Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಗರ್ಭಾವಸ್ಥೆಯಲ್ಲಿ ಮಧುಮೇಹ: ಓದುಗರೇ ನಿಮ್ಮ ಸಂಶಯಗಳಿಗೆ ಇಲ್ಲಿ ತಜ್ಞರು ನೀಡಿದ್ದಾರೆ ಸೂಕ್ತ ಸಲಹೆ
ಗರ್ಭಾವಸ್ಥೆಯಲ್ಲಿ ಮಧುಮೇಹದ ಬಗ್ಗೆ ತಿಳಿದುಕೊಳ್ಳುವುದರಿಂದತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ತುಂಬಾನೇ ಸಹಕಾರಿಯಾಗುವುದು.
ಗರ್ಭಿಣಿಯರಿಗೆ ಮಧುಮೇಹ ಬಂದರೆ ಏನು ಮಾಡಬೇಕು? ಮಧುಮೇಹ ನಿಯಂತ್ರಣಕ್ಕೆ ಏನು ಮಾಡಿದರೆ ಒಳ್ಳೆಯದು, ಈಗಾಗಲೇ ಮಧುಮೇಹವಿದ್ದರೆ ಗರ್ಭಧಾರಣೆಯಾಗುವುದು ಸುರಕ್ಷತವೇ ಇವೆಲ್ಲದರ ಬಗ್ಗೆ ತಜ್ಞರಾದ ಡಾ. ಶಾರ್ದಾ(Dr.Sharda A, Consultant - Endocrinology, Manipal Hospital Millers Road) ಕನ್ನಡ ಬೋಲ್ಡ್ ಸ್ಕೈ ಓದುಗರಿಗಾಗಿ ತುಂಬಾನೇ ವಿವರವಾಗಿ ವಿವರಿಸಿದ್ದಾರೆ. ಈ ಮಾಹಿತಿಗಳು ಗರ್ಭಿಣಿಯರಿಗೆ ತುಂಬಾ ಸಹಕಾರಿಯಾಗಲಿದೆ:

ಗರ್ಭಿಣಿಯರಿಗೆ ಮಧುಮೇಹದ ಸಮಸ್ಯೆ ಯಾವ ಮಾಸದಲ್ಲಿ ಕಂಡು ಬರುವುದು?
ಗರ್ಭಾವಸ್ಥೆಯಲ್ಲಿ ಮಧುಮೇಹ ಸಾಮಾನ್ಯವಾಗಿ 6ನೇ, 7ನೇ ಅಥವಾ 8ನೇ ತಿಂಗಳಿನಲ್ಲಿ ಕಂಡು ಬರುವುದು, ಹೀಗಾಗಿಯೇ 6 ನೇ ತಿಂಗಳಿನಲ್ಲಿ ಗ್ಲುಕೋಸ್ ಟಾಲೆರೆನ್ಸ್ ಟೆಸ್ಟ್ ಮಾಡಿಸ್ತಾರೆ, ಈ ಟೆಸ್ಟ್‌ನಲ್ಲಿ ಗರ್ಭಾವಸ್ಥೆಯ ಮಧುಮೇಹವಿದೆಯೇ ಇಲ್ಲವೇ? ಎಂಬುವುದನ್ನು ತಿಳಿಯಬಹುದಾಗಿದೆ. ಈ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು, ಇದರಿಂದ ಗರ್ಭಿಣಿಯರಿಗೆ ಮಧುಮೇಹವಿದ್ದರೆ ಅದು ತಿಳಿಯುತ್ತದೆ, ಮುನ್ನೆಚ್ಚರಿಕೆವಹಿಸಿದರೆ ತಾಯಿ ಹಾಗೂ ಮಗುವಿನ ಪ್ರಾಣ ಕಾಪಾಡಲು ಸಹಕಾರಿಯಾಗಿದೆ.
ಗರ್ಭಾವಸ್ಥೆಯಲ್ಲಿ ಮಧುಮೇಹದ ಅಪಾಯಗಳೇನು?
ಮಧುಮೇಹವಿದ್ದರೆ ಅವಧಿ ಪೂರ್ವ ಜನನವಾಗಬಹುದು
ಗರ್ಭಿಣಿಯರಲ್ಲಿ ಬಾತ್ಯಧಿಕ ರಕ್ತದೊತ್ತಡದ ಸಮಸ್ಯೆ ಬರಬಹುದು
ಗರ್ಭಿಣಿಯಾಗಿದ್ದಾಗ ಮಧುಮೇಹ ಬಂದರೆ ಮಗುವಿನ ಗಾತ್ರ ಹೆಚ್ಚಾಗುವ ಸಾಧ್ಯತೆ ಇದೆ
ಅಲ್ಲದೆ ಸಹಜ ಹೆರಿಗೆಗಿಂತ ಸಿ ಸೆಕ್ಷನ್ ಮಾಡಬೇಕಾದ ಅನಿವಾರ್ಯತೆ ಎದುರಾಗುವುದು.
ಮಧುಮೇಹವನ್ನು ನಿಯಂತ್ರಣದಲ್ಲಿಡದಿದ್ದರೆ ಅಪಾಯಗಳೇನು?
ಮಧುಮೇಹ ನಿಯಂತ್ರಣದಲ್ಲಿಡದಿದ್ದರೆ ಜನಿಸುವಾಗ ಮಗು ಸತ್ತು ಹುಟ್ಟುವ ಸಾಧ್ಯತೆ ಇದೆ ಅಥವಾ ಜನಿಸಿದ ಮಗುವಿನಲ್ಲಿ ನ್ಯೂನತೆಗಳು ಕಂಡು ಬರುವ ಸಾಧ್ಯತೆ ಇದೆ. ಮಗುವಿನಲ್ಲಿ ಹೃದಯ ಸಮಸ್ಯೆಗಳು, ಮೂಳೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಮಧುಮೇಹವನ್ನು ನಿಯಂತ್ರಿಸುವುದು ತುಂಬಾನೇ ಮುಖ್ಯವಾಗಿದೆ.
ಮಧುಮೇಹವನ್ನು ನಿಯಂತ್ರಣದಲ್ಲಿಡಲು ಆಹಾರಕ್ರಮ ಸಹಾಯ ಮಾಡುವುದೇ?
ಗರ್ಭಾವಸ್ಥೆಯಲ್ಲಿ ಮಧುಮೇಹವಿದ್ದರೆ ನ್ಯೂಟ್ರಿಷಿಯನ್ ಸಲಹೆ ಪಡೆಯಬೇಕು, ಸಿರಿಧಾನ್ಯಗಳ ಆಹಾರ, ಕೆಂಪಕ್ಕಿ ಅನ್ನ ಇವೆಲ್ಲಾ ಆರೋಗ್ಯಕ್ಕೆ ಒಳ್ಳೆಯದು, ಆರೋಗ್ಯಕರ ಆಹಾರ ಸೇವಿಸಬೇಕು, ಏಕೆಂದರೆ ಮಗುವಿನ ಬೆಳವಣಿಗೆಗೆ ಪೋಷಕಾಂಶದ ಆಹಾರ ತುಂಬಾ ಮುಖ್ಯ. ಇದರ ಜೊತೆಗೆ ದೈಹಿಕ ವ್ಯಾಯಾಮ ( ತಜ್ಞರ ಸಲಹೆ ಪಡೆಯಬೇಕು)ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
ಮಧುಮೇಹ ನಿಯಂತ್ರಣಕ್ಕೆ ಬಾರದಿದ್ದರೆ ಏನು ಮಾಡಬೇಕು?
ಆಹಾರಕ್ರಮದ ಮೂಲಕ ಮಧುಮೇಹ ನಿಯಂತ್ರಣದಲ್ಲಿಡಬಹುದು, ಆದರೂ ನಿಯಂತ್ರಣಕ್ಕೆ ಬರದಿದ್ದರೆ ಮಾತ್ರೆ ಅಥವಾ ಇನ್ಸುಲಿನ್ ನೀಡಲಾಗುವುದು, ಇದರಿಂದ ಯಾವುದೇ ಅಪಾಯವಿಲ್ಲ. ಅಲ್ಲದೆ ಹೆರಿಗೆಯ ಬಳಿಕ ಇನ್ಸುಲಿನ್ ತೆಗೆದುಕೊಳ್ಳುವುದು ಅಥವಾ ಮಾತ್ರೆ ತೆಗೆದುಕೊಳ್ಳುವುದು ಬೇಕಾಗಿಲ್ಲ. ಹೆರಿಗೆಯಾದ ಬಳಿಕ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿರುತ್ತದೆ.
ಯಾರಲ್ಲಿ ಗರ್ಭಾವಸ್ಥೆಯಲ್ಲಿ ಮಧುಮೇಹದ ಅಪಾಯ ಹೆಚ್ಚು?
ವಮಶಪಾರಂಪರ್ಯವಾಗಿ ಬರುವ ಸಾಧ್ಯತೆ ಇದೆ
30ರ ನಂತರ ಗರ್ಭಧಾರಣೆಯಾದರೆ
ಅತ್ಯಧಿಕ ಮೈತೂಕವಿದ್ದರೆ
ಮಧುಮೇಹವಿದ್ದಾಗ ಗರ್ಭಧಾರಣೆಗೆ ಪ್ರಯತ್ನಿಸಬಹುದೇ?
ಕೆಲವರಿಗೆ ಟೈಪ್ 1 ಅಥವಾ ಟೈಪ್ 2 ಮಧುಮೇಹವಿರುತ್ತದೆ ಅಂಥವರು ಗರ್ಭಧಾರಣೆಗೆ ಪ್ರಯತ್ನಿಸುವ ಮುನ್ನ ಸ್ತ್ರೀ ರೋಗ ತಜ್ಞರ ಹಾಗೂ ಮಧುಮೇಹ ತಜ್ಞರ ಸಲಹೆ ಪಡೆದು ಯತ್ನಿಸುವುದು ಒಳ್ಳೆಯದು ಎಂದು ಡಾ. ಶಾರ್ದಾಶಾರದಾ ತಿಳಿಸಿದ್ದಾರೆ.



Click it and Unblock the Notifications
