Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಬಂದರೆ ಜನಿಸುವ ಮಗುವಿಗೆ ತೊಂದರೆ ಇದೆಯೇ? ಡೆಂಗ್ಯೂ ಬಾರದಂತೆ ತಡೆಗಟ್ಟಲು ಸಾಧ್ಯವಿದೆ
ರಾಜ್ಯದಲ್ಲಿ ಕೆಲವು ಕಡೆ ಮಳೆಯ ಅಬ್ಬರ, ಬರೆ ಕುಸಿತ ಸಮಸ್ಯೆಗಲಾದರೆ ಜೊತೆ ಜೊತೆಗೆ ಡೆಂಗ್ಯೂ ಸಮಸ್ಯೆ ಕಾಡುತ್ತಿದೆ. ಈ ಡೆಂಗ್ಯೂಗೆ ಈ ವರ್ಷ ರಾಜ್ಯದಲ್ಲಿ 7 ಬಲಿಯಾಗಿದೆ, ಸುಮಾರು 9000 ಜನರಿಗೆ ಡೆಂಗ್ಯು ಬಾಧಿಸಿದೆ, ಈ ಡೆಂಗ್ಯೂ ಸಮಸ್ಯೆ ನಿಯಂತ್ರಣವಾಗಿಲ್ಲ, ಹಾಗಾಗಿ ಡೆಂಗ್ಯೂ ಬಾರದಂತೆ ತಡೆಗಟ್ಟಲು ನಾವು ಮುನ್ನೆಚ್ಚರಿಕೆವಹಿಸಬೇಕು.

ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರಿಗೆ ಸೊಳ್ಳೆ ಕಚ್ಚದಂತೆ ಜಾಗ್ರತೆವಹಿಸಿ, ಅವರನ್ನು ಸೊಳ್ಳೆ ಪರದೆಯ ಒಳಗಡೆಯೇ ಮಲಗಿಸಿ, ಆಟ ಆಡುವಾಗ ಸೊಳ್ಳೆ ಕಚ್ಚದಿರಲು ಕ್ರೀಮ್ ಹಚ್ಚಿ, ಅವರಿಗೆ ತುಂಬು ತೋಳಿನ ಉಡುಪು ಹಾಕಿಕೊಡಿ, ಇನ್ನು ಈ ಅವಧಿಯಲ್ಲಿ ಗರ್ಭಿಣಿಯರು ತುಂಬಾನೇ ಜಾಗ್ರತೆವಹಿಸಬೇಕು, ಏಕೆಂದರೆ
ಗರ್ಭಿಣಿಯರಿಗೆ ಡೆಂಗ್ಯೂ ತಗುಲಿದರೆ ಹೊಟ್ಟೆಯೊಳಗಿನ ಮಗುವಿಗೆ ಹಾನಿಯುಂಟು ಮಾಡುವುದು ಹಾಗಾಗಿ ಜಾಗ್ರತೆವಹಿಸಿ, ಗರ್ಭಿಣಿಯರಿಗೆ ಡೆಂಗ್ಯೂ ಬಂದರೆ ಅಪಾಯಕಾರಿ ಏಕೆ? ಡೆಂಗ್ಯೂ ಗರ್ಭಿಣಿಯರ ಮೇಲೆ ಬೀರುವ ಪ್ರಭಾವವೇನು ಎಂದು ನೋಡೋಣ:
ಗರ್ಭಿಣಿಯಾಗಿದ್ದಾಗ ಡೆಂಗ್ಯೂ ಬಂದರೆ ಕಡಿಮೆ ತೂಕದ ಮಗು ಹುಟ್ಟುವ ಸಾಧ್ಯೆ ಹೆಚ್ಚು
ಗರ್ಭಾವಸ್ಥೆಯಲ್ಲಿ ಡೆಂಗ್ಯೂ ಬಂದರೆ ಜನಿಸುವ ಮಗು ಕಡಿಮೆ ಮೈ ತೂಕ ಹೊಂದುವ ಸಾಧ್ಯತೆ ಶೇ. 67ರಿಂದ ಶೇ. 133ರಷ್ಟಿದೆ. ಅಲ್ಲದೆ ಮಗು ಹುಟ್ಟಿದ ಬಳಿಕ ಅದಕ್ಕೆ 3-5 ವರ್ಷ ತುಂಬುವವರೆಗೆ ಆಗಾಗ ಕಾಯಿಲೆ ಬೀಳುತ್ತಲೇ ಇರುತ್ತದೆ, ಅದರಲ್ಲಿಯೂ ಮಗುವಿಗೆ ಎರಡು ವರ್ಷವಿದ್ದಾಗ ಆಗಾಗ ಕಾಯಿಲೆ ಬೀಳುವುದು ಎಂದು ಅಧ್ಯಯನ ವರದಿ ಹೇಳಿದೆ.
ಮೊದಲ ತ್ರೈ ಮಾಸಿಕದೊಳಗೆ ಡೆಂಗ್ಯೂ ತಗುಲಿದರೆ ಗರ್ಭಪಾತದ ಸಾಧ್ಯತೆ ಹೆಚ್ಚು
ಈ ಡೆಂಗ್ಯೂ ಮೊದಲ ತ್ರೈ ಮಾಸಿಕದೊಳಗೆ ಇದ್ದಾಗ ತಗುಲಿದರೆ ಡೆಂಗ್ಯೂವಿನ ಅಡ್ಡಪರಿಣಾಮದಿಂದಾಗಿ ಗರ್ಭಪಾತದ ಸಾಧ್ಯತೆ ಕೂಡ ಹೆಚ್ಚು, ಇಲ್ಲದಿದ್ದರೆ ಹುಟ್ಟುವ ಮಗುವಿಗೆ ಅನೇಕ ಆರೋಗ್ಯ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚು.
ಗರ್ಭಾವಸ್ಥೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಗರ್ಭಣಿಯರ ಪ್ರಾಣಕ್ಕೆ ಅಪಾಯಕಾರಿ
ಗರ್ಭಿಣಿಯಾಗಿದ್ದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಇದರಿಂದಾಗಿ ಡೆಂಗ್ಯೂ ತಗುಲಿದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು, ಹಾಗಾಗಿ ಗರ್ಭಿಣಿಯರು ಡೆಂಗ್ಯೂ ತಗುಲದಂತೆ ಜಾಗ್ರತೆವಹಿಸಿ.
ಡೆಂಗ್ಯೂ ಬಾರದಂತೆ ತಡೆಗಟ್ಟಲು ಸಾಧ್ಯವೇ?
ಡೆಂಗ್ಯೂ ಎಂಬುವುದು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ, ಬದಲಿಗೆ ಸೋಂಕು ಇರುವ ಸೊಳ್ಳೆ ಕಚ್ಚಿದಾಗ ಹರಡುವುದು, ಆದ್ದರಿಂದ ಮಹಿಳೆಯರು ಸೊಳ್ಳೆ ಕಚ್ಚದಂತೆ ಜಾಗ್ರತೆಎವಹಿಸಿದರೆ ಸಾಕು, ಈ ಡೆಂಗ್ಯೂವಿನಿಂದ ಪಾರಾಗಬಹುದು.
ಸೊಳ್ಳೆ ಕಚ್ಚದಿರಲು ಏನು ಮಾಡಬೇಕು?
ತುಂಬು ತೋಳಿನ ಸಡಿಲವಾದ ಉಡುಪು ಧರಿಸಿ
ಮಲಗುವಾಗ ಸೊಳ್ಳೆ ಪರದೆಯೊಳಗಡೆ ಮಲಗಿ
ಸೊಳ್ಳೆ ಕಚ್ಚದಂತೆ ಕ್ರೀಮ್, ಸ್ಪ್ರೇ ಎಲ್ಲಾ ಸಿಗುತ್ತದೆ ಅದನ್ನು ಬಳಸಿ
ಸಂಜೆ ಹಾಗೂ ಬೆಳಗ್ಗೆ ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿ, ಕಿಟಕಿಗಳಿಗೆ ಸೊಳ್ಳೆಪರದೆ ಬಳಸಿ, ಸೊಳ್ಳೆ ನಿವಾರಕ ಸಾಧನಗಳನ್ನು ಬಳಸಿ.
ಮನೆಯ ಸುತ್ತ-ಮುತ್ತ ಸೊಳ್ಳೆಗಳು ಮೊಟ್ಟೆ ಇಡದಂತೆ ನೋಡಿಕೊಳ್ಳಲು ನೀರು ನಿಲ್ಲಲು ಬಿಡಬೇಡಿ, ಅಲ್ಲದೆ ತೊಟ್ಟಿ, ಡಬ್ಬಗಳಲ್ಲಿ ತುಂಬಾ ದಿನ ನೀರು ತುಂಬಿ ಇಡಬೇಡಿ.
ಹೀಗೆ ಒಂದು ಸೊಳ್ಳೆಯೂ ಕಚ್ಚದಂತೆ ಜಾಗ್ರತೆವಹಿಸಿಸುವುದು ಡೆಂಗ್ಯೂ ಹೆಚ್ಚಾಗಿರುವ ಈ ಅವಧಿಯಲ್ಲಿ ಅವಶ್ಯಕವಾಗಿದೆ.



Click it and Unblock the Notifications
