Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
40ನೇ ವಯಸ್ಸಿನಲ್ಲಿ 2ನೇ ಬಾರೀ ಸೋನಂ ಗರ್ಭಿಣಿ! ಸೆಕೆಂಡ್ ಪ್ರೆಗ್ನೆನ್ಸಿಗೆ ಸರಿಯಾದ ವಯಸ್ಸು, ಅಂತರ ಎಷ್ಟು?
40ರ ವಯಸ್ಸಿನಲ್ಲಿ ಸೋನಂ ಕಪೂರ್ ಎರಡನೇ ಬಾರಿಗೆ ತಾಯಿ! ಸೆಕೆಂಡ್ ಪ್ರೆಗ್ನೆನ್ಸಿಗೆ ಸರಿಯಾದ ವಯಸ್ಸು ಮತ್ತು ಅಂತರ ಎಷ್ಟು? ಹೌದು, ಖ್ಯಾತ ಬಾಲಿವುಡ್ ನಟಿ (bollywood actress) ಸೋನಂ ಕಪೂರ್ (Sonam Kapoor) ಅವರು ಎರಡನೇ ಬಾರಿ ತಾಯಿಯಾಗುತ್ತಿರುವ ವಿಷಯವನ್ನು ದೃಢಪಡಿಸಿದ್ದಾರೆ. ಅತ್ಯಂತ ಸ್ಟೈಲಿಶ್ ಆಗಿ ತಮ್ಮ ಎರಡನೇ ಗರ್ಭಧಾರಣೆಯ (Sonam Kapoor Second Pregnancy) ಸುದ್ದಿಯನ್ನು ಖಚಿತಪಡಿಸಿದ್ದಾರೆ.
ತಮ್ಮ ಪತಿ ಆನಂದ್ ಅಹುಜಾ ಅವರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಜಂಟಿ ಪೋಸ್ಟ್ ಹಂಚಿಕೊಂಡಿರುವ ಅವರು, 2026ರಲ್ಲಿ ತಮ್ಮ ಎರಡನೇ ಮಗು ಜಗತ್ತಿಗೆ ಬರಲಿದೆ ಎಂದು (sonam kapoor announces second pregnancy) ಘೋಷಿಸಿದ್ದಾರೆ. ಈ ಪೋಸ್ಟ್ ಮತ್ತು ಸುದ್ದಿ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.

ಬೇಬಿ ಬಂಪ್ ಫ್ಲಾಂಟ್ ಮಾಡಿದ ಸೋನಂ
ಸೋನಂ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಾಟ್ ಪಿಂಕ್ ಬಣ್ಣದ ಉಡುಪಿನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಲ್ಲಿ ಅವರು ತಮ್ಮ ಬೇಬಿ ಬಂಪ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸಿದ್ದಾರೆ. "ಅಮ್ಮ" (ಮಾ) ಎಂಬ ಸರಳ ಶೀರ್ಷಿಕೆ ನೀಡಿ, ಅದರ ಜೊತೆಗೆ ಮುತ್ತಿನ ಎಮೋಜಿಯನ್ನು ಬಳಸಿದ್ದಾರೆ. ಈ ಪೋಸ್ಟ್ ಹೊರಬೀಳುತ್ತಿದ್ದಂತೆ, ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳಿಂದ ಸೋನಂ ಕಪೂರ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.
2018 ರಲ್ಲಿ ಸೋನಂ ವಿವಾಹ
ಸೋನಮ್ ಕಪೂರ್ ಅವರು 2018 ರಲ್ಲಿ ಉದ್ಯಮಿ ಆನಂದ್ ಅಹುಜಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 2022 ರಲ್ಲಿ ಅವರು ತಮ್ಮ ಮೊದಲ ಮಗ ವಾಯುಗೆ ಜನ್ಮ ನೀಡಿದರು. ಇದೀಗ ಸೋನಂ ಅವರು 2026ರಲ್ಲಿ ಎರಡನೇ ಬಾರಿಗೆ ತಾಯಿಯಾಗಲಿದ್ದಾರೆ.
ಎರಡನೇ ಗರ್ಭಧಾರಣೆಗೆ ಸರಿಯಾದ ವಯಸ್ಸು ಎಷ್ಟು?
ಸೋನಂ ಕಪೂರ್ ಅವರು ತಮ್ಮ 40ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ಗರ್ಭಿಣಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಅನೇಕ ಮಹಿಳೆಯರು 35 ವರ್ಷದ ನಂತರವೇ ಎರಡನೇ ಮಗುವಿಗೆ (right age for second pregnancy) ಯೋಜನೆ ರೂಪಿಸುತ್ತಾರೆ. ಆದರೆ, ಈ ವಯಸ್ಸಿನಲ್ಲಿ ಗರ್ಭಧಾರಣೆ ಸುರಕ್ಷಿತವೇ? ಎಂಬ ಪ್ರಶ್ನೆ ಮೂಡುತ್ತದೆ.
35 ವರ್ಷದ ನಂತರ ಗರ್ಭಿಣಿಯಾದರೆ?
ವೈದ್ಯಕೀಯ ತಜ್ಞರ ಪ್ರಕಾರ, 40ನೇ ವಯಸ್ಸಿನಲ್ಲಿ ಗರ್ಭಧಾರಣೆಯು 'ಅಧಿಕ ಅಪಾಯದ ಗರ್ಭಧಾರಣೆ' (High Risk Pregnancy) ಯ ವರ್ಗಕ್ಕೆ ಸೇರುತ್ತದೆ. ನವದೆಹಲಿಯ ಪಿಎಸ್‌ಆರ್‌ಐ ಆಸ್ಪತ್ರೆಯ ಸ್ತ್ರೀರೋಗತಜ್ಞರಾದ ಡಾ. ರಾಹುಲ್ ಮಂಚಂದಾ ಅವರ ಪ್ರಕಾರ, 35 ವರ್ಷದ ನಂತರ ಗರ್ಭಿಣಿಯಾದರೆ, ಗರ್ಭಪಾತ, ಗರ್ಭಾವಸ್ಥೆಯ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮಗುವಿನಲ್ಲಿ ಕ್ರೋಮೋಸೋಮಲ್ ಕಾಯಿಲೆಗಳು ಬರುವ ಅಪಾಯ ಹೆಚ್ಚಿರುತ್ತದೆ.
ಡಾಕ್ಟರ್ ಸಲಹೆ ಏನು?
ಆದರೂ, ಸರಿಯಾದ ಕಾಳಜಿ ಮತ್ತು ವೈದ್ಯರ ಸಲಹೆಯೊಂದಿಗೆ, ತಾಯಿ ಮತ್ತು ಮಗು ಇಬ್ಬರನ್ನೂ ಸುರಕ್ಷಿತವಾಗಿಡಬಹುದು ಎಂದು ಡಾ. ಮಂಚಂದಾ ತಿಳಿಸಿದ್ದಾರೆ. ನಿಮಗೆ ಈಗಾಗಲೇ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ಎರಡನೇ ಗರ್ಭಧಾರಣೆಗೆ ಯೋಜಿಸುವ ಮೊದಲು ನಿಮ್ಮ ವೈದ್ಯರೊಂದಿಗೆ ಮಾತನಾಡುವುದು ಅತ್ಯಗತ್ಯ. ವೈದ್ಯರು ನೀವು ದೈಹಿಕವಾಗಿ ಸದೃಢರಾಗಿದ್ದೀರಿ ಎಂದು ದೃಢಪಡಿಸಿದರೆ ಮಾತ್ರ ಯೋಜನೆ ಮುಂದುವರಿಸಬಹುದು.
ಮೊದಲ ಮತ್ತು 2ನೇ ಗರ್ಭಧಾರಣೆಯ ನಡುವಿನ ಅಂತರ ಎಷ್ಟು?
ಮೊದಲ ಮತ್ತು ಎರಡನೇ ಗರ್ಭಧಾರಣೆಯ ನಡುವೆ ಎಷ್ಟು ಅಂತರ ಇರಬೇಕು ಎಂಬುದು ಮುಖ್ಯವಾದ ಪ್ರಶ್ನೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮೊದಲ ಮತ್ತು ಎರಡನೇ ಗರ್ಭಧಾರಣೆಯ ನಡುವೆ ಕನಿಷ್ಠ 24 ತಿಂಗಳುಗಳು (2 ವರ್ಷ) ಅಂತರವಿರುವುದು ಸೂಕ್ತ.
ಆದರೆ, ಈ ಅಂತರವು ತಾಯಿಯ ವೈದ್ಯಕೀಯ ಸ್ಥಿತಿ ಮತ್ತು ಮೊದಲ ಗರ್ಭಧಾರಣೆಯ ವಿಧಾನದ ಮೇಲೆ ಅವಲಂಬಿತವಾಗಿರುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ವೈದ್ಯರ ಸಲಹೆಯಂತೆ ಗರ್ಭಧಾರಣೆಯ ನಡುವಿನ ಅಂತರವನ್ನು ನಿರ್ಧರಿಸಬೇಕು.



Click it and Unblock the Notifications









