Latest Updates
-
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ
ಸ್ತ್ರೀರೋಗ ತಜ್ಞೆ ಹೇಳುತ್ತಾರೆ ತಾಯಂದಿರು ಹೀಗೆ ಮಾಡಿದರೆ ಮಗು ಹಾಗೂ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಮಗುವಾದ ಮೇಲೆ ಆ ತಾಯಿ ತನ್ನ ಸಂಪುರ್ಣ ಗಮನವನ್ನು ಮಗುವಿನ ಆರೋಗ್ಯದ ಕಡೆಗೆ ಕೊಡುತ್ತಾಳೆ. ಮಗುವಿನ ಆರೈಕೆಯಲ್ಲಿ ತನ್ನ ದೇಹ, ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಾಳೆ.
ಆದರೆ ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಡಾ. ಶ್ರೀಜಾ ರಾಣಿ ವಿ.ಆರ್ ಅವರು ತಾಯಿಯು ತನ್ನ ಮತ್ತು ಮಗುವಿನ ಆರೋಗ್ಯದ ಕಡೆಯೂ ಗಮನಹರಿಸಬೇಕು.
ಹೆರಿಗೆಯ ಬಳಿಕ ತಾಯಂದಿರು ಮಾಡುವ ಸಾಮಾನ್ಯ ತಪ್ಪುಗಳೇನು? ಈ ಬಗೆಯ ಅಜಾಗರೂಕತೆ ಶಿಶುಗಳ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ವಿವರಿಸಿದ್ದಾರೆ.

ತಾಯಿಯ ಪಾತ್ರವು ತನ್ನ ಮಗುವಿನ ಪೋಷಣೆ ಹಾಗೂ ಆರೈಕೆಯಷ್ಟೇ ಸೀಮಿತವಾಗಿಲ್ಲ.
ಮಗುವಿನ ಸಾಮಾಜಿಕ, ಭಾವನಾತ್ಮಕ, ದೈಹಿಕ, ಸ್ವಾತಂತ್ರ್ಯ ಬೆಳವಣಿಗೆ ಸೇರಿದಂತೆ ಮಗುವಿನ ಬೆಳವಣಿಗೆಯ ವಿವಿಧ ಆಯಾಮಗಳಲ್ಲಿ ತಾಯಿಯೇ ಮೊದಲ ಶಿಕ್ಷಕಿಯಾಗಿರುತ್ತಾಳೆ. ಮಗುವಿನ ಜೊತೆ ತಾಯಿ ಆಳವಾದ ಬಾಂಧವ್ಯವನ್ನು ಹೊಂದಿರುತ್ತಾಳೆ. ಶಿಶುಗಳ ಆರಂಭಿಕ ಹಂತದಲ್ಲಿ ತಾಯಂದಿರು ಒದಗಿಸುವ ನಿರಂತರ ಆರೈಕೆ, ಆಹಾರ, ಆಶ್ರಯ, ಶುಚಿಗೊಳಿಸುವಿಕೆ, ಬಟ್ಟೆ ತೊಡಿಸುವುದು ಹಾಗೂ ಸಾಂತ್ವನವು ಬೆಳವಣಿಗೆಯ ಪ್ರಮುಖ ಅಂಶಗಳಾಗಿವೆ. ಇನ್ನು ಮಗು ಬೇಗ ಮಾತನಾಡುವಂತೆ ಆಗಲು ಕೂಡ ತಾಯಿಯ ಮಾತ್ರ ಮುಖ್ಯವಾಗಿರುತ್ತದೆ.
ಮಗುವಿನ ಅರೋಗ್ಯಕ್ಕಾಗಿ ಗರ್ಭದಿಂದಲೇ ಜಾಗ್ರತೆ ಮಾಡಬೇಕು
ತಾಯಿ ಗರ್ಭಿಣಿಯಾಗಿದ್ದಾಗ ಪೌಷ್ಠಿಕ ಆಹಾರ ಸೇವಿಸಬೇಕು, ಇದರಿಂದಾಗಿ ಮಗುವಿನ ಬೆಳವಣಿಗೆಗೆ ತುಂಬಾನೇ ಸಹಕಾರಿ. ತಾಯಿಯು ತನ್ನ ಆರೋಗ್ಯದ ಕಡೆಯೂ ಗಮನಹರಿಸಬೇಕು, ಅತಿಯಾದ ಮಾನಸಿಕ ಒತ್ತಡ ತೆಗೆದುಕೊಳ್ಳಬಾರದು.
ಕಬ್ಬಿಣದಂಶವಿರುವ ಆಹಾರ ಹಾಗೂ ಪೋಲಿಕ್ ಆಮ್ಲದಂತಹ ಅಗತ್ಯ ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕು, ಪೋಷಕಾಂಶ ಸಪ್ಲಿಮೆಂಟ್ ತೆಗೆದುಕೊಳ್ಳಲು ಸೂಚಿಸಿದರೆ ತೆಗೆದುಕೊಳ್ಳಬೇಕು. ಇದರಿಂದಾಗಿ ಮಗುವಿನ ಬೆಳವಣಿಗೆ ಚೆನ್ನಾಗಿರುತ್ತದೆ. ತಾಯಿಯ ಆರೋಗ್ಯವೂ ಉತ್ತಮವಾಗಿರುತ್ತದೆ.
ಸ್ತನ ಪಾನ
ಸ್ತನ್ಯಪಾನವು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ತುಂಬಾನೇ ಅವಶ್ಯಕ, ಅಲ್ಲದೆ ಅವರಿಬ್ಬರ ನಡುವೆ ಒಂದು ಒಳ್ಳೆಯ ಭಾವನಾತ್ಮಕ ಬಾಂಧವ್ಯ ಕೂಡ ಉಂಟು ಮಾಡುತ್ತದೆ. ಇನ್ನು ಮಗುವಿಗೆ 6 ತಿಂಗಳು ತುಂಬುವವರೆಗೆ ತಾಯಿಯ ಎದೆಹಾಲು ಬಿಟ್ಟು ಇನ್ನು ಏನೂ ಕೊಡಬಾರದು, ಒಂದು ವೇಳೆ ಎದೆಹಾಲಿನ ಕೊರತೆಯಿದ್ದರೆ ಫಾರ್ಮುಲಾ ಮಿಲ್ಕ್ ನೀಡಬಹುದು, ಆದರೆ ನೀಡುವ ಮುನ್ನ ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂದು ನೀವು ಮಕ್ಕಳ ತಜ್ಞರ ಸಲಹೆ ಪಡೆಯಬೇಕು.



Click it and Unblock the Notifications
