Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೀಟ್‌ವೇವ್: ಮನೆಯಲ್ಲಿ ಮಕ್ಕಳಿದ್ದರೆ ಈ ಎಚ್ಚರಿಕೆವಹಿಸಲೇಬೇಕಾಗಿದೆ
ರಣ ಬಿಸಿಲಿನಿಂ ದಾಗಿ ಜನ ಒಂದು ಮಳೆ ಬಂದರೆ ಸಾಕಪ್ಪ ಎಂದು ಎಂದು ವರುಣದೇವನಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಹಗಲು ಹೊತ್ತಿನಲ್ಲಿ ಮಾತ್ರವಲ್ಲ ರಾತ್ರಿಯಲ್ಲೂ ಸೆಕೆಯಿರುವುದರಿಂದ ಕಣ್ಣಿಗೆ ಸುಖ ನಿದ್ದೆ ಹತ್ತುತ್ತಿಲ್ಲ ಎಂದು ಜನ ಒದ್ದಾಡುತ್ತಿದ್ದಾರೆ.ದೊಡ್ಡವರಿಗೇ ಸೆಕೆ ಸಹಿಸಲು ಅಸಾಧ್ಯ ಎಂದ ಮೇಲೆ ಇನ್ನು ಹಸು ಕೂಸುಗಳಿಗೆ ಹೇಗೆ ತಾನೆ ಸಹಿಸಲು ಸಾಧ್ಯ ಅಲ್ವಾ?
ಕರೆಂಟ್ ಹೋದ್ರೆ ಸಾಕು ಮಗು ಅಳಲಾರಂಭಿಸುತ್ತದೆ ಎಂದು ಪೋಷಕರು ಹೇಳುತ್ತಿದ್ದಾರೆ, ಇನ್ನು ಫ್ಯಾನ್ ಹಾಕಿದರೂ ಸೆಕೆಯೇನೂ ಕಡಿಮೆಯಾಗುತ್ತಿಲ್ಲ. ದೇಶದಲ್ಲಿ ಕೆಲವು ಕಡೆ ಈಗಾಗಲೇ ಉಷ್ಣಾಂಶ 45 ಡಿಗ್ರಿC ತಲುಪಿದೆ.ಉಷ್ಣಾಂಶ ಹೆಚ್ಚಾದಾಗ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಈ ಹೀಟ್‌ವೇವ್‌ನಿಂದ ಮಕ್ಕಳ ರಕ್ಷಣೆ ಮಾಡಲು ಈ ಟಿಪ್ಸ್ ಅನುಸರಿಸಿ:

* ಮಕ್ಕಳನ್ನು ಪಾರ್ಕ್ ಮಾಡಿದ ಕಾರಿನಲ್ಲಿ ಕೂರಿಸಬೇಡಿ: ಕೆಲವರು ಮಕ್ಕಳನ್ನು ಕಾರಿನಲ್ಲಿ ಕೂರಿಸಿ ಅಂಗಡಿಗೆ ಹೋಗಿ ಏನಾದರೂ ತರುವುದು ಮಾಡುತ್ತಾರೆ. ಯಾವುದೇ ಕಾರಣಕ್ಕೆ ಪಾರ್ಕ್ ಮಾಡಿದ ಕಾರಿನಲ್ಲಿ ಮಕ್ಕಳನ್ನು ಕೂರಿಸಬೇಡಿ. ಅಲ್ಲದೆ ಪಾರ್ಕ್ ಮಾಡಿದ ಕಾರ್ ತೆಗೆಯುವ ಮುನ್ನ ಅದರ ವಿಂಡೋ ಕೆಳಗಿಳಸಿ, ಒಂದೆರಡು ನಿಮಿಷ ಕಳೆದ ಬಳಿಕವಷ್ಟೇ ಮಕ್ಕಳನ್ನು ಕೂರಿಸಿ.
* ಹವಾಮಾನ ಇಲಾಖೆ ನೀಡುವ ಮಾಹಿತಿಯನ್ನು ತಿಳಿದುಕೊಳ್ಳಿ
ನಿಮಗೆ ಉಷ್ಣಾಂಶದ ಬಗ್ಗೆ ಮಾಹಿತಿ ಇದ್ದರೆ ಮಕ್ಕಳನ್ನು ಕರೆದುಕೊಂಡು ಹೊರಗಡೆ ಹೋಗುವುದನ್ನು ತಪ್ಪಿಸಬಹುದು. ವಿನಾಕಾರಣ ಮಕ್ಕಳ ಜೊತೆ ಮನೆಯಿಂದ ಹೊರಗಡೆ ಹೋಗಬೇಡಿ. ಮಕ್ಕಳನ್ನು ಬಿಸಿಲಿನಲ್ಲಿ ಆಡಲು ಬಿಡಬೇಡಿ. ಮನೆಯ ಒಳಗಡೆಯೇ ಆಡಲು ಬಿಡಿ.
* ಮನೆಯನ್ನು ತಂಪಾಗಿ ಇಡಿ
ಮನೆಯನ್ನು ತಂಪಾಗಿಡಲು ಮಂದವಾದ ಕರ್ಟನ್ ಬಳಸಿ, ಫ್ಯಾನ್ ಅಥವಾ ಎಸಿ ಬಳಸಿ. ಚಿಕ್ಕ ಮಕ್ಕಳಾದರೆ ಬಟ್ಟೆ ಇಲ್ಲದಿದ್ದರೂ ಆಗುತ್ತೆ, ಸ್ವಲ್ಪ ದೊಡ್ಡ ಮಕ್ಕಳಿಗೆ ತುಂಬಾ ತೆಳುವಾದ ಕಾಟನ್ ಬಟ್ಟೆ ಧರಿಸಿ.
* ಮಕ್ಕಳಿಗೆ ಸನ್‌ಸ್ಕ್ರೀನ್ ಬಳಸಿ
ಮಕ್ಕಳು ಮನೆಯೊಳಗಡೆ ಇದ್ದರೂ ಸನ್‌ಸ್ಕ್ರೀನ್ ಬಳಸಿ. 12-3 ಗಂಟೆಯವರೆಗೆ ಬಿಸಿಲಿನಲ್ಲಿ ಎಲ್ಲಿಯೂ ಕರೆದುಕೊಂಡು ಹೋಗಬೇಡಿ.
* ಸಾಕಷ್ಟು ನೀರು ಕುಡಿಸಿ
ಮಕ್ಕಳು ನೀರು ಕುಡಿಯದಿದ್ದರೆ ಜ್ಯೂಸ್ ಕುಡಿಸಿ. ಒಟ್ಟಿನಲ್ಲಿ ಸಾಕಷ್ಟು ನೀರು ಕುಡಿಸಬೇಕು. ಮಕ್ಕಳು ಕುಡಿಯುತ್ತಿಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ.
* ಮಕ್ಕಳಿಗೆ ಮನೆಯೊಳಗಡೆ ಮನರಂಜನೆಯ ವ್ಯವಸ್ಥೆ ಮಾಡಿ
ಮಕ್ಕಳನ್ನು ಮನೆಯೊಡಗಡೆ ಕೂರಿ ಎಂದರೆ ಅವರಿಗೆ ಕಷ್ಟವಾಗುವುದು. ಆದ್ದರಿಂದ ಇನ್‌ಡೋರ್ ಗೇಮ್‌ಗಳ ಮೂಲಕ ಅವರನ್ನು ಮನರಂಜಿಸಿ
ಮಕ್ಕಳ ಶಾಲೆ ಅಥವಾ ಡೇ ಕೇರ್‌ಗಳಲ್ಲಿ ಉಷ್ಣಾಂಶ ತಡೆಗಟ್ಟಲು ವ್ಯವಸ್ಥೆ ಇದೆಯೇ ಎಂದು ವಿಚಾರಿಸಿ. ನಿಮ್ಮ ಮಕ್ಕಳಿರುವ ಶಾಲೆಯಲ್ಲಿ ಫ್ಯಾನ್‌ನ ವ್ಯವಸ್ಥೆ ಇರಬೇಕು. ಇಲ್ಲದಿದ್ದರೆ ಕಳುಹಿಸಬೇಡಿ, ಏಕೆಂದರೆ ಹೀಟ್‌ವೇವ್ ಸಮಯದಲ್ಲಿ ಮಕ್ಕಳ ಆರೋಗ್ಯ ತುಂಬಾನೇ ಮುಖ್ಯವಾಗುತ್ತೆ.
ಹೀಟ್ ವೇವ್ ಸಮಯದಲ್ಲಿ ಮಕ್ಕಳನ್ನು ತುಂಬಾನೇ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಸೆಕೆಯೆಂದು ಫ್ರಿಡ್ಜ್ ನೀರು ಕೊಡಬೇಡಿ, ಐಸ್‌ಕ್ರೀಮ್, ತಂಪು ಪಾನೀಯ ನೀಡಬೇಡಿ. ಬದಲಿಗೆ ಎಳನೀರು, ಲಸ್ಸಿ, ಫ್ರೂಟ್ ಜ್ಯೂಸ್ ಇವುಗಳನ್ನು ನೀಡಿ. ಗಂಜಿ, ಮೊಸರನ್ನ ಈ ಬಗೆಯ ಆಹಾರ ನೀಡಿ. ಚಿಪ್ಸ್, ಮಸಾಲೆ ಪದಾರ್ಥಗಳು, ಪಿಜ್ಜಾ, ಬರ್ಗರ್ ಇವುಗಳನ್ನು ದೂರವಿಡಿ. ಹಣ್ಣು, ತರಕಾರಿಗಳು ನಿಮ್ಮ ಆಹಾರದಲ್ಲಿ ಹೆಚ್ಚಾಗಿರಲಿ. ಮಕ್ಕಳು ಫ್ರೂಟ್ ಸಲಾಡ್ ಇಷ್ಟಪಡುತ್ತಾರೆ. ಅದನ್ನು ಮಾಡಿಕೊಡಿ. ಪೋಷಕರೇ ನೀವು ಎಷ್ಟು ಎಚ್ಚರಿಕೆವಹಿಸುತ್ತೀರೋ ಅಷ್ಟೇ ಒಳ್ಳೆಯದು.



Click it and Unblock the Notifications

