Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ತುರ್ತು ಗರ್ಭನಿರೋಧಕ ಎಂದರೇನು? ಗರ್ಭಧಾರಣೆ ತಡೆಗಟ್ಟಲು ಹೇಗೆ ಸಹಕಾರಿ?
ಮಾರ್ನಿಂಗ್ ಆಫ್ಟರ್ ಪಿಲ್ ಅಂದರೆ ಎಮರ್ಜೆನ್ಸಿ ಕಾಂಟ್ರಾಸೆಪ್ಟಿವ್ (ತುರ್ತು ನಿರೋಧಕ) ಬೇಡದ ಗರ್ಭಧಾರಣೆ ತಡೆಗಟ್ಟಲು ತುಂಬಾ ಜನ ಬಳಸುತ್ತಾರೆ.
ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆದಾಗ ಅಥವಾ ನಾವು ಸುರಕ್ಷಿತ ಕ್ರಮ ತೆಗೆದುಕೊಂಡರೂ ಗರ್ಭಧಾರಣೆಯಾಗಬಹುದೇ ಎಂಬ ಡೌಟ್ ಇದ್ದಾಗ ಈ ಮಾತ್ರೆ ತೆಗೆದುಕೊಳ್ಳುತ್ತಾರೆ. ಇದನ್ನು ಲೈಂಗಿಕ ಕ್ರಿಯೆ ನಡೆದ 5 ದಿನದೊಳಗೆ ತೆಗೆದುಕೊಳ್ಳಬೇಕು, ಆಗ ಮಾತ್ರ ಬೇಡದ ಗರ್ಭಧಾರಣೆ ತಡೆಗಟ್ಟಲು ಸಾಧ್ಯವಾಗುವುದು.

ತುರ್ತು ಗರ್ಭನಿರೋಧಕಗಳನ್ನು ಯಾರು ಸೇವಿಸಬೇಕು?
ತುರ್ತು ಗರ್ಭನಿರೋಧಕಗಳನ್ನು ಸಂತಾನೋತ್ಪತ್ತಿ ಸಾಮರ್ಥ್ಯವಿರುವ ಮಹಿಳೆಯರು ವಯಸ್ಸಿನ ಮಿತಿಯಿಲ್ಲದೆ ಸೇವಿಸಬಹುದು. ಈ ಮಾತ್ರೆ ಬಳಸುವುದಕ್ಕೆ ಯಾವುದೇ ಮಿತಿಯಿಲ್ಲ.
ಈ ಸಂದರ್ಭಗಳಲ್ಲಿ ತುರ್ತು ಗರ್ಭನಿರೋಧಕ ಬಳಸುವ ಮೂಲಕ ಬೇಡದ ಗರ್ಭಧಾರಣೆಯನ್ನು ತಡೆಗಟ್ಟಬಹುದು
* ಯಾವುದೇ ಪ್ರೊಟೆಕ್ಷನ್ (ಸುರಕ್ಷಿತ ವಿಧಾನ) ಬಳಸದೆ ಲೈಂಗಿಕ ಕ್ರಿಯೆ ನಡೆದಾಗ
* ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ( ಲೈಂಗಿಕ ದೌರ್ಜನ್ಯನಿಂದ ಅವಳು ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾಳೆ, ಬೇಡದ ಗರ್ಭಧಾರಣೆ ಕೂಡ ಆದರೆ ಅವಳ ಕುಸಿದು ಹೋಗುತ್ತಾಳೆ, ಅಂಥ ಸಂದರ್ಭದಲ್ಲಿ ಈ ಮಾತ್ರೆ ನೀಡಲಾಗುವುದು)
* ಬಳಸಿದ ಕಾಂಡೋಮ್ ಹರಿದು ಹೋದರೆ
* ದಿನ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದ್ದು ಮಾಮೂಲಿ ಸಮಯಕ್ಕಿಂತ 3 ಗಂಟೆ ತಡವಾದರೆ ಅಥವಾ ಗರ್ಭನಿರೋಧಕ ಮಾತ್ರೆ ತೆಗೆದುಕೊಡ ಬಳಿಕ 27 ಗಂಟೆ ಕಳೆದ ಮೇಲೆ ಲೈಂಗಿಕ ಕ್ರಿಯೆ ನಡೆದರೆ ತುರ್ತಿ ಗರ್ಭನಿರೋಧಕ ಬಳಸಬೇಕಾಗುತ್ತದೆ.
* norethisterone enanthate (NET-EN) ಇಂಜೆಕ್ಷನ್ ತೆಗೆದುಕೊಂಡುಎರಡು ವಾರಗಳಿಗಿಂತ ಅಧಿಕವಾಗಿದ್ದರೆ
* ಗರ್ಭನಿರೋಧಕ ವಿಧಾನಗಳು ಫೈಲ್ಯೂರ್ ಆಯ್ತು ಎಂದು ನಿಮಗನಿಸಿದಾಗ
* IUD ಹೊರಗಡೆ ಬಂದಾಗ
ತುರ್ತು ಗರ್ಭನಿರೋಧಕ ಬಳಸಿದರೆ ಗರ್ಭಧಾರಣೆಯಾಗುವುದನ್ನು ತಡೆಗಟ್ಟಬಹುದು.
ತುರ್ತು ಗರ್ಭನಿರೋಧಕಗಳನ್ನು ಹೇಗೆ ತೆಗೆದುಕೊಳ್ಳಬೇಕು?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ
* UPA ಅಂಶವಿರುವ ತುರ್ತು ಗರ್ಭನಿರೋಧಕವನ್ನು 30 mg ಸಿಂಗಲ್ ಡೋಸ್ ತೆಗೆದುಕೊಳ್ಳಬೇಕು.
* LNG ಅಂಶವಿರುವ ತುರ್ತು ಗರ್ಭನಿರೋಧಕವನ್ನು 1.5 mg ಸಿಂಗಲ್ ಡೋಸ್ ಅಥವಾ 0.75 mg ತೆಗೆದುಕೊಂಡು 112 ಗಂಟೆ ಅಂತರದಲ್ಲಿ ಮತ್ತೊಂದು ಡೋಸ್ ಸೇವಿಸಬಹುದು.
* COCsನ್ನು ಎರಡು ಭಾಗವನ್ನಾಗಿ ಮಾಡಿ 0.50 mgಯಂತೆ 12 ಗಂಟೆ ಅಂತರದಲ್ಲಿ ತೆಗೆದುಕೊಳ್ಳಬೇಕು.
ಈ ತುರ್ತು ಗರ್ಭನಿರೋಧಕಗಳನ್ನು ಲೈಂಗಿಕ ಕ್ರಿಯೆ ನಡೆಸಿದ 120 ಗಂಟೆಯ ಒಳಗಾಗಿ ತೆಗೆದುಕೊಳ್ಳಬೇಕು. ಅದರಲ್ಲೂ ಈ ಗರ್ಭ ನಿರೋಧಕಗಳು 72 ಗಂಟೆಯಿಂದ-120 ಗಂಟೆಯೊಳಗೆ ತೆಗೆದುಕೊಂಡರೆ ತುಂಬಾ ಪರಿಣಾಮಕಾರಿಯಾಗಿರುತ್ತದೆ.
ತುರ್ತು ಗರ್ಭ ನಿರೋಧಕ ತೆಗೆದುಕೊಂಡರೆ ಅಡ್ಡಪರಿಣಾಮಗಳಿವೆಯೇ?
ಈ ಮಾತ್ರೆ ತೆಗೆದುಕೊಂಡಾಗ ಕೆಲವರಲ್ಲಿ ವಾಂತಿ, ಸ್ವಲ್ಪ ರಕ್ತಸ್ರಾವ, ತಲೆಸುತ್ತು ಈ ಬಗೆಯ ಸಮಸ್ಯೆ ಕಂಡು ಬರಬಹುದು. ಆದರೆ ಈ ಅಡ್ಡಪರಿಣಾಮಗಳು ಗಂಭೀರವಾಗಿರುವುದಿಲ್ಲ, ಬೇಗನೆ ಚೇತರಿಸಿಕೊಳ್ಳುತ್ತಾರೆ.
ಒಂದು ವೇಳೆ ಮಾತ್ರೆ ತೆಗೆದುಕೊಂಡ 2 ಗಂಟೆಯ ಒಳಗಾಗಿ ವಾಂತಿ ಮಾಡಿದರೆ ಮತ್ತೊಮ್ಮೆ ಡೋಸ್ ತೆಗೆದುಕೊಳ್ಳಬೇಕು.
ಈ ಮಾತ್ರೆ ಭವಿಷ್ಯದಲ್ಲಿ ಗರ್ಭಧಾರಣೆಗೆ ತೊಂದರೆ ಉಂಟು ಮಾಡುವುದು?
ತುರ್ತು ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಭವಿಷ್ಯದಲ್ಲಿ ಗರ್ಭಧಾರಣೆಗೆ ಯಾವುದೇ ತೊಂದರೆಯಾಗುವುದಿಲ್ಲ.
ಇತರ ಗರ್ಭ ನಿರೋಧಕ ಬಳಸಬಹುದೇ?
* ನೀವು ತುರ್ತು ಗರ್ಭನಿರೋಧಕ ಬಳಸಿದರೂ ಇತರ ಗರ್ಭನಿರೋಧಕ ಬಳಸಬಹುದು.
* ಇತರ ಗರ್ಭ ನಿರೋಧಕ ಬಳಸಿದಾಗ ಈ ತುರ್ತು ಗರ್ಭ ನಿರೋಧಕ ಅವಶ್ಯಕತೆ ಇರುವುದಿಲ್ಲ.
* ಆ ಗರ್ಭನಿರೋಧಕ ಸುರಕ್ಷಿತವಾಗಿಲ್ಲ ಎಂದು ನಿಮಗನಿಸಿದರೆ ಮಾತ್ರ ಈ ತುರ್ತು ಗರ್ಭ ನಿರೋಧಕ ಆಯ್ಕೆ ಮಾಡಬಹುದು.
ತುರ್ತು ಗರ್ಭನಿರೋಧಕ ಹೇಗೆ ಕಾರ್ಯನಿರ್ವಹಿಸುತ್ತದೆ?
ತುರ್ತು ಗರ್ಭನಿರೋಧಕ ಅಂಡಾಣುಗಳ ಉತ್ಪತ್ತಿ ಮಾಡುವ ಮೂಲಕ ಗರ್ಭಧಾರಣೆಯಾಗುವುದನ್ನು ತಡೆಗಟ್ಟುತ್ತದೆ.
ತುರ್ತು ಗರ್ಭನಿರೋಧಕದಿಂದ ಗರ್ಭಪಾತವಾಗುವುದೇ?
ನೀವು ಈ ಮಾತ್ರೆಯನ್ನು ತೆಗೆದುಕೊಳ್ಳುವಾಗ ಈಗಾಗಲೇ ಭ್ರೂಣ ರೂಪವಾಗಿದ್ದರೆ ಈ ಮಾತ್ರೆ ಗರ್ಭಪಾತ ಮಾಡುವುದಿಲ್ಲ ಅಲ್ಲದೆ ಮಗುವಿನ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ.
ತುರ್ತು ಗರ್ಭನಿರೋಧಕ ಮಾತ್ರೆಯನ್ನು ಆಗಾಗ ತೆಗೆದುಕೊಳ್ಳ ಬಹುದೇ?
ತುರ್ತು ಗರ್ಭನಿರೋಧಕ ಮಾತ್ರೆಯನ್ನು ಆಗಾಗ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ. ನಿಮಗೆ ಯಾವಾಗ ಬೇಕೆನಿಸುತ್ತದೋ ಆವಾಗ ಈ ಮಾತ್ರೆ ಬಳಸಬಹುದು.



Click it and Unblock the Notifications
