Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಿ ಸೆಕ್ಷನ್ ಹೆರಿಗೆಗೆ ಪ್ಲ್ಯಾನ್ಡ್ ಮಾಡುವುದಾದರೆ ಈ ವಿಚಾರ ಗೊತ್ತಿರಲಿ
ಸಹಜ ಹೆರಿಗೆ VS ಸಿ ಸೆಕ್ಷನ್ ಅಂತ ಬಂದಾಗ ಇದರ ಪ್ಲಸ್-ಮೈನಸ್ ಪಾಯಿಂಟ್‌ಗಳ ಬಗ್ಗೆ ತುಂಬಾನೇ ಚರ್ಚೆ ಮಾಡಲಾಗುವುದು. ಕೆಲವರು ಸಿ ಸೆಕ್ಷನ್‌ನ ಪಾಸಿಟಿವ್ ಸೈಡ್ ಬಗ್ಗೆ ಹೇಳಿದರೆ ಇನ್ನು ಕೆಲವರು ಸಹಜ ಹೆರಿಗೆ ಎಲ್ಲಾರಿಗೂ ಸೂಕ್ತವಲ್ಲ ಎಂದು ಹೇಳುವುದುಂಟು. ಹೌದು ಈ ವಾದ ಒಪ್ಪುವಂಥದ್ದೇ, ಎಲ್ಲಾ ಹೆರಿಗೆಯನ್ನು ಸಹಜ ಹೆರಿಗೆ ಅಂತ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸಹಜ ಹೆರಿಗೆಯಿಂದ ತಾಯಿ ಮಗುವಿಗೆ ಅಪಾಯವಿದೆ ಎಂದು ವೈದ್ಯರು ತಿಳಿಸಿದಾಗ ಸಿ ಸೆಕ್ಷನ್ ಅನಿವಾರ್ಯವಾಗಿರುತ್ತದೆ. ಆದರೆ ಇನ್ನು ಕೆಲವರು ನಮಗೆ ಸಿ ಸೆಕ್ಷನ್ ಹೆರಿಗೆಯೇ ಬೇಕೆಂದು ಪ್ಲ್ಯಾನ್ಡ್ ಹೆರಿಗೆಯಾಗುತ್ತಾರೆ.
ಸಿ ಸೆಕ್ಷನ್ ಹೆರಿಗೆಯೇ ಸಾಕೆನ್ನುವವರು ಹೆರಿಗೆಯ ದಿನ, ಸಮಯವನ್ನು ಎಲ್ಲವನ್ನು ಮೊದಲೇ ನಿರ್ಧರಿಸಿ ಹೆರಿಗೆ ಮಾಡಿಸುವುದಿದೆ. ಆದರೆ ಫ್ಲ್ಯಾನ್ಡ್ ಸಿ ಸೆಕ್ಷನ್ ಮಾಡಿಸಲು ಬಯಸುವವರು ಕೆಲವೊಂದು ವಿಷಯವನ್ನು ತಿಳಿದುಕೊಂಡರೆ ಒಳ್ಳೆಯದು:

ಯಾರಿಗೆ ಸಿ ಸೆಕ್ಷನ್ ಒಳ್ಳೆಯದು?
ಯಾವುದೇ ಸಮಸ್ಯೆಯಿಲ್ಲ ಸಹಜ ಹೆರಿಗೆಯಾಗಬಹುದು ಎಂದು ವೈದ್ಯರು ಹೇಳಿದರೆ ಸಹಜ ಹೆರಿಗೆ ಒಳ್ಳೆಯದು. ಸಹಜ ಹೆರಿಗೆ ಮಗು ಹಾಗೂ ತಾಯಿಯ ಆರೋಗ್ಯಕ್ಕೆ ಒಳ್ಳೆಯದು. ಒಂದು ವೇಳೆ ಈ ಸಮಸ್ಯೆಗಳಿದ್ದಾಗ ಸಿ ಸೆಕ್ಷನ್ ಆಯ್ಕೆ ಮಾಡುವುದು ಬೆಸ್ಟ್
ಸಿಪಿಡಿ (Cephalopelvic disproportion): ಮಗುವಿನ ದೇಹದ ಗಾತ್ರ ಅಥವಾ ತಲೆ ಗಾತ್ರ ಸಾಮಾನ್ಯ ಗಾತ್ರಕ್ಕಿಂತ ದೊಡ್ಡದಿದ್ದರೆ ಸಹಜ ಹೆರಿಗೆ ಕಷ್ಟವಾಗಬಹುದು. ಈಗೆಲ್ಲಾ ಸ್ಕ್ಯಾನಿಂಗ್ ಮಾಡಿಸಿದಾಗ ಮಗುವಿನ ತೂಕ ತಿಳಿದುಬರುವುದು. ಮಗುವಿನ ತೂಕ ಅಧಿಕವಿದ್ದರೆ ಸಿ ಸೆಕ್ಷನ್ ಆಯ್ಕೆ ಮಾಡುವುದು ಒಳ್ಳೆಯದು.
ಈ ಮೊದಲು ಸಿ ಸೆಕ್ಷನ್ ಆಗಿದ್ದರೆ: ಮೊದಲ ಹೆರಿಗೆ ಸಿ ಸೆಕ್ಷನ್ ಆಗಿದ್ದರೆ ಎರಡನೇ ಹೆರಿಗೆ ಸಹಜವಾಗುವುದು. ಆದರೆ ಇದರಲ್ಲಿ ರಿಸ್ಕ್ ಕೂಡ ಇದೆ, ಸಹಜ ಹೆರಿಗೆಯಲ್ಲಿ ಯುಟ್ರೈನ್ ರಪ್ಚರ್ (ಗರ್ಭಚೀಲ ಬೇರ್ಪಡುವುದು) ಸಾಧ್ಯತೆ ಇರುವುದರಿಂದ ಎರಡನೇ ಬಾರಿಯೂ ಸಿ ಸೆಕ್ಷನ್ ಮಾಡಿಸುವುದು ಒಳ್ಳೆಯದು.
ಅವಳಿ ಅಥವಾ ತ್ರಿವಳಿ ಮಕ್ಕಳಿದ್ದರೆ: ಅವಳಿ ಅಥವಾ ತ್ರಿವಳಿ ಮಕ್ಕಳಿದೆ ಎಂದು ಗೊತ್ತಾದಾಗ ಸಹಜ ಹೆರಿಗೆಗಿಂತ ಸಿ ಸೆಕ್ಷನ್ ಹೆರಿಗೆ ಆಯ್ಕೆ ಮಾಡುವುದು ಸೂಕ್ತ.
ಪ್ಲಾಸೆಂಟಾ ಪ್ರೀವಿಯಾ (Placenta previa): ಈ ಕೇಸ್‌ನಲ್ಲಿ ಗರ್ಭಚೀಲ ಗರ್ಭಕಂಠಕ್ಕೆ ಸ್ವಲ್ಪವೇ ಅಂಟಿಕೊಂಡಿರುತ್ತದೆ, ಇದರಿಂದ ಮಗು ಹೊರಬರಲು ತಡೆಯೊಡ್ಡುವುದು.
ಮಗು ಅಡ್ಡತಿರುಗಿದ್ದರೆ: ವೈದ್ಯಕೀಯ ಭಾಷೆಯಲ್ಲಿ Transverse lie ಎಂದು ಕರೆಯಲಾಗುವುದು. ಮಗು ಒಂದು ಕಡೆ ತಿರುಗಿದ್ದರೆ ಸಹಜ ಹೆರಿಗೆಗೆ ಕಷ್ಟವಾಗುವುದು.
ಬ್ರೀಚ್ ಪ್ರಸೆಂಟೇಷನ್: ಮಗುವಿನ ಹಿಂಬಂದಿ ಅಥವಾ ಕಾಲುಗಳು ಯೂಟ್ರಸ್ ಬಳಿಯಿದ್ದರೆ ಸಹಜ ಹೆರಿಗೆಗೆ ತುಂಬಾನೇ ಕಷ್ಟವಾಗುವುದು.
ಈ ಸಂದರ್ಭದಲ್ಲಿ ಸಹಜ ಹೆರಿಗೆ ಬಯಸಿದ್ದರೂ ಸಿ ಸೆಕ್ಷನ್ ಮಾಡಿಸುವುದು ತಾಯಿಯ ಪ್ರಾಣಕ್ಕೆ ಒಳ್ಳೆಯದು:
* ಎಷ್ಟೇ ನೋವು ಅನುಭವಿಸಿದರೂ ಸಹಜ ಹೆರಿಗೆಯಾಗದಿದ್ದರೆ
ಕೆಲವರಿಗೆ ಹೆರಿಗೆ ನೋವು 3-4 ದಿನವಿರುತ್ತದೆ, ಆದರೆ ಹೆರಿಗೆಯಾಗಿರುವುದಿಲ್ಲ, ಈ ಸಮಯದಲ್ಲಿ ಸಿ ಸೆಕ್ಷನ್ ಹೆರಿಗೆ ಮಾಡಿಸುವುದು ಸೂಕ್ತ.
ಹೊಕ್ಕಳ ಬಳ್ಳಿ ಕುತ್ತಿಗೆಗೆ ಸಿಕ್ಕಿಕೊಂಡಾಗ: ಹೊಕ್ಕಳಬಳಿ ಸಿಕ್ಕಿ ಹಾಕಿಕೊಂಡಾಗ ಮಗುವಿನ ಪ್ರಾಣಕ್ಕೆ ಅಪಾಯಕಾರಿ.
ಹೊಕ್ಕಳ ಬಳಿ ಮಗು ಜನಿಸುವ ಮೊದಲೇ ಗರ್ಭಕಂಠದಿಂದ ಹೊರಬಿದ್ದರೆ: ಈ ಸಮಯದಲ್ಲಿ ತಕ್ಷಣವೇ ಸಿ ಸೆಕ್ಷನ್ ಮಾಡದಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯಕಾರಿ.
ಮಗುವಿನ ಹೃದಯ ಬಡಿತದಲ್ಲಿ ವ್ಯತ್ಯಾಸವಾಗುತ್ತಿದ್ದರೆ: ವೈದ್ಯರ ಪರೀಕ್ಷಿಸಿದಾಗ ಮಗುವಿನ ಹೃದಯ ಬಡಿತದಲ್ಲಿ ವ್ಯತ್ಯಾಸ ಕಂಡು ಬಂದರೆ ಕೂಡಲೇ ಸಿ ಸೆಕ್ಷನ್ ಮಾಡುವಂತೆ ಸೂಚಿಸುತ್ತಾರೆ.
ಸಿ ಸೆಕ್ಷನ್‌ನಲ್ಲಿ ಮಗುವನ್ನು ಹೊರತೆಗೆಯುವಾಗ ಗೊತ್ತಾಗುವುದೇ?
ಸಿ ಸೆಕ್ಷನ್ ಅರವಳಿಕೆ ( anesthesia) ನೀಡಿದರೂ ಪ್ರಜ್ಞೆ ತಪ್ಪಿರುವುದಿಲ್ಲ, ಹೊಟ್ಟೆಯ ಕೆಳಭಾಗ ಮಾತ್ರ ಮರಗಟ್ಟಿದಂತಿರುತ್ತದೆ. ಹೆರಿಗೆಯ ವಾರ್ಡ್‌ನಲ್ಲಿ ನಡೆಯುವ ಸಂಭಾಷಣೆ ಎಲ್ಲಾ ಕಿವಿಗೆ ಬೀಳುತ್ತಿರುತ್ತದೆ, ಅಲ್ಲದೆ ಹೊಟ್ಟೆಯಿಂದ ಮಗುವನ್ನು ಹೊರಗಡೆ ತೆಗೆದಾಗ ಗೊತ್ತಾಗುವುದಲ್ಲ. ಮಗು ಅತ್ತಾಗ ಅಥವಾ ವೈದ್ಯರೇ ತಿಳಿಸಿದಾಗ ತಿಳಿಯುವುದು.
ಕೆಲವು ಮಹಿಳೆಯರು ಅರವಳಿಕೆ ಕೊಟ್ಟಾಗ ಪ್ರಜ್ಞೆ ತಪ್ಪುತ್ತಾರೆ. ಆದರೆ ಬಹುತೇಕ ಮಹಿಳೆಯರಿಗೆ ಈ ಸಮಯದಲ್ಲಿ ಪ್ರಜ್ಞೆ ಇರುತ್ತದೆ.
ಸಿ ಸೆಕ್ಷನ್ ಸುರಕ್ಷಿತವೇ?
ಸಹಜ ಹೆರಿಗೆ ತಾಯಿ ಹಾಗೂ ಮಗುವಿನ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು. ಆದರೆ ಮಗು ಅಡ್ಡ ತಿರುಗಿದಾಗ ಅಥವಾ ಏನಾದರೂ ಸಮಸ್ಯೆವಿದ್ದಾಗ ಸಿ ಸೆಕ್ಷನ್ ಸುರಕ್ಷಿತವಾಗಿದೆ.
ಸಿ ಸೆಕ್ಷನ್‌ಗೆ ಎಷ್ಟು ಸಮಯಬೇಕು?
45 ನಿಮಿಷದೊಳಗೆ ಸಿ ಸೆಕ್ಷನ್ ಹೆರಿಗೆ ಮಾಡಲಾಗುವುದು.
ಸಿ ಸೆಕ್ಷನ್ ಬಳಿಕ ಏನಾಗುವುದು?
* ಸಿ ಸೆಕ್ಷನ್ ಹೆರಿಗೆಯಾದರೆ ದೇಹಕ್ಕೆ ಚೇತರಿಸಿಕೊಳ್ಳಲು ಅಧಿಕ ಸಮಯ ಬೇಕಾಗುವುದು. ಸ್ಟಿಚ್ಚಸ್ ಕರಗುತ್ತದೆ, ಸ್ಟೇಪಲ್ಸ್ ಅನ್ನು ಆಸ್ಪತ್ರೆಯಲ್ಲಿಯೇ 5ನೇ ದಿನದಲ್ಲಿ ತೆಗೆಯಲಾಗುವುದು. ಕಿಬ್ಬೊಟ್ಟೆ ನೋವು ಕೆಲವೊಂದಿಷ್ಟು ದಿನಗಳವರೆಗೆ ಇರಲಿದೆ.
ಸಿ ಸೆಕ್ಷನ್ ಆದರೆ ಏನೆಲ್ಲಾ ಅಪಾಯಗಳಿವೆ?
* ಸೋಂಕಿನ ಅಪಾಯವಿದೆ
* ರಕ್ತಸ್ರಾವದ ಅಪಾಯವಿದೆ
* ಹೆಪ್ಪುಗಟ್ಟಿದ ರಕ್ತ ಒಡೆದು ರಕ್ತನಾಳಕ್ಕೆ ರಕ್ತ ಸೇರುವ ಅಪಾಯವಿದೆ.
* ಬ್ಲೇಡರ್ ಹಾನಿಯಾಗಬಹುದು
* ಕಟ್ ಮಾಡಿದಾಗ ಯೂಟ್ರೈನ್ ವಾಲ್ ( ಗರ್ಭಾಶಯದ ಗೋಡೆ) ದುರ್ಬಲವಾಗುವುದು
* ಮುಂದಿನ ಗರ್ಭಧಾರಣೆಯಲ್ಲಿ ಮಗುವಿಗೆ ತೊಂದರೆಯಾಗಬಹುದು
* ಅರವಳಿಕೆಯಿಂದ ಅಡ್ಡಪರಿಣಾಮ ಉಂಟಾಗುವುದು
* ಗಾಯ ಒಣಗಲು ಕಷ್ಟವಾಗಬಹುದು
ಸಿ ಸೆಕ್ಷನ್ ಅಡ್ಡಪರಿಣಾಮಗಳು
* ಸಹಜ ಹೆರಿಗೆಯಷ್ಟು ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ
* ಪೆಲ್ವಿಕ್ ನೋವು ಸಹಜ ಹೆರಿಗೆಗಿಂತ ಅಧಿಕವಿರುತ್ತದೆ
* ಮತ್ತೊಂದು ಹೆರಿಗೆಯಲ್ಲೂ ಸಿ ಸೆಕ್ಷನ್ ಮಾಡಬೇಕಾಗುವುದು
* ಮಗುವಿನಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು
* ಎದೆಹಾಲುಣಿಸಲು ತೊಂದರೆಯಾಗುವುದು
* ಚೇತರಿಸಿಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುವುದು



Click it and Unblock the Notifications
