Latest Updates
-
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್
ಗರ್ಭಿಣಿಯರಿಗೆ ಡೆಂಗ್ಯೂ ಬಂದರೆ ಹುಟ್ಟುವ ಮಗುವಿಗೆ ತೊಂದರೆಯಾಗುವುದೇ? ವೈದ್ಯರು ಹೇಳುವುದೇನು?
ಡೆಂಗ್ಯೂ ಭೀತಿ ಈ ವರ್ಷ ಕರ್ನಾಟಕದಲ್ಲಿ ಹೆಚ್ಚಾಗಿ ಕಾಡಿದೆ. ಅಂಕಿಅಂಶ ಪ್ರಕಾರ ಜುಲೈ 1ರಿಂದ ಜುಲೈ 19ರ ನಡುವೆ 12000 ಜನರಿಗೆ ಡೆಂಗ್ಯೂ ಬಾಧಿಸಿದೆ. ಡೆಂಗ್ಯೂ ಸಂರ್ಖಯೆ 19000 ದಾಟಿದೆ, ಕಳೆದ 10 ವರ್ಷದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಡೆಂಗ್ಯೂ ಬಾಧಿಸಿರಲಿಲ್ಲ, ಅದರಲ್ಲಿಯೂ ಮಕ್ಕಳಿಗೆ ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರೆಗೆ ಈ ಡೆಂಗ್ಯೂ ಗಂಭೀರವಾಗಿ ಕಾಡಿದೆ.

ಡೆಂಗ್ಯೂ ಮಕ್ಕಳಷ್ಟೇ ಗರ್ಭಿಣಿಯರಿಗೂ ಅಪಾಯಕಾರಿ. ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಬಾಧಿಸಿದರೆ ಅದು ಆಕೆಯನ್ನು ಮಾತ್ರವಲ್ಲ ಮಗುವನ್ನೂ ಕಾಡುವುದು, ಮಗುವಿನ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಹಾಗಾಗಿ ಗರ್ಭಿಣಿಯರು ಡೆಂಗ್ಯೂ ಬಗ್ಗೆ ತುಂಬಾನೇ ಜಾಗ್ರತೆವಹಿಸಬೇಕು.
ಡೆಂಗ್ಯೂ ಗರ್ಭಿಣಿಯರಿಗೆ ಬಂದರೆ ಏನೆಲ್ಲಾ ಸಮಸ್ಯೆಗಳಿವೆ, ಇದರಿಂದ ಹುಟ್ಟುವ ಮಗುವಿಗೆ ತೊಂದರೆ ಇದೆಯೇ? ಮೊದಲ ತ್ರೈಮಾಸಿಕದಲ್ಲಿದ್ದಾಗ ಡೆಂಗ್ಯೂ ಬಾಧಿಸಿದರೆ ಏನೆಲ್ಲಾ
ತೊಂದರೆಗಳಿವೆ, ಎರಡನೇ ತ್ರೈಮಾಸಿಕದಲ್ಲಿ, ಮೂರನೇ ತ್ರೈ ಮಾಸಿಕದಲ್ಲಿ ಡೆಂಗ್ಯೂ ಬಾಧಿಸಿದರೆ ಏನೆಲ್ಲಾ ಅಪಾಯಗಳಿವೆ ಎಂಬುವುದರ ಬಗ್ಗೆ
ಬೆಂಗಳೂರಿನ ವಾಸವಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ, ನಿಶಾ ಬುಚಾಡೆ (MBBS, MS Fellowship in gynec-oncology, Fellowship in Advanced infertility) ಸಂಪರ್ಕಿಸಿ ಕೆಲವೊಂದು ಸಂಶಯಗಳ ಬಗ್ಗೆ ಮಾಹಿತಿ ಪಡೆದಿದ್ದೇವೆ. ಇದು ಪ್ರತಿಯೊಬ್ಬ ಗರ್ಭಿಣಿಯರು ತಿಳಿದುಕೊಳ್ಳಬೇಕಾದ ಸಂಗತಿಗಳು ಹಾಗೂ ಗರ್ಭಿಣಿಯಾಗಿದ್ದಾಗ ಈ ಡೆಂಗ್ಯೂ ತಡೆಗಟ್ಟಲು ಹೆಚ್ಚಿನ ಜಾಗ್ರತೆವಹಿಸಲು ಸಹಕಾರಿಯಾಗಿದೆ.
ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಬಂದಾಗ ಈ ಬಗೆಯ ಪ್ರಶ್ನೆಗಳು ಮೂಡುವುದು ಸಹಜ
- ಗರ್ಭಿಣಿಯರಿಗೆ ಡೆಂಗ್ಯೂ ಕಾಯಿಲೆ ಬಂದರೆ ಏನಾದರೂ ಅಪಾಯವಿದೆಯೇ?
- ಡೆಂಗ್ಯೂ ಸೋಂಕು ಮೊದಲ ತ್ರೈ ಮಾಸಿಕದಲ್ಲಿ ಉಂಟಾದರೆ ಎದುರಾಗುವ ಅಪಾಯಗಳೇನು?
- ಎರಡನೇ ತ್ರೈ ಮಾಸಿಕದಲ್ಲಿ ಡೆಂಗ್ಯೂ ಸೋಂಕು ಬಂದಾದರೆ ಮಗುವಿನ ಬೆಳವಣಿಗೆ ಕುಂಠಿತವಾಗುವುದೇ?
- ಮೂರನೇಯ ತ್ರೈ ಮಾಸಿಕದಲ್ಲಿ ಡೆಂಗ್ಯೂ ಕಾಣಿಸಿದರೆ ಅವಧಿ ಪೂರ್ವ ಹೆರಿಗೆಯಾಗುವುದೇ?
- ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಬಂದರೆ ಕಡಿಮೆ ತೂಕದ ಮಗು ಜನಿಸುವುದೇ? ಅಲ್ಲದೆ ಆ ಮಗುವಿನಲ್ಲಿ 2 ವರ್ಷದವರೆಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದೇ?
- ಜನನ ಸಮಯದಲ್ಲಿ ತಾಯಿಗೆ ಡೆಂಗ್ಯೂ ಇದ್ದರೆ ಮಗುವಿನಲ್ಲಿಯೂ ಡೆಂಗ್ಯೂ ಕಾಣಿಸಿಕೊಳ್ಳುವುದಾ? ತಾಯಿ-ಮಗುವಿನ ರಕ್ಷಣೆಗೆ ಏನು ಮಾಡಬೇಕು?
- ಗರ್ಭಿಣಿಯರು ಡೆಂಗ್ಯೂ ಬಾರದಂತೆ ತಡೆಗಟ್ಟುವುದು ಹೇಗೆ?
ಸ್ತ್ರೀರೋಗ ತಜ್ಞೆ ಹಂಚಿಕೊಂಡ ಉಪಯುಕ್ತ ಮಾಹಿತಿ ಇಲ್ಲಿದೆ:
ಡೆಂಗ್ಯೂ ಲಕ್ಷಣಗಳು
ಡೆಂಗ್ಯೂ ಸೋಂಕಿತ ಸೊಳ್ಳೆ ಕಚ್ಚಿದ 4-10 ದಿನಗಳಲ್ಲಿ ರೊಗ ಲಕ್ಷಣಗಳು ಕಂಡು ಬರುವುದು.
ಡೆಂಗ್ಯೂ ಲಕ್ಷಣಗಳು
ಜ್ವರ
ವಾಂತಿ, ಬೇಧಿ
ತ್ವಚೆಯಲ್ಲಿ ಗುಳ್ಳೆಗಳು ಏಳುವುದು
ಕಿಬ್ಬೊಟ್ಟೆಯಲ್ಲಿ ನೋವು
ಗರ್ಭಿಣಿಗೆ ಡೆಂಗ್ಯೂ ಕಾಯಿಲೆ ಬಂದರೆ
ಕಿಬ್ಬೊಟ್ಟೆಯಲ್ಲಿ ನೋವು, ಸುಸ್ತು
ವಿಪರೀತ ವಾಂತಿ
ರಕ್ತಸ್ರಾವ
ಲಿವರ್‌ಗೆ ಹಾನಿಯುಂಟಾಗುವುದು
ಪ್ಲೇಟ್‌ಲೆಟ್ ಕಡಿಮೆಯಾಗುವುದು
ಡೆಂಗ್ಯೂವಿನಿಂದ ಈ ಅಪಾಯಗಳ ಸಾಧ್ಯತೆ ಇದೆ
ಅವಧಿಪೂರ್ವ ಹೆರಿಗೆ
ಹೆರಿಗೆಯಲ್ಲಿ ತೊಂದರೆ
ರಕ್ತದ ಅಗ್ಯತ ಬೀಳುವುದು
ಸಿ ಸೆಕ್ಷನ್ ಸಾಧ್ಯತೆ ಹೆಚ್ಚುವುದು
ಅಂಗಾಂಗಗಳ ವೈಫಲ್ಯ
ಮಗುವಿಗೆ ಈ ತೊಂದರೆಗಳ ಸಾಧ್ಯತೆ ಇದೆ
ಕಡಿಮೆ ತೂಕ ಮಗುವಿನ ಜನನ
ಹುಟ್ಟುವಾಗಲೇ ಮಗು ಸತ್ತಿರುತ್ತದೆ
ಕಿವಿ ಕೇಳದಿರುವುದು
ನರದೋಷ
ಬುದ್ಧಿಮಾಂದ್ಯತೆ
ಅಸಹಜ ಬೆಳವಣಿಗೆ
ಈ ಡೆಂಗ್ಯೂ ಬಾರದಂತೆ ತಡೆಗಟ್ಟಬಹುದೇ?
ಹೌದು ನೀವು ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸಿದರೆ ಡೆಂಗ್ಯೂ ಬಾರದಂತೆ ತಡೆಗಟ್ಟಬಹುದು, ಮೈ ಸಂಪೂರ್ಣ ಮುಚ್ಚುವ ಸಡಿಲವಾದ ಬಟ್ಟೆ ಧರಿಸುವುದು, ಸೊಳ್ಳೆ ಪರದೆ ಬಳಕೆ , ಸೊಳ್ಳೆ ನಿಯಂತ್ರಿಸುವ ಕ್ರಮಗಳನ್ನುಅನುಸರಿಸುವುದು ಈ ಬಗೆಯ ಮುನ್ನೆಚ್ಚರಿಕೆಯಿಂದ ಸೊಳ್ಳೆ ಕಡಿತದಿಂದ ಪಾರಾಗಿ ಡೆಂಗ್ಯೂವಿನಿಂದ ನಿಮ್ಮ ಹಾಗೂ ಮಗುವಿನ ಆರೋಗ್ಯ ರಕ್ಷಣೆ ಮಾಡಬಹುದು.
ಹಾಗಾಗಿ ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸಿ, ಹೊರಗಡೆ ಹೋಗುವಾಗ ಸೊಳ್ಳೆ ಕಚ್ಚದಿರಲು ಸಿಗುವ ಕ್ರಿಮ್ ಅಥವಾ ಸ್ಪ್ರೇ ಬಳಸಿ.



Click it and Unblock the Notifications