Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಗರ್ಭಿಣಿಯಾಗಿದ್ದಾಗ ಸ್ತನದಲ್ಲಿ ಆಗುವುದು ಈ ಬದಲಾವಣೆ
ಪ್ರತಿಯೊಬ್ಬ ಮಹಿಳೆಗೂ ತಾನು ಗರ್ಭಿಣಿ ಆಗಬೇಕು ಮಗುವಿಗೆ ಜನ್ಮ ನೀಡಬೇಕು ಎನ್ನುವ ಕನಸು ಸಾಮಾನ್ಯ. ಇನ್ನು ಗರ್ಭಾವಸ್ಥೆ ಸಮಯದಲ್ಲಿ ದೇಹದಲ್ಲಿ ಆಗುವ ಸಾಕಷ್ಟು ಬದಲಾವಣೆಗಳು, ಹೆಣ್ಣಿಗೆ ಹೊಸ ಅನುಭವವನ್ನು ನೀಡುತ್ತವೆ ಜೊತೆಗೆ ಸಾಕಷ್ಟು ನೋವನ್ನು ಕೂಡ ನೀಡುತ್ತವೆ.
ಗರ್ಭಾವಸ್ಥೆಯ ಸಮಯದಲ್ಲಿ ದೇಹದಲ್ಲಿ ಹಾರ್ಮೋನಲ್ ಬದಲಾವಣೆಗಳು ಆಗುತ್ತವೆ. ಇದರಿಂದ ದೇಹದ ಪ್ರತಿಯೊಂದು ಭಾಗದಲ್ಲಿಯೂ ಸಾಕಷ್ಟು ನೋವು ಕಿರಿಕಿರಿ ಅನುಭವಿಸಬೇಕಾಗುತ್ತದೆ. ಅದರಲ್ಲಿಯೂ ಸ್ತನಗಳು ದೊಡ್ಡದಾಗುವುದು, ಮೃದುತ್ವ ಹೊಂದುವುದು ಪ್ರತಿಯೊಬ್ಬ ಗರ್ಭಿಣಿ ಸ್ತ್ರೀಯರಲ್ಲಿಯೂ ನಡೆಯುವ ಸಹಜ ಪ್ರಕ್ರಿಯೆ.

ಗರ್ಭಾವಸ್ಥೆಯಲ್ಲಿ ಮಹಿಳೆಯರ ಸ್ತನಗಳು ಬಹಳ ಸೂಕ್ಷ್ಮ ಹಾಗೂ ಮೃದುವಾಗಿರುತ್ತವೆ. ಗರ್ಭಿಣಿಯಾದ ನಾಲ್ಕರಿಂದ ಏಳು ವಾರದ ಒಳಗೆ ಈ ಬದಲಾವಣೆ ಆರಂಭವಾಗುತ್ತದೆ. ಸುಮಾರು ಮೊದಲ ತ್ರೈಮಾಸಿಕದ ವರೆಗೂ ಸ್ತನಗಳಲ್ಲಿ ಬದಲಾವಣೆಗಳನ್ನು ಕಾಣಬಹುದು. ಕೊಲೊಸ್ಟ್ರೋನ್ ಸ್ತನಗಳಲ್ಲಿ ಉತ್ಪಾದನೆಯಾಗುವುದರಿಂದಲೂ ಕೂಡ ಬದಲಾವಣೆಗಳು ಆಗುತ್ತವೆ. ಇದಕ್ಕೆ ಮುಖ್ಯವಾದ ಕಾರಣ ಹೆರಿಗೆಯ ನಂತರ ಮಗುವಿಗೆ ಮೊದಲ ಆಹಾರವಾಗಿ ತಾಯಿಯ ಎದೆ ಹಾಲನ್ನು ಉಣಿಸಲಾಗುತ್ತದೆ ಹಾಗಾಗಿ ಸ್ತನವು ಅದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳುತ್ತದೆ. ಈ ಸಮಯದಲ್ಲಿ ಗರ್ಭಿಣಿ ಸ್ತ್ರೀ ನೋವು ಕಿರಿಕಿರಿ ಅನುಭವಿಸುವುದು ಸಹಜ. ಮಹಿಳೆಗೆ 38ನೇ ವಾರದಲ್ಲಿ ಕೊಲೋಸ್ಟ್ರೋನ್ ಸೋರಿಕೆಯಾಗಬಹುದು. ಈ ಸಂದರ್ಭದಲ್ಲಿ ಮೊಲೆಯ ತೊಟ್ಟು ಭಾಗದಲ್ಲಿ ಸಾಕಷ್ಟು ನೋವು ಉಂಟಾಗುತ್ತದೆ. ಗರ್ಭಾವಸ್ಥೆಯಲ್ಲಿ ಆರಂಭದಲ್ಲಿ ಉಂಟಾಗುವ ಈ ಸ್ಥಾನಗಳ ನೋವಿನಿಂದಾಗಿ ಸಾಕಷ್ಟು ಮಹಿಳೆಯರು ಭಯಗೊಳ್ಳುತ್ತಾರೆ ಅಥವಾ ಹೆಚ್ಚಿನ ಕಿರಿಕಿರಿ ಅನುಭವಿಸುತ್ತಾರೆ ಇದು ಯಾಕೆ ಉಂಟಾಗುತ್ತದೆ ಇದರಿಂದ ಮುಂದೆ ಏನಾದರೂ ಸಮಸ್ಯೆ ಆಗಬಹುದೇ ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಎದೆ ಅಥವಾ ಸ್ತನ ನೋವು ಸಹಜವೇ?
ಗರ್ಭಾವಸ್ಥೆಯ ಆರಂಭದಿಂದಲೇ ಸ್ತನಗಳು ಭಾರವಾದಂತೆ ತುಂಬಿದ ಅನುಭವ ನಿಮಗೆ ಆಗಬಹುದು ಜೊತೆಗೆ ಸ್ತನ ನೋವು ಕೂಡ ಕಾಣಿಸಿಕೊಳ್ಳಬಹುದು ಇದು ಬಹಳ ಸಹಜವೇ ಆಗಿದ್ದರು ಕೂಡ ಮಹಿಳೆಯರಿಂದ ಮಹಿಳೆಯರಿಗೆ ನೋವಿನ ಪ್ರಮಾಣವೂ ಹೆಚ್ಚು ಕಡಿಮೆ ಇರುತ್ತದೆ ಕೆಲವರಿಗೆ ಅತಿ ಹೆಚ್ಚು ನೋವು ಉಂಟಾದರೆ ಇನ್ನೂ ಕೆಲವರಿಗೆ ಸಹಜವಾಗಿರುತ್ತದೆ.
ಗರ್ಭಾವಸ್ಥೆಯ ಸ್ತನ ನೋವಿಗೆ ಕಾರಣವೇನು?
ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟ್ರಾನ್ ಗಳು ಸ್ತನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಉಂಟು ಮಾಡುತ್ತಾರೆ ಜೊತೆಗೆ ಮೊಲೆಯ ತೊಟ್ಟು ಬಹಳ ಸಾಫ್ಟ್ ಆಗುತ್ತದೆ. ಇದಕ್ಕೆ ಕಾರಣ ಆ ಭಾಗದಲ್ಲಿ ಕೊಬ್ಬು ಅಥವಾ ಹಾಲಿನ ಗ್ರಂಥಿಗಳು ಬೆಳವಣಿಗೆಯಾಗುತ್ತವೆ. ಇದರಿಂದ ರಕ್ತದ ಹರಿವು ಕೂಡ ಹೆಚ್ಚಾಗಿ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಹೆರಿಗೆಯಾದ ನಂತರ ಸಹಾಯಕವಾಗಲೂ ದೇಹದಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ.
ಅದೇ ರೀತಿ ಮೊಲೆ ತೊಟ್ಟು ನೋವು ಕಾಣಿಸಿಕೊಳ್ಳುವುದು ಕೂಡ ಸಹಜ ಪ್ರಕ್ರಿಯೆ. ಹಾರ್ಮೋನ್ ಗಳು ಈ ಪ್ರದೇಶವನ್ನೂ ಹೆಚ್ಚು ಮೃದುಗೊಳಿಸುತ್ತದೆ ಹಾಗಾಗಿ ಮೊಲೆಯ ತೊಟ್ಟು ಇನ್ನಷ್ಟು ಸೂಕ್ಷ್ಮವಾಗಿರುತ್ತದೆ. ಇನ್ನು ಈ ರೀತಿ ನಾವು ಗರ್ಭಾವಸ್ಥೆಯ ಪೂರ್ಣ ಅವಧಿಯವರೆಗೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಮೂರನೇ ತ್ರೈಮಾಸಿಕದ ಕೊನೆಯ ಹೊತ್ತಿಗೆ ಅಂದರೆ ಕೊಲೋಸ್ಟ್ರಾಮ್ ಉತ್ಪಾದನೆ ಪ್ರಾರಂಭವಾದಾಗ ಮತ್ತೆ ಸಣ್ಣ ನೋವು ಕಾಣಿಸಿಕೊಳ್ಳಬಹುದು.
ಗರ್ಭಾವಸ್ಥೆಯಲ್ಲಿ ಸ್ತನದಲ್ಲಿ ಉಂಟಾಗುವ ಇತರ ಬದಲಾವಣೆಗಳು:
ಮೊಲೆ ತೊಟ್ಟುಗಳಲ್ಲಿ ಬದಲಾವಣೆ: ನಿಪ್ಪಲ್ ಅಥವಾ ಮೊಲೆ ತೊಟ್ಟುಗಳು ಹೆಚ್ಚು ಸಾಫ್ಟ್ ಆಗುವುದರಿಂದ ಅದಕ್ಕೆ ಬಟ್ಟೆ ತಾಕಿದರೆ ನೋವು ಹೆಚ್ಚಾಗಬಹುದು. ತೊಟ್ಟುಗಳು ಸಾಮಾನ್ಯಕ್ಕಿಂತ ಹೆಚ್ಚು ಹೊರಗೆ ಚಾಚಿಕೊಂಡಂತೆ ಇದ್ದು, ಕಿರಿಕಿರಿಯನಿಸಬಹುದು.
ಮೊಲೆಯ ಸುತ್ತಲಿನ ಅರೋಲ ಪ್ರದೇಶ ಹೆಚ್ಚು ಕಪ್ಪು ಹಾಗೂ ಗಾಢ ಬಣ್ಣದಿಂದ ಕೂಡಿರಬಹುದು. ದಿನ ಕಳೆದಂತೆ ಇದು ಸಾಮಾನ್ಯಕ್ಕಿಂತ ಹೆಚ್ಚು ಗಾಢವಾಗುತ್ತಾ ಹೋಗುತ್ತದೆ. ಜೊತೆಗೆ ಇಲ್ಲಿ ಸಣ್ಣ ಊತ ಕೂಡ ಕಾಣಿಸಿಕೊಳ್ಳಬಹುದು.
ಸ್ರವಿಸುವಿಕೆ: ಗರ್ಭಾವಸ್ಥೆಯಲ್ಲಿ ಸೋರುವಿಕೆ ಅಥವಾ ಸ್ರವಿಸುವಿಕೆ ಕೂಡ ಸಾಮಾನ್ಯವಾಗಿದೆ. ಮೊದಲು ತೆಳುವಾದ ನೀರಿನ ರೀತಿಯ ದ್ರವ ಹೊರಗಡೆ ಬರಬಹುದು ಇದು ಕೋಲೋಸ್ಟ್ರಮ್ ನಿಂದ ಆಗುವಂಥದ್ದು. ಬಳಿಕ ದಪ್ಪವಾಗಿರುವ ಚಿಗುಟಾದ ದ್ರವ ಮೊಲೆ ತೊಟ್ಟಿನಿಂದ ಹೊರಬರುತ್ತದೆ.
ಮೊಲೆ ತೊಟ್ಟು ನೋವು ಕಡಿಮೆ ಮಾಡಿಕೊಳ್ಳುವುದು ಹೇಗೆ?
ಸಾಮಾನ್ಯವಾಗಿ ಗರ್ಭಾವಸ್ಥೆಯ ಸಹಜ ಸ್ಥಿತಿ ಇದಾಗಿದ್ದು ಇದಕ್ಕೆ ವೈದ್ಯರು ಕೂಡ ಯಾವುದೇ ಔಷಧಿಯನ್ನು ಸೂಚಿಸುವುದಿಲ್ಲ ಆದರೆ ನೀವು ಕೆಲವು ಮನೆ ಮುದ್ದುಗಳನ್ನು ಮಾಡುವುದರ ಮೂಲಕ ಈ ನೋವಿನಿಂದ ಸ್ವಲ್ಪ ರಿಲೀಫ್ ಪಡೆಯಬಹುದು.
- ಸಂಗಾತಿಯೊಂದಿಗೆ ಚರ್ಚಿಸಿ: ನಿಮ್ಮ ಸ್ಥಿತಿ ಹೇಗಿದೆ ಯಾವ ರೀತಿ ನೋವನ್ನು ಅನುಭವಿಸುತ್ತಿದ್ದೀರಿ ಎಂಬುದನ್ನು ಸಂಗಾತಿಗೆ ತಿಳಿಸಿ ಅವರು ಸ್ಪರ್ಶಿಸುವುದಾದರೆ ಯಾವ ರೀತಿ ನೋವಾಗದಂತೆ ಸ್ಪರ್ಶಿಸಬಹುದು ಎಂಬುದನ್ನು ಅವರಿಗೆ ಹೇಳಿ.
- ಉತ್ತಮ ರೀತಿಯ ಬ್ರಾ ಧರಿಸಿ. ಹೆಚ್ಚು ಬಿಗಿಯಾಗಿರುವ ಬ್ರಾವನ್ನು ಧರಿಸಬೇಡಿ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ತಜ್ಞರನ್ನು ಸಂಪರ್ಕಿಸಬಹುದು. ಹುಕ್ಸ್ ಇಲ್ಲದ ವೈರ್ ಲೆಸ್ ಬ್ರಾ ಧರಿಸಬಹುದು. ರಾತ್ರಿ ಸಮಯದಲ್ಲಿ ಅಗತ್ಯವಿಲ್ಲದಿದ್ದರೆ ಬ್ರಾ ಧರಿಸಬೇಡಿ.
- ಐಸ್ ಪ್ಯಾಕ್: ಇನ್ನು ಸ್ತನಗಳಲ್ಲಿ ನೋವು ಹೆಚ್ಚಾಗಿ ಕಾಣಿಸಿಕೊಂಡರೆ ಐಸ್ ಪ್ಯಾಕ್ ಬಳಸಬಹುದು ಸ್ಪರ್ಶ ನೀಡಿದರೆ ಸ್ವಲ್ಪ ಹಿತವೆನಿಸುತ್ತದೆ. ಅಥವಾ ಅತಿಯಾದ ತಂಪು ನಿಮಗೆ ಆಗದೆ ಇದ್ದರೆ ನೀವು ಬೆಚ್ಚಗಿನ ನೀರಿನ ಶಾಖವನ್ನು ಕೊಡಬಹುದು.
- ಲೋಶನ್: ನೀವು ಲ್ಯನೋಲಿನ್ ಕ್ರೀಮ್ಗಳನ್ನು ಸ್ತನಕ್ಕೂ ಹಾಗೂ ಮೊಲೆಯ ತೊಟ್ಟಿಗೂ ಮಿತವಾಗಿ ಹಚ್ಚಿಕೊಂಡರೆ ಸ್ವಲ್ಪ ಮಟ್ಟಿಗೆ ನೋವು ಕಡಿಮೆ ಆಗುತ್ತದೆ.
- ಇವೆಲ್ಲವುಗಳನ್ನು ಮಾಡಿದ ನಂತರವೂ ನಿಮಗೆ ತಡೆದುಕೊಳ್ಳಲು ಸಾಧ್ಯವಾಗದೇ ಇರುವಷ್ಟು ನೋವು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕ ಮಾಡಿ.
ಹೆರಿಗೆಯ ನಂತರವೂ ಸ್ತನ ನೋವು ಇರುತ್ತದೆಯೇ?
ಸಾಮಾನ್ಯವಾಗಿ ಹಲವು ಮಹಿಳೆಯರಲ್ಲಿ ಕಾಡುವ ಪ್ರಶ್ನೆ ಇದಾಗಿದೆ. ನೀವು ಸ್ತನ್ಯಪಾನದ ಸಮಯದಲ್ಲಿ ಸ್ತನ ಹಾಲಿನಿಂದ ಊದಿಕೊಂಡಿರುತ್ತದೆ ಹಾಗೂ ಗಟ್ಟಿಯಾದ ಅನುಭವವಾಗುತ್ತದೆ ಈ ಸಮಯದಲ್ಲಿಯೂ ಸ್ವಲ್ಪಮಟ್ಟಿಗೆ ಸ್ತನದ ನೋವು ಕಾಣಿಸಿಕೊಳ್ಳಬಹುದು. ಆದರೆ ನೀವು ಮಗುವಿಗೆ ಹಾಲುಣಿಸಿದಷ್ಟು ಸ್ತನ ಸಡಿಲವಾಗುತ್ತದೆ. ಮಗು ಮೊಲೆ ತೊಟ್ಟನ್ನು ಚೀಪಿದಷ್ಟು ನೋವು ಕಡಿಮೆ ಆಗುತ್ತದೆ. ಸಾಮಾನ್ಯವಾಗಿ ಸ್ತನ್ಯಪಾನವನ್ನು ಸರಿಯಾಗಿ ಮಾಡಿಸಿದರೆ ಮತ್ತೆ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲ ಆದಾಗ್ಯೂ ನಿಮಗೆ ಮತ್ತೆ ನೋವು ಉಂಟಾಗಿದ್ದರೆ ಆಗ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.



Click it and Unblock the Notifications











