Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೊರೊನಾ ಸಾಂಕ್ರಮಿಕ ಅವಧಿಯಲ್ಲಿ ಜನಿಸಿದ ಮಕ್ಕಳಲ್ಲಿ ಕಂಡು ಬರುತ್ತಿದೆ ಈ ಸಮಸ್ಯೆ
ಮಹಾಮಾರಿ ಕೊರೊನಾ ಜಗತ್ತನ್ನು ತುಂಬಾನೇ ಕಾಡಿರುವುದು ಒಂದು ದುಃಸ್ವಪ್ನದಂತೆ ನಮ್ಮೆಲ್ಲರ ನೆನಪಿನಲ್ಲಿ ಇದೆ. ಈ ಸಮಯದಲ್ಲಿ ಎಲ್ಲಾ ರೀತಿಯಿಂದಲೂ ಸಮಸ್ಯೆಯಾಗಿತ್ತು, ಅದರ ಅಡ್ಡಪರಿಣಾಮಗಳು ಜನರನ್ನು ಬಾಧಿಸುತ್ತಲೇ ಇದೆ. ಆದರೆ ಇದು ಆ ಸಮಯದಲ್ಲಿ ಜನಿಸಿದ ಮಕ್ಕಳ ಸ್ವಭಾವದ ಮೇಲೆ ತುಂಬಾನೇ ಪಿಣಾಮ ಬೀರಿದೆ ಎಂಬುವುದಾಗಿ ಶಿಕ್ಷಕರು ಹೇಳುತ್ತಿದ್ದಾರೆ.

ಕೊರೊನಾ ಸಮಯದಲ್ಲಿ ಜನಿಸಿದ ಮಕ್ಕಳು ಇತರ ಮಕ್ಕಳಿಗಿಂತ ಭಿನ್ನವಾಗಿದ್ದಾರೆ
ಕೊರೊನಾ ಸಮಯದಲ್ಲಿ ಅಂದರೆ 2019ರಲ್ಲಿ ಇನ್ನೂ ಒಂದು ವರ್ಷ ತುಂಬಿರದ , 2020, 202ರಲ್ಲಿ ಜನಿಸಿದ ಬಹುತೇಕ ಮಕ್ಕಳಲ್ಲಿ ಮಾತಿನ ಸಮಸ್ಯೆ ಕಂಡು ಬರುತ್ತಿದೆ, ಮಕ್ಕಳು ಮಾತನಾಡುವುದು ತಡವಾಗುತ್ತಿದೆ. ಸಾಮಾನ್ಯವಾಗಿ ಮಗು ಒಂದು ವರ್ಷಕ್ಕೆಲ್ಲಾ ಮಾತನಾಡುತ್ತಿದೆ, ಇನ್ನು ಕೆಲ ಮಕ್ಕಳು ಒಂದೂವರೆ ವರ್ಷಕ್ಕೆ ಮಾತನಾಡುತ್ತವೆ ಆದರೆ ಈ ಸಮಯದಲ್ಲಿ ಜನಿಸಿದ ಮಕ್ಕಳು ಎರಡೂವರೆ ಮೂರು ವರ್ಷವಾದರೂ ಅವರಲ್ಲಿ ಮಾತು ತಡವಾಗುತ್ತಿದೆ.
ಯುಎಸ್‌ಎಯ ಪೋರ್ಟ್‌ಲ್ಯಾಂಡ್‌ನಲ್ಲಿರುವ ಒರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿಯಲ್ಲಿ ಮಕ್ಕಳ ತಜ್ಞರಾಗಿರುವ ಡಾ. ಜೈಮ್ ಪೀಟರ್ಸನ್ ಇತರ ಸಮಯದ ಮಕ್ಕಳಿಗೆ ಹೋಲಿಸಿದರೆ ಕೊರೊನಾ ಸಾಂಕ್ರಮಿಕ ಸಮಯದಲ್ಲಿ ಜನಿಸಿದ ಮಕ್ಕಳಿಗೆ ಮಾತಿನಲ್ಲಿ ಸಮಸ್ಯೆಯಾಗುತ್ತಿದೆ ಎಂದು ಆಘಾತಕಾರಿ ವಿಷಯ ತಿಳಿಸಿದ್ದಾರೆ.
ಹೌದು ಈ ಸಮಯದಲ್ಲಿ ಬಹುತೇಕ ಮಕ್ಕಳು ಅಪ್ಪ-ಅಮ್ಮನ ಬಿಟ್ಟು ಬೇರೆ ಯಾರನ್ನೂ ನೋಡಿಲ್ಲ
ಹೌದು ಈ ಸಮಯದಲ್ಲಿ ಅತಿಥಿಗಳು ಬರುವುದು, ನಾವು ಹೋಗುವುದು ಏನೂ ಇರಲಿಲ್ಲ, ಗಂಡ-ಹೆಂಡತಿ ಮಗು ಅಂತ ಇದ್ದರೆ ಇಬ್ಬರೂ ಕೆಲಸ ಮಾಡುತ್ತಿದ್ದರೆ ವರ್ಕ್ ಫ್ರಂ ಹೋಂನಲ್ಲಿದ್ದರೆ ಮಕ್ಕಳ ಜೊತೆ ಸಮಯ ಕಳೆಯಲು ಸಮಯ ಸಿಗುತ್ತಿರಲಿಲ್ಲ. ಎಷ್ಟೋ ತಾಯಂದಿರು ಹಾಲುಣಿಸುತ್ತಲೇ ತಮ್ಮ ಕೆಲಸ ಕಾರ್ಯವನ್ನು ಮಾಡಿ ಮುಗಿಸುತ್ತಿದ್ದರು. ಹೀಗಾಗಿ ಮಕ್ಕಳ ಜೊತೆ ಯಾರೂ ಮಾತನಾಡುವುದಕ್ಕೆ ಇಲ್ಲದೆ ಮಕ್ಕಳಲ್ಲಿ ಮಾತಿನ ಸಮಸ್ಯೆ ಕಂಡು ಬರುತ್ತಿದೆ, ಅವರು ತುಂಬಾನೇ ತಡವಾಗಿ ಮಾತನಾಡುತ್ತಿದ್ದಾರೆ. ಆ ಪ್ರಾಯದಲ್ಲಿ ಜನಿಸಿದ ಮಕ್ಕಳಿ ಈಗ ಪ್ರೀಕೆಜೆ, ಎಲ್‌ಕೆಜಿನಲ್ಲಿ ಇರುತ್ತಾರೆ, ಅವರಲ್ಲಿ ಈ ಬದಲಾವಣೆ ಎದ್ದು ಕಾಣುತ್ತಿದೆ.
ಮಕ್ಕಳು ಮಾತನಾಡುವುದು ನಿಧಾನವಾಗುತ್ತಿರುವುದೇ?
ಮಕ್ಕಳು ಮಾತನಾಡಲು ಅದರ ಜೊತೆ ನಾವು ಮಾತನಾಡಬೇಕು. ಪೋಷಕರಿಗಿಂತ ಹೆಚ್ಚಾಗಿ ಹೊರಗಿನವರ ಜೊತೆ ಬೆರೆದಾಗ ಮಗು ಬೇಗನೆ ಭಾಷೆ ಕಲಿಯುತ್ತಾ ಹೋಗುತ್ತದೆ. ಎಎಷ್ಟೋ ಮಕ್ಕಳಿಗೆ ಕೆಲವೇ ವಾರಗಳಲ್ಲಿ ಭಾಷೆ ಬಂದು ಬಿಡುತ್ತದ. ಮಕ್ಕಳಲ್ಲಿ ಮಾತು ತಡವಾಗುವುದನ್ನು ತಡೆಗಟ್ಟಲು ಅವರ ಜೊತೆ ಪೋಷಕರು ತುಂವಾನೇ ಸಂವಹನ ಮಾಡಬೇಕು. ಅಲ್ಲದೆ ಮಗುವನ್ನು ಅವರದ್ದೇ ಪ್ರಪಂಚದಲ್ಲಿ ಕೂಡಿ ಹಾಕಬೇಡಿ.
ಬರೀ ಪುಟಾಣಿಗಳಲ್ಲಿ ಮಾತ್ರವಲ್ಲ ದೊಡ್ಡ ಮಕ್ಕಳಲ್ಲಿಯೂ ಕೊರೊನಾ ಪರಿಣಾಮ ಬೀರಿದೆ
ಈ ಸಮಯದಲ್ಲಿ ಮಕ್ಕಳು ದೈಹಿಕವಾಗಿ ಆಟ ಆಡುವುದನ್ನು ಬಿಟ್ಟರು, ಟವಿವಿ ಮೊಬೈಲ್ ಅಂತ ಕಾಲ ಕಳೆಯುತ್ತಿದ್ದರು, ಇದರ ಪರಿಣಾಮ ಚಿಕ್ಕ ಪ್ರಾಯದಲ್ಲಿ ಬೊಜ್ಜಿನ ಸಮಸ್ಯೆ ಕೂಡ ಕಂಡು ಬರುತ್ತಿದೆ. ಅಲ್ಲದೆ ಬೊಬೈಲ್ ಬಳಕೆ ಹೆಚ್ಚಿದೆ.



Click it and Unblock the Notifications