ನಿಮ್ಮ ಮಗುವನ್ನು ಶಾಲೆಗೆ ಸೇರಿಸುತ್ತಿದ್ದೀರಾ? ಹಾಗಾದರೆ ಆ ಶಾಲೆ ಬಗ್ಗೆ ಈ ಸಂಗತಿ ತಿಳಿದಿರಲಿ

ಶಾಲೆಗಳಿಗೆ ದಾಖಲಾತಿ ಪ್ರಾರಂಭವಾಗಿದೆ. ಬೆಂಗಳೂರಿನ ಬಹುತೇಕ ಶಾಲೆಗಳಲ್ಲಿ ದಾಖಲಾತಿ ಡಿಸೆಂಬರ್‌ನಿಂದಲೇ ಶುರುವಾಗಿದೆ.

Tips to choose the right school for child

ಉಳಿದ ಕಡೆ ಸಾಮಾನ್ಯವಾಗಿ ಮಾರ್ಚ್‌-ಏಪ್ರಿಲ್‌ ತಿಂಗಳಿನಲ್ಲಿ ಶಾಲಾ ದಾಖಲಾತಿ ಶುರುವಾಗುವುದು. ಆದ್ದರಿಂದ ಈಗ ನೀವು ನಿಮ್ಮ ಮಗುವನ್ನು ಯಾವ ಶಾಲೆಗೆ ಸೇರಿಸಬೇಕೆಂದು ಯೋಚಿಸುತ್ತಿರುತ್ತೀರಾ?

ಮಗುವನ್ನು ಶಾಲೆಗೆ ಸೇರಿಸುವಾಗ ಕೆಲವೊಂದು ಅಂಶಗಳನ್ನು ಗಮನಿಸಿ ಸೇರಿಸಿದರೆ ಒಳ್ಳೆಯದು, ಆ ಅಂಶಗಳಾವುವು ಎಂದು ನೋಡೋಣ:

1. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ

ಬರೀ ಓದು ಓದು ಎಂದು ಹೇಳುವ ಶಾಲೆಯಲ್ಲಿ ಮಕ್ಕಳಿಗೆ ಓದುವ ಒತ್ತಡ ಅಧಿಕವಿರುತ್ತದೆ. ಎಲ್ಲಾ ಮಕ್ಕಳು ನೂರಕ್ಕೆ ನೂರು ಅಂಕ ತೆಗೆಯಬೇಕೆಂದು ಟೀಚರ್ಸ್ ಹಾಗೂ ಪೊಷಕರು ಬಯಸುತ್ತಾರೆ. ಆದರೆ ಪ್ರತಿಯೊಬ್ಬ ಮಗುವಿಗೂ ಯಾವುದೋ ಒಂದು ವಿಷಯದಲ್ಲಿ ತುಂಬಾನೇ ಪ್ರತಿಭೆ ಇರುತ್ತದೆ. ಹಾಡು, ನೃತ್ಯ, ಸ್ಪೋರ್ಟ್ಸ್, ಚಿತ್ರಕಲೆ ಹೀಗೆ ಕೆಲವೊಂದು ವಿಷಯಗಳಲ್ಲಿ ಆಸಕ್ತಿ ಇರುತ್ತದೆ. ಅವರ ಆಸಕ್ತಿಯನ್ನು ಪೋಷಿಸುವ ಶಾಲೆ ಆಗಿರಬೇಕು.

ಈಗೀನ ಬಹುತೇಕ ಶಾಲೆಗಳು ಮಕ್ಕಳನ್ನು ನೂರಕ್ಕೆ ನೂರು ಅಂಕ ಗಳಿಸುವಂತೆ ಮಾಡುವುದರಲ್ಲಿಯೇ ಗುರಿಯಾಗಿರುತ್ತದೆ. ಇದರಿಂದ ನಿಮ್ಮ ಮಗುವಿಗೆ ತನ್ನ ಆಸಕ್ತಿಯ ವಿಷಯದತ್ತ ಗಮನ ಕೊಡಲು ಅವಕಾಶವೇ ಇಲ್ಲದಿರುತ್ತದೆ. ಇನ್ನು ಕೆಲವು ಶಾಲೆಗಳಲ್ಲಿ ಶಾಲಾ ಮೈದಾನ ಕೂಡ ಇರುವುದಿಲ್ಲ. ಆದ್ದರಿಂದ ನೀವು ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಈ ಎಲ್ಲಾ ಅಂಶಗಳನ್ನು ಗಮನಿಸಲೇಬೇಕು.

ಕೆಲವೊಂದು ಶಾಲೆಗಳಲ್ಲಿ ನಮ್ಮಲ್ಲಿ ಸ್ವಿಮ್ಮಿಂಗ್‌ ಪೂಲ್ ಇದೆ, ಅದು ಇದು ಎಂದು ತುಂಬಾನೇ ಫೀಸ್‌ ತೆಗೆದುಕೊಳ್ಳುತ್ತಾರೆ, ಆದರೆ ಅವುಗಳನ್ನು ಯಾವಾಗಲೂ ಒಮ್ಮೆ ಬಳಸುತ್ತಿರುತ್ತಾರೆ. ಉದಾಹರಣೆಗೆ ಸ್ವಿಮ್ಮಿಂಗ್ ಪೂಲ್‌ ಇದೆ ಅಂತಾರೆ, ಆದರೆ ಅಲ್ಲಿ ನಿಮ್ಮ ಮಗುವಿಗೆ ಸ್ವಿಮ್ಮಿಂಗ್‌ನಲ್ಲಿ ತುಂಬಾ ಆಸಕ್ತಿ ಇದ್ದರೆ ಅವರನ್ನು ರಾಜ್ಯ, ರಾಷ್ಟ್ರ ಮಟ್ಟಕ್ಕೆ ತಯಾರಿ ಮಾಡುವ ಕೆಲಸ ಆ ಶಾಲೆ ಮಾಡುತ್ತಿದೆಯೇ ಎಂದು ಗಮನಿಸಿ.

2. ಮಕ್ಕಳು ಹಾಗೂ ಶಿಕ್ಷರ ಅನುಪಾತ

ಇದು ಗಮನಿಸಬೇಕಾದ ಮುಖ್ಯವಾದ ಅಂಶ. ಟೀಚರ್ಸ್ ಕಡಿಮೆ ಇದ್ದು ಮಕ್ಕಳ ಸಂಖ್ಯೆ ಅಧಿಕವಿದ್ದಾದ ಆ ಶಿಕ್ಷಕರಿಗೆ ಒಂದೊಂದು ಮಗುವಿನ ಕಡೆ ಸಂಪೂರ್ಣ ಗಮನ ಹರಿಸಲು ಸಾಧ್ಯವಿಲ್ಲ. 20-25 ಮಕ್ಕಳಿಗೆ ಒಬ್ಬರು ಶಿಕ್ಷಕರು ಇರಬೇಕು. ಒಂದು ಕ್ಲಾಸ್‌ ರೂಂನಲ್ಲಿ 40-50 ಮಕ್ಕಳು ಇದ್ದು ಒಬ್ಬರೇ ಶಿಕ್ಷಕರಿದ್ದಾಗ ಪ್ರತಿಯೊಂದು ಮಗುವಿನ ಮೇಲೆ ಗಮನ ಹರಿಸಲು ಕಷ್ಟವಾಗುವುದು. ಇದರ ಪ್ರಭಾವ ನಿಮ್ಮ ಮಕ್ಕಳ ಕಲಿಕೆಯ ಮೇಲಾಗುತ್ತದೆ.

3. ಕಲಿಸುವ ವಿಧಾನ ಹೇಗಿದೆ?

ಇದನ್ನು ನೀವು ಆ ಶಾಲೆಗೆ ಹೋಗುವ ಇತರ ಮಕ್ಕಳ ಜೊತೆ ಕೇಳಿ ತಿಳಿದುಕೊಳ್ಳಬೇಕು. ಅವರ ಸ್ಮಾರ್ಟ್ ಬೋರ್ಡ್‌, ವಿಸ್ಯೂಯಲ್‌ ಟೆಕ್ನಾಲಾಜಿ ಎಲ್ಲಾ ಬಳಸುತ್ತಿದ್ದೀರಾ? ಶಾಲೆಯಲ್ಲಿ ಶಿಕ್ಷಕರು ಮನೆಗೆ ಕಳಿಸುವ ಹೋಂ ವರ್ಕ್‌ನಿಂದಾಗಿ ಪೋಷಕರಿಗೆ ಮತ್ತೆ ಓದಬೇಕಾದ ಪರಿಸ್ಥಿತಿ ಬರುತ್ತಿದೆಯಾ? ಎಂಬುವುದನ್ನು ಗಮನಿಸಿ.

ಮಕ್ಕಳಿಗೆ ಕಲಿಸಲು ಪೋಷಕರಿಗೂ ತಿಳಿದಿದ್ದರೆ ಒಳ್ಳೆಯದು, ಆದರೆ ತಿಳಿಯದ ಪೋಷಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬಾರದೇ? ಹಾಗಿದೆ ಈಗೀನ ಬಹುತೇಕ ಶಾಲೆಗಳ ಪರಿಸ್ಥಿತಿ, ಎಲ್ಲವನ್ನು ಪೋಷಕರು ಹೇಳಿಕೊಡಬೇಕು, ಇಲ್ಲದಿದ್ದರೆ ಟ್ಯೂಷನ್ ಕೊಡಿಸಬೇಕು, ಇಂಥ ಶಾಲೆಗಳಿಗಿಂತ ಶಾಲೆಯಲ್ಲಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸುವ ಶಾಲೆಗಳ ಆಯ್ಕೆ ಮಾಡಿ.

4. ನಿಮ್ಮ ಮಗುವಿನ ಅವಶ್ಯಕತೆ ಹಾಗೂ ಆಸಕ್ತಿ

ನಿಮ್ಮ ಮಗುವಿನ ಸುಭದ್ರ ಭವಿಷ್ಯಕ್ಕೆ ಅವಶ್ಯಕತೆಯೇನು, ಆಸಕ್ತಿಯೇನು ಎಂಬುವುದನ್ನು ಗಮನಿಸಿ. ಕೆಲವೊಮ್ಮೆ ಮಕ್ಕಳ ಆಸಕ್ತಿ ಮೊದಲೇ ತಿಳಿಯುವುದಿಲ್ಲ. ಅವರು ಬೆಳೆಯುತ್ತಿದ್ದಂತೆ ಆಸಕ್ತಿಗಳು ಬದಲಾಗಬಹುದು. ಕೆಲವಿಗೆ ಕಲೆ ಕಡೆ ಆಸಕ್ತಿ ಬೆಳೆಯಬಹುದು, ಇನ್ನು ಕೆಲವು ಕಡೆ ಕ್ರೀಡೆಯತ್ತ ಹೀಗೆ ಅಭಿರುಚಿಗಳು ಬದಲಾಗುವುದು. ಶಾಲೆಯಲ್ಲಿ ಪಠ್ಯೇತರ ಹಾಗೂ ಕ್ರೀಡಾ ಚಟುವಟಿಕೆಗೆ ಪ್ರೋತ್ಸಾಹ ದೊರೆಯುವಂತಿರಬೇಕು.

ಪೋಷಕರೆ ಸ್ಟ್ಯಾಂಡರ್ಡ್‌ ಎಂಬ ಹೆಸರಿನಲ್ಲಿ ಮಕ್ಕಳನ್ನು ಅಧಿಕ ಫೀಸ್‌ ಇರುವ ಮಕ್ಕಳನ್ನು ಸೇರಿಸುವ ಬದಲಿಗೆ ನಿಮ್ಮ ಮಕ್ಕಳಿಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗೆ ಒತ್ತು ನೀಡುವ ಕೆಲಸಕ್ಕೆ ಸೇರಿಸಿ.

ಒಟ್ಟಿನಲ್ಲಿ ನೀವು ಕಳಿಸುವ ಶಾಲೆಯಿಂದ ಮಕ್ಕಳಿಗೆ ಉತ್ತಮ ವಾತಾವರಣ ದೊರೆಯುವಂತಿರಬೇಕು.

English summary

How To Choose The Right School For Your Child In Kannada

These Tips helps to choose the right school for your child, read on...
X
Desktop Bottom Promotion