Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಡೌನ್ ಸಿಂಡ್ರೋಮ್:ಆ ಮಕ್ಕಳ ಒಳ್ಳೆಯ ಭವಿಷ್ಯಕ್ಕೆ ಏನು ಮಾಡಬೇಕು? ಈ ಸಮಸ್ಯೆಯಿದ್ದರೆ ಗರ್ಭಿಣಿಯಾಗಿದ್ದಾಗಲೇ ತಿಳಿಯುವುದೇ?
ಮಾರ್ಚ್ 21ನ್ನು ವಿಶ್ವ ಡೌನ್ ಸಿಂಡ್ರೋಮ್ ದಿನವನ್ನಾಗಿ ಆಚರಿಸಲಾಗುವುದು. ಡೌನ್ ಸಿಂಡ್ರೋಮ್ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ಅವರೂ ಈ ಸಮಾಜದಲ್ಲಿ ಉತ್ತಮವಾಗಿ ಬದುಕಲು ಏನು ಮಾಡಬೇಕು ಎಂದು ಜಾಗ್ರತೆ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು.
ಮಗು ಯಾವ ಕಾರಣಕ್ಕೆ ಡೌನ್ ಸಿಂಡ್ರೋಮ್‌ನಿಂದ ಹುಟ್ಟುತ್ತದೆ ಎಂಬುವುದಕ್ಕೆ ಕೆಲವು ಕಾರಣಗಳನ್ನು ವೈದ್ಯರು ಹೇಳುತ್ತಾರೆ, ಆದರೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಗರ್ಭಿಣಿಯಾಗಿದ್ದಾಗ ಕ್ರೋಮೋಸೋಮ್ 21 ಸಮಸ್ಯೆಯಿಂದಾಗಿ ಮಗು ಡೌನ್ ಸಿಂಡ್ರೋಮ್(ವಿಶೇಷ ಚೇತನವಾಗಿ) ಆಗಿ ಹುಟ್ಟುವುದು.

ಈ ಡೌನ್ ಸಿಂಡ್ರೋಮ್ ಯಾವ ತಾಯಿಯ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವುದು?
ತಾಯಿಗೆ ಪ್ರಾಯವಾಗಿದ್ದರೆ 35-40 ಅಥವಾ ಅಧಿಕ ಹೆಚ್ಚಿನ ವಯಸ್ಸಿನ ತಾಯಿಂದಿರ ಮಗುವಿನಲ್ಲಿ ಈ ಸಮಸ್ಯೆ ಕಂಡು ಬರುವುದು.
ಆಗಾಗ ಗರ್ಭಪಾತವಾಗಿದ್ದರೆ
ಅಂಗವೈಕಲ್ಯಯಿದ್ದರೆ
ಅಧಿಕ ರಕ್ತದೊತ್ತಡ
ಥೈರಾಯ್ಡ್
ಮಧುಮೇಹದ ಸಮಸ್ಯೆ
ಈ ಬಗೆಯ ಸಮಸ್ಯೆ ತಾಯಿಯಲ್ಲಿ ಇದ್ದರೆ ಮಗುವಿನಲ್ಲಿ ಡೌನ್ ಸಿಂಡ್ರೋಮ್ ಸಾಧ್ಯತೆ ಅಧಿಕವಿರುತ್ತದೆ.
ಈ ಡೌನ್ ಸಿಂಡ್ರೋಮ್ ಬಗ್ಗೆ ಗರ್ಭಾವಸ್ಥೆಯಲ್ಲಿಯೇ ತಿಳಿಯುವುದೇ?
ಗರ್ಭಾವಸ್ಥೆಯಲ್ಲಿ ಶೇ. 80ರಷ್ಟು ತಿಳಿಯುವ ಸಾಧ್ಯತೆ ಇದೆ. ಗರ್ಭಿಣಿಯಾದ 11-14 ವಾರಗಳಲ್ಲಿ ಪರೀಕ್ಷೆ ಮಾಡಿದರೆ ತಿಳಿಯುವುದು. ಇದನ್ನು ಡಬಲ್ ಮಾರ್ಕರ್ ಪರೀಕ್ಷೆಎಂದು ಹೇಳಲಾಗುವುದು, ಇದರಲ್ಲಿ ಶೇ. 80ರಷ್ಟು ತಿಳಿಯಬಹುದು. ಇನ್ನು 35 ವರ್ಷ ಕಳೆದು ಗರ್ಭಧಾರಣೆಯಾದರೆ ವೈದ್ಯರೇ ಡಿಎನ್‌ಎ ಪರೀಕ್ಷೆ ಮಾಡಲು ಹೇಳಬಹುದು, ಅವರು ಹೇಳದಿದ್ದರೆ ನೀವೇ ಇದರ ಬಗ್ಗೆ ಕೇಳಿ.
ಎರಡನೇಯ ತ್ರೈಮಾಸಿಕದಲ್ಲಿ ಮಲ್ಟಿಪಲ್ ಮಾರ್ಕರ್ ಸ್ಕ್ರೀನಿಂಗ್, ಸ್ವ್ಯಾಡ್ ಸ್ಕ್ರೀನಿಂಗ್ ಮಾಡಿದರೆ ಶೇ.80ರಷ್ಟು ತಿಳಿದು ಬರುವುದು. ಆದರೆ 100ರಷ್ಟು ದೃಢವಾಗಿ ಹೇಳಲು ಸಾಧ್ಯವಿಲ್ಲ . ಗರ್ಭಿಣಿಯಾಗಿದ್ದಾಗ ಮಹಿಳೆಯರು ಆರೋಗ್ಯಕರ ಆಹಾರದ ಕಡೆಗೆ ತುಂಬಾನೇ ಗಮನಹರಿಸಬೇಕು.
ಡೌನ್ ಸಿಂಡ್ರೋಮ್ ಮಕ್ಕಳನ್ನು ಹೇಗೆ ಆರೈಕೆ ಮಾಡಬೇಕು?
ಅವರು ಹೊಸದಾಗಿ ಏನಾದರೂ ಕಲಿತಾಗ ಅವರನ್ನು ಹೊಗಳಿ
ಅವರ ಬಳಿ ಸ್ಪಷ್ಟವಾಗಿ, ನಿಧಾನಕ್ಕೆ ಹೇಳಿ ಅರ್ಥ ಮಾಡಿಕೊಳ್ಳುತ್ತಾರೆ.
ಅವರ ಜೊತೆ ಹಾಡು ಹೇಳಿ, ಆಟವಾಡಿ, ಅವರು ಈ ರೀತಿ ಮಾಡಿದರೆ ಹೊಸದನ್ನು ಕಲಿಯುತ್ತಾ ಹೋಗುತ್ತಾರೆ.
ಅವರಿಗೆ ಏನಾದರೂ ಹೇಳುವ ಬದಲಿಗೆ ನೀವು ಮಾಡಿ ತೋರಿಸಿ
ಅವರಿಗೆ ಅವರ ಕೆಲಸ ಮಾಡಲು ಕಲಿಸಿ
ಅವರ ಸ್ವಭಾವ ಗಮನಿಸಿ, ಅವರು ಎಲ್ಲವನ್ನೂ ಹೇಳುವುದಿಲ್ಲ, ಆದರೆ ಅವರು ಬೇಸರ, ಖುಷಿ, ದುಃಖ ವ್ಯಕ್ತಪಡಿಸುವ ಮೂಲಕ ತಮ್ಮ ಭಾವನೆ ಹೇಳುತ್ತಾರೆ, ಅದರತ್ತ ಗಮನಹರಿಸಿ.
ಏನು ಮಾಡಬಾರದು?
ಡೌನ್ ಸಿಂಡ್ರೋಮ್ ಮಕ್ಕಳ ಬಳಿ ಕೇಳುವ ಬದಲಿಗೆ ಅವರ ಪೋಷಕರ ಬಳಿ ಅವರ ಕುರಿತು ಕೇಳಬೇಡಿ, ಅವರ ಬಳಿಯೇ ಕೇಳಿ, ಆವಾಗ ಆ ಮಕ್ಕಳಿಗೆ ಇಷ್ಟವಾಗುವುದು.
ಅವರನ್ನು ಗದರುವುದು, ಹೊಡೆಯುವುದು, ಕೆಟ್ಟ ಪದ ಬಳಸಿ ಬೈಯ್ಯುವುದು ಮಾಡಬಾರದು.
ವೈದ್ಯಕೀಯ ಸಹಾಯ ಪಡೆಯಿರಿ
ಅವರಿಗೆ ಸ್ಪೀಚ್ ಥೆರಪಿ ಕೊಡಿಸಿ
ಕಿವಿ ಕೇಳಿಸುವ ಸಮಸ್ಯೆಯಿದ್ದರೆ ಮೆಷಿನ್ ಅಳವಡಿಸಿ
ಅವರ ಬೆಳವಣಿಗೆಗೆ ಸಹಾಯವಾಗು ಎಲ್ಲಾ ಬಗೆಯ ಥೆರಪಿ ಮಾಡಿಸಿ.
ಸ್ಪೆಷಲ್ ಸ್ಕೂಲ್ ಕಳುಹಿಸಿ
ಇವರನ್ನುಇತರ ಮಕ್ಕಳನ್ನು ಕಳುಹಿಸುವ ಶಾಲೆಗೆ ಕಳುಹಿಸಬೇಡಿ, ಬದಲಿಗೆ ಸ್ಪೆಷಲ್ ಸ್ಕೂಲ್‌ಗೆ ಕಳುಹಿಸಿ, ಅಲ್ಲಿ ಅವರಿಗೆ ಅಗ್ಯತವಿರುವ ಕೌಶಲ್ಯ ಕಲಿಸುತ್ತಾರೆ. ಇದು ಅವರ ಬದುಕು ಕಟ್ಟಿಕೊಳ್ಳಲು ಕೂಡ ನೆರವಾಗುವುದು.
ಪೋಷಕರಿಗೆ ಕೂಡ ಕೌನ್ಸಿಲಿಣಗ್ ಅಗ್ಯತವಿರುತ್ತದೆ. ಮಗು ಜನಿಸಿದಾಗ ಗೊತ್ತಾಗುವುದಿಲ್ಲ, ಬೆಳೆಯುತ್ತಾ ಗೊತ್ತಾಗುವುದು, ಇದು ಪೋಷಕರಿಗೂ ದೊಡ್ಡ ಶಾಕ್ ಉಂಟು ಮಾಡುತ್ತದೆ, ಈ ಸಂದರ್ಭದಲ್ಲಿಯೂ ಮನೆಯವರು ಅವರಿಗೂ ಧೈರ್ಯ ತುಂಬಬೇಕು, ಹಾಗೂ ಮಗುವಿನ ಭವಿಷ್ಯವನ್ನು ಸುರಕ್ಷಿತ ಮಾಡಲು ಎಲ್ಲಾ ಪ್ರಯತ್ನ ಮಾಡಬೇಕು. ಈ ಮಕ್ಕಳು ಒಂದು ಒಳ್ಳೆಯ ಬದುಕು ಕಟ್ಟಿಕೊಳ್ಳುವ ಎಲ್ಲಾ ವ್ಯವಸ್ಥೆ ಕಲ್ಪಸಬೇಕು, ಅವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಕೂಡ ಕೊಡಿಸಬೇಕು.



Click it and Unblock the Notifications
