Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಾವಸ್ಥೆಯಲ್ಲಿ ಕಾಡುವ ಸಯಾಟಿಕ ನೋವು ಕಡಿಮೆ ಮಾಡುವುದು ಹೇಗೆ?
ಮಗುವೊಂದು ನಮ್ಮ ಹೊಟ್ಟೆಯಲ್ಲಿದೆ ಎಂದು ತಿಳಿದ ಕ್ಷಣದಿಂದ ತಾಯಿಗೆ ಎಷ್ಟು ಖುಷಿಯಾಗುತ್ತದೋ ಆ ಮಗುವನ್ನು ಈ ಭೂಲೋಕಕ್ಕೆ ತರಲು ಅಷ್ಟೇ ಕಷ್ಟಗಳನ್ನು ಅನುಭವಿಸಿರುತ್ತಾರೆ.
ಎಲ್ಲರಿಗೂ ಗರ್ಭಾವಸ್ಥೆಯಲ್ಲಿ ಒಂದೇ ರೀತಿ ಇರುವುದಿಲ್ಲ. ಕೆಲವರು ತುಂಬಾ ಆರಾಮವಾಗಿ ಇರುತ್ತಾರೆ. ಇನ್ನು ಕೆಲವರು ಆ ಒಂಭತ್ತು ತಿಂಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಸುಸ್ತು, ತಲೆನೋವು, ವಾಂತಿ, ಕಾಲುಗಳಲ್ಲಿ ಊತ, ಸ್ನಾಯು ಸೆಳೆತ ಹೀಗೆ ಹತ್ತಾರು ಸಮಸ್ಯೆಗಳಿರುತ್ತದೆ. ಇನ್ನು ಕೆಲವರಿಗೆ ಗರ್ಭಾವಸ್ಥೆಯಲ್ಲಿ ಸಯಾಟಿಕ ಸಮಸ್ಯೆ ಉಂಟಾಗುವುದು.

ಸಯಾಟಿಕ್ ನರ ಎಂದರೇನು?
ಈ ನರ ಗರ್ಭಕೋಶದಿಂದ ಕಾಲಿನವರೆಗೆ ಹೋಗುವುದು. ಇದು ದೇಹದಲ್ಲಿರುವ ದೊಡ್ಡ ನರವಾಗಿದೆ. ಇದು ದೇಹದ ಕೆಳಗಿನ ಭಾಗದ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುವ ಕಾರ್ಯವನ್ನು ಮಾಡುತ್ತದೆ.
ಸಯಾಟಿಕ ಎಂದರೇನು?
ಸಯಾಟಿಕ ನರದಲ್ಲಿ ನೋವು ಉಂಟಾಗುವುದನ್ನು ಸಯಾಟಿಕ ಎಂದು ಕರೆಯಲಾಗುವುದು. ಬೆನ್ನು, ಹಿಂಬದಿ ಹಾಗೂ ಕಾಲಿನ ಭಾಗದಲ್ಲಿ ತುಂಬಾ ನೋವು ಉಂಟಾಗುವುದು, ಅದರಲ್ಲೂ ಗರ್ಭಾವಸ್ಥೆಯಲ್ಲಿ ಈ ನೋವು ತುಂಬಾನೇ ಸಾಮಾನ್ಯ.
ಗರ್ಭಾವಸ್ಥೆಯಲ್ಲಿ ಸಯಾಟಿಕ ನೋವು ಬರಲು ಕಾರಣವೇನು?
ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ಗಳಲ್ಲಿ ಬದಲಾವಣೆಯಾಗುತ್ತದೆ, ಅಲ್ಲದೆ ಗರ್ಭಕೋಶವು ಹೆರಿಗೆಗೆ ಸಿದ್ಧತೆ ಮಾಡುತ್ತಿರುತ್ತದೆ. ಅಲ್ಲದೆ ಮಗುವಿನ ಮೈ ತೂಕ ಹೆಚ್ಚಾಗುತ್ತಿದ್ದಂತೆ ಗರ್ಭಕೋಶದ ಮೇಲೆ ಒತ್ತಡ ಉಂಟಾಗುತ್ತದೆ, ಹೀಗಾಗಿ ಸಯಾಟಿಕ ನರದಲ್ಲಿ ನೋವು ಕಂಡು ಬರುವುದು.
ಸಯಾಟಿಕ ನೋವು ಉಂಟಾದಾಗ ಕಡಿಮೆ ಮಾಡುವುದು ಹೇಗೆ?
ಸಯಾಟಿಕ ನೋವು ಬಂದಾಗ ಗರ್ಭಿಣಿಯರು ಈ ನೋವಿನಿಂದ ಪಾರಾದರೆ ಸಾಕು ಎಂದು ಒದ್ದಾಡಿಬಿಡುತ್ತಾರೆ, ಅಷ್ಟೊಂದು ನೋವಿರುತ್ತದೆ. ಈ ಸಮಯದಲ್ಲಿ
* ನೀವು ಪ್ರೆಗ್ನೆನ್ಸಿ ಪಿಲ್ಲೋ (ದಿಂಬು) ಇಟ್ಟು ಒಂದು ಬದಿಯಲ್ಲಿ ತಿರುಗಿ ಮಲಗಿ, ಆಗ ನೋವು ಸ್ವಲ್ಪ ಕಡಿಮೆಯಾಗುತ್ತದೆ.
* ತುಂಬಾ ಹೊತ್ತು ನಿಲ್ಲಬೇಡಿ, ಒಂದು ವೇಳೆ ನಿಲ್ಲಲೇ ಬೇಕಾಗಿ ಬಂದರೆ (ಕೆಲವು ಕೆಲಸದಲ್ಲಿ ತುಂಬಾ ಹೊತ್ತು ನಿಲ್ಲಬೇಕಾಗುತ್ತದೆ) ಒಂದು ಕಾಲನ್ನು ಬಾಕ್ಸ್ ಮೇಲೆ ಇಟ್ಟು ನಿಲ್ಲಿ ಇದರಿಂದ ನೋವು ಉಂಟಾಗುವುದನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು.
* ಈಜು ಗೊತ್ತಿದ್ದರೆ ಈಜುವ ವ್ಯಾಯಾಮ ಮಾಡಿ.
* ಬಿಸಿ ನೀರಿನ ಸ್ನಾನ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಲ್ಲದಿದ್ದರೆ ಕೋಲ್ಡ್ ಪ್ಯಾಕ್ ಇಟ್ಟರೂ ನೋವು ಕಡಿಮೆಯಾಗುವುದು.
* ಭಾರವಾದ ವಸ್ತುಗಳನ್ನು ಎತ್ತಬೇಡಿ.
ಸಯಾಟಿಕ ನೋವು ಕಡಿಮೆ ಮಾಡಲು ವಾಕ್, ನಿದ್ದೆ ಸಹಾಯ ಮಾಡುತ್ತೆ
ಗರ್ಭಿಣಿಯರು ನಡೆಯುವುದರಿಂದ ಉರಿಯೂತದ ಸಮಸ್ಯೆ ಕಡಿಮೆಯಾಗುವುದು. ಆದರೆ ನಡೆಯುವ ವ್ಯಾಯಾಮ ಮಾಡುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ. ಏಕೆಂದರೆ ಒಬ್ಬರ ದೇಹದ ಸ್ಥಿತಿ ಮತ್ತೊಬ್ಬರಂತೆ ಇರಲ್ಲ. ಆದ್ದರಿಂದ ನಿಮ್ಮ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ವಾಕ್(ನಡೆಯುವುದು) ಮಾಡಿ.
ನಿದ್ದೆ
ಬೆನ್ನ ಮೇಲೆ ಮಲಗಬೇಡಿ, ದಿಂಬು ಇಟ್ಟು ಒಂದು ಬದಿಗೆ ತಿರುಗಿ ಮಲಗಿ. ಇದರಿಂದ ಸಯಾಟಿಕ ನೋವು ಕಡಿಮೆ ಮಾಡಲು ಸಹಕಾರಿ.
ಇತರ ಟಿಪ್ಸ್
* ಮಸಾಜ್ ಮಾಡಿಸಿ: ಪರಿಣಿತರ ಬಳಿ ಮಾತ್ರ ಮಾಡಿಸಿ, ಇದರಿಂದ ನೋವು ಕಡಿಮೆಯಾಗುವುದು.
* ಗರ್ಭಿಣಿಯಾಗಿದ್ದಾಗ ಯೋಗ ಮಾಡಿ: ಇದು ಕೂಡ ಅಷ್ಟೇ ಪರಿಣಿತರ ಮಾರ್ಗದರ್ಶನದಲ್ಲಿ ಮಾಡಿ.
* ಫಿಸಿಕಲ್ ಥೆರಪಿ : ಇದು ರಕ್ತ ಸಂಚಾರ ಸರಾಗವಾಗಿ ನಡೆಯಲು, ಉರಿಯೂತ ಕಡಿಮೆ ಮಾಡಲು ಸಹಕಾರಿ.



Click it and Unblock the Notifications

