Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಎದೆಹಾಲುಣಿಸುವ ತಾಯಂದಿರಲ್ಲಿ ಮೊಲೆತೊಟ್ಟು ಒಡೆಯುವ ಸಮಸ್ಯೆಗೆ ಕಾರಣ ಹಾಗೂ ಮನೆಮದ್ದೇನು?
ಎದೆಹಾಲುಣಿಸುವ ಸಮಯ ಇದೆಯೆಲ್ಲಾ ಅದು ಅಷ್ಟು ಸುಲಭವಲ್ಲ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲೂ ಮೊಲೆತೊಟ್ಟಿನಲ್ಲಿ ಬಿರುಕು ಉಂಟಾದರೆ ಮಗು ಹಾಲು ಕುಡಿಯುವಾಗ ಜೀವ ಹೋದಷ್ಟು ನೋವುಂಟಾಗುವುದು.

ಮೊಲೆತೊಟ್ಟಿನಲ್ಲಿ ಬಿರುಕು ಎಂದರೇನು?
ಮೊಲೆತೊಟ್ಟಿನ ಭಾಗ ಕೆಂಪಾಗುವುದು ಜೊತೆಗೆ ಬಿರುಕು ಬಿಟ್ಟಿರುತ್ತದೆ, ತುಂಬಾ ನೋವುಂಟಾಗುವುದು. ಎದೆಹಾಲುಣಿಸುವ ಶೇ. 338ರಷ್ಟು ಮಹಿಳೆಯರಲ್ಲಿ ಈ ಸಮಸ್ಯೆ ಕಂಡು ಬರುವುದಾಗಿ ಮೆಡಿಕಲ್ ನ್ಯೂಸ್ ಟುಡೆ ವರದಿಯಲ್ಲಿ ಹೇಳಿದೆ.
ಮೊಲೆತೊಟ್ಟಿನಲ್ಲಿ ಬಿರುಕು ಉಂಟಾಗಲು ಕಾರಣವೇನು?
ಎದೆಹಾಲುಣಿಸುವಾಗ ಈ ಕಾರಣಗಳಿಂದ ಉಂಟಾಗುವುದು
* ಮಗು ಕಚ್ಚಿ ಎಳೆದು ಕುಡಿದಾಗ
* ಹಾಲುಣಿಸುವಾಗ ಸರಿಯಾದ ಭಂಗಿಯಲ್ಲಿ ಕೂತು ಹಾಲುಣಿಸದಿದ್ದರೆ
* ಬ್ರೆಸ್ಟ್ ಪಂಪ್ ಬಳಸಿದಾಗ
ಮಗುವಿಗೆ ಎದೆಹಾಲುಣಿಸುವ ಮೊದಲಿಗೆ ಬಾಟಲಿನಲ್ಲಿ ಹಾಲು ಕೊಟ್ಟು ನಂತರ ಎದೆ ಹಾಲುಣಿಸಿದರೂ ಈ ರೀತಿ ಉಂಟಾಗುವುದು. ಏಕೆಂದರೆ ಎದೆಹಾಲು ಕುಡಿಯುವುದಕ್ಕೂ, ಬಾಟಲಿಯಿಂದ ಚೀಪಿ ಕುಡಿಯುವುದಕ್ಕೂ ವ್ಯತ್ಯಾಸವಿರುತ್ತದೆ. ಇದರಿಂದಾಗಿ ಕೂಡ ಹೆಚ್ಚಾಗಿ ಮೊಲೆತೊಟ್ಟಿನಲ್ಲಿ ಬಿರುಕು ಉಂಟಾಗುವುದು.
ಸಿ ಸೆಕ್ಷನ್ ಆದಾಗ ಕೆಲವೊಬ್ಬರ ಮಗುವಿಗೆ ಮೊದಲು ಸ್ಪೂನ್ ಅಥವಾ ಬಾಟಲಿಯಲ್ಲಿ ಎದೆಹಾಲುಣಿಸುತ್ತಾರೆ, ಏಕೆಂದರೆ ಕೆಲವರಿಗೆ ಎದ್ದು ಕೂತು ಹಾಲು ಕೊಡಲು ತುಂಬಾ ಕಷ್ಟವಾಗಿರುತ್ತದೆ. ಆವಾಗ ಮಗುವಿಗೆ ಮೊದಲು ಸ್ಪೂನ್‌ನಲ್ಲಿ ಅಥವಾ ಬಾಟಲಿನಲ್ಲಿ ಕುಡಿಸುತ್ತಾರೆ. ನಂತರ ಎದೆಹಾಲುಣಿಸಲು ಪ್ರಯತ್ನಿಸಿದಾಗ ಮಗು ಚೀಪುವ ವಿಧಾನ ಸರಿಯಿಲ್ಲದೆ ತೊಂದರೆಯಾಗಬಹುದು.
ಮೊಲೆತೊಟ್ಟು ಒಡೆದಾಗ ಚಿಕಿತ್ಸೆಯೇನು?
ಮಗುವಿಗೆ ಎದೆಹಾಲುಣಿಸುವುದರಿಂದ ನೀವು ಯಾವುದೋ ಕ್ರೀಮ್ ಹಚ್ಚುವಂತಿಲ್ಲ, ಒಂದೋ ವೈದ್ಯರು ಸೂಚಿಸಿದ ಕ್ರೀಮ್ ಹಚ್ಚಬೇಕು. ಇಲ್ಲದಿದ್ದರೆ ತೆಂಗಿನೆಣ್ಣೆ ಹಚ್ಚಿ. ನಂತರ ಮಗುವಿಗೆ ಹಾಲುಣಿಸುವಾಗ ಮೊಲೆತೊಟ್ಟು ತೊಳೆದು ಕೊಡಿ.
* ಮೊಲೆತೊಟ್ಟು ಒಡೆದಿದ್ದರೆ corticosteroid cream ಹಚ್ಚಬಹುದು, ಆದರೆ ಇದನ್ನು ತುಂಬಾ ದಿನಗಳವರೆಗೆ ಹಚ್ಚಬೇಡಿ. ಮೊಲೆತೊಟ್ಟು ತೆಳುವಾಗುವುದು.
* ಬ್ರಾ ಧರಿಸಬೇಡಿ, ತುಂಬಾ ಬಿಗಿಯಾದ ಉಡುಪು ಧರಿಸಬೇಡಿ.
* ಸೋಪು ಹಚ್ಚಿ ತೊಳೆಯುವುದು, ಬೇಬಿ ಪೌಡರ್ ಹಚ್ಚುವುದು ಮಾಡಬೇಡಿ.
ಈ ಬಗೆಯ ಸಮಸ್ಯೆ ತಡೆಗಟ್ಟುವುದು ಹೇಗೆ?
* ಮಗು ಸರಿಯಾದ ವಿಧಾನದಲ್ಲಿ ಚೀಪುತ್ತಿದೆ ಎಂಬುವುದು ಖಾತರಿಪಡಿಸಿ. ನೀವು ಚೇರ್‌ನಲ್ಲಿ ಕೂತು ಮಗುವನ್ನು ಕೈಯಲ್ಲಿ ಹಿಡಿದು ಹಾಲುಣಿಸಿದರೆ ಭಂಗಿ ಸರಿಯಾಗಿರುತ್ತದೆ. ಮಲಗಿ ಹಾಲುಣಿಸಲು ಹೋಗಬೇಡಿ.
* ಬಿಸಿ ನೀರಿನಲ್ಲಿ ಸ್ತನಗಳನ್ನು ಸ್ವಚ್ಛಗೊಳಿಸಿ, ಸೋಪು ಹಚ್ಚಬೇಡಿ.
* ಸ್ತನಕ್ಕೆ ತೆಂಗಿನೆಣ್ಣೆ ಹಚ್ಚಿ, ಇದರಿಂದ ಸ್ತನಗಳು ಒಣಗುವುದು ತಡೆಗಟ್ಟಬಹುದು.
* ಬ್ರೆಸ್ಟ್ ಪ್ಯಾಡ್ ಧರಿಸಿ
* ನೀವು ಮೊಲೆತೊಟ್ಟಿಗೆ ಎದೆಹಾಲನ್ನು ಕೂಡ ಹಚ್ಚಬಹುದು.
ಎದೆ ಹಾಲುಣಿಸುವಾಗ ನೀವು ಮಗುವಿಗೆ ಎದೆಹಾಲುಣಿಸುವ ಭಂಗಿ ಕಡೆ ಗಮನ ನೀಡಿದರೆ ಇಂಥ ಸಮಸ್ಯೆ ತಡೆಗಟ್ಟಬಹುದು.



Click it and Unblock the Notifications

