Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗರ್ಭಿಣಿಯರಲ್ಲಿ ಡೆಂಗ್ಯೂ ಲಕ್ಷಣಗಳೇನು? ಇದರ ಅಪಾಯಗಳೇನು?
ಒಬ್ಬ ಮಹಿಳೆ ಗರ್ಭಿಣಿಯಾದ ನಂತರ ಆಕೆ ಸಂಪೂರ್ಣ ಜೀವನವೇ ಬದಲಾಗಿ ಹೋಗುತ್ತದೆ. ಯಾಕೆಂದರೆ ಹೊಟ್ಟೆಯಲ್ಲಿ ಭ್ರೂಣ ಬೆಳೆಯುತ್ತಿರುವಾಗ ಗರ್ಭವಸ್ಥೆಯಲ್ಲಿ ಇರುವ ಮಹಿಳೆ ತನ್ನ ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮಗು ಹೊಟ್ಟೆಯಲ್ಲಿ ಇರುವಾಗ ತಾಯಿಯ ಆರೋಗ್ಯದ ಯಾವುದೇ ರೀತಿಯಲ್ಲಿ ಹೆಚ್ಚು ಕಡಿಮೆಯಾದರೂ ಅದು ನೇರವಾಗಿ ಹೊಟ್ಟೆಯಲ್ಲಿರುವ ಮಗುವಿಗೆ ಎಫೆಕ್ಟ್ ಆಗುತ್ತದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ನಿಮಗೂ ಗೊತ್ತು. ಇದು ಈಗ ಸಾಮಾನ್ಯರಿಗೆ ಮಾತ್ರವಲ್ಲ ಗರ್ಭಿಣಿ ಸ್ತ್ರೀಯರಲ್ಲಿಯೂ ಕೂಡ ಹೆಚ್ಚಾಗಿ ಕಾಡುತ್ತಿದೆ. ಮೇಲುನೋಟಕ್ಕೆ ಡೆಂಗ್ಯೂ ಅಂತಹ ಮರಣಾಂತಿಕ ಜ್ವರ ಎನ್ನಿಸದೆ ಇರಬಹುದು. ಆದರೆ ಗರ್ಭಿಣಿ ವಿಷಯದಲ್ಲಿ ಹಾಗಲ್ಲ..
ಗರ್ಭಿಣಿಗೆ ಬರುವ ಡೆಂಗ್ಯೂ ಸುರಕ್ಷಿತವಲ್ಲ
ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಜ್ವರ ಸಾಮಾನ್ಯರಿಗೆ ಬಂದರೂ ಕೂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬಿಳಿ ರಕ್ತದ ಕಣಗಳು ದೇಹದಲ್ಲಿ ಅತಿ ಕಡಿಮೆ ಆದರೆ ಡೆಂಗ್ಯೂ ಜ್ವರ ವಿಪರೀತ ಸ್ಥಿತಿಗೆ ತಲುಪಿದೆ ಎಂದು ಅರ್ಥ. ಡೆಂಗ್ಯೂ ಜ್ವರ ಒಮ್ಮೆ ಬಂದರೆ ದೇಹದಲ್ಲಿ ಇರುವ ಎಲ್ಲಾ ಎನರ್ಜಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಜ್ವರ ಕಡಿಮೆ ಆದರೂ ಕೂಡ ಸುಧಾರಿಸಿಕೊಳ್ಳುವುದಕ್ಕೆ ಸಾಕಷ್ಟು ಸಮಯ ಬೇಕು. ಸಾಮಾನ್ಯರಿಗೆ ಇಂತಹ ಸ್ಥಿತಿ ಇರಬೇಕಾದರೆ ಗರ್ಭಿಣಿ ಸ್ತ್ರೀಯರಿಗೆ ಇದರ ಪರಿಣಾಮ ಇನ್ನಷ್ಟು ಅಪಾಯಕಾರಿಯಾಗಿ ಇರಬಹುದು.
ಗರ್ಭಿಣಿ ಸ್ತ್ರೀಯರಲ್ಲಿ ಕಾಣಿಸಿಕೊಳ್ಳುವ ಡೆಂಗ್ಯೂ ಜ್ವರ ನೇರವಾಗಿ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರಿಗೆ ಯಾವುದೇ ಔಷಧಿ ಕೊಡುವುದು ಅಷ್ಟು ಸುಲಭವಲ್ಲ. ಔಷಧಿಯ ಡೋಸೇಜ್ ಹೆಚ್ಚಾದರೂ ಅದು ಹೊಟ್ಟೆಯಲ್ಲಿ ಇರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಂತ ಟ್ರೀಟ್ಮೆಂಟ್ ಮಾಡದೆ ಇದ್ರೆ ಡೆಂಗ್ಯೂ ಜ್ವರದಿಂದಲೇ ಇನ್ನಷ್ಟು ಅಪಾಯ ಕಾಡಬಹುದು.
ಜ್ವರಕ್ಕೆ ತಕ್ಷಣ ಚಿಕಿತ್ಸೆ:
ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರಲ್ಲಿ ಜ್ವರ ಕಾಣಿಸಿಕೊಂಡಾಗ ಅದಕ್ಕೆ ಅದು ಇದು ಕಷಾಯ ಮನೆ ಮದ್ದು ಮಾಡಿಕೊಂಡು ವೈದ್ಯರನ್ನು ಸಂಪರ್ಕ ಮಾಡದೆ ಇರುವವರು ಇದ್ದಾರೆ. ಆದರೆ ಡೆಂಗ್ಯೂ ಕಾಣಿಸಿಕೊಂಡಾಗ ವೈದ್ಯರ ಬಳಿ ಮೊದಲು ಚಿಕಿತ್ಸೆ ಪಡೆಯಬೇಕು. ಸಾಮಾನ್ಯ ಜ್ವರ ಅಲ್ವಾ ಕಡಿಮೆ ಆಗುತ್ತೆ ಅಂತ ಹಾಗೆಯೇ ಉಳಿದುಕೊಂಡು ಬಿಟ್ಟರೆ ಈ ಜ್ವರದಿಂದ ಪ್ರಾಣ ಹಾನಿ ಕೂಡ ಆಗಬಹುದು.
ಡೆಂಗ್ಯೂ ಜ್ವರದ ಲಕ್ಷಣಗಳು
ಅತಿಯಾದ ಜ್ವರ
ತಲೆನೋವು
ಕಣ್ಣುನೋವು
ರಕ್ತ ಸ್ರಾವ ( ಹೆಚ್ಚಾಗಿ ಒಸಡುಗಳಲ್ಲಿ)
ಡೆಂಗ್ಯೂವಿನಲ್ಲಿ ಎರಡು ಪ್ರಕಾರ. ಒಂದು ಹೆಮರೋಜಿಕ್ ಡೆಂಗ್ಯೂ, ಡೆಂಗ್ಯೂ ಶಾಕ್ ಸಿಂಡ್ರೋಮ್. ಇದರಲ್ಲಿ ಎರಡನೆಯದು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲ್ಪಟ್ಟಿದೆ. ಅತಿಯಾದ ಜ್ವರದಿಂದಾಗಿ ಮಗುವಿನ ಮೇಲೆ ಕೂಡ ಈ ಸೋಂಕು ಪರಿಣಾಮ ಇರಬಹುದು.
ಡೆಂಗ್ಯೂ ಜ್ವರ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರಬಹುದೇ?
ಖಂಡಿತ ಹೌದು. ತಾಯಿಯ ದೇಹದ ಆರೋಗ್ಯ ಸ್ಥಿತಿ ಹೊಟ್ಟೆಯಲ್ಲಿರುವ ಭ್ರೂಣದ ಮೇಲೆ ಪರಿಣಾಮ ಬೀರುವುದು ಸಹಜ. ಅದೇ ರೀತಿ ತಾಯಿಗೆ ಡೆಂಗ್ಯೂ ಬಂದಾಗ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ತಾಯಿಗೆ ಡೆಂಗಿ ಜ್ವರ ಬಂದಾಗ ಕೂಡಲೇ ಚಿಕಿತ್ಸೆ ಮಾಡಬೇಕು ಇಲ್ಲವಾದರೆ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಅದರಲ್ಲೂ ಎಷ್ಟೋ ಕೇಸ್ ಗಳಲ್ಲಿ ಹೊಟ್ಟೆಯಲ್ಲಿಯೇ ಮಗು ಸತ್ತು ಹೋಗಿರುವ ಉದಾಹರಣೆಗಳು ಕೂಡ ಇವೆ. ಇದು ಪ್ರೀ ಮೆಚ್ಯೂರ್ಡ್ ಬೇಬಿ ಕೂಡ ಜನಿಸಬಹುದು ಅಂದರೆ ಏಳು ಅಥವಾ ಎಂಟು ತಿಂಗಳಿಗೆ ಪ್ರಸವ ನೋವು ಶುರುವಾಗಿ ಮಗು ಹುಟ್ಟುವ ಸಂಭವ ಇರುತ್ತದೆ. ಇಂತಹ ಸಂದರ್ಭದಲ್ಲಿ ಮಗು ಆರೋಗ್ಯವಾಗಿ ಇರುವುದಿಲ್ಲ.
ಇನ್ನು ತಾಯಿಯಲ್ಲಿ ಡೆಂಗ್ಯೂ ಜ್ವರ ಬಂದಿರುವಾಗ ಮಗು ಜನಿಸಿದ ನಂತರವೂ ಅದರಲ್ಲಿಯೂ ಡೆಂಗ್ಯೂ ಜ್ವರ ಕಾಣಿಸಿಕೊಳ್ಳಬಹುದು. ಇದಕ್ಕೆ ವಿಶೇಷ ಚಿಕಿತ್ಸೆ ಕೂಡ ಅಗತ್ಯ. ಅವಧಿ ಪೂರ್ವ ಮಗು ಜನಿಸಿದಾಗ ಅದರ ತೂಕವು ಬಹಳ ಕಡಿಮೆ ಇರುತ್ತದೆ. ಹಾಗೂ ಮಗುವಿನ ಬೆಳವಣಿಗೆಗೆ ತೊಂದರೆ ಉಂಟು ಮಾಡಬಹುದು.
ಗರ್ಭವಸ್ಥೆಯಲ್ಲಿ ಡೆಂಗ್ಯೂ ಜ್ವರದ ನಿರ್ವಹಣೆ ಹೇಗೆ?
ಮೊಟ್ಟ ಮೊದಲನೆಯದಾಗಿ ಡೆಂಗ್ಯೂ ಸೋಂಕು, ಜ್ವರ ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಾಗ ನಿಕಟ ಮೇಲ್ವಿಚಾರಣೆ ಬಹಳ ಮುಖ್ಯ. ದೇಹ ಡಿಹೈಡ್ರೇಟ್ ಅಥವಾ ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಬೇಕು. ಸರಿಯಾದ ಆಹಾರ ಸೇವನೆ ಬಹಳ ಮುಖ್ಯ. ಡೆಂಗ್ಯೂ ಬಂದಾಗ ಪ್ಲೇಟ್ಲೆಟ್ ಅಥವಾ ಬಿಳಿ ರಕ್ತದ ಕಣ ಕಡಿಮೆಯಾಗುವುದು ಸಹಜ ಹಾಗಾಗಿ ರಕ್ತ ಉತ್ತಮವಾಗಿಸುವ ಆಹಾರಗಳನ್ನು ಹಾಗೂ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಕಿವಿ ಹಣ್ಣು ಡೆಂಗ್ಯೂ ಜ್ವರದ ಸಮಯದಲ್ಲಿ ಕಡಿಮೆಯಾದ ಪ್ಲೇಟ್ಲೆಟ್ ಸಂಖ್ಯೆ ಹೆಚ್ಚಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಗೆ ಡಾರ್ಕ್ ಚಾಕಲೇಟ್, ಮೊಳಕೆ ಕಾಳುಗಳು, ಪನ್ನೀರ್, ಮೊಟ್ಟೆ, ಡೈರಿ ಉತ್ಪನ್ನಗಳು ಇಂತಹ ಆಹಾರಗಳನ್ನು ಸೇವಿಸಬೇಕು.
ಗರ್ಭವಸ್ಥೆಯಲ್ಲಿ ಯಾವುದೇ ಕಾಯಿಲೆಗಳು ಬರದಂತೆ ಜಾಗೃತಿ ವಹಿಸುವುದು ಬಹಳ ಮುಖ್ಯ. ಯಾಕಂದ್ರೆ ನೇರವಾಗಿ ಇದು ಹೊಟ್ಟೆಯಲ್ಲಿ ಇರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೂ ನಿಮ್ಮ ಕೈಮೀರಿ ಡೆಂಗ್ಯುವಿನಂತಹ ಜ್ವರ ಕಾಣಿಸಿಕೊಂಡಾಗ, ಅದು ಮುಂದೆ ಮಗುವಿಗೆ ವರ್ಗಾವಣೆ ಆಗದೆ ಇರುವ ರೀತಿಯಲ್ಲಿ ಬಹಳ ಮುತುವರ್ಜಿವಹಿಸಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ವೈದ್ಯರ ಸಲಹೆ ತೆಗೆದುಕೊಳ್ಳಿ.



Click it and Unblock the Notifications
