Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಗು ಬೇಡ ಎನ್ನುವುದಾದರೆ ಪುರುಷರಿಗಿರುವ 4 ಗರ್ಭನಿರೋಧಕ ಆಯ್ಕೆಗಳಿವು
ನಮ್ಮ ದೈಹಿಕ ಸಂಪರ್ಕದಿಂದ ಗರ್ಭಧಾರಣೆಯಾಗಬಾರದೆಂದು ಜೋಡಿ ತೀರ್ಮಾನಿಸಿದರೆ ಅದಕ್ಕಾಗಿ ಸುರಕ್ಷಿತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಈ ಲೇಖನದಲ್ಲಿ ಗರ್ಭಧಾರಣೆ ತಡೆಗಟ್ಟಲು ಪುರುಷರಿಗಿರುವ ಆಯ್ಕೆಗಳೇನು ಎಂದು ತಿಳಿಯೋಣ:

ಪುರುಷರು ಸುರಕ್ಷಿತ ಕ್ರಮಗಳನ್ನು ಕೈಗೊಂಡರೆ ಗರ್ಭಧಾರಣೆ ತಡೆಗಟ್ಟಬಹುದು. ಪುರುಷರು ಈ ವಿಧಾನದ ಮೂಲಕ ತಮ್ಮ ಸಂಗತಿ ಗರ್ಭ ಧರಿಸುವುದನ್ನು ತಡೆಗಟ್ಟಬಹುದು:
* ವ್ಯಾಸೆಕ್ಟಮಿ: ಶಾಶ್ವತವಾಗಿ ಮಕ್ಕಳಾಗುವುದನ್ನು ತಡೆಗಟ್ಟಬಹುದು
* ಕಾಂಡೋಮ್: ಗರ್ಭಧಾರಣೆ, ಲೈಂಗಿಕ ಸೋಂಕು ತಡೆಗಟ್ಟಲು ಇರುವ ಸುರಕ್ಷಿತ ವಿಧಾನ
* ಸ್ಪರ್ಮೆಸೈಡ್: ಗರ್ಭಧಾರಣೆ ತಡೆಗಟ್ಟುವ ಮತ್ತೊಂದು ವಿಧಾನ
* ಅಂಡೋತ್ಪತ್ತಿ ದಿನಗಳ ಬಗ್ಗೆ ಮಾಹಿತಿ: ತನ್ನ ಸಂಗಾತಿಯ ಅಂಡೋತ್ಪತ್ತಿ ದಿನಗಳ ಬಗ್ಗೆ ಮಾಹಿತಿ ಇದ್ದರೆ ಈ ದಿನಗಳಲ್ಲಿ ಲೈಂಗಿಕ ಸಂಪರ್ಕ ಮಾಡದೇ ಇದ್ದರೆ ಗರ್ಭಧಾರಣೆಯಾಗುವುದಿಲ್ಲ.
ಗರ್ಭನಿರೋಧಕಗಳು ಪುರುಷರಲ್ಲಿ ಹೇಗೆ ಕೆಲಸ ಮಾಡುತ್ತದೆ?
ಪುರುಷರ ವೀರ್ಯಾಣುಗಳು ಮಹಿಳೆಯರ ಜನನೇಂದ್ರೀಯ ಪ್ರವೇಶ ಮಾಡುವುದನ್ನು ತಡೆಗಟ್ಟುವ ಮೂಲಕ ಗರ್ಭಧಾರಣೆ ತಡೆಗಟ್ಟಲು ಸಹಕಾರಿಯಾಗಿದೆ. ಈ ವಿಧಾನದ ಮೂಲಕ ಬೇಡದ ಗರ್ಭಧಾರಣೆ ತಡೆಗಟ್ಟಬಹುದು.
ಪುರುಷರಿಗೆ ತಡೆಗಟ್ಟಲು ಇರುವ 4 ಆಯ್ಕೆಗಳ ಬಗ್ಗೆ ವಿವರವಾಗಿ ನೋಡುವುದಾದರೆ
ವ್ಯಾಸೆಕ್ಟಮಿ: ಇದರಲ್ಲಿ ಶಾಶ್ವತವಾಗಿ ಸಂತಾನೋತ್ಪತ್ತಿ ಸಾಮರ್ಥ್ಯ ಕಳೆದುಕೊಳ್ಳುತ್ತಾರೆ. ಶಸ್ತ್ರ ಚಿಕಿತ್ಸೆ ಮೂಲಕ ಮಕ್ಕಳಾಗುವುದನ್ನು ತಡೆಯಲಾಗುವುದು. ಇದನ್ನು ಮಾಡಿಸುವುದರಿಂದ ಪುರುಷರ ಲೈಂಗಿಕ ಸಾಮರ್ಥ್ಯಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ.
ಯಾರಿಗೆ ಈ ವಿಧಾನ ಸೂಕ್ತವಲ್ಲ
* ತಾತ್ಕಾಲಿಕವಾಗಿ ಮಕ್ಕಳು ಬೇಡ, ಭವಿಷ್ಯದಲ್ಲಿ ಮಗು ಬೇಕೆಂದು ಬಯಸುವವರಿಗೆ ಈ ವಿಧಾನ ಸೂಕ್ತವಲ್ಲ.
* ಈ ಶಸ್ತ್ರ ಚಿಕಿತ್ಸೆ ಮೂಲಕ ಮಕ್ಕಳಾಗದಿರುವುದನ್ನು ತಡೆಗಟ್ಟಬಹುದೇ ಹೊರತು ಲೈಂಗಿಕ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ.
ಕಾಂಡೋಮ್
ಬೇಡದ ಗರ್ಭಧಾರನೆ ತಡೆಗಟ್ಟಲು ಪುರುಷರು ಅತೀ ಹೆಚ್ಚಾಗಿ ಈ ಕಾಂಡೋಮ್ ವಿಧಾನ ಬಳಸುತ್ತಾರೆ. ಕಾಂಡೋಮ್ ಬಳಸುವುದರಿಂದ ಗರ್ಭಧಾರಣೆ ಹಾಗೂ ಲೈಂಗಿಕ ಸೋಂಕು ತಡೆಗಟ್ಟಬಹುದು. ಇತರ ಆಯ್ಕೆಗಳಿಗಿಂತ ಇದು ಖರ್ಚುಕಡಿಮೆ.
ಆದರೆ ಕಾಂಡೋಮ್ ಶೇ. 100ರಷ್ಟು ಗರ್ಭಧಾರಣೆ ತಡೆಗಟ್ಟುವುದಿಲ್ಲ. ಕಾಂಡೋಮ್ ಹರಿದಿದ್ದರೆ ಅಥವಾ ಜಾರಿದ್ದರೆ ಗರ್ಭಧಾರಣೆಯ ಸಾಧ್ಯತೆ ಇದೆ.
ಸ್ಪರ್ಮ್‌ಸೈಡ್
ಸ್ಪರ್ಮ್‌ಸೈಡ್ ವೀರ್ಯಾಣುಗಳನ್ನು ನಾಶಪಡಿಸುತ್ತದೆ. ಇದನ್ನು ಮಹಿಳೆಯ ಜನನೇಂದ್ರೀಯಕ್ಕೆ ಹಚ್ಚಿದರೆ ವೀರ್ಯಾಣುಗಳು ಅಂಡಾಣುಗಳ ಸಂಪರ್ಕಕ್ಕೆ ಬಾರದಂತೆ ಅವುಗಳನ್ನು ನಾಶಪಡಿಸಿ ಗರ್ಭಧಾರಣೆ ತಡೆಗಟ್ಟುತ್ತದೆ. ಇದನ್ನು ಕಾಂಡೋಮ್ ಬಳಸುವಾಗ ಇನ್ನಷ್ಟು ಸುರಕ್ಷತೆಗಾಗಿ ಬಳಸಬಹುದು.
ಸಂಗಾತಿಯ ಅಂಡಾಣು ಉತ್ಪತ್ತಿ ಸಮಯದ ಬಗ್ಗೆ ಮಾಹಿತಿ
ಸಂಗಾತಿ ಮುಟ್ಟಾಗಿ 12-14 ದಿನಗಳಲ್ಲಿ ಅಂಡಾಣು ಉತ್ಪತ್ತಿಯಾಗುತ್ತದೆ. ಈ ಸಮಯದಲ್ಲಿ ಲೈಂಗಿಕ ಸಂಪರ್ಕ ಮಾಡದೇ ಇದ್ದರೆ ಅಥವಾ ಲೈಂಗಿಕ ಸಂಪರ್ಕದ ಸಮಯದಲ್ಲಿ ಕಾಂಡೋಮ್ ಬಳಸಿದರೆ ಬೇಡದ ಗರ್ಭಧಾರಣೆ ತಡೆಗಟ್ಟಬಹುದು.
ಈ ವಿಧಾನ ಅನುಸರಿಸುವುದಾದರೆ ಸಂಗಾತಿ ಮುಟ್ಟಿನ ಚಕ್ರ
ನಿಯಮಿತವಾಗಿರಬೇಕು. ಅನಿಯಮಿತ ಮುಟ್ಟಾಗುತ್ತಿದ್ದರೆ ಅಂಡೋತ್ಪತ್ತಿ ಸಮಯ ಟ್ರ್ಯಾಕ್ ಮಾಡುವುದು ಕಷ್ಟವಾಗುವುದು.
ಹೊರ ತೆಗೆಯುವ ಮೂಲಕ ಗರ್ಬಧಾರಣೆ ತಡೆಗಟ್ಟಬಹುದು
ಲೈಂಗಿಕ ಕ್ರಿಯೆ ವೇಳೆ ಸ್ಖಲನವಾಗುವ ಮುಂಚೆಯೇ ಹೊರ ತೆಗೆಯುವುದರಿಂದ ಗರ್ಭಧಾರಣೆ ತಡೆಗಟ್ಟಬಹುದು, ಆದರೆ ಆ ಸಮಯದಲ್ಲಿ ಹೊರ ತೆಗೆಯಲು ಬಹುತೇಕ ಪುರುಷರಿಗೆ ಸಾಧ್ಯವಾಗಲ್ಲ, ಇದರಿಂದ ಗರ್ಭಧಾರಣೆಯ ಸಾಧ್ಯತೆ ಅಧಿಕ. ಈ ವಿಧಾನಕ್ಕೆ ಮೇಲಿನ ವಿಧಾನಗಳೇ ಬೇಡದ ಗರ್ಬಧಾರಣೆ ತಡೆಗಟ್ಟಲು ಸಹಕಾರಿಯಾಗಿದೆ.



Click it and Unblock the Notifications

