Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಾಯಿ ಮಗುವಿಗೆ ಮುತ್ತಿಕ್ಕಿರುವುದರಿಂದ ಮಗುವಿಗೆ ಈ ಪ್ರಯೋಜನಗಳಿವೆ
ತಾಯಿಗೆ ತನ್ನ ಮಗುವಿಗೆ ಎಷ್ಟು ಮುತ್ತಿಕ್ಕಿದ್ದರೂ ಸಾಲದು, ಮಗು ನಕ್ಕರೂ, ಅತ್ತರೂ, ನಿದ್ದೆ ಮಾಡುತ್ತಿದ್ದರೂ ತಾಯಿಗೆ ತನ್ನ ಮುದ್ದು ಕಂದನ ಮುಖ ನೋಡುತ್ತಿದ್ದಂತೆ ಮುತ್ತಿಕ್ಕಬೇಕೆನಿಸುವುದು. ಮಗು ಕೂಡ ಅಷ್ಟೇ ತಾಯಿ ಮುತ್ತಿಕ್ಕಿದರೆ ತುಂಬಾ ಖುಷಿಯಿಂದ ಮುಖ ಅರಳಿಸುತ್ತದೆ, ತಾಯಿ ಮುತ್ತು ನೀಡಿದಾಗ ಮಗುವಿಗೆ ಏನೋ ರೀತಿಯ ಸುರಕ್ಷತೆಯ ಅನುಭವ ಉಂಟಾಗಿದೆ ಎಂದು ಮಗುವನ್ನು ನೋಡಿದಾಗಲೇ ಅನಿಸುವುದು.
ಸ್ವಲ್ಪ ಹೊತ್ತು ಮಗುವನ್ನು ಬಿಟ್ಟು ಹೊರಗಡೆ ಹೋಗಿ ಬಂದ ತಕ್ಷಣ ಮಗುವನ್ನು ನೋಡುತ್ತಿದ್ದಂತೆ ಅಯ್ಯೋ ನನ್ನ ಮುದ್ದು ಎಷ್ಟು ಹೊತ್ತಾಯ್ತು ನಿನ್ನ ನೋಡಿ ಎಂದು ಎತ್ತಿ ಮುದ್ದಾಡುತ್ತೇವೆ. ಬೆಳಗ್ಗೆ ಎದ್ದಾಗಿನಿಂದ ಮಲಗುವವರೆಗೆ ಎಷ್ಟು ಸಲ ಮುತ್ತಿಕ್ಕುತ್ತೇವೆ ಎಂಬುವುದು ಬಹುಶಃ ಲೆಕ್ಕಕ್ಕೇ ಸಿಗುವುದಿಲ್ಲ ಅಲ್ವಾ?
ಮಗುವಿಗೆ ತಾಯಿ ಮುತ್ತಿಕ್ಕಿರುವುದರಿಂದ ಮಗುವಿನಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚುವುದು
ನಿಮಗೆ ಅಚ್ಚರಿ ಅನಿಸಿದರೂ ಇದು ಸತ್ಯ.

ನೀವು ನಿಮ್ಮ ಮಗುವಿಗೆ ಮುತ್ತಿಕ್ಕುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂಬುವುದು ವೈಜ್ಞಾನಿಕ ಸಾಬೀತಾದ ಸತ್ಯ. ಆದರೆ ಮಗುವಿನ ತುಟಿಗೆ ಮುತ್ತಿಕ್ಕಬೇಡಿ. ನಮ್ಮ ಬಾಯಲ್ಲಿರುವ ಬ್ಯಾಕ್ಟಿರಿಯಾ ಮಗುವಿನ ಬಾಯಿಗೆ ಸೇರಬಹುದು. ಮಗುವಿನ, ಕೆನ್ನೆ, ಹಣೆಗೆ ಮುತ್ತಿಕ್ಕಿ.
ಮಗುವಿಗೆ ತಾಯಿ ಮುತ್ತಿಕ್ಕಿದಾಗ ಸುರಕ್ಷತೆಯ ಭಾವ ಹೆಚ್ಚುವುದು
ಮಗು ತಾಯಿ ಅಪ್ಪುಗೆಯನ್ನು ಬೇಗನೆ ಗುರುತಿಸುತ್ತದೆ. ತಾಯಿ ಕೈಯಲ್ಲಿ ಅದು ಅನುಭವಿಸು ಸುರಕ್ಷತೆನೇ ಬೇರೆ. ತಾಯಿ ಬಿಗಿದಪ್ಪಿದ್ದಾಗ ಅದು ಅದಕ್ಕೆ ತಾಯಿಗೆ ಬೆಚ್ಚಗಿನ ಅನುಭವದ ಜೊತೆ ತಾಯಿ ಮುತ್ತಿಕ್ಕಿದಾಗ ಪ್ರೀತಿ ಸಿಗುವುದರಿಂದ ಅದಕ್ಕೆ ತುಂಬಾನೇ ಸುರಕ್ಷತೆ ಅನುಭವ ಉಂಟಾಗುವುದು. ಮಗು ತುಂಬಾ ಗಾಬರಿಯಾದಾಗ ತಾಯಿ ಬಿಗಿದಪ್ಪಿ ಮುತ್ತಿಕ್ಕಿದರೆ ಆ ಟೆನ್ಷನ್ ತುಂಬಾನೇ ಕಡಿಮೆಯಾಗುವುದು.
ಕಿಸ್ ಮತ್ತು ನಗು
* ತಾಯಿ ಮಗುವನ್ನು ನೋಡಿ ನಕ್ಕಿದಾಗ ಆ ಮಗುವಿಗೆ ತುಂಬಾನೇ ಖುಷಿಯಾಗುವುದು.
* ಮಗುವಿನಲ್ಲಿರುವ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ತಾಯಿಗ ನಗು ಹಾಗೂ ಮುತ್ತಿಕ್ಕಿದೆ.
* ತಾಯಿ ಹಾಗೂ ಮಗುವಿನ ಬಾಂಧವ್ಯ ಮತ್ತಷ್ಟು ಗಟ್ಟಿ ಮಾಡುತ್ತದೆ.
* ತಾಯಿಗೂ ಅಷ್ಟೇ ಮಾನಸಿಕ ಒತ್ತಡ ಕಡಿಮೆಯಾಗುವುದು
* ಮಗುವಿನ ಉತ್ತಮ ಮಾನಸಿಕ ಬೆಳವಣಿಗೆಗೆ ತುಂಬಾನೇ ಸಹಕಾರಿ.
ಈ ಸಂದರ್ಭದಲ್ಲಿ ಮಗುವಿಗೆ ಮುತ್ತಿಕ್ಕಬೇಡಿ
* ಶೀತ, ಜ್ವರ: ನಮ್ಮ ಮಗು ತುಂಬಾ ಸೆನ್ಸಿಟಿವ್ ಆಗಿರುತ್ತದೆ. ನಮಗೆ ಎಷ್ಟೇ ಪ್ರೀತಿಯಿದ್ದರೂ ನಿಮ್ಮ ಆರೋಗ್ಯ ಸರಿಯಿಲ್ಲ ಎಂದರೆ ಮುತ್ತಿಕ್ಕಬೇಡಿ. ಕಾಯಿಲೆ ಮಗುವಿಗೂ ಹರಡುವುದು.
* ಉಸಿರಾಟದ ತೊಂದರೆ: ಉಸಿರಾಟದ ತೊಂದರೆಯಿದ್ದರೆ ಮಗುವಿಗೆ ಮುತ್ತಿಕ್ಕಬಾರದು.
* ಎಂಜಲಿನಿಂದ ಹರಡುವ ಕಾಯಿಲೆಯಿದ್ದರೆ: ಎಂಜಲಿನಿಂದ ಹರಡುವ (Mononucleosis) ಕಾಯಿಲೆಯಿದ್ದರೆ ಮಗುವಿಗೆ ಮುತ್ತಿಕ್ಕಬಾರದು.
* ಹರಡುವ ಕಾಯಿಲೆಯಿದ್ದರೆ: ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಸಂಪೂರ್ಣ ಗುಣಮುಖರಾಗುವವರೆಗೆ ಮಗುವಿಗೆ ಮುತ್ತಿಕ್ಕಬೇಡಿ.



Click it and Unblock the Notifications
