Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ನಿಮ್ಮ ಮಾತಿಗೆ ಮಕ್ಕಳು ಎದುರುತ್ತರ ನೀಡಿದರೆ ಅದು ಒಳ್ಳೆಯದೇ ಗೊತ್ತಾ?
ಮಕ್ಕಳನ್ನ ಸರಿಯಾದ ರೀತಿಯಲ್ಲಿ ಬೆಳೆಸುವುದು ಅಂದ್ರೆ ಅಷ್ಟು ಸುಲಭದ ಕೆಲಸವಲ್ಲ. ನಿಜವಾಗಿ ತಂದೆ-ತಾಯಿಗಳಿಗೆ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡುವುದು ದೊಡ್ಡ ಸವಾಲು ಎಂದೇ ಹೇಳಬಹುದು. ಮಕ್ಕಳ ಸರಿ ತಪ್ಪುಗಳನ್ನು ತಿದ್ದಿ ಹೇಳುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿ ಆಗಿರುತ್ತದೆ. ಮಕ್ಕಳು ಶಿಸ್ತಿನಿಂದ ಇರಬೇಕು ಎನ್ನುವ ಕಾರಣಕ್ಕೆ ಅವರನ್ನು ಒಂದು ಕಡೆಯಿಂದ ನೀವು ವಿರೋಧಿಸುತ್ತಿದ್ದೀರಿ ಎಂಬುದು ನಿಮ್ಮ ಗಮನಕ್ಕೆ ಬಾರದೆ ಇರಬಹುದು.

ಗೌರವಿಸುವುದು!
ಮಕ್ಕಳು ದೊಡ್ಡವರನ್ನ ಗೌರವಿಸಬೇಕು ಎನ್ನುವುದು ಬಹಳ ಮುಖ್ಯವಾಗಿರುವ ವಿಚಾರ. ಆದರೆ ಮಕ್ಕಳು ಗೌರವಿಸಬೇಕು ಎನ್ನುವ ಕಾರಣಕ್ಕೆ ದೊಡ್ಡವರನ್ನ ಅವರು ಪ್ರಶ್ನೆಯೇ ಮಾಡಬಾರದು ಅಥವಾ ದೊಡ್ಡವರ ಎದುರು ನಿಂತು ಮಾತೇ ಆಡಬಾರದು ಎನ್ನುವಂತೆ ನಡೆದುಕೊಳ್ಳುವುದು ನಿಜಕ್ಕೂ ತಪ್ಪು. ಎಷ್ಟೋ ಬಾರಿ ನಾವು ಮಕ್ಕಳಿಗೆ ಎದುರು ಉತ್ತರ ಕೊಡಬಾರದು ಎದುರು ವಾದಿಸಬಾರದು ಎಂದು ಹೇಳಿಕೊಡುತ್ತೇವೆ ನಮ್ಮ ಮಾತಿಗೆ ಬೇರೆ ಮರು ಪ್ರಶ್ನೆ ಕೇಳಿದರೆ ಕೋಪಗೊಳ್ಳುತ್ತೇವೆ. ಇದೆಲ್ಲ ಶಿಸ್ತಿನ ಕ್ರಮ ಅಲ್ಲ ಎಂದು ಹೇಳುತ್ತೇವೆ ಆದರೆ ಇಲ್ಲೇ ನಾವು ತಪ್ಪು ಮಾಡುತ್ತಿರುವುದು.
ಎಷ್ಟೋ ಬಾರಿ ಮಕ್ಕಳು ಬೇರೆಯವರನ್ನ ಅಥವಾ ದೊಡ್ಡವರನ್ನ ಪ್ರಶ್ನೆ ಮಾಡುವುದು ಅವರು ಹೇಳಿದ್ದಕ್ಕೆ ತಿರುಗಿ ವಾದ ಮಾಡುವುದು ಮಾಡಿದ್ರೆ ಅದು ಶಿಸ್ತು ಬದ್ಧ ನಡವಳಿಕೆ ಅಲ್ಲ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಮಗು ನಿಜಕ್ಕೂ ಹೀಗೆ ಮರು ಪ್ರಶ್ನೆ ಮಾಡುತ್ತಿದೆ ಎಂದರೆ ಖಂಡಿತವಾಗಿಯೂ ಆ ಮಗು ಬೆಳವಣಿಗೆ ಹೊಂದುತ್ತಿದೆ ಎಂದು ಅರ್ಥ. ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಮಗುವಿಗೂ ಇರುವ ಹಂಬಲ. ಹಾಗಾಗಿ ಸಾಮಾನ್ಯವಾಗಿ ಎಲ್ಲ ವಿಚಾರಗಳನ್ನು ಮಕ್ಕಳು ಒಪ್ಪಿಕೊಳ್ಳುವುದಿಲ್ಲ ಇದು ತಪ್ಪು ಎಂದು ಹೇಳಿದರೆ ಅದಕ್ಕೆ ಕಾರಣ ಏನು ಎಂಬುದನ್ನು ಪ್ರಶ್ನೆ ಮಾಡುತ್ತಾರೆ. ಇದನ್ನು ನೀವು ಕೂಡ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಮಗುವಿಗೆ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಆಸಕ್ತಿ ಇದೆ ಎಂದು ಅವರಿಗೆ ವಿಚಾರಗಳನ್ನು ತಿಳಿಸಿ ಹೇಳಲು ಪ್ರಯತ್ನಿಸಬೇಕು.
ಉದಾಹರಣೆಗೆ, ನಿಮ್ಮ ಮಗುವಿಗೆ ಯಾವುದೋ ಒಂದು ವಿಚಾರಕ್ಕೆ ಹೀಗೆ ಮಾಡಬೇಡ ಎಂದು ಹೇಳುತ್ತೀರಿ ಎಂದು ಭಾವಿಸಿ. ಆಗ ಆ ಮಗು ಯಾಕೆ ಎಂದು ಪ್ರಶ್ನೆ ಮಾಡುತ್ತೆ. ನೀವಾದರೂ ಶಿಸ್ತಿನ ಸಿಪಾಯಿಗಳು ಮಗು ಮರು ಪ್ರಶ್ನೆ ಮಾಡಲೇಬಾರದು ಅದು ಆ ಗೌರವ ತೋರಿಸಿದಂತೆ ಎಂದು ಭಾವಿಸುತ್ತೀರಿ ಇದೇ ಕಾರಣಕ್ಕೆ ಮಗು ಯಾಕೆ ಎಂದು ಪ್ರಶ್ನೆ ಮಾಡಿದಾಗ ಈ ರೀತಿ ಪ್ರಶ್ನೆ ಮಾಡುವುದು ತಪ್ಪು ಎಂದು ಹೇಳುತ್ತೀರಿ. ಆದರೆ ಮಗುವಿಗೆ ನೀವು ಹೀಗೆ ಮಾಡಬಾರದು ಎಂದಿರುವ ವಿಷಯ ಯಾಕೆ ಮಾಡಬಾರದು ಎನ್ನುವ ಕ್ಲಾರಿಫಿಕೇಶನ್ ಬೇಕಿರುತ್ತದೆ ಆ ಸ್ಪಷ್ಟತೆಗಾಗಿ ಮಗು ನಿಮ್ಮನ್ನು ಪ್ರಶ್ನೆ ಮಾಡುತ್ತಿರುತ್ತದೆ. ನೀವು ಇಂತಹ ಪ್ರಶ್ನೆಗಳನ್ನೇ ನಿಲ್ಲಿಸುತ್ತಾ ಬಂದರೆ ಮಗು ತನ್ನಿಂದ ತಾನೇ ಬೆಳವಣಿಗೆ ಹೊಂದಲು ಬುದ್ಧಿವಂತಿಕೆ ಬೆಳೆಸಿಕೊಳ್ಳಲು ಸಾಧ್ಯವೇ ಇಲ್ಲ ಯಾವಾಗ ಒಂದು ಮಗು ಪ್ರಶ್ನೆ ಕೇಳುವ ಅಭ್ಯಾಸ ಬೆಳೆಸಿಕೊಳ್ಳುತ್ತದೆಯೋ ಆಗ ಆ ಮಗು ಹೆಚ್ಚು ಬುದ್ಧಿವಂತಿಕೆಯಿಂದ ಹೆಚ್ಚು ಜ್ಞಾನ ಪಡೆದುಕೊಂಡು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ.
ಶಿಸ್ತು ಶಿಕ್ಷೆ ಆಗಬಾರದು!
ಮಗು ಹೀಗೆ ಇರಬೇಕು ಎಂದು ಪ್ರತಿಯೊಬ್ಬ ತಂದೆ ತಾಯಿಗಳಿಗೂ ಇರುವ ಹಂಬಲ ತನ್ನ ಮಗು ತಾನು ಹೇಳಿದಂತೆ ಕೇಳಬೇಕು ಎಂದು ಕೂಡ ಪಾಲಕರು ಬಯಸುತ್ತಾರೆ. ಹಾಗಂದ ಮಾತ್ರಕ್ಕೆ ಇದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ ನಮ್ಮ ಮಕ್ಕಳು ನಾವು ಬಯಸಿದಂತೆ ಇರಬೇಕು ಎನ್ನುವ ಭಾವನೆ ಇರುವುದು ಖಂಡಿತವಾಗಿಯೂ ತಪ್ಪಲ್ಲ ಆದರೆ ಆ ರೀತಿ ಇರುವುದಕ್ಕೆ ನಾವು ಮಕ್ಕಳನ್ನು ಹೇಗೆ ತಯಾರು ಮಾಡುತ್ತೇವೆ ಎಂಬುದು ಬಹಳ ಮುಖ್ಯ ಶಿಸ್ತನ್ನು ಕಲಿಸುವ ಹಿನ್ನೆಲೆಯಲ್ಲಿ ಆ ಶಿಸ್ತು ಶಿಕ್ಷೆಯಾಗಬಾರದು. ಪ್ರತಿ ಬಾರಿ ಮಗು ಪ್ರಶ್ನೆ ಮಾಡಿದರೆ ಅಥವಾ ನಿಮ್ಮ ಮಾತಿಗೆ ಇನ್ನೊಂದು ಉತ್ತರ ಕೊಟ್ಟರೆ ನಿಮಗೆ ನಿಮ್ಮ ಮಗು ಶಿಸ್ತನ್ನು ಮೀರುತ್ತಿದೆ ಎನ್ನುವ ಭಾವನೆ ಬರಬಹುದು ಆದರೆ ಇದು ಶಿಸ್ತು ಅಲ್ಲ ನಿಮ್ಮ ಮಗು ಜ್ಞಾನ ಬೆಳೆಸಿಕೊಳ್ಳುವ ಪ್ರಶ್ನೆ.
ಪ್ರತಿ ಬಾರಿ ನೀವು ನಿಮ್ಮ ಮಕ್ಕಳಿಗೆ ಇಂತಹದ್ದನ್ನು ಮಾಡಬೇಡ ಎಂದು ಹೇಳುವಾಗ ಅದಕ್ಕೆ ಕಾರಣವನ್ನು ಕೂಡ ಕೊಡಬೇಕು ಸರಿ ಅಥವಾ ತಪ್ಪು ಹೇಳುವಾಗ ಇದು ತಪ್ಪು ಯಾಕೆ ಎನ್ನುವುದನ್ನು ಕೂಡ ಅರ್ಥ ಮಾಡಿಸಬೇಕು. ಚಿಕ್ಕ ವಯಸ್ಸಿನಲ್ಲಿ ಇಂತಹ ವಿಚಾರಗಳು ಮಕ್ಕಳಿಗೆ ಅರ್ಥವಾಗುತ್ತಾ ಬಂದರೆ ಅವರು ಮುಂದೆಂದು ಅಂತಹ ತಪ್ಪನ್ನು ಕೂಡ ಮಾಡುವುದಿಲ್ಲ. ಹಾಗಾಗಿ ಮಕ್ಕಳು ದೊಡ್ಡವರನ್ನು ಪ್ರಶ್ನೆ ಮಾಡುತ್ತಾರೆ ಅಥವಾ ವಾದ ಮಾಡುತ್ತಾರೆ ಎಂದರೆ ಅದು ಆ ಮಕ್ಕಳ ಹಠಮಾರಿತನ ಅಥವಾ ಮುಂಡುತನ ಎಂದೆ ಭಾವಿಸುವುದು ತಪ್ಪು, ಮಗುವಿಗೆ ಆ ವಿಷಯವನ್ನು ತಿಳಿದುಕೊಂಡು ಸಕಾರಾತ್ಮಕವಾಗಿ ಅರ್ಥ ಮಾಡಿಕೊಂಡು ಆ ಮಗುವಿಗೆ ಅಗತ್ಯ ಇರುವ ಮಾಹಿತಿ ನೀಡುವುದು ತಂದೆ-ತಾಯಿಗಳ ಪ್ರಮುಖ ಕರ್ತವ್ಯ.



Click it and Unblock the Notifications
