Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಈ ಯೋಗಾಸನ ಮಾಡಿದರೆ ಪುರುಷ, ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಚೆನ್ನಾಗಿರುತ್ತೆ
ಇತ್ತೀಚಿನ ವರ್ಷಗಳಲ್ಲಿ 10 ಯುವ ದಂಪತಿ ಜೋಡಿಗಳಲ್ಲಿ 6-7 ಜೋಡಿಗೆ ಮಕ್ಕಳಾಗಲು ತೊಂದರೆಯಾಗುತ್ತಿದೆ. ಕೆಲವರಿಗೆ ಚಿಕಿತ್ಸೆಯನ್ನು ಪಡೆದ ಬಳಿಕ ಮಕ್ಕಳಾದರೆ ಇನ್ನು ಕೆಲವರಿಗೆ ಎಷ್ಟೇ ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನ ಕಂಡು ಬಂದಿರುವುದಿಲ್ಲ. ಈಗೀನ ಕಾಲದಲ್ಲಿ ಬಂಜೆತನ ತಡೆಗಟ್ಟಲು ಹಲವಾರು ಆಧುನಿಕ ತಂತ್ರಜ್ಞಾನ ತಡೆಗಟ್ಟಲು ಹಲವಾರು ಆಧುನಿಕ ತಂತ್ರಜ್ಞಾನಗಳಿವೆ, ಆದರೂ ಬಂಜೆತನ ಸಮಸ್ಯೆ ಹೆಚ್ಚಾಗುತ್ತಿದೆ. ಬದಲಾದ ಜೀವನಶೈಲಿ ನಮ್ಮ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ತುಂಬಾನೇ ಪ್ರಭಾವಬೀರುತ್ತಿದೆ.

ಈ ಬಂಜೆತನದ ಸಮಸ್ಯೆ ತಡೆಗಟ್ಟುವ ನಿಟ್ಟಿನಲ್ಲಿ ನೋಡುವುದಾದರೆ ಆಹಾರಶೈಲಿ ಹಾಗೂ ಜೀವನಶೈಲಿ ಕೂಡ ಪ್ರಮುಖಪಾತ್ರವಹಿಸುತ್ತದೆ. ದಿನನಿತ್ಯ ಯೋಗಾಭ್ಯಾಸ ಸಂತಾನೋತ್ಪತ್ತಿ ಸಾಮರ್ಥ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಮಾನಸಿಕ ಒತ್ತಡ, ಅನೇಕ ಆರೋಗ್ಯ ಸಮಸ್ಯೆಗಳು ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವುದು. ಅವುಗಳನ್ನು ತಡೆಗಟ್ಟುವ ಸಾಮರ್ಥ್ಯ ಯೋಗಕ್ಕಿದೆ.
ಪುರುಷ ಹಾಗೂ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಈ ಯೋಗಾಸನಗಳನ್ನು ಅಭ್ಯಾಸ ಮಾಡುವುದರಿಂದ ಹೆಚ್ಚಾಗುವುದು ನೋಡಿ:
ಸೇತು ಬಂಧಾಸನ
ಈ ಸೇತು ಬಂಧಾಸನವನ್ನು ನೀವು ದಿನಾ ಒಂದು ನಿಮಿಷ ಅಭ್ಯಾಸ ಮಾಡಿ. ಆಸನ ಅಭ್ಯಾಸ ಮಾಡುವುದರಿಂದ ಪೆಲ್ವಿಕ್ ಭಾಗದಲ್ಲಿ ರಕ್ತ ಸಂಚಾರ ಉತ್ತಮವಾಗಿ ನಡೆಯುವುದು.
* ತೊಡೆ ಹಾಗೂ ಹಿಂಬದಿ, ಕಿಬ್ಬೊಟ್ಟೆಯ ಸ್ನಾಯುಗಳು ಬಲವಾಗುವುದು
* ಪುರುಷರಲ್ಲಿ ವೀರ್ಯಾಣುಗಳ ಸಾಮರ್ಥ್ಯ ಹೆಚ್ಚಾಗುವುದು
* ಮಹಿಳೆಯರಲ್ಲಿ ಅಂಡಾಣುಗಳ ಸಂಖ್ಯೆ ಕಡಿಮೆಯಾಗುವುದನ್ನು ತಡೆಗಟ್ಟಲು ಸಹಕಾರಿ.
ಭುಜಾಂಗಾಸನ
* ನೀವು ಭುಜಾಂಗಾಸನ ಅಭ್ಯಾಸ ಮಾಡುವುದರಿಂದ ಶ್ವಾಸಕೋಶದ ಆರೋಗ್ಯಕ್ಕೆ ಒಳ್ಳೆಯದು.
* ಬೆನ್ನು ಹಾಗೂ ಸೊಂಟದ ಆರೋಗ್ಯ ವೃದ್ಧಿಸುವುದು.
* ಪೆಲ್ವಿಕ್ ಹಾಗೂ ಸಂತಾನೋತ್ಪತ್ತಿ ಅಂಗಾಂಗಗಳಲ್ಲಿ ರಕ್ತ ಸಂಚಾರ ಉತ್ತಮವಾಗಿ ಆರೋಗ್ಯ ವೃದ್ಧಿಸುವುದು.
ವಿಪರೀತಕರಣಿ
* ಮಾನಸಿಕ ಒತ್ತಡ ಹೊರಹಾಕುವಲ್ಲಿ ಸಹಕಾರಿ (ಎಷ್ಟೋ ದಂಪತಿಗಳಿಗೆ ಅತಿಯಾದ ಮಾನಸಿಕ ಒತ್ತಡದ ಕಾರಣದಿಂದಾಗಿ ಮಕ್ಕಳಾಗುತ್ತಿಲ್ಲ)
* ಮಹಿಳೆಯರಲ್ಲಿ ಫಾಲೋಪಿಯನ್ ಟ್ಯೂಬ್ ಮುಖಾಂತರ ಭ್ರೂಣ ಗರ್ಭಕೋಶ ತಲುಪುವಂತಾಗಲು ಸಹಕಾರಿ. (ಫಾಲೋಪಿಯನ್ ಟ್ಯೂಬ್‌ನಲ್ಲಿ ತೊಂದರೆಯಾದರೆ ಗರ್ಭಧಾರಣೆ ಸಾಧ್ಯತೆ ಕಡಿಮೆಯಾಗುವುದು)
ಬಟರ್‌ಫ್ಲೈ ಪೋಸ್
* ಈ ಭಂಗಿಯನ್ನು ಅಭ್ಯಾಸ ಮಾಡುವುದರಿಂದ ತೊಡೆಯ ಭಾಗಕ್ಕೆ ಹಾಗೂ ಪೆಲ್ವಿಕ್ ಭಾಗಕ್ಕೆ ಶಕ್ತಿ ದೊರೆಯುತ್ತದೆ.
* ಸಂತಾನೋತ್ಪತ್ತಿ ಅಂಗಾಂಗಗಳ ಆರೋಗ್ಯ ವೃದ್ಧಿಸುತ್ತದೆ
ಬಾಲಾಸನ
ಬಾಲಾಸನ ತುಂಬಾ ಸರಳವಾದ ಯೋಗ ಭಂಗಿಯಾದರೂ ತುಂಬಾ ಪರಿಣಾಮಕಾರಿಯಾದ ಭಂಗಿ. ಬಾಲಾಸನದಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.
* ಬೆನ್ನುಮೂಳೆ ಹಾಗೂ ಪೆಲ್ವಿಕ್ ಭಾಗದ ಆರೋಗ್ಯ ವೃದ್ಧಿಸುತ್ತದೆ
* ಅಂಡಾಣುಗಳ ಉತ್ಪತ್ತಿ ಹೆಚ್ಚಿಸುತ್ತದೆ.
* ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ವೃದ್ಧಿಸಲು ಸಹಕಾರಿ.



Click it and Unblock the Notifications
