಗೆ ಹೆರಿಗೆಗೆ ಅಂತ ಹೋದರೆ ತುಂಬಾನೇ ಬಿಲ್ ಬರುವುದು, 30 ವರ್ಷದ ಬಳಿಕ ಗರ್ಭಧಾರಣೆಯಾದರೆ ಸಿ ಸೆಕ್ಷನ್ ಸಾಧ್ಯತೆ ಹೆಚ್ಚು. ಆದ್ದರಿಂದ ಹಣದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡರೆ ಮತ್ತೆ ಹೊರೆ ಅನಿಸಲ್ಲ.
ದೈಹಿಕ ತಪಾಸಣೆ ಮಾಡಿ
ಮೂವತ್ತು ವರ್ಷದ ಬಳಿಕ ನೀವು ಗರ್ಭಧಾರಣೆಗೆ ಪ್ರಯತ್ನಿಸುವುದಾದರೆ ಮೊದಲು ದೈಹಿಕ ತಪಾಸಣೆ ಮಾಡಿಸಿ ಅಥವಾ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ. ಅವರು ನಿಮಗೆ ಫಾಲಿಕ್ ಆಮ್ಲ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ. ಈ ಫಾಲಿಕ್ ಆಮ್ಲ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುತ್ತದೆ.
ತಡಮಾಡಬೇಡಿ: ನೀವು ಗರ್ಭಧಾರಣೆಗೆ ಪ್ರಯತ್ನಿಸಿ ಒಂದು ವರ್ಷವಾದರೂ ಗರ್ಭಧಾರಣೆಯಾಗದೇ ಹೋದರೆ ತುಂಬಾ ತಡಮಾಡಲು ಹೋಗಬೇಡ, ಕೂಡಲೇ ಗರ್ಭಧಾರಣೆಗೆ ಅಗ್ಯತವಿರುವ ಚಿಕಿತ್ಸೆ ಪಡೆದುಕೊಳ್ಳಿ, ವರ್ಷಗಳು ಹೆಚ್ಚಾದಷ್ಟು ಸಮಸ್ಯೆ ಹೆಚ್ಚಾಗುವುದು. ತುಂಬಾ ಲೇಟಾಗಿ ಮಗುವಾದರೆ ಸಾಕು ಅನ್ನುವುದಾದರೆ ಎಗ್ ಫ್ರೀಜಿಂಗ್ ಮಾಡಬಹುದು. ಹಣದ ತೊಂದರೆಯೇನೂ ಇಲ್ಲ ಅನ್ನುವವರು ಈ ವಿಧಾನ ಬಳಸಿಕೊಳ್ಳಬಹುದು.
ಮೈ ತೂಕದ ಕಡಗೆ ಗಮನಹರಿಸಿ
ನೀವು ಮಗುವನ್ನು ಪಡೆಯಲು ಬಯಸುವುದಾದರೆ ನಿಮ್ಮ ಮೈ ತೂಕದ ಕಡೆಗೆ ಗಮನಹರಿಸಿ. ತುಂಬಾ ದಪ್ಪಗಿದ್ದರೆ ಆರೋಗ್ಯಕರ ಮೈ ತೂಕ ಹೊಂದಲು ಪ್ರಯತ್ನಿಸಿ. ಕ್ರಾಷ್ ಡಯಟ್ ಅಂತೆಲ್ಲಾ ಮಾಡಿ ಇರುವ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಬದಲಿಗೆ ವ್ಯಾಯಾಮ ಹಾಗೂ ಆರೋಗ್ಯಕರ ಆಹಾರಕ್ರಮದ ಕಡೆ ಗಮನ ನೀಡಿ. ಪ್ರತಿದಿನ ವ್ಯಾಯಾಮ ಮಾಡಿ ಹಾಗೂ ಆರೋಗ್ಯಕರ ಆಹಾರಕ್ರಮ ಪಾಲಿಸಿ.
ಈ ಬಗೆಯ ಆಹಾರ ಸೇವಿಸಿ
ಬೀನ್ಸ್, ಧಾನ್ಯಗಳು
ಸೂರ್ಯಕಾಂತಿ ಬೀಜ
ಹಣ್ಣುಗಳು
ಬೆಣ್ಣೆಹಣ್ಣು
ನವಣೆ
ಚೀಸ್
ಯೋಗರ್ಟ್
ಮೀನು
ವಾಲ್ನಟ್
ಮೊಟ್ಟೆ (ಹಳದಿ ಸಹಿತ)
ವ್ಯಾಯಾಮ: ದಿನಾ ವಾಕ್ ಮಾಡಿ , ಯೋಗಾಸನಗಳನ್ನು ಮಾಡಿ ಇವೆಲ್ಲಾ ನಿಮ್ಮಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ.
ಸವಾಲುಗಳನ್ನು ಧೈರ್ಯವಾಗಿ ಎದುರಿಸಿ
30 ನಂತರ ಗರ್ಭಧಾರಣೆಗೆ ಯತ್ನಿಸುವಾಗ ಕೆಲವೊಬ್ಬರು ಕೆಲವೊಂದು ಸವಾಲುಗಳನ್ನು ಎದುರಿಸಬಹುದು. ಏಕೆಂದರೆ 30 ವರ್ಷದ ನಂತರ ಅಂಡೋತ್ಪತ್ತಿ ಕಡಿಮೆಯಾಗಬಹುದು, ಪುರುಷರಿಗೆ 35 ದಾಟಿದ್ದರೆ ವೀರ್ಯಾಣುಗಳು ಕಡಿಮೆಯಾಗಿರಬಹುದು. ಕೆಲವರಿಗೆ ಪಿಸಿಒಡಿ, ಥೈರಾಯ್ಡ್ ಮುಂತಾದ ಹಾರ್ಮೋನ್ ಸಮಸ್ಯೆಗಳು ಈ ವಯಸ್ಸಿನಲ್ಲಿ ಕಾಡಲಾರಂಭಿಸುತ್ತದೆ. ಈ ಎಲ್ಲಾ ಕಾರಣದಿಂದ ಗರ್ಭದಾರಣೆಗೆ ಕಷ್ಟವಾಗಬಹುದು. ಏನಾದರೂ ಸಮಸ್ಯೆಯಿದ್ದರೆ ಧನಾತ್ಮಕವಾಗಿ ಎದುರಿಸಿ. ಮನೆಯವರು ಒತ್ತಡ ಕೂಡ ಈ ಸಮಯದಲ್ಲಿ ಅಧಿಕವಿರುತ್ತದೆ, ಮಗುವಾಗಿಲ್ಲ ಎಂದು ಬೇಸರ ಪಡುವ ಬದಲಿಗೆ ಆಗುತ್ತೆ ಎಂಬ ಭರವಸೆಯೊಂದಿಗೆ ಮುಂದುವರೆಯಿರಿ, ಖಂಡಿತ ಗರ್ಭಧಾರಣೆಯಾಗಿ ಮುದ್ದಾದ ಮಗು ನಿಮ್ಮ ಮಡಿಲು ತುಂಬುವುದು.



Click it and Unblock the Notifications

