Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಹಜ ಗರ್ಭಧಾರಣೆಯಾಗಲ್ಲ, ಚಿಕಿತ್ಸೆ ಬೇಕಾಗಿದೆ ಎಂದು ಯಾವಾಗ ನಿರ್ಧರಿಸಬೇಕು?
ದಂಪತಿಗಳಿಗೆ ಸಂತಾನೋತ್ಪತ್ತಿ ಅನ್ನುವುದು ಮೊದಲಿನಷ್ಟು ಈಗ ಸುಲಭವಲ್ಲ. ಬೇರೆ ಬೇರೆ ಕಾರಣಗಳಿಂದಾಗಿ ಫರ್ಟಿಲಿಟಿ ಅಥವಾ ಮಹಿಳೆಯರಲ್ಲಿ ಫಲವತ್ತತೆ ಕಡಿಮೆಯಾಗುತ್ತಾ ಬಂದಿದೆ ಎನ್ನಬಹುದು. ಹಾಗಾಗಿ ಮಹಿಳೆಯರು ತಾವು ಗರ್ಭಿಣಿ ಆಗಬೇಕು ಮಗುವನ್ನು ಹೆರಬೇಕು ಎನ್ನುವ ಕನಸನ್ನು ಸಾಕಾರಗೊಳಿಸಿಕೊಳ್ಳಲು ವೈದ್ಯಕೀಯ ಚಿಕಿತ್ಸೆಯ ಮೋರೆ ಹೋಗಬೇಕು. ಈಗಂತೂ ಫರ್ಟಿಲಿಟಿಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿವೆ. ಹಾಗಾಗಿ ಯಾವುದೇ ಚಿಂತೆ ಇಲ್ಲದೆ ಮಗುವನ್ನು ಪಡೆಯುವುದಕ್ಕೆ ಸಾಧ್ಯತೆ ಇದೆ.
ಫರ್ಟಿಲಿಟಿ ಚಿಕಿತ್ಸೆ ಎಂದರೇನು?
ಮಹಿಳೆ ಅಥವಾ ಪುರುಷರಲ್ಲಿ ಇರುವ ಬಂಜೆತನವನ್ನು ಗುರುತಿಸಿ ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿ ಮಗು ಆಗುವಂತೆ ನೋಡಿಕೊಳ್ಳುವುದು. ಯಾವಾಗ ಪುರುಷನ ವೀರ್ಯಾಣು ಸ್ತ್ರೀಯ ಅಂಡಾಣು ಜೊತೆಗೆ ಸೇರಿ ಅದು ಫಾಲೋಪಿಯನ್ ಟ್ಯೂಬ್ ಮೂಲಕ ಗರ್ಭಾಶಯಕ್ಕೆ ಹೋಗಿ ಗರ್ಭಾಶಯದ ಒಳಭಾಗಕ್ಕೆ ಫಲವತ್ತಾಗಿರುವ ಮೊಟ್ಟೆ ಅಂಟಿಕೊಂಡು ಗರ್ಭಧಾರಣೆ ಆಗುತ್ತದೆ. ಈ ಪ್ರಕ್ರಿಯೆ ನೈಸರ್ಗಿಕವಾಗಿ ನಡೆಯದೆ ಇದ್ದಲ್ಲಿ ನೀವು ವೈದ್ಯಕೀಯ ಚಿಕಿತ್ಸೆಯ ಮೊರೆ ಹೋಗಬಹುದು.

ನಿಮಗೆ ಸಂತಾನೋತ್ಪತ್ತಿ ಚಿಕಿತ್ಸೆ ಚಿಕಿತ್ಸೆ ಯಾವಾಗ ಬೇಕು?
- ನೀವು 35 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಒಂದು ವರ್ಷದಿಂದ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ
- ನೀವು 35 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದು ಕಳೆದ ಆರು ತಿಂಗಳಿನಿಂದ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ
- ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದೀರಿ ಆದರೆ ನಿಮಗೆ ಇರ್ರೆಗ್ಯುಲರ್ ಅಥವಾ ತುಂಬಾ ನೋವಿರುವಂತಹ ಋತುಚಕ್ರ ಅನುಭವಿಸುತ್ತಿದ್ದರೆ ಎಂಡೋಮೆಟ್ರಿಯೋಸಿಸ್, ಪೆಲ್ವಿಕ್ ಕಾಯಿಲೆ ಅಥವಾ ಈ ಹಿಂದೆ ಗರ್ಭಪಾತವನ್ನ ಅನುಭವಿಸಿದ್ದರೆ
- ನಿಮಗೆ ಮಾತ್ರವಲ್ಲದೆ ಪುರುಷರಲ್ಲಿಯೂ ಯಾವುದಾದ್ರೂ ಸಮಸ್ಯೆ ಇದ್ದರೆ ಇಂತಹ ಸಮಸ್ಯೆ ನಿಮ್ಮಲ್ಲಿ ಇದ್ದರೆ ನೀವು ಹೆಚ್ಚು ವಿಳಂಬ ಮಾಡದೆ ಫರ್ಟಿಲಿಟಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಒಳ್ಳೆಯದು. ಆದರೆ ನೀವು ಈಗಷ್ಟೇ ಮದುವೆ ಆಗಿದ್ದೀರಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಪ್ರಯತ್ನಿಸುತ್ತಿದ್ದೀರಿ ಎಂದರೆ ಆ ಪ್ರಯತ್ನವನ್ನು ಮುಂದುವರಿಸಿ. ಸಂತಾನೋತ್ಪತ್ತಿಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಆದರೆ ಒಂದು ವರ್ಷದವರೆಗೂ ನೀವು ಯಾವುದೇ ಒತ್ತಡವನ್ನು ತೆಗೆದುಕೊಳ್ಳದೆ ಗರ್ಭಿಣಿಯಾಗಲು ಪ್ರಯತ್ನಿಸಬಹುದು. ಅದಕ್ಕೂ ಮೀರಿ ನಿಮ್ಮ ಕನಸು ನನಸಾಗದೆ ಇದ್ದಲ್ಲಿ ಮತ್ತೆ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಬಹುದು.
ಫರ್ಟಿಲಿಟಿ ಟ್ರೀಟ್ಮೆಂಟ್ ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಈ ಕಾರಣಗಳಿಗೆ ಸಂಪರ್ಕಿಸಿ!
ನಿಮ್ಮ ಆರೋಗ್ಯದ ಬಗ್ಗೆ ಮಾತನಾಡಿ: ಮೊದಲು ವೈದ್ಯರನ್ನು ಸಂಪರ್ಕಿಸಿ. ನೇರವಾಗಿ ಫರ್ಟಿಲಿಟಿ ಟ್ರೀಟ್ಮೆಂಟ್ ತೆಗೆದುಕೊಳ್ಳುವ ಅಗತ್ಯವಿಲ್ಲ ಅದರ ಬದಲು ನಿಮ್ಮ ವೈಯಕ್ತಿಕ ವಿಚಾರದ ಬಗ್ಗೆ ವೈದ್ಯರ ಬಳಿ ಮಾತನಾಡಬೇಕು. ನಿಮಗೆ ಯಾವುದಾದರೂ ಅನಾರೋಗ್ಯದ ಹಿಸ್ಟರಿ ಇದಿಯಾ ಅಥವಾ ನಿಮ್ಮ ಪಾರ್ಟ್ನರ್ ಗೆ ಏನಾದರೂ ಆರೋಗ್ಯದ ಸಮಸ್ಯೆ ಇದೆಯಾ ಎಂಬುದನ್ನ ವೈದ್ಯರಿಗೆ ತಿಳಿಸಬೇಕು.
ಫ್ಯಾಮಿಲಿ ಆರೋಗ್ಯದ ಹಿಸ್ಟರಿ: ನಿಮ್ಮ ಅಥವಾ ನಿಮ್ಮ ಸಂಗಾತಿಯ ಮನೆಯವರ ಆರೋಗ್ಯದ ಹಿಸ್ಟರಿಯನ್ನು ಕೂಡ ವೈದ್ಯರಿಗೆ ತಿಳಿಸಬೇಕು. ಸಂತಾನೋತ್ಪತ್ತಿ ಅಥವಾ ಬೇರೆ ಯಾವುದೇ ಆರೋಗ್ಯದ ವಿಷಯಕ್ಕೆ ಸಂಬಂಧಪಟ್ಟ ಹಾಗೆ ನಿಮ್ಮ ಎರಡು ಫ್ಯಾಮಿಲಿಯಲ್ಲಿ ಏನಾದರೂ ಸಮಸ್ಯೆ ಇದೆಯಾ ಎಂಬುದನ್ನು ಪತ್ತೆ ಹಚ್ಚಿ ವೈದ್ಯರಿಗೆ ತಿಳಿಸಬೇಕು. ಅಂದರೆ ಅನುವಂಶಿಕ ಕಾಯಿಲೆಯ ಬಗ್ಗೆ ಗಮನಹರಿಸಬೇಕು.
ನಿಮ್ಮ ಜೀವನ ಶೈಲಿ ಬದಲಾವಣೆ ಚಿಕಿತ್ಸೆ ಇಲ್ಲದೆ ಗರ್ಭದರಿಸಲು ಸಹಾಯ ಮಾಡಬಹುದು: ನಮ್ಮ ಜೀವನ ಶೈಲಿ ಆಹಾರ ಪದ್ಧತಿ ಎಲ್ಲವೂ ಹದಗೆಟ್ಟಿದೆ. ಹಾಗಾಗಿ ಒತ್ತಡದ ಜೀವನ ಅಥವಾ ಅನಾರೋಗ್ಯಕರವಾದ ಆಹಾರ ಪದ್ಧತಿ ಧೂಮಪಾನ ಮಧ್ಯಪಾನ ಮೊದಲಾದ ವಿಷಯಗಳು ಸಂತಾನೋತ್ಪತ್ತಿ ತಡೆ ಉಂಟುಮಾಡಬಹುದು. ಹಾಗಾಗಿ ಈ ಬಗ್ಗೆ ವೈದ್ಯರ ಬಳಿ ಚರ್ಚೆ ಮಾಡಿ ಜೀವನಶೈಲಿಯನ್ನು ಯಾವ ರೀತಿ ಮೈಗೂಡಿಸಿಕೊಳ್ಳಬೇಕು ಎಂಬುದನ್ನು ವೈದ್ಯರಿಂದ ಸಲಹೆ ಪಡೆದುಕೊಳ್ಳಿ. ವೈದ್ಯರ ಸಲಹೆಯಂತೆ ನಡೆದುಕೊಂಡರೆ ಚಿಕಿತ್ಸೆ ಇಲ್ಲದೆಯೂ ಸಂತಾನೋತ್ಪತ್ತಿ ಆಗುವ ಸಾಧ್ಯತೆ ಇರುತ್ತದೆ.
ಋತುಚಕ್ರದ ಟ್ರ್ಯಾಕಿಂಗ್: ಮಹಿಳೆಯರು ತಮ್ಮ ತಿಂಗಳ ಅವಧಿಯ ದಿನಾಂಕದ ಬಗ್ಗೆ ಗಮನ ಇಟ್ಟುಕೊಳ್ಳುವುದು ಬಹಳ ಮುಖ್ಯ. ಇದರ ಆಧಾರದ ಮೇಲೆ ಸಂಭೋಗವನ್ನು ಕೂಡ ನಡೆಸಬೇಕು. ಆದರೆ ಋತುಚಕ್ರಕ್ಕೆ ಸಂಬಂಧಪಟ್ಟ ಹಾಗೆ ಯಾವುದಾದರೂ ಸಮಸ್ಯೆ ಇದ್ದರೆ ವೈದ್ಯರನ್ನು ಸಂಪರ್ಕಿಸಿ.
ಇಷ್ಟೇ ಅಲ್ಲದೆ ನಿಮ್ಮ ಸಂಗಾತಿಯ ಸ್ಪರ್ಮ್ ಟೆಸ್ಟ್ ಮಾಡಿ. ಅದು ಆರೋಗ್ಯಕರ ಆಗಿದ್ಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ. ಜೊತೆಗೆ ಗರ್ಭಾಶಯ ಹಾಗೂ ಟ್ಯೂಬ್ ನಲ್ಲಿ ಸಮಸ್ಯೆ ಇದೆಯೇ ಎಂಬುದನ್ನು ಕೂಡ ತಿಳಿದುಕೊಳ್ಳಬೇಕು. ಈ ಎಲ್ಲಾ ವಿಷಯಗಳ ಬಗ್ಗೆ ವೈದ್ಯರ ಬಳಿ ಮಾತನಾಡಿ ಫರ್ಟಿಲಿಟಿ ಚಿಕಿತ್ಸೆ ಅಗತ್ಯ ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ.
ಯಾವ ರೀತಿಯ ಚಿಕಿತ್ಸೆಗಳು ಲಭ್ಯ?
ಕಂಟ್ರೋಲ್ಡ್ ಓವರಿಯನ್ ಹೈಪೋಸ್ಟಿಮ್ಯುಲೇಷನ್ (COH)
ಇನ್ ವಿಟ್ರೋ ಫರ್ಟಿಲೈಜೇಷನ್ (IVF)
ಇಂಟ್ರಾ ಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI)
ಇನ್ನು ಈ ಚಿಕಿತ್ಸೆಗಳು ಕೆಲವೊಮ್ಮೆ ದೇಹದ ಮೇಲೆ ಅಡ್ಡ ಪರಿಣಾಮಗಳನ್ನು ಕೂಡ ಉಂಟು ಮಾಡಬಹುದು. ಅವಳಿ ಮಕ್ಕಳ ಜನನ ಅಥವಾ ಹುಟ್ಟಿದ ಮಗುವಿನಲ್ಲಿ ಯಾವುದಾದರೂ ಆರೋಗ್ಯದ ಸಮಸ್ಯೆಗಳು ಪ್ರಿ ಮೆಚ್ಯೂರ್ಡ್ ಬೇಬಿ ಇಂತಹ ಸಮಸ್ಯೆಗಳು ಉಂಟಾಗಬಹುದು ಹಾಗಾಗಿ ಈ ಚಿಕಿತ್ಸೆಗಳ ಬಗ್ಗೆ ಸರಿಯಾಗಿ ವೈದ್ಯರ ಸಲಹೆಯನ್ನು ತೆಗೆದುಕೊಂಡು ಅಗತ್ಯ ಇದ್ದರೆ ಸಂತಾನೋತ್ಪತ್ತಿ ಚಿಕಿತ್ಸೆ ಮಾಡಿಸಬಹುದು. ವೈದ್ಯಕೀಯ ಜಗತ್ತು ಇಂದು ಸಾಕಷ್ಟು ಮುಂದುವರೆದಿದೆ ಹಾಗಾಗಿ ಮಗು ಹೆರಬೇಕು ಅದರ ಲಾಲನೆ ಪಾಲನೆ ಮಾಡಬೇಕು ಎನ್ನುವ ಪ್ರತಿಯೊಬ್ಬ ಹೆಣ್ಣಿನ ಕನಸನ್ನು ನೈಸರ್ಗಿಕವಾಗಿ ಸಾಧ್ಯವಾಗದಿದ್ದರೂ ವೈದ್ಯಕೀಯ ಚಿಕಿತ್ಸೆಗಳ ಮೂಲಕ ನನಸಾಗಿಸಿಕೊಳ್ಳಬಹುದು ಹಾಗಾಗಿ ಹೆಚ್ಚು ಚಿಂತೆ ಮಾಡದೆ ಮುಂದುವರೆಯಿರಿ.



Click it and Unblock the Notifications