Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಕರ್ನಾಟಕದಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ: ಈ ಸೋಂಕಿನಿಂದ ಮಕ್ಕಳ ರಕ್ಷಣೆ ಹೇಗೆ?
ಈ ವರ್ಷ ಡೆಂಗ್ಯೂ ಕಾಯಿಲೆ ಕರ್ನಾಟಕವನ್ನು ತುಂಬಾನೇ ಕಾಡಿದೆ. ಈ ವರ್ಷ ಇದುವರೆಗೆ 25, 408 ಜನರಿಗೆ ಡೆಂಗ್ಯು ಕಾಯಿಲೆ ಬಂದಿದೆ, 12 ಜನ ಡೆಂಗ್ಯೂವಿಗೆ ಬಲಿಯಾಗಿದ್ದಾರೆ, ಹಿಂದೆಂದಿಗಿಂತಲೂ ಈ ವರ್ಷ ಬಹುತೇಕರನ್ನು ಕಾಡಿದೆ . ಡೆಂಗ್ಯೂ ಆರ್ಭಟ ಇನ್ನೂ ನಿಂತಿಲ್ಲ, ಅದರಲ್ಲಿಯೂ ಮಕ್ಕಳಿಗೆ ಡೆಂಗ್ಯೂ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಅವರ ಆರೋಗ್ಯದ ಕಡೆಗೆ ಗಮನಹರಿಸಿ.

ಪ್ರತಿದಿನ 10-20 ಹೊಸ ಕೇಸ್‌ಗಳು ವಾರಕ್ಕೆ ದಾಖಲಾಗುತ್ತಿದೆ, ಶೇ. 40ರಷ್ಟು ಜನರಲ್ಲಿ ನಿರ್ಜಲೀಕರಣ, ಜ್ವರ, ವಾಂತಿ ಈ ಬಗೆಯ ಸಮಸ್ಯೆಗಳು ಕಂಡು ಬರುವುದು ಕೆಲವರಲ್ಲಿ ತೀವ್ರ ಉಸಿರಾಟದ ಸಮಸ್ಯೆ, ಕಿಬ್ಬೊಟ್ಟೆಯಲ್ಲಿ ನೋವು, ಒಂದು ರೀತಿಯ ಗೊಂದಲ ಈ ಬಗೆಯ ಲಕ್ಷಣಗಳು ಕೂಡ ಕಂಡು ಬರುತ್ತಿದೆ. ಅಲ್ಲದೆ ಡೆಂಗ್ಯೂ ಸೋಂಕು ಮಕ್ಕಳಿಗೆ ತಗುಲಿದರೆ ಅವರಲ್ಲಿ ರೋಗ ಲಕ್ಷಣಗಳು ಗಂಭೀರವಾಗುವ ಸಾಧ್ಯತೆಯಿದೆ, ಹಾಗಾಗಿ ಮಕ್ಕಳಿಗೆ ಡೆಂಗ್ಯೂ ಸೋಂಕು ಉಂಟಾಗದಂತೆ ಜಾಗ್ರತೆವಹಿಸಬೇಕು.
ಮಕ್ಕಳಲ್ಲಿ ಡೆಂಗ್ಯೂ ಸೋಂಕು ತಗುಲಿದಾಗ ಕಂಡು ಬರುವ ಲಕ್ಷಣಗಳು
ಮಗುವಿಗೆ ಡೆಂಗ್ಯೂ ಸೋಂಕು ತಗುಲಿದರೆ 1-2 ವಾರಗಳಲ್ಲಿ ಸೋಂಕಿನ ಲಕ್ಷಣಗಳು ಕಂಡು ಬರುವುದು. ಸೊಳ್ಳೆ ಕಚ್ಚಿ 4-10 ದಿನಗಳಲ್ಲಿ ಈ ಲಕ್ಷಣಗಳು ಕಂಡು ಬರುವುದು.
ಡೆಂಗ್ಯೂ ಲಕ್ಷಣಗಳು
ತೀವ್ರ ಜ್ವರ
ತಲೆನೋವು
ಕಣ್ಣುಗಳಲ್ಲಿ ನೋವು
ಮೈಕೈ ನೋವು
ಸ್ನಾಯುಗಳಲ್ಲಿ ನೋವು
ವಾಂತಿ ಗ್ರಂಥಿಗಳಲ್ಲಿ ಊತ
ತ್ವಚೆಯಲ್ಲಿ ಗುಳ್ಳೆಗಳು ಏಳುವುದು
ಮಕ್ಕಳಲ್ಲಿ ಡೆಂಗ್ಯೂ ಸೋಂಕು ಕಂಡು ಬಂದರೆ ಅವರು ತಿನ್ನುವುದಿಲ್ಲ ಅಲ್ಲದೆ ಅವರ ನಿದ್ದೆಯಲ್ಲಿ ವ್ಯತ್ಯಾಸ ಉಂಟಾಗುವುದು.
ಡೆಂಗ್ಯೂ ಲಕ್ಷಣಗಳು ಕಂಡು ಬಂದಾಗ ಈ ರೀತಿ ಆರೈಕೆ ಮಾಡಿ
ಡೆಂಗ್ಯೂ ಲಕ್ಷಣಗಳು ಕಂಡು ಬಂದರೆ ಮನೆಯಲ್ಲಿಯೇ ಸ್ವಚಿಕಿತ್ಸೆ ಮಾಡಬೇಡಿ. ವೈದ್ಯರಿಗೆ ತೋರಿಸಿ, ಅವರು ಸೂಚಿಸಿದ ಔಷಧಿಗಳನ್ನು ನಿಯಮಿತವಾಗಿ ಸೇವಿಸಿ.
ಜ್ವರ ಹೆಚ್ಚಿಲ್ಲದಿದ್ದರೆ ಮನೆಯಲ್ಲಿಯೇ ಈ ರೀತಿ ಆರೈಕೆ ಮಾಡಿ
ವಿಶ್ರಾಂತಿ ತೆಗೆದುಕೊಳ್ಳಿ
ಸಾಕಷ್ಟು ನೀರು ಕುಡಿಯಿರಿ
ಸಾಕಷ್ಟು ಪೋಷಕಾಂಶವಿರುವ ಆಹಾರ ನೀಡಿ
ತಣ್ಣೀರಿನಲ್ಲಿ ಸ್ಪಾಂಜ್ ಅದ್ದಿ ಅವರ ಮೈಯನ್ನು ಒರೆಸಿ
ಜ್ವರ ಹೆಚ್ಚಾದರೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುವುದು.
ಡೆಂಗ್ಯೂವಿನ ಗಂಭೀರ ಲಕ್ಷಣಗಳು
ತುಂಬಾನೇ ಕಿಬ್ಬೊಟ್ಟೆ ನೋವು
ಅಗಾಗ ವಾಂತಿ, ಬೇಧಿ
ತೀವ್ರ ಉಸಿರಾಟ
ವಸಡುಗಳಲ್ಲಿ ರಕ್ತಸ್ರಾವ
ವಿಶ್ರಾಂತಿ ಇಲ್ಲದಿರುವುದು
ವಾಂತಿ ಅಥವಾ ಮಲದಲ್ಲಿ ರಕ್ತದ ಕಲೆಗಳು
ತುಂಬಾನೇ ಬಾಯಾರಿಕೆ
ಸುಸ್ತು
ಮಕ್ಕಳ ದೇಹದಲ್ಲಿ ನೀರಿನಂಶ ಕಡಿಮೆಯಾಗಿದೆ ಎಂದು ಸೂಚಿಸುವ ಲಕ್ಷಣಗಳು
ತುಂಬಾ ನಿದ್ದೆ
ಆಟವಾಡಲು ಶಕ್ತಿ ಇಲ್ಲದಿರುವುದು
ತುಟಿ ಒಣಗುವುದು
ಬಾಯಿ ಒಣಗುವುದು
ತೀವ್ರ ಉಸಿರಾಟ
ಅಳುವಾಗ ಕಣ್ಣೀರು ಬರದಿರುವುದು
ಮೂತ್ರ ವಿಸರ್ಜನೆ
ಕೈಕಾಲುಗಳು ಬಿಳುಚಿಕೊಂಡಿರುವುದು
ಮಕ್ಕಳಲ್ಲಿ ಡೆಂಗ್ಯೂ ಅಪಾಯಕಾರಿಯೇ?
ಡೆಂಗ್ಯೂ ಡೊಡ್ಡವರಿಗಿಂತ ಮಕ್ಕಳಿಗೆ ಹೆಚ್ಚು ಅಪಾಯಕಾರಿ. ಏಕೆಂದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆ ಇರುತ್ತದೆ, ಈ ಕಾರಣದಿಂದ ಮಕ್ಕಳಿಗೆ ಡೆಂಗ್ಯೂ ತುಂಬಾ ಅಪಾಯಕಾರಿ.
ಡೆಂಗ್ಯೂವಿನಿಂದ ಮಕ್ಕಳ ರಕ್ಷಣೆ ಹೇಗೆ?
ಮಕ್ಕಳಲ್ಲಿ ಡೆಂಗ್ಯೂ ತಪ್ಪಿಸಲು ಮೊದಲು ಮಾಡಬೇಕಾಗಿರುವುದು ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸಿ. ಸೊಳ್ಳೆಯನ್ನು
ಸೊಳ್ಳೆಗಳು ಹೆಚ್ಚಿರುವ ಸಮಯ ಬೆಳಗ್ಗೆ-ಸಂಜೆ ಹೊತ್ತಿನಲ್ಲಿ ಮಕ್ಕಳನ್ನು ಹೊರಗಡೆ ಆಡಲು ಬಿಡಬೇಡಿ.
ಮನೆಯೊಳಗಡೆ ಸೊಳ್ಳೆ ಬರದಂತೆ ಜಾಗ್ರತೆವಹಿಸಿ.
ತುಂಬು ತೋಳಿನ ಬಟ್ಟೆಗಳನ್ನು ಧರಿಸಿ
ಸೊಳ್ಳೆ ಸ್ಪ್ರೇಗಳನ್ನು ಬಳಸಿ
ಸೊಳ್ಳೆ ಬತ್ತಿ ಬಳಸಿ.
ಏರ್ ಕಂಡೀಷನರ್ ಇದ್ದರೆ ಅದನ್ನು ಬಳಸಿ.
ಸೊಳ್ಳೆ ಬರದಂತೆ ಸ್ಕ್ರೀನ್‌ಗಳನ್ನು ಬಳಸಿ
ಮಕ್ಕಳನ್ನು ಸೊಳ್ಳೆ ಪರದೆಯೊಳಗಡೆ ಮಲಗಿಸಿ.
ಮಗು ಹಾಗೂ ಮಕ್ಕಳನ್ನು ರಕ್ಷಣೆ ಮಾಡಲು ಜಾಗ್ರತೆವಹಿಸಿ
ಮಕ್ಕಳು ಆಟ ಆಡುವ ಸ್ಥಳವನ್ನು ಸೊಳ್ಳೆ ಬರದಂತೆ ಜಾಗ್ರತೆವಹಿಸಿ.
ಮಕ್ಕಳನ್ನು ತುಂಬು ತೋಳಿನ ಉಡುಪುಗಳನ್ನು ಧರಿಸಿ.
ಮನೆಯನ್ನು ಸ್ವಚ್ಛವಾಗಿಡಿ
ಮನೆಯ ಸತ್ತ ಮುತ್ತ ನೀರು ನಿಲ್ಲದಂತೆ ಜಾಗ್ರತೆ.
ನೀರು ತುಂಬಿಟ್ಟ ಬಕೆಟ್, ಪಾತ್ರೆಗಳನ್ನು ಮುಚ್ಚಿಡಬೇಡಿ.



Click it and Unblock the Notifications