Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಕ್ಕಳಿಗೆ ನೀಡುವ ಜ್ವರ, ಶೀತದ ಸಿರಾಪ್ ಬ್ಯಾನ್ ಮಾಡಿದ ಸರ್ಕಾರ..! ಏಕೆ ಗೊತ್ತಾ?
ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಎಷ್ಟೆಲ್ಲಾ ಗಮನ ಹರಿಸುತ್ತಾರೆ ಅನ್ನೋದು ನಮಗೆಲ್ಲಾ ಗೊತ್ತಿದೆ. 4ರಿಂದ 5 ವರ್ಷದೊಳಗಿನ ಮಕ್ಕಳ ಆರೋಗ್ಯದ ಮೇಲಂತೂ ಎಲ್ಲಾ ಪೋಷಕರು ಹದ್ದಿನ ಕಣ್ಣಿಟ್ಟಿರುತ್ತಾರೆ. ಏಕಂದ್ರೆ ಈ ವರ್ಷದಲ್ಲಿ ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತೆ. ಹಾಗೆ ಅವರಿಗೆ ಬೇಕಾದ ಔಷಧಿಗಳನ್ನ ಮನೆಯಲ್ಲಿ ಮುಂಚಿತವಾಗಿಯೇ ಇಟ್ಟುಕೊಳ್ಳಲು ಪೋಷಕರು ಇಚ್ಛಿಸುತ್ತಾರೆ.
ಆದ್ರೆ ಕೆಲವೊಮ್ಮೆ ಮಕ್ಕಳಿಗೆ ನೀಡಬೇಕಾದ ಔಷಧಗಳನ್ನು ನಾವು ನೇರವಾಗಿ ಮೆಡಿಕಲ್ ಮೂಲಕವೇ ತಂದುಬಿಡುತ್ತೇವೆ. ವೈದ್ಯರ ಬಳಿ ತೆರಳುವ ಬದಲು ಸಣ್ಣ ಸಣ್ಣ ಕಾಯಿಲೆಗೆ ನೇರವಾಗಿ ಮೆಡಿಕಲ್‌ಗೆ ತೆರಳಿ ಔಷಧಿ ತಂದುಬಿಡುತ್ತೇವೆ. ಹೀಗೆ ಮಾಡುವುದರಿಂದ ಕಾಯಿಲೆ ಬೇಗ ವಾಸಿಯಾಗುವ ಬದಲು ಅಪಾಯವೇ ಹೆಚ್ಚು.

ಇದೀಗ 4 ವರ್ಷದ ಕೆಳಗಿರುವ ಮಕ್ಕಳಿಗೆ ನೀಡಲಾಗುವ ಔಷಧಿಗಳಲ್ಲಿ ಅಪಾಯವನ್ನು ಗುರುತಿಸಿರುವ ಸರ್ಕಾರವು ಅವುಗಳನ್ನು ನಿಷೇಧಿಸಿ ಆದೇಶಿಸಿದೆ. ದೇಶದ ಅಪೆಕ್ಸ್ ಹೆಲ್ತ್ ರೆಗ್ಯುಲೇಟರಿ ಏಜೆನ್ಸಿ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO), ಶಿಶುಗಳು ಮತ್ತು ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶೀತ-ವಿರೋಧಿ ಕಾಕ್ಟೈಲ್ ಔಷಧ ಸಂಯೋಜನೆಯ ಬಳಕೆಯನ್ನು ನಿಷೇಧಿಸಲು ನಿರ್ಧರಿಸಿದೆ.
GlaxoSmithKline ನ ಟಿ-ಮಿನಿಕ್ ಓರಲ್ ಡ್ರಾಪ್ಸ್, ಗ್ಲೆನ್‌ಮಾರ್ಕ್‌ನ ಆಸ್ಕೋರಿಲ್ ಫ್ಲೂ ಸಿರಪ್ ಮತ್ತು IPCA ಲ್ಯಾಬೊರೇಟರೀಸ್‌ನ ಸೊಲ್ವಿನ್ ಕೋಲ್ಡ್ ಸಿರಪ್ ಅನ್ನು ಉತ್ಪಾದಿಸುವ ಫಾರ್ಮಾ ಸಂಸ್ಥೆಗಳು 'ಎಚ್ಚರಿಕೆ' ಸಂದೇಶವನ್ನು ಲಗತ್ತಿಸಿ ಮಾರುಕಟ್ಟೆಗೆ ಉತ್ಪನ್ನ ತರಬೇಕು ಎಂದು ನಿಯಂತ್ರಣ ಹೇರಲಾಗಿದೆ.
ಈ ಔಷಧಿಗಳ ಮೇಲೆ ನಿಯಂತ್ರಣವೇಕೆ?
ಕ್ಲೋರ್‌ಫೆನಿರಮೈನ್ ಮೆಲೇಟ್ ಮತ್ತು ಫೆನೈಲ್‌ಫ್ರಿನ್ ಎಂಬ ಎರಡು ಔಷಧಿಗಳ ಕಾಕ್‌ಟೈಲ್ ಬಳಸಿ ತಯಾರಿಸಿದ ಉತ್ಪನ್ನಗಳ ಪ್ಯಾಕೇಜ್‌ನಲ್ಲಿ ಔಷಧಿ ತಯಾರಿಸಲು ಬಳಸಿರುವ ರಾಸಾಯನಿಕಗಳ ಕುರಿತು ಮಾಹಿತಿ ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಂದ್ರ ಸರ್ಕಾರವು ಪತ್ರ ಬರೆದಿದೆ.
ಈ ಸಂಯೋಜನೆಯು ಕಣ್ಣುಗಳಿಂದ ನೀರು ಬರುವುದು, ಶೀತ ಮತ್ತು ಮೂಗು ಅಥವಾ ಗಂಟಲಿನ ತುರಿಕೆ ಸೇರಿದಂತೆ ಜ್ವರ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕ್ಲೋರ್ಫೆನಿರಮೈನ್ ಮೆಲೇಟ್ ಅಲರ್ಜಿ-ವಿರೋಧಿಯಾಗಿ ಕಾರ್ಯನಿರ್ವಹಿಸುತ್ತದೆ, ಫಿನೈಲ್ಫ್ರಿನ್ ಡಿಕೊಂಜೆಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ, ಮೂಗು ಕಟ್ಟಿದ್ದರೆ ಅಥವಾ ಸ್ಟಫ್ನೆಸ್‌ನಿಂದ ಪರಿಹಾರ ನೀಡುತ್ತವೆ.
ಮಕ್ಕಳಲ್ಲಿ ಈ ಔಷಧ ಬಳಕೆ ಅಪಾಯ
ಸ್ಥಿರ-ಡೋಸ್ ಸಂಯೋಜನೆ (fixed-dose combination) ಎಂದು ಕರೆಯಲ್ಪಡುವ ಸಂಯೋಜನೆಯು ಈಗಾಗಲೇ 'ತರ್ಕಬದ್ಧವಲ್ಲ' ಎಂದು ಪರಿಶೀಲನೆ ಸರ್ಕಾರದ ಸಮಿತಿಯೇ ದೃಢಪಡಿಸಿದೆ. 'ಕ್ಲೋರ್ಫೆನಿರಮೈನ್ ಮ್ಯಾಲೇಟ್ IP 2mg + Phenylephrine HCI IP 5mg ಡ್ರಾಪ್ ಪ್ರತಿ ಮಿಲಿಯ FDC ಅನ್ನು ಪ್ರೊ. ಕೊಕಾಟೆ ಅವರ ಸಮಿತಿಯು ತರ್ಕಬದ್ಧವೆಂದು ಘೋಷಿಸಿತು ಮತ್ತು ಸಮಿತಿಯ ಶಿಫಾರಸಿನ ಆಧಾರದ ಮೇಲೆ ಉತ್ಪಾದನೆ ಮತ್ತು ಮಾರುಕಟ್ಟೆಗಾಗಿ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (NOC) ನೀಡಲಾಗಿದೆ.
ಆದರೆ ಮಕ್ಕಳಲ್ಲಿ ಈ ಔಷಧ ಬಳಕೆ ಕಳವಳ ಹುಟ್ಟಿಸಿತ್ತು. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಎಫ್‌ಡಿಸಿಯನ್ನು ಬಳಸಬಾರದು ಎಂದು ಸಮಿತಿಯು ಶಿಫಾರಸು ಮಾಡಿದೆ ಮತ್ತು ಅದರ ಪ್ರಕಾರ, ಸಂಸ್ಥೆಗಳು ಲೇಬಲ್ ಮತ್ತು ಪ್ಯಾಕೇಜ್ ಇನ್ಸರ್ಟ್‌ನಲ್ಲಿ ಈ ನಿಟ್ಟಿನಲ್ಲಿ ಅಪಾಯದ ಎಚ್ಚರಿಕೆಯನ್ನು ನಮೂದಿಸಬೇಕು ಎಂದು ಆದೇಶಿಸಲಾಗಿದೆ. ಶಿಶುವೈದ್ಯರ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಒಕ್ಕೂಟದಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸುಮಾರು ಒಂದು ದಶಕದ ಹಿಂದೆ ಶಿಶುಗಳು ಮತ್ತು ಮಕ್ಕಳಿಗಾಗಿ ಇಂತಹ ಉತ್ಪನ್ನಗಳನ್ನು ನಿಷೇಧಿಸಿವೆ.
ಕೆಮ್ಮು, ಶೀತದ ಪ್ರಕರಣದಲ್ಲೇ ಅಡ್ಡಪರಿಣಾಮ ಹೆಚ್ಚು
ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಶೀತ ಹಾಗೂ ಕೆಮ್ಮಿನಂತ ಕಾಯಿಲೆಯಲ್ಲಿ ಈ ಔಷಧಗಳ ಬಳಕೆ ಮಾಡಲಾಗುತ್ತದೆ. ಆದರೆ ಈ ಔಷಧದಿಂದಲೇ ಅಡ್ಡಪರಿಣಾಮಕ್ಕೆ ಒಳಗಾಗಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಸುಮಾರು 7 ಸಾವಿರ ಮಕ್ಕಳು ಕೆಮ್ಮಿನ ಸಿರಾಪ್ ಅಥವಾ ಅದಕ್ಕೆ ಸಂಬಂಧಿಸಿದ ಔಷಧಗಳ ಸೇವನೆಯ ಬಳಿಕ ತುರ್ತು ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಅಮೆರಿಕದ ದತ್ತಾಂಶವೊಂದು ವಿವರಿಸುತ್ತದೆ.



Click it and Unblock the Notifications











