ಈ ದಾಂಪತ್ಯ ಸಮಸ್ಯೆಗಳು ನೀವು ಗರ್ಭಿಣಿಯಾದಾಗ ಪರಿಹಾರವಾಗಲಿದೆ

ತಾಯ್ತನವು ಹೆಣ್ಣಿಗೆ ಹೊಸ ಜನ್ಮವಿದ್ದಂತೆ ಎಂದು ಹೇಳಲಾಗುತ್ತದೆ. ಹೆಣ್ಣು ಹುಟ್ಟಿದ ಮೇಲೆ ಪ್ರತಿ ಹಂತದಲ್ಲೂ ಬದಲಾವಣೆಗಳನ್ನು ಕಾಣುತ್ತಾಳೆ. ಅದೇ ರೀತಿ ಮದುವೆ ಆಕೆಯ ಬಾಳಿನ ಒಂದು ಪ್ರಮುಖ ಘಟ್ಟವಾದರೆ, ಮದುವೆಯ ನಂತರ ಗರ್ಭಿಣಿಯಾಗೋದು ಮತ್ತೊಂದು ಹಂತ. ಈ ಹಂತದಲ್ಲಿ ಆಕೆ ದಾಂಪತ್ಯ ಜೀವನದ ಅನೇಕ ಸಮಸ್ಯೆಗಳಿಗೆ ಆಕೆ ಪರಿಹಾರವನ್ನು ಕಂಡುಕೊಳ್ಳಬಹುದು. ಹಾಗಾದ್ರೆ ದಾಂಪತ್ಯ ಜೀವನದಲ್ಲಿ ಎದುರಾಗುವ ಆ ಸಮಸ್ಯೆಗಳು ಯಾವುದು? ಅವುಗಳಿಗೆ ಪರಿಹಾರ ಕಂಡುಕೊಳ್ಳೋದು ಹೇಗೆ ಎಂಬುವುದನ್ನು ತಿಳಿಯೋಣ.

ದಾಂಪತ್ಯ ಜೀವನದಲ್ಲಿ ಕಂಡು ಬರುವ ಸಮಸ್ಯೆಗಳು :
1. ಸಂವಹನದ ಕೊರತೆ
ದಂಪತಿಗಳ ನಡುವೆ ಸಂವಹನದ ಕೊರತೆ ಕಂಡು ಬರೋದು ಸಾಮಾನ್ಯವಾಗಿದೆ. ಎಲ್ಲರಲ್ಲೂ ಈ ರೀತಿ ಸಮಸ್ಯೆ ಇರುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಸಾಮಾನ್ಯವಾಗಿ ಅರೇಂಜ್‌ ಮ್ಯಾರೇಜ್‌ ಆದ ಸಮಯದಲ್ಲಿ ಈ ರೀತಿ ಆಗುತ್ತದೆ. ಗಂಡ-ಹೆಂತಿ ಮಧ್ಯೆ ಹೆಚ್ಚಿನ ಮಾತು ಕತೆ ಇರೋದಿಲ್ಲ. ಅಗತ್ಯವಿದ್ದಾಗ ಮಾತ್ರ ಇವರಿಬ್ಬರು ಮಾತನಾಡಿಕೊಳ್ಳುತ್ತಾರೆ. ಹೆಚ್ಚಿನ ಸಮಯದಲ್ಲಿ ದಂಪತಿಗಳು ಮೌನವಾಗಿಯೇ ಇರುತ್ತಾರೆ.

Common Marital problems to avoid during pregnancy in Kannada

2. ಇಬ್ಬರ ನಡುವಿನ ಅಂತರ ಹೆಚ್ಚಾಗುತ್ತದೆ
ದಂಪತಿಗಳ ನಡುವೆ ಅಂತರ ಹೆಚ್ಚಾಗಲು ಎರಡು ಕಾರಣವಿದೆ. ಒಂದು ಸಂವಹನದ ಕೊರತೆ ಮತ್ತೊಂದು ಸಂಗಾತಿಯ ಅಗತ್ಯತೆಗಳ ಬಗ್ಗೆ ಗಮನ ಹರಿಸದೇ ಇರುವುದು. ಇದು ಮುಂದೆ ಬೆಳೆದು ಬಗೆ ಹರಿಸಲಾರದ ಸಮಸ್ಯೆಯಾಗಿ ಬೆಳೆದು ಬಿಡಬಹುದು. ಇದರಿಂದ ಹತಾಶೆ, ತಪ್ಪು ತಿಳುವಳಿಕೆ ಹೆಚ್ಚಾಗಬಹುದು. ಇಷ್ಟೆಲ್ಲಾ ಸಮಸ್ಯೆ ಇದ್ದಾಗ ಸುಖವಾಗಿ ಸಂಸಾರ ಸಾಗಿಸೋದಕ್ಕೆ ಸಾಧ್ಯವಾಗೋದಿಲ್ಲ. ಋಣಾತ್ಮಕತೆ ಅನ್ನೋದು ಬದುಕಿನಲ್ಲಿ ತುಂಬಿ ಹೋಗುತ್ತದೆ. ಇದು ನಿಮ್ಮಿಬ್ಬರನ್ನು ಒಟ್ಟಾಗಲು ಬಿಡೋದೇ ಇಲ್ಲ.

3. ಲೈಂಗಿಕ ಸಂಪರ್ಕ ಅಷ್ಟಾಗಿ ಇಲ್ಲದಿರೋದು
ಗಂಡ-ಹೆಂಡತಿ ಎರಡು ದೇಹ, ಒಂದು ಪ್ರಾಣದಂತಿರಬೇಕು. ಇಬ್ಬರು ಮಾನಸಿಕವಾಗಿ ಎಷ್ಟು ಆತ್ಮೀಯರಾಗಿರುತ್ತಾರೋ ಅಷ್ಟೇ ದೈಹಿಕವಾಗಿಯೂ ಆತ್ಮೀಯರಾಗೋದು ಮುಖ್ಯ. ಆದರೆ ಕೆಲ ದಂಪತಿಗಳಲ್ಲಿ ದೈಹಿಕ ಸಂಪರ್ಕವೇ ಇರೋದಿಲ್ಲ. ಯಾವಾಗಲೋ ಒಮ್ಮೆ ದೈಹಿಕ ಸಂಪರ್ಕದಲ್ಲಿ ತೊಡಗಿಕೊಳ್ಳುತ್ತಾರೆ. ಸಂವಹನ ಹಾಗೂ ಇಬ್ಬರ ನಡುವೆ ಅಂತರದ ಕೊರತೆ ಹೆಚ್ಚಾದಾಗ ಹೀಗಾಗುತ್ತದೆ. ಮಾತಿಲ್ಲದೇ ಮೌನ ಹೆಚ್ಚಾದಾಗಲೂ ಈ ರೀತಿ ಆಗುತ್ತದೆ.

ಈ ಸಮಸ್ಯೆಗಳಿಗೆ ಗರ್ಭಿಣಿಯಾದಾಗ ಪರಿಹಾರ :
1. ಸಂವಹನ ಹೆಚ್ಚಾಗುತ್ತದೆ
ದಾಂಪತ್ಯದಲ್ಲಿ ಎಷ್ಟೇ ಸಮಸ್ಯೆಗಳಿದ್ದರೂ ಕೂಡ ಪತ್ನಿ ಗರ್ಭಿಣಿಯಾದ ಸಂದರ್ಭದಲ್ಲಿ ಎಲ್ಲಾ ಸಮಸ್ಯೆಗಳು ಶುಭಾಂತ್ಯ ಕಂಡ ಅದೆಷ್ಟು ಉದಾಹರಣೆಗಳಿದೆ. ಪತ್ನಿ ಗರ್ಭಿಣಿಯಾದ ಸಂದರ್ಭದಲ್ಲಿ ಪತಿಯಾದವನು ಖಂಡಿತ ಆಕೆಯ ಬಗ್ಗೆ ಕಾಳಜಿ ವಹಿಸದೇ ಇರೋದಿಲ್ಲ. ಆಕೆಯ ಬೇಕು, ಬೇಡಗಳನ್ನು ವಿಚಾರಿಸುತ್ತಾನೆ. ಆಕೆಯ ಬಗ್ಗೆ ಕಾಳಜಿ ಮಾಡುತ್ತಾನೆ. ಪತ್ನಿಗಾಗಿ ಅಲ್ಲದಿದ್ದರೂ ಹುಟ್ಟುವ ಮಗುವಿಗಾಗಿ ಆತ ಕಾಳಜಿ ಮಾಡಲೇಬೇಕು. ಈ ಸಂದರ್ಭದಲ್ಲಿ ಇಬ್ಬರ ನಡುವಿನ ಮುನಿಸು ದೂರವಾಗಿ ಮಾತುಕತೆ ಹೆಚ್ಚಾಗುತ್ತದೆ. ಸಂಬಂಧ ತನ್ನಿಂದ ತಾನೆ ಉತ್ತಮವಾಗುತ್ತದೆ.

2. ಒಬ್ಬರಿಗೊಬ್ಬರು ಹತ್ತಿರವಾಗುತ್ತಾರೆ
ಮನೆಯಲ್ಲಿ ಪತಿ-ಪತ್ನಿ ಇಬ್ಬರೇ ಇದ್ದಾಗ ಗರ್ಭಿಣಿ ಪತ್ನಿಯ ಸೇವೆಯನ್ನು ಪತಿಯಾದವನು ಮಾಡಬೇಕಾಗುತ್ತದೆ. ಗರ್ಭಿಣಿಯಾದ ಆರಂಭದಲ್ಲಿಅವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಪತಿಯಾದವನು ಅಡುಗೆಯಿಂದ ಹಿಡಿದು ಪ್ರತಿಯೊಂದು ಮನೆಕೆಲಸವನ್ನು ಅವನೇ ಮಾಡಬೇಕಾಗುತ್ತದೆ. ಇನ್ನೂ ಪತ್ನಿ ಗರ್ಭಿಣಿಯಾಗಿದ್ದಾಗ ಪ್ರತಿಯೊಂದು ಕೆಲಸವನ್ನು ಆಕೆಯಿಂದ ಮಾಡೋದಿಕ್ಕಾಗೋದಿಲ್ಲ. ಇದಕ್ಕೆ ಆತನ ಸಹಾಯ ಖಂಡಿತ ಬೇಕಾಗುತ್ತದೆ. ಈ ನೆಪದಲ್ಲಾದರೂ ಇಬ್ಬರ ನಡುವಿನ ಅಂತರ ಕಡಿಮೆಯಾಗಿ ಇಬ್ಬರೂ ಜೊತೆಯಾಗುತ್ತಾರೆ.

3. ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಬೇಕು
ಯಾವಾಗ ಪತಿ ಹಾಗೂ ಪತ್ನಿಯ ನಡುವೆ ಸಂವಹನ ಹೆಚ್ಚಾಗುತ್ತದೆಯೋ, ಅವರು ಒಬ್ಬರಿಗೊಬ್ಬರು ಹತ್ತಿರವಾಗುತ್ತಾರೋ ಆಗ ಖಂಡಿತ ದೈಹಿಕ ಸಂಪರ್ಕವು ಉತ್ತಮಗೊಳ್ಳುತ್ತದೆ. ಮನಸ್ಸುಗಳು ಹತ್ತಿರವಾದ್ರೆ ಸಾಕು ಜೀವನದಲ್ಲಿ ಎದುರಾಗೋ ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಪತ್ನಿ ಗರ್ಭಿಣಿಯಾಗಿದ್ದಾಗ ದೈಹಿಕ ಸಂಪರ್ಕ ನಡೆಸಬಹುದು. ಆದರೆ ಇದು ಸುರಕ್ಷಿತ ದೈಹಿಕ ಸಂಪರ್ಕವಾಗಿರಬೇಕು. ಹೀಗಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ವೈದ್ಯರನ್ನು ಸಂಪರ್ಕಿಸಿದರೆ ಒಳ್ಳೆಯದು.

ದಾಂಪತ್ಯದಲ್ಲಿ ಎಂತಹದ್ದೇ ಬಿರುಕು, ಬಿನ್ನಾಭಿಪ್ರಾಯಗಳು ಇರಲಿ ಪತ್ನಿ ಗರ್ಭಿಣಿಯಾದ ಸಂದರ್ಭದಲ್ಲಿ ಎಲ್ಲವೂ ಸರಿಯಾಗುತ್ತದೆ. ದೂರವಾಗಿದ್ದ ದಂಪತಿಗಳು ಕೂಡ ಈ ಸಂದರ್ಭದಲ್ಲಿ ಹತ್ತಿರವಾಗುತ್ತಾರೆ.

English summary

Common Marital problems to avoid during pregnancy in Kannada

These are the Common Marital problems to avoid during pregnancy.
Story first published: Monday, April 24, 2023, 16:45 [IST]
X
Desktop Bottom Promotion