Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳು ಅಡ್ಡದಾರಿ ಹಿಡಿದಿದ್ದಾರೆ ಎಂದು ಪತ್ತೆ ಮಾಡೋದು ಹೇಗೆ? ಈ ಲಕ್ಷಣ ಇದ್ದರೆ ಗಮನ ನೀಡಿ!
ಇತ್ತೀಚಿಗೆ ಯುವ ಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಚಿಕ್ಕ ವಯಸ್ಸಿನಲ್ಲೇ ಗುಟ್ಕಾ, ಜೂಜು, ಮದ್ಯಪಾನದಂತಹ ಚಟಗಳಿಗೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಓದಿ ಒಳ್ಳೆಯ ಕೆಲಸ ತೆಗೆದುಕೊಂಡು ಜೀವನದಲ್ಲಿ ಸಾಧನೆ ಮಾಡಬೇಕಾದ ಸಮಯದಲ್ಲಿ ಈ ದಶ್ಚಟಗಳ ದಾಸರಾಗಿ ಜೀವ ಹಾಳು ಮಾಡಿಕೊಳ್ಳುತ್ತಾರೆ.
ಆದರೆ ಪೋಷಕರು ಸರಿಯಾದ ಸಮಯದಲ್ಲಿ ಅವರನ್ನು ತಿದ್ದಿ ತೀಡಿದರೆ ಸರಿ ದಾರಿಗೆ ಬರುತ್ತಾರೆ. ಆದ್ರೆ ಅವರು ದಾರಿ ತಪ್ಪಿದ್ದಾರೆ ಎಂದು ಕಂಡುಹಿಡಿಯುವುದು ಹೇಗೆ? ಹೌದು ಮಕ್ಕಳು ದಾರಿ ತಪ್ಪಿರುವುದು ಕಂಡು ಹಿಡಿಯುವುದೇ ಕಷ್ಟ. ಏಕೆಂದರೆ ದುಶ್ಚಟಗಳಿಗೆ ಒಳಗಾದವರು ಮನೆಯಲ್ಲಿ ತಿಳಿಯದಂತೆ ವ್ಯವಹರಿಸುತ್ತಾರೆ.

ಹಾಗಾದ್ರೆ ಮಕ್ಕಳು ದುಶ್ಚಟಗಳಿಗೆ ಒಳಗಾಗಿದ್ದರೆ ಅವರನ್ನು ಕಂಡು ಹಿಡಿಯುವುದು ಹೇಗೆ? ದುಶ್ಚಟಗಳಿಗೆ ಒಳಗಾದ ಮಕ್ಕಳ ವರ್ತನೆ ಹೇಗಿರುತ್ತದೆ. ಅವರು ನಿಮ್ಮಿಂದ ಸತ್ಯ ಮುಚ್ಚಿಡುತ್ತಿದ್ದಾರೆ ಎಂಬುದನ್ನು ಕಂಡುಕೊಳ್ಳುವುದು ಹೇಗೆ? ಎಂಬುದನ್ನು ನಾವಿಂದು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
ಮಕ್ಕಳ ಬ್ಯಾಗ್, ಪರ್ಸ್ ಹಣಕಾಸಿನ ವ್ಯವಹಾರದ ಮೇಲೆ ಗಮನವಿರಲಿ
ನಿಮ್ಮ ಮಕ್ಕಳು ಕಾಲೇಜು ಮೆಟ್ಟಿಲು ಹತ್ತಿದ್ದರೆ ಅವರ ಬ್ಯಾಗ್ ಚೆಕ್ ಮಾಡುವುದು ಉತ್ತಮ. ಆದ್ರೆ ಅವರನ್ನು ಅಪರಾಧಿಯಂತೆ ನಿಲ್ಲಿಸಿ ಬ್ಯಾಗ್ ಚೆಕ್ ಮಾಡಬೇಡಿ. ಇನ್ನು ಅವರ ವ್ಯಾಲೆಟ್‌ಗಳ ಚೆಕ್ ಮಾಡಿ ನೋಡಿ. ಜೇಬಿನಲ್ಲಿ ಗುಟ್ಕಾ ಪ್ಯಾಕ್‌ಗಳು ಇಟ್ಟಿರಬಹುದು. ಜೊತೆಗೆ ಅವರಿಗೆ ನೀಡುವ ಹಣ ಹಾಗೂ ಅವರ ವ್ಯವಹಾರಗಳ ಕುರಿತು ನಿಮ್ಮ ಗಮನ ಇರಲಿ.
ಮನೆಯಲ್ಲಿ ಮಾತು ಕಡಿಮೆ ಮಾಡುವರು
ನಿಮ್ಮ ಮಕ್ಕಳು ಇತ್ತೀಚಿಗೆ ಮನೆಯಲ್ಲಿ ಮಾತನಾಡುವುದು ಕಡಿಮೆ ಮಾಡಿರಬಹುದು. ಇದಕ್ಕೆ ಅವರು ದುಶ್ಚಟಕ್ಕೆ ಒಳಗಾಗಿರುವುದು ಸಹ ಕಾರಣವಾಗಿರಬಹುದು. ಏಕೆಂದರೆ ಮನೆಯಲ್ಲಿ ಈ ಕುರಿತು ಮಾತನಾಡಬಹುದು. ಇಲ್ಲವೆ ಮಾತನಾಡುವಾಗ ಆತನ ದುಶ್ಚಟಗಳ ಕುರಿತು ನೀವು ಪ್ರಶ್ನೆ ಮಾಡಬಹುದು ಎಂಬ ಭಯ ಅವರಲ್ಲಿರಬಹುದು.
ತಡವಾಗಿ ಮನೆಗೆ ಬರುವುದು
ಮಕ್ಕಳು ದುಶ್ಚಟಕ್ಕೆ ಒಳಗಾದರೆ ಮನೆಯಲ್ಲಿ ಏನಾದರು ನೆಪ ಹೇಳಿ ತಡವಾಗಿ ಬರಲು ಆರಂಭಿಸುತ್ತಾರೆ. ಜೊತೆಗೆ ಮದ್ಯಪಾನ, ಡ್ರಗ್ಸ್ ಸೇವನೆಗಾಗಿ ಅವರು ರಾತ್ರಿ ಸಮಯ ಆಯ್ಕೆ ಮಾಡಿಕೊಳ್ಳಬಹುದು. ಹೀಗಾಗಿ ತಡವಾಗಿ ಮನೆಗೆ ಬರುವ ಕಾರ್ಯ ಮಾಡಬಹುದು.
ಪ್ರವಾಸ, ಪಿಕ್‌ನಿಕ್
ಮಕ್ಕಳು ಆಗಾಗ ಪ್ರವಾಸ ಇಲ್ಲವೆ ಪಿಕ್ನಿಕ್ ಹೆಸರಲ್ಲಿ ಮನೆಯಿಂದ ಹೊರಗುಳಿಬಹುದು. ಈ ವೇಳೆ ಅವರ ಓಡಾಟದ ಮೇಲೆ ಗಮನವಿಡುವುದು ಉತ್ತಮ ಅವರು ಯಾವ ಸ್ನೇಹಿತನ ಜೊತೆ ತೆರಳಿದ್ದಾರೆ. ಅವರ ಹಿನ್ನಲೆ ಏನು ಎಂಬುದನ್ನು ತಿಳಿದಿದ್ದರೆ ಉತ್ತಮ.
ಚಾಕಲೆಟ್, ಗಮ್ಮೀಸ್, ಮಿಂಟ್ ಹೆಚ್ಚು ಸೇವಿಸುತ್ತಿದ್ದರೆ
ಒಂದು ವೇಳೆ ಮಕ್ಕಳು ಯಾವುದಾದರು ದುಶ್ಚಟಕ್ಕೆ ಒಳಗಾಗಿದ್ದರೆ ಅವರು ಬಾಯಿಯಿಂದ ವಾಸನೆ ಬಾರದೆ ಇರಲಿ ಎಂದು ಚಾಕಲೆಟ್‌ಗಳು, ಚ್ಯೂಯಿಂಗ್ ಗಮ್, ಮಿಂಟ್‌ಗಳು ಹಾಗೂ ಸುಗಂಧ ಭರಿತ ಏಲಕ್ಕಿ, ಅಡಿಗೆ ಪುಡಿಯಂತಹ ವಸ್ತುವನ್ನು ಸೇವಿಸಲು ಮುಂದಾಗುತ್ತಾರೆ. ಇಲ್ಲವೆ ಈ ಪ್ಯಾಕ್‌ಗಳು ನಿಮ್ಮ ಮಕ್ಕಳ ಬ್ಯಾಗ್, ವ್ಯಾಲೆಟ್, ಜೇಬಿನಲ್ಲಿ ಸಿಕ್ಕರೆ ಅವರ ಮೇಲೆ ಗಮನಹರಿಸುವುದು ಉತ್ತಮ.
ಮನೆಯಲ್ಲಿ ಹಣ ಕೇಳುವುದು
ಮಕ್ಕಳು ಯಾವುದೇ ವಿಚಾರಕ್ಕಾದರು ಮನೆಯಲ್ಲೇ ಹಣ ಕೇಳುತ್ತಿರುತ್ತಾರೆ, ಆದ್ರೆ ಓದುವಾಗ ಇಲ್ಲವೆ ಕೆಲಸಕ್ಕೆ ಹೋಗುವಾಗ ಯಾವಾಗಾದರು ಹಣ ಕೇಳಿದರೆ ಅನುಮಾನಬಾರದು. ಆದರೆ ಪದೆ ಪದೇ ಯಾವುದೋ ವಿಚಾರಗಳಿಗೆ ಹಣ ಕೇಳುತ್ತಾ ಇದ್ದರೆ ಇಂತಹ ಸಮಯದಲ್ಲಿ ಅವರ ನಡುವಳಿಕೆ ಮೇಲೆ ಗಮನವಿಡಬೇಕು. ಈ ಹಣವನ್ನು ಅವರು ಅನ್ಯ ಕೆಲಸಗಳಿಗೆ ಬಳಸುತ್ತಿರಬಹುದು.



Click it and Unblock the Notifications