Latest Updates
-
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಕರ್ನಾಟಕ ಬಂದ್ 2026: ಬೆಂಗಳೂರಿನಲ್ಲಿ ಜನಜೀವನ ಹೇಗಿದೆ? ಇಲ್ಲಿದೆ ಇಂದಿನ ಲೇಟೆಸ್ಟ್ ಅಪ್ಡೇಟ್ -
ಎಡಗೈ ಬಳಸುವವರೇ ಗಮನಿಸಿ: ಕುತ್ತಿಗೆ ಮತ್ತು ಮಣಿಕಟ್ಟಿನ ನೋವಿಗೆ ಇಲ್ಲಿದೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ಕ್ಯಾಂಪಸ್ ಪ್ರೇಮಿಗಳೇ ಎಚ್ಚರ! ರ್ಯಾಗಿಂಗ್ನಿಂದ ಪಾರಾಗಲು ಮತ್ತು ಸುರಕ್ಷಿತವಾಗಿರಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ಮುಂಬೈ ಭೂಕುಸಿತದ ಎಚ್ಚರಿಕೆ: ಮಳೆಗಾಲದಲ್ಲಿ ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ ಕ್ರಮಗಳನ್ನು ಪಾಲಿಸಿ -
ಮುಂಬೈ ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಪ್ರವಾಹದಿಂದ ರಕ್ಷಿಸಲು ಇಂದೇ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ!
ಮಕ್ಕಳಿಗೆ ಹವಾಮಾನ ಬದಲಾವಣೆಯಿಂದ ಕಾಡುವ ಸಾಮಾನ್ಯ ಶೀತ-ಕೆಮ್ಮು ತಡೆಗಟ್ಟುವುದು ಹೇಗೆ?
ಮಕ್ಕಳ ಶಾಲೆ ಶುರುವಾಗಿದೆ ಜೊತೆಗೆ ರಜೆ ಹಾಕಬೇಕಾದ ಅನಿವಾರ್ಯವು ಉಂಟಾಗುತ್ತಿದೆ, ಏಕೆಂದರೆ ಆಗಾಗ ಕಾಯಿಲೆ ಬೀಳುತ್ತಿದ್ದಾರೆ, ಅದರಲ್ಲಿಯೂ 7 ವರ್ಷದ ಕೆಳಗಿನ ಮಕ್ಕಳಿಗಂತೂ ವಾರದಲ್ಲಿ ಒಂದು ಬಾರಿಯಾದರೂ ಶೀತದ ಸಮಸ್ಯೆ ಕಾಡುತ್ತಿದೆ.
ಶಾಲೆಗಳಲ್ಲಿ ಶೀತ, ಜ್ವರವಿದ್ದರೆ ಕಳುಹಿಸಬೇಡಿ ಎಂದು ಹೇಳುತ್ತಾರೆ, ಇತ್ತ ಕಡೆ ಇಂಥ ಶೀತ-ಕೆಮ್ಮು ಪದೇ ಪದೇ ಕಾಡುವುದು ಕೂಡ ಕಡಿಮೆಯಾಗಲ್ಲ. ಮಕ್ಕಳನ್ನು ಆಗಾಗ ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ಕೆಲಸವಾಗುತ್ತೆ.

ಹವಾಮಾನ ಬದಲಾವಣೆಯಿಂದ ಉಂಟಾಗುವುದು ಈ ರೀತಿ ಸಾಮಾನ್ಯ ಸಮಸ್ಯೆ ತಪ್ಪಿಸುವುದು ಹೇಗೆ? ಇದಕ್ಕೆ ಮನೆಮದ್ದೇನು? ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಏನು ಮಾಡಬೇಕು? ಎಂದು ನೋಡೋಣ:
ಮಕ್ಕಳಿಗೆ ಈ ಶೀತ, ಕೆಮ್ಮು ಈ ರೀತಿಯ ಅಲರ್ಜಿ ಸಮಸ್ಯೆಗೆ ಕಾರಣವೇನು ಎಂಬುವುದನ್ನು ಕಂಡು ಹಿಡಿಯಿರಿ
ಹೌದು ಮಕ್ಕಳು ಪದೇ ಪದೇ ಕಾಯಿಲೆ ಬೀಳುತ್ತಿದ್ದಾರೆ ಎಂದರೆ ಏನು ಕಾರಣವಿರಬಹುದು? ಮನೆಯ ಸುತ್ತ ಮುತ್ತ ಇದ್ದ ಗಿಡಗಳು ಅಥವಾ ಮನೆಯೊಳಗಡೆ ಇರುವ ವಸ್ತುಗಳು, ಸಾಕು ಪ್ರಾಣಿಗಳು ಇವುಗಳಿಂದಲೂ ಪದೇ ಪದೇ ಅಲರ್ಜಿ ಸಮಸ್ಯೆ ಉಂಟಾಗುವುದು. ಹಾಗಾಗಿ ಯಾವುದು ನಿಖರ ಕಾರಣ ಎಂದು ತಿಳಿದರೆ ಒಳ್ಳೆಯದು. ಕೆಲವೊಂದು ಸೀಸನ್‌ನಲ್ಲಿ ಮಾತ್ರ ಈ ರೀತಿ ಅಲರ್ಜಿ ಸಮಸ್ಯೆ ಕಂಡು ಬರುತ್ತದೆ ಎಂದಾದರೆ ನೀವು ಆ ಸೀಸನ್ ಅಲರ್ಜಿಗೆ ಕಾರಣವೇನು ? ಎಂಬುವುದನ್ನು ಕಂಡು ಹಿಡಿಯಿರಿ, ಆವಾಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುವುದು.
ಅಲರ್ಜಿಯ ಲಕ್ಷಣವೇನು?
ಶೀತ, ಆಗಾಗ ಸೀನುವುದು, ಮೂಗು ಕಟ್ಟುವುದು, ಆಗಾಗ ಕಣ್ಣು ತುರಿಕೆ ಈ ಬಗೆಯ ಲಕ್ಷಣಗಳು ಕಂಡು ಬರುವುದು. ಅಲ್ಲದೆ ಕೆಮ್ಮು, ದಮ್ಮು, ನಿದ್ದೆ ಸರಿಯಾಗಿ ಬರುವುದು, ರಾತ್ರಿ ನಿದ್ದೆ ಸರಿಯಾಗಿ ಮಾಡದೆ ಇರುವುದರಿಂದ ಹಗಲು ಹೊತ್ತು ಸುಸ್ತು, ತುಂಬಾ ಕಿರಿಕಿರಿ ಮಾಡುವುದು.
ಹವಾಮಾನ ಬದಲಾವಣೆಯಾದಾಗ ಉಂಟಾಗುವ ಅಲರ್ಜಿ ಸಮಸ್ಯೆ ತಡೆಗಟ್ಟಲು ಹೀಗೆ ಮಾಡಿ
ಮಳೆಗಾಲವಾದರೆ ಅವರನ್ನು ಬೆಚ್ಚಗೆ ಇಡಿ. ಚಳಿಗಾಲವಾದರೆ ದೂಳಿನಲ್ಲಿ ಓಡಾಡಿಸಬೇಡಿ, ಆಟವಾಡಲು ಬಿಡಬೇಡಿ. ಬೇಸಿಗೆಯಲ್ಲಿಯೂ ಅಷ್ಟೇ ದೂಳು, ಎಸಿ ಇವೆಲ್ಲ ಅಲರ್ಜಿ ಸಮಸ್ಯೆ ಉಂಟು ಮಾಡುತ್ತದೆ.
ಚಿಕಿತ್ಸೆ ಕೊಡಿಸಬೇಕೆ?
ಸಾಮಾನ್ಯ ಶೀತ-ಕೆಮ್ಮಿಗೆ ಔಷಧಿ ಕೊಡಿಸಬೇಕೆ ಎಂದು ನೋಡುವುದಾದರೆ ಹೌದು ಕೊಡಿಸಬೇಕು. ಇಲ್ಲದಿದ್ದರೆ ಕಡಿಮೆಯಾಗಲ್ಲ, ಹಾಗಾಗಿ ಕಡಿಮೆಯಾಗುತ್ತೆ ಎಂದು ಸುಮ್ಮನೆ ಕೂರಬೇಡಿ.
ಮನೆಮದ್ದೇನು?
ತುಳಸಿ ರಸ, ಜೇನು, ಸ್ವಲ್ಪ ಶುಂಠ ರಸ , ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, ದೊಡ್ಡಪತ್ರೆ ರಸ ಮಿಕ್ಸ್ ಮಾಡಿ ಆ ರಸ ಕುಡಿಸಿ, ಇದರಿಂದ ಕೆಮ್ಮು-ಶೀತದಂಥ ಸಮಸ್ಯೆ ಕಡಿಮೆಯಾಗುವುದು.
ಆಹಾರಕ್ರಮದ ಕಡೆಗೆ ಗಮನಹರಿಸಿ
ಮಕ್ಕಳಿಗೆ ಆರೋಗ್ಯಕರ ಆಹಾರ ನೀಡಿ, ಜಂಕ್ಸ್ ಫುಡ್ ಹೆಚ್ಚು ನೀಡಬೇಡಿ, ಸೀಸನಲ್ ಹಣ್ಣುಗಳನ್ನು ನೀಡಲು ಹಿಂದೇಟು ಹಾಕಬೇಡಿ. ಆರೋಗ್ಯಕರ ಆಹಾರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಮಕ್ಕಳಿಗೆ ದೈಹಿಕ ಚಟುವಟಿಕೆ ಅವಶ್ಯಕ
ಮಕ್ಕಳಲ್ಲಿ ದೈಹಿಕ ಆರೋಗ್ಯ ವೃದ್ಧಿಸಲು, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮಕ್ಕಳಿಗೆ ದೈಹಿಕ ಚಟುವಟಿಕೆ ಅವಶ್ಯಕ, ಹಾಗಾಗಿ ಅವರನ್ನು ಆಟವಾಡಿಸಿ.



Click it and Unblock the Notifications