Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಗರ್ಭಿಣಿಯಾಗಬೇಕೆಂದು ಬಯಸಿದವರು ಈ ಆಹಾರಗಳತ್ತ ಗಮನಹರಿಸಿದರೆ ಒಳ್ಳೆಯದು
ಗರ್ಭಧಾರಣೆ ಎಂಬುವುದು ಈಗೀನ ಕಾಲಘಟ್ಟದಲ್ಲಿ ಅಷ್ಟೊಂದು ಸುಲಭವಾಗುತ್ತಿಲ್ಲ, ಅನೇಕರು ಗರ್ಭಧಾರಣೆಗೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ನಮಗೊಂದು ಮಗು ಬೇಕೆಂದು ಬಯಸಿದಾಗ ಮೊದಲು ದೇಹವನ್ನು ಸಿದ್ಧಪಡಿಸಿಕೊಳ್ಳಬೇಕು, ಕೆಲವೊಂದು ಪೌಷ್ಠಿಕಾಂಶದ ಆಹಾರಗಳನ್ನು ಸೇವಿಸಬೇಕು. ಈ ಆಹಾರಗಳು ಆರೋಗ್ಯಕರ ಗರ್ಭಧಾರಣೆಗೆ ಸಹಾಯ ಮಾಡುತ್ತದೆ.

ಗರ್ಭಧಾರಣೆಗೆ ಬಯಸುವಾಗಲೇ ಫೋಲಿಕ್ ಸಪ್ಲಿಮೆಂಟ್ ಸೇವನೆ ಒಳ್ಳೆಯದು
ನಮಗೆ ಮಗು ಬೇಕೆಂದು ಬಯಸಿದ ಮೇಲೆ ಮೊದಲು ಮಾಡಬೇಕಾಗಿರುವುದು ಫೋಲಿಕ್ ಆಮ್ಲದ ಆಹಾರ ಹಾಗೂ ಸಪ್ಲಿಮೆಂಟ್ ಸೇವನೆ. ಸಿಡಿಸಿ ಪ್ರಕಾರ reproductive ageನ ( ಸಂತಾನೋತ್ಪತ್ತಿ ವಯಸ್ಸಿನಲ್ಲಿರುವ) ಮಹಿಳೆಯರು ಪ್ರತಿನಿತ್ಯ 400mcg ಫೋಲಿಕ್ ಆಮ್ಲ ಸೇವಿಸುವುದು ಒಳ್ಳೆಯದು ಎಂದು ಹೇಳುತ್ತದೆ.
ಸೊಪ್ಪುಗಳಲ್ಲಿ, ಧಾನ್ಯಗಳಲ್ಲಿ, ಕಿತ್ತಳೆ, ಬೀನ್ಸ್, ನಟ್ಸ್ ಇವುಗಳಲ್ಲಿ ಫೋಲಿಕ್ ಆಮ್ಲ ಅಂಶವಿರುತ್ತದೆ.
ಕ್ಯಾಲ್ಸಿಯಂ ಇರುವ ಆಹಾರಗಳ ಕಡೆಗೆ ಗಮನಹರಿಸಬೇಕು
ಪ್ರತಿದಿನ 1500 ಮಿ.ಗ್ರಾಂ ಮೊಸರು ಸೇವನೆ ಮಾಡುವುದು ಒಳ್ಳೆಯದು.
ಹಾಲು: ಒಂದು ಲೋಟ ಹಾಲು ಕುಡಿದರೆ ಅದರಲ್ಲಿ 299ಮಿಗ್ರಾಂ ಕ್ಯಾಲ್ಸಿಯಂ ಇರುತ್ತದೆ.
ಮೊಸರು: 1 ಕಪ್ ಮೊಸರಿನಲ್ಲಿ 415 ಮಿಗ್ರಾಂ ಕ್ಯಾಲ್ಸಿಯಂ ಇರುತ್ತದೆ
ಚೀಸ್
ಬ್ರೊಕೋಲಿ
ಮೀನು ಇವುಗಳಲ್ಲಿ ಕ್ಯಾಲ್ಸಿಯಂ ಅಧಿಕವಿರುತ್ತದೆ.
ಕಬ್ಬಿಣದಂಶ
ಮಹಿಳೆಯರಿಗೆ ಪ್ರತಿದಿನ 18ಮಿಗ್ರಾಂ ಕ್ಯಾಲ್ಸಿಯಂ ಅವಶ್ಯಕವಿದೆ. ಕ್ಯಾಲ್ಸಿಯಂ ಕಡಿಮೆಯಾದರೆ ಕಡಿಮೆ ತೂಕದ ಮಗುವಿನ ಜನನವಾಗಬಹುದು, ಆದ್ದರಿಂದ ಕ್ಯಾಲ್ಸಿಯಂ ಇರುವ ಆಹಾರದ ಕಡೆಗೂ ಗಮನಹರಿಸಬೇಕು.
ಒಮೆಗಾ 3 ಕೊಬ್ಬಿನಂಶ
ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಒಮೆಗಾ 3 ಕೊಬ್ಬಿನಂಶದ ಕಡೆಗೆ ಗಮನಹರಿಸಬೇಕು, ಇದು ಅಂಡಾಣುಗಳ ಉತ್ಪತ್ತಿಗೆ ಸಹಕಾರಿಯಾಗಿದೆ. ಸಂತಾನೋತ್ಪತ್ತಿ ಅಂಗಾಂಗಗಳಲ್ಲಿ ರಕ್ತಸಂಚಾರ ಸರಿಯಾದ ರೀತಿಯಲ್ಲಿ ನಡೆಯಲು ಕೂಡ ಈ ಕೊಬ್ಬಿನಂಶ ಅವಶ್ಯಕವಾಗಿದೆ. ವೈದ್ಯರು ನಿಮಗೆ ಇದರ ಸಪ್ಲಿಮೆಂಟ್ ನೀಡಬಹುದು.
ಸಮುದ್ರಾಹಾರಗಳಲ್ಲಿ ಒಮೆಗಾ 3 ಕೊಬ್ಬಿನಂಶ ಅಧಿಕವಾಗಿದೆ, ನಟ್ಸ್, ಕುಂಬಳಕಾಯಿ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಂಶವಿದೆ.
ನಾರಿನಂಶ
ನೀವು ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೆ ನಿಮ್ಮ ಆಹಾರಕ್ರಮದಲ್ಲಿ ನಾರಿನಂಶದ ಆಹಾರವನ್ನು ಹೆಚ್ಚಾಗಿ ಶೇವಿಸಿ, ಇದು ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯಲು ಸಸಹಕಾರಿಯಾಗಿದೆ. ಹಣ್ಣುಗಳು, ತರಕಾರಿಗಳು, ಸೊಪ್ಪು, ಬೀನ್ಸ್ ಇವುಗಳಲ್ಲಿ ನಾರಿನಂಶ ಅಧಿಕವಿರುತ್ತದೆ.
ಪ್ರೊಟೀನ್
ಪ್ರೊಟೀನ್ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ, ಗರ್ಭಿಣಿಯಾದರೆ ಅವಳ ಆರೋಗ್ಯ ಕಾಪಾಡಿಕೊಳ್ಳಲು ಅವಶ್ಯಕ. ಹಾಗಾಗಿ ಪ್ರೊಟೀನ್ ಅವಶ್ಯಕ.
ಮಗುವಿಗಾಗಿ ಪ್ರಯತ್ನಿಸುತ್ತಿರುವವರು ಆಹಾರಕ್ರಮದ ಕಡೆಗೆ ಈ ರೀತಿ ಗಮನಹರಿಸಬೇಕು:
ಸೊಪ್ಪು ಹೆಚ್ಚಾಗಿ ಸೇವಿಸಿ
ಕಿತ್ತಳೆ ಮುಂತಾದ ವಿಟಮಿನ್ ಸಿ ಇರುವ ಆಹಾರ ಸೇವಿಸಿ
ಹಾಲು, ಮೊಸರು ಇವುಗಳ ಸೇವನೆ ಒಳ್ಳೆಯದು
ಹಣ್ಣುಗಳು, ತರಕಾರಿಯನ್ನು ಹೆಚ್ಚಾಗಿ ಸೇವಿಸಿ
ಉಪವಾಸವಿರಬೇಡಿ
ಕೆಲವರು ಬೆಳಗ್ಗೆ ತಿನ್ನದಿರುವುದು, ಇನ್ನು ಕೆಲವರು ರಾತ್ರಿ ತಿನ್ನದಿರುವುದು ಮಾಡುತ್ತಾರೆ, ಈ ರೀತಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಧೂಮಪಾನ ಮಾಡಬಾರದು: ಗರ್ಭಧಾರಣೆಗೆ ಪ್ರಯತ್ನ ಮಾಡುತ್ತಿರುವವರು ಧೂಮಪಾನ ಮಾಡಬಾರದು
ಮದ್ಯಪಾನ ಮಾಡಬಾರದು



Click it and Unblock the Notifications