Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗರ್ಭಿಣಿಯಾಗಿದ್ದಾಗ ಸ್ತನಗಳ ಆರೈಕೆ: ಸ್ತನಗಳ ಮಸಾಜ್ ಎದೆಹಾಲಿನ ಉತ್ಪತ್ತಿಗೆ ಸಹಕಾರಿಯೇ?
ಗರ್ಭಿಣಿಯಾದ ಸಂದರ್ಭದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳು, ಹೆರಿಗೆ ನೋವು ಇವುಗಳ ಬಹಳ ಕಷ್ಟಕರ ಎಂದು ಅನೇಕರು ಹೇಳಿರುವುದನ್ನು ಕೇಳಿರುತ್ತೀರಿ. ಆದರೆ ಇವುಗಳ ಜೊತೆಯಲ್ಲಿ ಮಗುವಿನ ಸ್ತನಪಾನ ಮಾಡಿಸುವುದು ಎಷ್ಟೊಂದು ಸವಾಲಿನ ಕೆಲಸ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಜಗತ್ತಿನಲ್ಲಿ ಸರಿ ಸುಮಾರು 50 ಪ್ರತಿಶತಕ್ಕೂ ಅಧಿಕ ತಾಯಂದಿರು ಮಗುವಿಗೆ ಹಾಲುಣಿಸುವುದು ಹೆರಿಗೆ ನೋವಿಗಿಂತಲೂ ಕಷ್ಟಕರ ಕೆಲಸ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸ್ತನಪಾನ ಯಾಕೆ ಕಷ್ಟಕರ ಎನಿಸುತ್ತದೆ..? ಈ ಮಹಿಳೆಯರು ಗರ್ಭಿಣಿಯಾದ ಸಂದರ್ಭದಲ್ಲಿ ಯಾವ ವಿಚಾರವನ್ನು ನಿರ್ಲಕ್ಷಿಸಿದ ಪರಿಣಾಮ ಅವರಿಗೆ ಈ ರೀತಿ ತೊಂದರೆ ಉಂಟಾಗುತ್ತದೆ..? ಸ್ತನಪಾನ ಸುಲಭವಾಗಿಸಲು ನಾವೇನು ಮಾಡಬೇಕು ಎಂಬುದಕ್ಕೆ ಮಾಹಿತಿ ತಿಳಿದುಕೊಳ್ಳೋಣ :

ನೋವು ರಹಿತ ಸ್ತನಪಾನಕ್ಕಾಗಿ ನೀವು ಆಯ್ಕೆ ಮಾಡಿಕೊಳ್ಳಬಹುದಾದ ಒಂದೇ ಒಂದು ಮಾರ್ಗವೆಂದರೆ ಸ್ತನಗಳ ಮಸಾಜ್. ಇದನ್ನು ನೀವು ಗರ್ಭಿಣಿಯಾದ ದಿನಗಳಿಂದಲೇ ಆರಂಭಿಸಬೇಕು. ಇವುಗಳು ಸ್ತನಗಳಲ್ಲಿ ಮುಚ್ಚಿರುವ ನಾಳಗಳು ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಮೊಲೆಗಳ ತೊಟ್ಟುಗಳಿಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿಕೊಳ್ಳುವುದರಿಂದ ನಿಮಗೆ ಭವಿಷ್ಯದಲ್ಲಿ ಸ್ತನಪಾನದ ನೋವು ಅಷ್ಟೊಂದು ಕಾಡುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ರಾಸಾಯನಿಕ ಕ್ರೀಮ್ಗಳು ಅಥವಾ ಮಷಿನ್ಗಳನ್ನು ಖರೀದಿಸುವ ಅಗತ್ಯವಿಲ್ಲ. ಮನೆಯಲ್ಲಿಯೇ ಇರುವ ಆರ್ಯುವೇದಿಕ ಪದಾರ್ಥಗಳನ್ನು ಬಳಕೆ ಮಾಡಿ ನೀವು ಸ್ತನ ಮಸಾಜ್ ಮಾಡಿಕೊಳ್ಳಬಹುದಾಗಿದೆ.
ಸ್ತನ ಮಸಾಜ್ ಮಾಡುವುದು ಸುರಕ್ಷಿತವೇ..?
ಸ್ತನ ಮಸಾಜ್ ಎನ್ನುವುದು ಸ್ತನ್ಯಪಾನಕ್ಕೆ ಪೂರಕವೇ ಹೊರತು ಮಾರಕವಲ್ಲ. ನಿಮ್ಮ ಸ್ತನಗಳನ್ನು ಅತ್ಯಂತ ನಯವಾಗಿ ಮಸಾಜ್ ಮಾಡಿಕೊಳ್ಳುವುದರಿಂದ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ನೆನಪಿಡಿ ಅತ್ಯಂತ ಗಟ್ಟಿಯಾಗಿ ಸ್ತನ ಮಸಾಜ್ ಮಾಡಿಕೊಳ್ಳಬೇಡಿ. ಅತ್ಯಂತ ಕಡಿಮೆ ಒತ್ತಡದಲ್ಲಿ ಸ್ತನ ಮಸಾಜ್ ಮಾಡುವುದರಿಂದ ಯಾವುದೇ ರೀತಿಯ ಹಾನಿ ಇರುವುದಿಲ್ಲ.
ಸ್ತನ ಮಸಾಜ್ನಿಂದ ಏನೇನು ಲಾಭ..?
ಹೆರಿಗೆಯಾದ ಬಳಿಕ ಎಷ್ಟೇ ನೋವಾದರೂ ಸ್ತನಪಾನ ಮಾಡುವುದು ಮಗುವಿನ ಆರೋಗ್ಯದ ಹಿತದೃಷ್ಟಿಯಿಂದ ಅತ್ಯಮೂಲ್ಯ. ಆದರೆ ಕೆಲವೊಮ್ಮೆ ಅತಿಯಾದ ನೋವು ನಿಮ್ಮನ್ನು ಸ್ತನಪಾನ ಮಾಡದಂತೆ ತಡೆಯಬಹುದು. ಇಂತಹ ಸಂದರ್ಭಗಳಲ್ಲಿ ಸ್ತನಗಳಿಗೆ ನೀವು ಮಾಡಿಕೊಳ್ಳುವ ಮೃದುವಾದ ಮಸಾಜ್ ನಿಮ್ಮ ಸ್ತನದಲ್ಲಿ ಉರಿಯಾಗುವುದನ್ನು ತಪ್ಪಿಸುತ್ತದೆ. ಮುಚ್ಚಿ ಹೋಗಿರುವ ನಾಳಗಳನ್ನು ಹಾಗೂ ಮಾಸ್ಟೈಟಿಸ್‌ನಂತಹ ಸೋಂಕುಗಳಿಂದ ನಿಮ್ಮನ್ನು ದೂರ ಇರಿಸುತ್ತದೆ.
ಅದರಲ್ಲೂ ಸಿಜೇರಿಯನ್ ಮೂಲಕ ಮಗು ಪಡೆದ ತಾಯಂದಿರಿಗೆ ಆಪರೇಷನ್ ನೋವಿನ ಜೊತೆಯಲ್ಲಿ ಈ ನೋವನ್ನು ಸಹಿಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಸ್ತನಪಾನಕ್ಕೆ ಮಸಾಜ್ ಎನ್ನುವುದು ಖಂಡಿತ ಒಂದು ಚಿಕಿತ್ಸೆಯಲ್ಲ. ಆದರೆ ಇದು ನಿಮ್ಮ ಸ್ತನಗಳನ್ನು ಆರೈಕೆ ಮಾಡಿಕೊಳ್ಳುವ ಮಾರ್ಗವಾಗಿದೆ. ಗರ್ಭಿಣಿಯಾದ ಸಂದರ್ಭದಲ್ಲಿ ನೀವು ವಾಸೆಲಿನ್ ಬಳಕೆ ಮಾಡಿ ಮಗು ಜನಿಸಿದ ಬಳಿಕ ನೀವು ಕೊಬ್ಬರಿ ಎಣ್ಣೆಯನ್ನು ಬಳಸಿ ಮಸಾಜ್ ಮಾಡಬಹುದಾಗಿದೆ.
ಮಸಾಜ್ ಮಾಡುವ ಮುನ್ನ ಈ ವಿಚಾರಗಳು ನಿಮ್ಮ ಗಮನದಲ್ಲಿ ಇರಲಿ :
ಕೈ ತೊಳೆಯದೇ ಸ್ತನ ಮಸಾಜ್ ಬೇಡ : ನವಜಾತ ಶಿಶುಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಹೀಗಾಗಿ ನೀವು ಸ್ವಚ್ಛವಲ್ಲದ ಕೈಗಳಿಂದ ನಿಮ್ಮ ಸ್ತನ ಮಸಾಜ್ ಮಾಡಿ ಬಳಿಕ ಅದೇ ಸ್ತನದಿಂದ ನಿಮ್ಮ ಮಗು ಹಾಲು ಕುಡಿದರೆ ಮಗುವಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಹೀಗಾಗಿ ಚೆನ್ನಾಗಿ ಕೈ ತೊಳೆದು ಬಳಿಕವೇ ಸ್ತನ ಮಸಾಜ್ ಮಾಡಿಕೊಳ್ಳಿ.
ರಾಸಾಯನಿಕಗಳ ಬಳಕೆ ಬೇಡ : ಸ್ತನ ಮಸಾಜ್ಗೆಂದೇ ಮಾರುಕಟ್ಟೆಯಲ್ಲಿ ಸಾಕಷ್ಟು ಕ್ರೀಂಗಳು, ತೈಲಗಳು ಲಭ್ಯವಿದೆ. ಆದರೆ ಇವುಗಳಲ್ಲಿ ರಾಸಾಯನಿಕಗಳ ಬಳಕೆ ಇರುವುದರಿಂದ ಇದು ಕೂಡ ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಮನೆಯಲ್ಲೇ ತಯಾರಿಸಿದ ಕೊಬ್ಬರಿ ಎಣ್ಣೆ ಸ್ತನ ಮಸಾಜ್ಗೆ ಸೂಕ್ತ ಎಂದು ಹೇಳಬಹುದು.
ವರ್ತುಲಾಕಾರದಲ್ಲಿಯೇ ಮಸಾಜ್ ಮಾಡಿ : ಮಗುವಿಗೆ ಹಾಲುಣಿಸುವ ಮುನ್ನ ಅತ್ಯಂತ ನಯವಾಗಿ, ಸ್ವಲ್ಪವೂ ಒತ್ತಡ ಹಾಕಿಕೊಳ್ಳದೇ ನಿಮ್ಮ ಸ್ತನಗಳ ಮೇಲೆ ವರ್ತುಲಾಕಾರದಲ್ಲಿ ಕೈಯಾಡಿಸುವ ಮೂಲಕ ಸ್ತನ ಮಸಾಜ್ ಮಾಡಿಕೊಳ್ಳಿ. ನಿಮ್ಮ ಭುಜಗಳಿಗೆ ಮಸಾಜ್ ಮಾಡಿಕೊಳ್ಳುವ ರೀತಿಯಲ್ಲಿ ಬಲವಾಗಿ ಒತ್ತಿಕೊಳ್ಳುವುದು ಬೇಡ.
ಐಸ್ ಪ್ಯಾಕ್ಗಳನ್ನು ಬಳಸಿ : ಕೆಲವರಿಗೆ ಸ್ತನಗಳಲ್ಲಿ ಅತೀವ ನೋವಿರುತ್ತದೆ. ಸ್ಪರ್ಶಿಸಲೂ ಆಗದಂತಹ ಪರಿಸ್ಥಿತಿ ಇರುತ್ತದೆ. ಇಂಥಾ ಸಂದರ್ಭಗಳಲ್ಲಿ ನೀವು ಮೊದಲು ಐಸ್ಪ್ಯಾಕ್ನ್ನು ನಿಮ್ಮ ಸ್ತನದ ಮೇಲಿಟ್ಟುಕೊಂಡು ಬಳಿಕ ಸ್ತನ ಮಸಾಜ್ ಮಾಡಿಕೊಳ್ಳುವುದರಿಂದ ನಿಮಗೆ ಸ್ವಲ್ಪ ಆರಾಮದಾಯಕ ಎನಿಸುತ್ತದೆ.



Click it and Unblock the Notifications