Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಎಗ್ ಫ್ರೀಜಿಂಗ್ ವಿಧಾನ ಬಳಿಸಿ ಮಗು ಪಡೆದ ರಾಮ್‌ಚರಣ್ ದಂಪತಿ: ಇದು ಯಾರಿಗೆ ಅತ್ಯುತ್ತಮ ಆಯ್ಕೆ, ತಗುಲುವ ವೆಚ್ಚವೆಷ್ಟು?
ತೆಲುಗು ಮೆಗಾಸ್ಟಾರ್ ರಾಮಚರಣ್, ಉಪಾಸನ ದಂಪತಿ ಬಾಳಿಗೆ ಲಕ್ಷ್ಮಿಯ ಆಗಮನವಾಗಿದೆ. ತಮ್ಮ ನೆಚ್ಚಿನ ನಟನ ಬಾಳಿಗೆ ಪುಟ್ಟಗೌರಿಯ ಆಗಮನದ ಸುದ್ದಿ ಕೇಳಿ ಅವರ ಅಭಿಮಾನಿಗಳು ತುಂಬಾನೇ ಖುಷಿ ಪಡುತ್ತಿದ್ದಾರೆ, ರಾಮಚರಣ್ ದಂಪತಿ ಈ ಖುಷಿಯನ್ನು ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ವಿವಾಹವಾಗಿ 11ನೇ ವರ್ಷದಲ್ಲಿ ಇವರಿಗೆ ಮಗುವಾಗಿದೆ. ಕೆರಿಯರ್ ಕಡೆ ಫೋಕಸ್ ಮಾಡಬೇಕು ಎನ್ನುವವರಿಗೆ ಈ ದಂಪತಿ ಅನುಸರಿಸಿದ ಮಾರ್ಗ ಸ್ಪೂರ್ತಿಯಾಗಬಹುದು.

ವಂಶದ ಕುಡಿ ಪಡೆಯಲು ಎಗ್‌ಫ್ರೀಜಿಂಗ್ ಮಾಡಿದ್ದ ದಂಪತಿ
ವಿವಾಹವಾದ ಮೇಲೆ ನಮಗೊಂದು ಮಗು ಬೇಕೆಂಬ ಆಸೆ ಬಹುತೇಕ ದಂಪತಿಗಳಿಗೆ ಇರುತ್ತದೆ. ಕೆಲವರು ನಾನಾ ಕಾರಣಗಳಿಂದ ಮಗು ಪಡೆಯಬೇಕೆಂಬ ಬಯಕೆಯನ್ನು ಮುಂದೂಡುತ್ತಲೇ ಇರುತ್ತಾರೆ. ಈಗ ಬೇಡ ಕೆರಿಯರ್‌ಗೆ ತೊಂದರೆಯಾಗುತ್ತದೆ, ಆರ್ಥಿಕವಾಗಿ ಸ್ವಲ್ಪ ಬಲವಾಗಲಿ ಇಲ್ಲದಿದ್ದರೆ ಮಗುವಾದರೆ ನೋಡಿಕೊಳ್ಳಲು ಕಷ್ಟವಾಗುವುದು ಹೀಗೆ ಅನೇಕ ಕಾರಣಗಳಿಂದ ಗರ್ಭಧಾರಣೆಯನ್ನು ಮುಂದೂಡುತ್ತಾರೆ. ನಂತರ ಮಗು ಬೇಕೆಂದು ಬಯಸಿ ಪ್ರಯತ್ನಿಸಿದಾಗ ಎಷ್ಟೋ ದಂಪತಿಗಳಿಗೆ ಮಕ್ಕಳಾಗುವುದಿಲ್ಲ. ಆ ಸಮಯಕ್ಕೆ ಒಂದೋ ವಯಸ್ಸು ಅಧಿಕವಾಗಿರುತ್ತದೆ ಅಥವಾ ಇತರ ಆರೋಗ್ಯ ಸಮಸ್ಯೆಗಳು ಉಂಟಾಗಿರುತ್ತದೆ ಈ ಕಾರಣಗಳಿಂದ ಮಗು ಪಡೆಯುವುದು ಕನಸಾಗಿಯೇ ಉಳಿಯುತ್ತದೆ.
ಕೆರಿಯರ್ VS ಮಗು
ಹಿರಿಯರು ಬೇಗ ಮಗು ಮಾಡ್ಕೋ ಎಂದು ವಿವಾಹವಾಗಿ ಕೆಲವು ವರ್ಷಗಳಲ್ಲಿಯೇ ಸಲಹೆ ನೀಡುತ್ತಾರೆ. ಆದರೆ ಆಗಷ್ಟೇ ವೃತ್ತಿ ಜೀವನದಲ್ಲಿ ಸ್ವಲ್ಪ ಸೆಟ್ಲ್ ಆಗ್ತಾ ಇರುತ್ತೇವೆ, ಆವಾಗ ಮಗುವಾದರೆ ವೃತ್ತಿ ಜೀವನದ ಬೆಳವಣಿಗೆಗೆ ಅಡ್ಡಿಯಾಗುವುದು. ಈ ಕಾರಣಗಳಿಂದ ವೃತ್ತಿ ಜೀವನಕ್ಕೆ ಒತ್ತು ನೀಡಬೇಕಾ? ಮಗು ಪಡೆಯುವುದಾ ಎಂಬ ಗೊಂದಲ ಹಲವು ಯುವ ದಂಪತಿಗಳಿಗೆ ಇರುತ್ತದೆ ಅಂಥವರಿಗೆ ಎಗ್‌ಫ್ರೀಜಿಂಗ್ ಬೆಸ್ಟ್.
ಎಗ್‌ಫ್ರೀಜಿಂಗ್ ಮಾಡಿಟ್ಟರೆ ನಿಮಗೆ ಬೇಕಾದಾಗ ಮಗುವನ್ನು ಪಡೆಯಬಹುದು
ಯೌವನ ಪ್ರಾಯದಲ್ಲಿ ಮಹಿಳೆ ಎಗ್ ಫ್ರೀಜಿಂಗ್ ಮಾಡಿಟ್ಟರೆ ನಂತರ ವೃತ್ತಿ ಬದುಕಿನಲ್ಲಿ ಸೆಟ್ಲ್ ಆದಾಗ ಮಗು ಬಗ್ಗೆ ಯೋಚಿಸಬಹುದು. ಹೀಗೆ ಮಾಡುವುದರಿಂದ ಮಕ್ಕಳಾಗದಿದ್ದರೆ ಎಂಬ ಟೆನ್ಷನ್ ಕೂಡ ಕಡಿಮೆಯಾಗಬಹುದು. ಎಗ್‌ಫ್ರೀಜಿಂಗ್ ಮಾಡಿಟ್ಟದ್ದ ರಾಮ್‌ಚರಣ್ ಪತ್ನಿ ತಮ್ಮ 40ನೇ ವಯಸ್ಸಿನಲ್ಲಿ ಗರ್ಭಿಣಿಯಾದರು. ಎಗ್‌ಫ್ರೀಜಿಂಗ್ ವಿಧಾನ ತಮ್ಮ ಬದುಕಿನಲ್ಲಿ ಬೆಳಕು ತರಲು ಹೇಗೆ ನೆರವಾಯಿತು ಎಂಬುವುದರ ಬಗ್ಗೆ ಉಪಾಸನ ಹೇಳಿದ್ದರು ಕೂಡ.
ಉಪಾಸನ 10 ವರ್ಷದ ಮೊದಲೇ ಎಗ್‌ಫ್ರೀಜಿಂಗ್ ಮಾಡಿಟ್ಟಿದ್ದರು
ಉಪಾಸನ ಮದುವೆಯಾದ ಪ್ರಾರಂಭದಲ್ಲಿಯೇ ತಮ್ಮ ಅಂಡಾಣುಗಳನ್ನು ಎಗ್‌ಫ್ರಿಜಿಂಗ್ ಮಾಡಿದ್ದರು. ಏಕೆಂದರೆ ವಯಸ್ಸಾಗುತ್ತಿದ್ದಂತೆ ಅಂಡಾಣುಗಳಲ್ಲಿ ಕೊರತೆ ಉಂಟಾಗುವುದು, ಇದರಿಂದ ಗರ್ಭಧಾರಣೆಗೆ ತೊಂದರೆಯಾಗಬಹುದು ಎಂದು ಅರಿತಿದ್ದ ಉಪಾಸನ ಎಗ್‌ಫ್ರೀಜಿಂಗ್ ಮಾಡಿ ನಂತರ ತಮ ಮಗು ಬೇಕೆಂದು ಬಯಸಿದಾಗ 40ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ ಈಗ ಮುದ್ದಾಗ ಮಗುವಿನ ತಾಯಿಯಾಗಿದ್ದಾರೆ.
ಎಗ್‌ಫ್ರೀಜಿಂಗ್ ಮಾಡಲು ಎಷ್ಟು ದುಡ್ಡು ಬೇಕಾಗುವುದು?
ಬೆಂಗಳೂರಿನಲ್ಲಿ ಎಗ್‌ಫ್ರೀಜಿಂಗ್ ಮಾಡುವುದಾದರೆ ಸಾಮಾನ್ಯವಾಗಿ ಇಷ್ಟು ಬೇಕಾಗುವುದು (ಸಿಟಿಯಿಂದ ಸಿಟಿಗೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ಸ್ವಲ್ಪ ವ್ಯತ್ಯಾಸವಾಗಬಹುದು)
ಇನ್ಷಿಯಲ್ ಸ್ಕ್ರೀನಿಂಗ್: ಫರ್ಟಿಲಿಟಿ ಹಾರ್ಮೋನ್ ಟೆಸ್ಟ್, ಹೆಲ್ತ್ ಚೆಕಪ್ : 8000 - 10,000
ಓವರಿಯನ್ ಸ್ಟಿಮ್ಯೂಲೇಷನ್: ಇಂಜೆಕ್ಷನ್ ಮತ್ತು ಮೆಡಿಕೇಷನ್ಸ್: 70,000 - 80,000
ಸೈಕಲ್ ಮಾನಿಟರಿಂಗ್: ಯುಎಸ್‌ಜಿ, ಹಾರ್ಮೋನ್ ಟೆಸ್ಟ್, ಕನ್ಸಲೆಟ್: 10,000 - 15,000
ಸರ್ಜಿಕಲ್ ಪ್ರೊಸಿಜರ್: ಅಂಡಾಣುಗಳನ್ನು ಬೇರ್ಪಡಿಸುವುದು: 20,000 - 25,000
ಐವಿಎಫ್ ಲ್ಯಾಬೋರೇಟರಿ: ಎಗ್ ಸ್ಕ್ರೀನಿಂಗ್ , denudation: 25,000 - 30,000
ಕ್ರಿಯೋಫ್ರೀಜಿಂಗ್: ಫ್ರೀಜಿಂಗ್ ಮಾಡಿ: 10,000 - 15,000
ಬೆಲೆ: 153,000-175,000



Click it and Unblock the Notifications


