Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮಕ್ಕಳು ತಿಂಡಿ,ಊಟ ಮಾಡುವಾಗ ಹಠ ಮಾಡುತ್ತಾರಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.!
ಇತ್ತೀಚಿಗೆ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೇಳುವ ಸಾಮಾನ್ಯ ದೂರು ಎಂದರೆ ಏನನ್ನೂ ತಿನ್ನುವುದಿಲ್ಲ ಎಂದು. ಎಲ್ಲಾ ಮಕ್ಕಳೂ ಊಟ, ತಿಂಡಿ ಮಾಡುವುದೆಂದರೆ ಮಾರುದ್ದ ಓಡಿ ಹೋಗುತ್ತಾರೆ. ಪೋಷಕರಿಗೆ ಊಟ ಮಾಡಿಸುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತೆ. ಇದು ಇಡೀ ದಿನದ ಸಾಹಸವೇ ಸರಿ. ಕೆಲವರು ಮಕ್ಕಳ ಕೈಗೆ ಆಟಿಕೆ, ಮೊಬೈಲ್ ಕೊಟ್ಟು ಊಟ ಮಾಡಿಸುತ್ತಾರೆ.
ಆದ್ರೆ ಬಹುತೇಕ ಪೋಷಕರು ಮಕ್ಕಳಿಗೆ ಊಟ ಮಾಡಿಸುವಲ್ಲಿ ಸೋಲುತ್ತಾರೆ. ಮಕ್ಕಳಿಗೆ ಗದರಿಸಿ, ಬೆದರಿಸಿ, ಹೊಡೆದು ಊಟ ಮಾಡಿಸುವವರು ಇದ್ದಾರೆ. ಇಲ್ಲವೆ ಒಂದೆರಡು ತುತ್ತು ತಿಂದ ಬಳಿಕ ಸಾಕು ಬಿಡು ಎಂದು ಪೋಷಕರೆ ಕೋಪಗೊಂಡು ಊಟ ಮಾಡಿಸುವುದನ್ನೇ ನಿಲ್ಲಿಸುತ್ತಾರೆ.

ಮಕ್ಕಳು ಊಟ ತಿಂಡಿ ತಿನ್ನಲು ತುಂಬಾ ಹಠ ಮಾಡುತ್ತವೆ. ಆದರೆ ಮಕ್ಕಳಿಗೆ ಊಟ ತಿಂಡಿ ನೀಡುವಾಗ ತಾಯಂದಿರು ಕೆಲವು ಅಂಶವನ್ನು ಗಮನದಲ್ಲಿಟ್ಟುಕೊಂಡರೆ, ಮಕ್ಕಳಿಗೆ ಆಹಾರದ ವಿಷಯದಲ್ಲಿ ಶಿಸ್ತನ್ನು ರೂಢಿಸಿ, ಸರಿಯಾಗಿ ಆಹಾರ ಸೇವಿಸುವಂತೆ ಮಾಡಲು ಸಹಾಯವಾಗುತ್ತದೆ. ಹಾಗಾದರೆ ಸುಲಭವಾಗಿ ಮಕ್ಕಳಿಗೆ ಊಟ ಮಾಡಿಸುವುದು ಹೇಗೆ? ಏನು ಮಾಡಬೇಕು.?
ಮಕ್ಕಳಿಗೆ ಆಹಾರ ನೀಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ:
1. ಮಕ್ಕಳಿಗೆ ದಿನಕ್ಕೆ ಮೂರು ಬಾರಿ ತಿನ್ನಲು ಸಾಧ್ಯವಾಗುವುದಿಲ್ಲ. ಆದ್ದರಿಂದ ದಿನಕ್ಕೆ ಒಂದು ಬಾರಿ ಊಟ ಮತ್ತು ಎರಡು ಬಾರಿ ಲಘು ಆಹಾರ ನೀಡಿದರೆ ಉತ್ತಮ.
2. ಮಕ್ಕಳಿಗೆ ಹಾಲು ಅಥವಾ ಜ್ಯೂಸ್ ನೀಡಿದರೆ ಅವುಗಳಿಗೆ ಊಟ ತಿನ್ನಲು ಸಾಧ್ಯವಾಗದೆ ಇರಬಹುದು. ಆದ್ದರಿಂದ ಜ್ಯೂಸ್ ಅಥವಾ ಹಾಲಿನ ಸೇವನೆ ನಂತರ ಮಕ್ಕಳನ್ನು ಸ್ವಲ್ಪ ಸಮಯ ಆಟವಾಡಲು ಬಿಟ್ಟರೆ ಬೇಗ ಜೀರ್ಣವಾಗಿ ಊಟಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.
3. ಪ್ರತಿನಿತ್ಯವೂ ಒಂದೇ ತರಹದ ಆಹಾರ ಬೇಡ. ಒಂದೇ ರೀತಿಯ ಆಹಾರದಿಂದ ಮಕ್ಕಳು ತಿನ್ನುವುದನ್ನು ತ್ಯಜಿಸಬಹುದು. ಆದ್ದರಿಂದ ಮಕ್ಕಳಿಗೆ ಇಷ್ಟವಾಗುವಂತೆ ದಿನನಿತ್ಯ ಹೊಸ ಹೊಸ ಅಡುಗೆ ಮಾಡಿದರೆ ಮಕ್ಕಳೂ ಇಷ್ಟ ಪಟ್ಟು ಸೇವಿಸುತ್ತಾರೆ.
4. ಮಕ್ಕಳ ಮೇಲೆ ತಿನ್ನುವಂತೆ ಅತಿಯಾದ ಒತ್ತಡ ಹೇರಬೇಡಿ. ಇದರಿಂದ ಅವರು ಹಠ ಹಿಡಿಯಬಹುದು. ಆದಷ್ಟು ಒಳ್ಳೆಯ ರೀತಿಯೇ ಆಹಾರ ತಿನ್ನಿಸಲು ಪ್ರಯತ್ನಿಸಿ.
5. ಮಕ್ಕಳ ಆಹಾರದಲ್ಲಿ ಹಣ್ಣುಗಳನ್ನು ಹೆಚ್ಚಾಗಿ ಸೇರಿಸಿ. ಚೆರ್ರಿ, ಸ್ಟ್ರಾಬೆರಿಯಂತಹ ಹಣ್ಣುಗಳನ್ನು ಮಕ್ಕಳು ಇಷ್ಟ ಪಟ್ಟು ತಿನ್ನುತ್ತಾರೆ.
6. ನೀವು ನೀಡುತ್ತಿರುವ ಆಹಾರದಲ್ಲಿ ಎಷ್ಟು ಪೋಷಕಾಂಶವಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನೀಡಿದರೆ ಮಕ್ಕಳ ಆರೋಗ್ಯದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
7. ಆಹಾರದಲ್ಲಿ ಮೊಸರು, ಮೊಟ್ಟೆ, ಮೀನು, ಕಿಡ್ನಿ ಬೀನ್ಸ್, ಇವುಗಳು ಇರುವಂತೆ ನೋಡಿಕೊಳ್ಳಿ.
8. ಮಕ್ಕಳಿಗೆ ಕುರುಕಲು ತಿಂಡಿ ನೀಡಬೇಡಿ, ಚಾಕೊಲೆಟ್, ಚಿಪ್ಸ್, ಕರಿದ ತಿಂಡಿಗಳ ನೀಡುವುದನ್ನು ತಡೆಯಿರಿ. ಇದು ಹಸಿವನ್ನು ಮಂದವಾಗಿಸುತ್ತದೆ.
9. ಮಕ್ಕಳಿಗೆ ಟಿವಿ, ಮೊಬೈಲ್ ಆನ್ ಮಾಡಿ ಕೊಟ್ಟು ಒಂದೆಡೆ ಕೂರಿಸಬೇಡಿ. ಇದರಿಂದ ಅವರಲ್ಲಿ ಚಟುವಟಿಕೆಯಿಲ್ಲದೆ ಹಸಿವಾಗುವುದಿಲ್ಲ. ಆದಷ್ಟು ಆಟಿಕೆಗಳ ಕೊಟ್ಟು ಅದರ ಜೊತೆ ಆಟವಾಡಲು ಬಿಡಿ.
10. ಹೆಚ್ಚಿನದಾಗಿ ಮಕ್ಕಳಿಗೆ ಖಾರವಾದ ಊಟ, ತಿಂಡಿ ನೀಡುವುದಿಲ್ಲ. ಹೀಗಾಗಿ ಮಕ್ಕಳಿಗೆ ಸ್ವಲ್ಪ ಸ್ವಲ್ಪವೇ ಖಾರದ ಊಟವನ್ನು ನೀಡುತ್ತಾ ಬನ್ನಿ. ಕೇವಲ ಹಾಲು, ಮೊಸರಿನ ಆಹಾರ ಸೇವಿಸುತ್ತಾ ಅವರಿಗೆ ರುಚಿಯ ಅನುಭವವಾಗುವುದಿಲ್ಲ. ಹೀಗಾಗಿ ಸ್ವಲ್ಪ ಖಾರ ಬೆರೆತರೆ ರುಚಿಸುತ್ತದೆ.
ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಮಕ್ಕಳು ಆಹಾರದೆಡೆಗೆ ನಿರ್ಲಕ್ಷ್ಯ ತೋರುವುದನ್ನು ತಪ್ಪಿಸಬಹುದು. ಈ ಮೂಲಕ ಮುಂದೆ ಬರುವ ಆಹಾರ ಸಮಸ್ಯೆಗಳನ್ನೂ ತಪ್ಪಿಸಬಹುದು.



Click it and Unblock the Notifications
